Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 4:12 - ಕನ್ನಡ ಸಮಕಾಲಿಕ ಅನುವಾದ

12 ಯೇಸು ಅಲ್ಲದೆ ಬೇರೆ ಯಾರಿಂದಲೂ ರಕ್ಷಣೆಯು ಇಲ್ಲ, ಏಕೆಂದರೆ ಆಕಾಶದ ಕೆಳಗೆ ಮನುಷ್ಯರೊಳಗೆ ಆ ಹೆಸರಲ್ಲದೇ ಬೇರೆ ಯಾವ ಹೆಸರಿನಿಂದಲೂ ರಕ್ಷಣೆಯಾಗುವುದಿಲ್ಲ,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ಬರಬೇಕಾದ ರಕ್ಷಣೆಯು ಇನ್ನಾರಲ್ಲಿಯೂ ಸಿಗುವುದಿಲ್ಲ; ಆ ಹೆಸರಿನಿಂದಲೇ ಹೊರತು ಆಕಾಶದ ಕೆಳಗೆ ಮನುಷ್ಯರಿಗೆ ಕೊಟ್ಟಿರುವ ಮತ್ತ್ಯಾವ ಹೆಸರಿನಿಂದಲೂ ನಮಗೆ ರಕ್ಷಣೆಯಾಗುವುದಿಲ್ಲ” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

12 ಇವರಿಂದಲ್ಲದೆ ಬೇರಾರಿಂದಲೂ ನಮಗೆ ಜೀವೋದ್ಧಾರವಿಲ್ಲ. ಇವರ ನಾಮವನ್ನು ಬಿಟ್ಟರೆ ಈ ಧರೆಯಲ್ಲಿರುವ ಬೇರೆ ಯಾವ ನಾಮದಿಂದಲೂ ನಾವು ಜೀವೋದ್ಧಾರ ಹೊಂದುವಂತಿಲ್ಲ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ಬರಬೇಕಾದ ರಕ್ಷಣೆಯು ಇನ್ನಾರಲ್ಲಿಯೂ ಸಿಕ್ಕುವದಿಲ್ಲ; ಆ ಹೆಸರಿನಿಂದಲೇ ಹೊರತು ಆಕಾಶದ ಕೆಳಗೆ ಮನುಷ್ಯರೊಳಗೆ ಕೊಡಲ್ಪಟ್ಟಿರುವ ಬೇರೆ ಯಾವ ಹೆಸರಿನಿಂದಲೂ ನಮಗೆ ರಕ್ಷಣೆಯಾಗುವದಿಲ್ಲ ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 ರಕ್ಷಣೆಯು ಯೇಸುವಿನಿಂದಲ್ಲದೆ ಬೇರೆ ಯಾರಲ್ಲಿಯೂ ಸಿಕ್ಕುವುದಿಲ್ಲ. ಆತನ ಹೆಸರಿನಿಂದಲೇ ಹೊರತು ಆಕಾಶದ ಕೆಳಗೆ ಮನುಷ್ಯರೊಳಗೆ ಕೊಟ್ಟಿರುವ ಬೇರೆ ಯಾವ ಹೆಸರಿನಿಂದಲೂ ನಮಗೆ ರಕ್ಷಣೆಯಾಗುವುದಿಲ್ಲ” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

12 ಅಮ್ಕಾ ರಾಕ್ವನ್ ದಿತಲೊ ಜೆಜುಚ್, ತೆಚ್ಯಾ ನಾಂವಾಕ್ನಾ ನಸ್ತಾನಾ ಮಳ್ಬಾಚ್ಯಾ ಖಾಲ್ತಿ ಹ್ಯಾ ಜಗಾಚ್ಯಾ ಮಾನ್ಸಾತ್ನಿ ಹೊತ್ತ್ಯಾ ಖಚ್ಚ್ಯಾ ನಾವಾನ್ಬಿ ಅಮ್ಕಾ ರಾಕ್ವನ್ ಹೊಯ್ನಾ ಮಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 4:12
19 ತಿಳಿವುಗಳ ಹೋಲಿಕೆ  

ಯೇಸು ಅವನಿಗೆ, “ನಾನೇ ಮಾರ್ಗವೂ ಸತ್ಯವೂ ಜೀವವೂ ಆಗಿದ್ದೇನೆ. ನನ್ನ ಮೂಲಕವಾಗಿ ಹೊರತು ಯಾರೂ ತಂದೆಯ ಬಳಿಗೆ ಬರಲಾರರು.


ಕ್ರಿಸ್ತ ಯೇಸುವೆಂಬ ಆ ಅಸ್ತಿವಾರವನ್ನಲ್ಲದೆ ಮತ್ತೊಂದು ಅಸ್ತಿವಾರವನ್ನು ಯಾರೂ ಹಾಕಲಾರರಷ್ಟೆ.


ಯಾರು ದೇವಪುತ್ರ ಆಗಿರುವವರನ್ನು ನಂಬುವರೋ ಅವರು ನಿತ್ಯಜೀವ ಪಡೆದಿರುತ್ತಾರೆ. ದೇವಪುತ್ರ ಆಗಿರುವವರನ್ನು ನಂಬದವರು ನಿತ್ಯಜೀವವನ್ನು ಕಾಣುವುದಿಲ್ಲ. ಆದರೆ ದೇವರ ಕೋಪಾಗ್ನಿಯು ಅವರ ಮೇಲೆ ನೆಲೆಗೊಂಡಿರುವುದು,” ಎಂದು ಹೇಳಿದನು.


