Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 4:6 - ಕನ್ನಡ ಸಮಕಾಲಿಕ ಅನುವಾದ

6 ಮಹಾಯಾಜಕ ಅನ್ನನೂ ಹಾಗೂ ಮಹಾಯಾಜಕನ ಕುಟುಂಬದವರು ಕಾಯಫ, ಯೋಹಾನ ಮತ್ತು ಅಲೆಕ್ಸಾಂದ್ರ ಅಲ್ಲಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

6 ಅವರೊಂದಿಗೆ ಅನ್ನನೆಂಬ ಮಹಾಯಾಜಕನೂ, ಕಾಯಫನೂ, ಯೋಹಾನನೂ, ಅಲೆಕ್ಸಾಂದ್ರನೂ, ಮಹಾಯಾಜಕನ ಸಂಬಂಧಿಕರೆಲ್ಲರೂ ಇದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

6 ಪ್ರಧಾನಯಾಜಕ ಅನ್ನಾ ಹಾಗೂ ಕಾಯಫ, ಯೊವಾನ್ನ, ಅಲೆಕ್ಸಾಂಡರ್ ಮತ್ತು ಪ್ರಧಾನಯಾಜಕನ ಕುಟುಂಬದವರು ಆ ಸಭೆಯಲ್ಲಿ ಹಾಜರಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

6 ಅನ್ನನೆಂಬ ಮಹಾಯಾಜಕನೂ ಕಾಯಫನೂ ಯೋಹಾನನೂ ಅಲೆಕ್ಸಾಂದ್ರನೂ ಮಹಾಯಾಜಕನ ಸಂಬಂಧಿಗಳೆಲ್ಲರೂ ಇದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

6 ಅಲ್ಲಿ ಅನ್ನನು (ಪ್ರಧಾನ ಯಾಜಕ), ಕಾಯಫ, ಯೋಹಾನ ಮತ್ತು ಅಲೆಕ್ಸಾಂಡರ್ ಇದ್ದರು. ಪ್ರಧಾನಯಾಜಕನ ಕುಟುಂಬಕ್ಕೆ ಸೇರಿದ ಪ್ರತಿಯೊಬ್ಬರು ಅಲ್ಲಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

6 ಥೈ ಅನ್ನಾನ್, ಕಾಯಫ್, ಜುವಾಂವ್ , ಅನಿ ಅಲೆಗ್ಸಾಂಡರ್ ಬಿ ಹೊತ್ತೊ, ಮೊಟ್ಯಾ ಯಾಜಕಾಚ್ಯಾ ಘರಾನಾಕ್ ಸಮಂದ್ ಪಡಲ್ಲಿ ಲೊಕಾ ಥೈ ಹೊತ್ತೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 4:6
7 ತಿಳಿವುಗಳ ಹೋಲಿಕೆ  

ಅನ್ನನು ಮತ್ತು ಕಾಯಫನು ಮಹಾಯಾಜಕರು ಆಗಿದ್ದ ಸಮಯದಲ್ಲಿ, ಅರಣ್ಯದಲ್ಲಿದ್ದ ಜಕರೀಯನ ಮಗ ಯೋಹಾನನಿಗೆ ದೇವರ ವಾಕ್ಯವುಂಟಾಯಿತು.


ಆಗ ಅನ್ನನು ಯೇಸುವನ್ನು ಕಟ್ಟಿಸಿ ಮಹಾಯಾಜಕನಾದ ಕಾಯಫನ ಬಳಿಗೆ ಕಳುಹಿಸಿದನು.


ಆಗ ಮುಖ್ಯಯಾಜಕರೂ ಜನರ ಹಿರಿಯರೂ ಒಟ್ಟಾಗಿ ಸೇರಿ, ಕಾಯಫನೆಂಬ ಮಹಾಯಾಜಕನ ಅರಮನೆಗೆ ಬಂದು


ಅವರಲ್ಲಿ ಆ ವರ್ಷದ ಮಹಾಯಾಜಕನಾದ ಕಾಯಫನೆಂಬವನು ಅವರಿಗೆ, “ನಿಮಗೆ ಏನೂ ತಿಳಿಯುವುದಿಲ್ಲ.


ಅವರು ಪೇತ್ರ ಯೋಹಾನರನ್ನು ತಮ್ಮೆದುರಿನಲ್ಲಿ ನಿಲ್ಲಿಸಿ ಅವರಿಗೆ, “ಯಾವ ಶಕ್ತಿಯಿಂದ ಇಲ್ಲವೆ, ಯಾವ ಹೆಸರಿನಿಂದ ನೀವಿದನ್ನು ಮಾಡಿದಿರಿ?” ಎಂದು ಪ್ರಶ್ನಿಸಿದರು.


ಪ್ರಾತಃಕಾಲದಲ್ಲಿ ಅವರು ತಮಗೆ ಹೇಳಿದಂತೆಯೇ ದೇವಾಲಯವನ್ನು ಪ್ರವೇಶಿಸಿ ಜನರಿಗೆ ಬೋಧಿಸಲು ಪ್ರಾರಂಭಿಸಿದರು. ಮಹಾಯಾಜಕನು ಮತ್ತು ಅವನೊಂದಿಗಿದ್ದವರು ಕೂಡಿಬಂದಾಗ, ನ್ಯಾಯಸಭೆಯನ್ನೂ ಇಸ್ರಾಯೇಲರ ಹಿರಿಯರ ಪೂರ್ಣಮಂಡಳಿಯನ್ನೂ ಕೂಡಿಸಿ, ಸೆರೆಮನೆಯಿಂದ ಅಪೊಸ್ತಲರನ್ನು ಕರೆಕಳುಹಿಸಿದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು