ಅಪೊಸ್ತಲರ ಕೃತ್ಯಗಳು 5:21 - ಕನ್ನಡ ಸಮಕಾಲಿಕ ಅನುವಾದ21 ಪ್ರಾತಃಕಾಲದಲ್ಲಿ ಅವರು ತಮಗೆ ಹೇಳಿದಂತೆಯೇ ದೇವಾಲಯವನ್ನು ಪ್ರವೇಶಿಸಿ ಜನರಿಗೆ ಬೋಧಿಸಲು ಪ್ರಾರಂಭಿಸಿದರು. ಮಹಾಯಾಜಕನು ಮತ್ತು ಅವನೊಂದಿಗಿದ್ದವರು ಕೂಡಿಬಂದಾಗ, ನ್ಯಾಯಸಭೆಯನ್ನೂ ಇಸ್ರಾಯೇಲರ ಹಿರಿಯರ ಪೂರ್ಣಮಂಡಳಿಯನ್ನೂ ಕೂಡಿಸಿ, ಸೆರೆಮನೆಯಿಂದ ಅಪೊಸ್ತಲರನ್ನು ಕರೆಕಳುಹಿಸಿದರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201921 ಅದನ್ನು ಕೇಳಿದ ಅವರು ಬೆಳಗಿನ ಜಾವದಲ್ಲಿಯೇ ದೇವಾಲಯದೊಳಗೆ ಹೋಗಿ ಸುವಾರ್ತೆಯನ್ನು ಸಾರಿದರು. ಇತ್ತ ಮಹಾಯಾಜಕನೂ, ಅವನ ಜೊತೆಯಲ್ಲಿದ್ದವರೂ ಬಂದು ಹಿರೀಸಭೆಯನ್ನೂ, ಇಸ್ರಾಯೇಲ್ಯರ ಹಿರಿಯರೆಲ್ಲರನ್ನೂ ಕೂಡಿಸಿ, ಅವರನ್ನು ಕರತರುವುದಕ್ಕೆ ಓಲೇಕಾರರನ್ನು ಸೆರೆಮನೆಗೆ ಕಳುಹಿಸಿದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)21 ಅದರಂತೆ ಪ್ರೇಷಿತರು ಮುಂಜಾವದಲ್ಲೇ ದೇವಾಲಯವನ್ನು ಪ್ರವೇಶಿಸಿ ಬೋಧಿಸಲಾರಂಭಿಸಿದರು. ಇತ್ತ ಪ್ರಧಾನಯಾಜಕನೂ ಅವನ ಸಂಗಡಿಗರೂ ಜೊತೆಗೂಡಿ ಯೆಹೂದ್ಯ ಪ್ರಮುಖರನ್ನೊಳಗೊಂಡ ಶ್ರೇಷ್ಠ ನ್ಯಾಯಸಭೆಯನ್ನು ಕರೆದರು. ಅನಂತರ ಪ್ರೇಷಿತರನ್ನು ಆ ಸಭೆಯ ಮುಂದೆ ಕರೆತರುವಂತೆ ಸೆರೆಮನೆಯ ಅಧಿಕಾರಿಗಳಿಗೆ ಆಜ್ಞೆಯಿತ್ತರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)21 ಅವರು ಈ ಆಜ್ಞೆಯನ್ನು ಹೊಂದಿ ಬೆಳಕುಹರಿಯುವಾಗಲೇ ದೇವಾಲಯದೊಳಗೆ ಹೋಗಿ ಉಪದೇಶ ಮಾಡಿದರು. ಇತ್ತಲಾಗಿ ಮಹಾಯಾಜಕನೂ ಅವನ ಜೊತೆಯಲ್ಲಿದ್ದವರೂ ಬಂದು ಹಿರೀಸಭೆಯನ್ನೂ ಇಸ್ರಾಯೇಲ್ಯರ ಯಜಮಾನರ ಸಭೆಯೆಲ್ಲವನ್ನೂ ಕೂಡಿಸಿ ಅವರನ್ನು ಕರತರುವದಕ್ಕೆ ಸೆರೆಮನೆಗೆ ಕಳುಹಿಸಿದರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್21 ಆದ್ದರಿಂದ ಅವರು ಮರುದಿನ ಮುಂಜಾನೆ ದೇವಾಲಯಕ್ಕೆ ಹೋಗಿ ಉಪದೇಶ ಮಾಡತೊಡಗಿದರು. ಪ್ರಧಾನಯಾಜಕನು ಮತ್ತು ಅವನ ಸ್ನೇಹಿತರು ದೇವಾಲಯಕ್ಕೆ ಬಂದರು. ಅವರು ಯೆಹೂದ್ಯನಾಯಕರ ಮತ್ತು ಇಸ್ರೇಲರಲ್ಲಿ ಪ್ರಮುಖರಾಗಿದ್ದವರ ಸಭೆಯನ್ನು ಸೇರಿಸಿದರು. ಬಳಿಕ ಅಪೊಸ್ತಲರನ್ನು ತಮ್ಮ ಬಳಿಗೆ ಕರೆದುಕೊಂಡು ಬರಲು ಕೆಲವರನ್ನು ಸೆರೆಮನೆಗೆ ಕಳುಹಿಸಿದರು. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್21 ತಸೆ ಹೊವ್ನ್ ತೆನಿ ದುಸ್ರ್ಯಾಂದಿಸಿ ಸಕ್ಕಾಳಿ ದೆವಾಚ್ಯಾ ಗುಡಿತ್ ಜಾವ್ನ್ ಶಿಕಾಪ್ ಕರುಕ್ ಲಾಗ್ಲೆ. ತೆನಿ ಜುದೆವಾಂಚಿ ಮುಖಂಡಾ ಅನಿ ಇಸ್ರಾಯೆಲಾತ್ಲ್ಯಾ ಪ್ರಮುಖ್ ಹೊತ್ತ್ಯಾ ಲೊಕಾಕ್ನಿ ಘೆವ್ನ್ ನ್ಯಾಯ್ ಕರ್‍ತಲೊ ತಾಂಡೊ ಮಿಳ್ವುಲ್ಯಾನಿ ತೆಚ್ಯಾ ಮಾನಾ ಅಪೊಸ್ತಲಾಕ್ನಿ ಅಪ್ಲ್ಯಾ ಜಗ್ಗೊಳ್ ಬಲ್ವುನ್ ಹಾನುಕ್ ಮನುನ್ ಥೊಡ್ಯಾ ಲೊಕಾಕ್ನಿ ಬಂಧಿಖಾನ್ಯಾಕ್ಡೆ ಧಾಡ್ಲ್ಯಾನಿ. ಅಧ್ಯಾಯವನ್ನು ನೋಡಿ |