ಯೆರೂಸಲೇಮು ಮೊದಲುಗೊಂಡು ಎಲ್ಲಾ ಜನಾಂಗದವರೊಳಗೆ ಆತನ ಹೆಸರಿನಲ್ಲಿ ಪಶ್ಚಾತ್ತಾಪಪಟ್ಟು ಮತ್ತು ಪಾಪಗಳ ಕ್ಷಮಾಪಣೆ ಸಾರಬೇಕೆಂತಲೂ ಬರೆಯಲಾಗಿದೆ.


ಅವಳು ಒಬ್ಬ ಮಗನನ್ನು ಹೆರುವಳು, ನೀನು ಆತನಿಗೆ, ‘ಯೇಸು’ ಎಂದು ಹೆಸರಿಡಬೇಕು. ಏಕೆಂದರೆ ಅವರೇ ತಮ್ಮ ಜನರನ್ನು ಅವರ ಪಾಪಗಳಿಂದ ರಕ್ಷಿಸುವರು,” ಎಂದು ಹೇಳಿದನು.


ಇಂತಹ ಮಹಾ ರಕ್ಷಣೆಯನ್ನು ನಾವು ಅಲಕ್ಷ್ಯ ಮಾಡಿದರೆ ತಪ್ಪಿಸಿಕೊಳ್ಳುವುದು ಹೇಗೆ? ಈ ರಕ್ಷಣೆಯನ್ನು ನಮಗೆ ಕರ್ತ ಆಗಿರುವ ಯೇಸುವೇ ಮೊದಲು ತಿಳಿಸಿದ್ದಾರೆ. ಅವರಿಂದ ಕೇಳಿಸಿಕೊಂಡವರೂ ನಮಗೆ ಆ ರಕ್ಷಣೆಯನ್ನು ದೃಢಪಡಿಸಿದ್ದಾರೆ.


ಯಾರ ಹೆಸರು ಜೀವ ಪುಸ್ತಕದಲ್ಲಿ ಬರೆದದ್ದಾಗಿ ಕಾಣಲಿಲ್ಲವೋ ಅವರನ್ನು ಬೆಂಕಿಯ ಕೆರೆಗೆ ದೊಬ್ಬಲಾಯಿತು.


ತಲತಲಾಂತರವೂ ನಿಮ್ಮ ಹೆಸರನ್ನು ನಾನು ಸ್ಮರಿಸುವಂತೆ ಮಾಡುವೆನು. ಆದ್ದರಿಂದ ಜನರು ಯುಗಯುಗಾಂತರವೂ ನಿಮ್ಮನ್ನು ಹೊಗಳುವರು.


ಮಾತನಾಡುವ ದೇವರನ್ನು ನೀವು ಅಸಡ್ಡೆ ಮಾಡದಂತೆ ನೋಡಿಕೊಳ್ಳಿರಿ. ಏಕೆಂದರೆ ಭೂಮಿಯ ಮೇಲೆ ಎಚ್ಚರಿಸಿದವರನ್ನು ಅಸಡ್ಡೆ ಮಾಡಿದ್ದಕ್ಕೆ ಅವರು ತಪ್ಪಿಸಿಕೊಳ್ಳದಿದ್ದರೆ, ಪರಲೋಕದಿಂದ ಎಚ್ಚರಿಸುವ ದೇವರಿಂದ ನಾವು ತೊಲಗಿ ಹೋದರೆ, ಹೇಗೆ ತಾನೆ ದಂಡನೆಯಿಂದ ನಾವು ತಪ್ಪಿಸಿಕೊಳ್ಳಬಲ್ಲೆವು?


ನೀವು ನಿಮ್ಮ ನಂಬಿಕೆಯಲ್ಲಿ ಸ್ಥಿರವಾಗಿ ಮುಂದುವರೆದು ನೆಲೆಗೊಂಡು, ಸುವಾರ್ತೆಯ ನಿರೀಕ್ಷೆಯಿಂದ ತೊಲಗಿ ಹೋಗದಿರಿ. ನೀವು ಕೇಳಿದಂಥ ಮತ್ತು ಆಕಾಶದ ಕೆಳಗಿರುವ ಸರ್ವಸೃಷ್ಟಿಗೆ ಸಾರಲಾದ ಈ ಸುವಾರ್ತೆಗೆ ಪೌಲನೆಂಬ ನಾನು ಸೇವಕನಾದೆನು.


ನಾನು ಸಾಲ ತೀರಿಸಬೇಕೆಂದು ನನಗೆ ವಿರೋಧವಾಗಿ ಹಕ್ಕು ಸಾಧಿಸುವವರು ಯಾರು? ಆಕಾಶದ ಕೆಳಗೆ ಇರುವಂಥ ಪ್ರತಿಯೊಂದೂ ನನ್ನದೇ.


ಆಗ ಜಗತ್ತಿನ ಪ್ರತಿಯೊಂದು ದೇಶದಿಂದಲೂ ಬಂದ ದೇವಭಕ್ತಿಯುಳ್ಳ ಯೆಹೂದ್ಯರು ಯೆರೂಸಲೇಮಿನಲ್ಲಿದ್ದರು.


ಭೂಮಿಯ ಮೇಲೆ ನೀರು ಅಧಿಕವಾಗಿ ಪ್ರಬಲವಾದದ್ದರಿಂದ ಆಕಾಶಮಂಡಲದ ಕೆಳಗಿರುವ ಎಲ್ಲಾ ದೊಡ್ಡ ಬೆಟ್ಟಗಳೂ ಮುಚ್ಚಿಕೊಂಡವು.


“ಅಬ್ರಹಾಮನ ವಂಶದವರಾದ ಸಹೋದರರೇ, ದೇವರಲ್ಲಿ ಭಯಭಕ್ತಿಯುಳ್ಳ ಇನ್ನಿತರರೇ, ಈ ರಕ್ಷಣೆಯ ಸಂದೇಶ ಕಳುಹಿಸಿರುವುದು ನಮಗಾಗಿಯೇ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು