Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 3:22 - ಕನ್ನಡ ಸಮಕಾಲಿಕ ಅನುವಾದ

22 ಮೋಶೆಯು ಹೇಳಿದ್ದೇನೆಂದರೆ: ‘ನಿಮ್ಮ ಕರ್ತದೇವರು ನಿಮ್ಮ ಸ್ವಂತ ಸಹೋದರರೊಳಗಿಂದ ನನ್ನಂಥ ಒಬ್ಬ ಪ್ರವಾದಿಯನ್ನು ನಿಮಗಾಗಿ ಎಬ್ಬಿಸುವರು. ಅವರು ನಿಮಗೆ ಹೇಳುವ ಪ್ರತಿಯೊಂದಕ್ಕೂ ವಿಧೇಯರಾಗಿರಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

22 ಮೋಶೆಯು ಹೇಳಿದ್ದೇನಂದರೆ, ‘ದೇವರಾಗಿರುವ ಕರ್ತನು ನನ್ನ ಹಾಗೆ ನಿಮ್ಮ ಸಹೋದರರಲ್ಲಿ ಮತ್ತೊಬ್ಬ ಪ್ರವಾದಿಯನ್ನು ನಿಮಗೆ ಎಬ್ಬಿಸುವನು; ಆತನು ಹೇಳುವ ಎಲ್ಲಾ ಮಾತುಗಳಿಗೆ ನೀವು ಕಿವಿಗೊಡಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

22 ‘ಸರ್ವೇಶ್ವರನಾದ ದೇವರು ನನ್ನನ್ನು ಕಳುಹಿಸಿದಂತೆಯೇ ನಿಮಗೊಬ್ಬ ಪ್ರವಾದಿಯನ್ನು ಕಳುಹಿಸುವರು. ಆತನು ನಿಮ್ಮ ಸ್ವಂತ ಜನಾಂಗದವನಾಗಿರುವನು. ಆತನು ಹೇಳುವುದನ್ನೆಲ್ಲಾ ನೀವು ಕೇಳಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

22 ಮೋಶೆಯು ಹೇಳಿದ್ದೇನಂದರೆ - ದೇವರಾಗಿರುವ ಕರ್ತನು ನನ್ನನ್ನು ಏರ್ಪಡಿಸಿದಂತೆ ನಿಮ್ಮ ಸಹೋದರರಲ್ಲಿ ಮತ್ತೊಬ್ಬ ಪ್ರವಾದಿಯನ್ನು ನಿಮಗೆ ಏರ್ಪಡಿಸಿಕೊಡುವನು, ಆತನು ನಿಮಗೆ ಹೇಳುವ ಎಲ್ಲಾ ಮಾತುಗಳಿಗೆ ಕಿವಿಗೊಡಬೇಕು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

22 ಮೋಶೆಯು ಇಂತೆಂದಿದ್ದಾನೆ: ‘ನಿಮ್ಮ ದೇವರಾದ ಪ್ರಭುವು ನಿಮಗೊಬ್ಬ ಪ್ರವಾದಿಯನ್ನು ಕೊಡುವನು. ನಿಮ್ಮ ಸ್ವಂತ ಜನರ ಮಧ್ಯದಿಂದಲೇ ಆ ಪ್ರವಾದಿ ಬರುವನು. ಆತನು ನನ್ನಂತೆ ಇರುವನು. ಆ ಪ್ರವಾದಿ ಹೇಳುವ ಪ್ರತಿಯೊಂದಕ್ಕೂ ನೀವು ವಿಧೇಯರಾಗಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

22 ತಸೆ ಹೊವ್ನ್ ಮೊಯ್ಜೆನ್ “ತುಮ್ಚೊ ದೆವ್ ಹೊಲ್ಲೊ ಧನಿ ತುಮ್ಕಾ ಎಕ್ ಪ್ರವಾದಿ ದಿತಾ, ತುಮ್ಚ್ಯಾ ಲೊಕಾಂಚ್ಯಾ ಮದ್ನಾಚ್ ತೊ ಪ್ರವಾದಿ ಯೆತಾ, ಅನಿ ತೊ ಮಾಜ್ಯಾ ಸಾರ್ಕೊಚ್ ರ್‍ಹಾತಾ ತ್ಯಾ ಪ್ರವಾದ್ಯಾನ್ ಸಾಂಗ್ತಲೆ ಹರ್ ಎಕ್ ಬಿ ತುಮಿ ಮಾನುಚೆ” ಮನುನ್ ಸಾಂಗ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 3:22
22 ತಿಳಿವುಗಳ ಹೋಲಿಕೆ  

“ ‘ನನ್ನಂಥ ಒಬ್ಬ ಪ್ರವಾದಿಯನ್ನು ನಿಮ್ಮ ಸ್ವಂತ ಜನರೊಳಗಿಂದಲೇ ದೇವರು ನಿಮಗೆ ಕಳುಹಿಸುವರು,’ ಎಂದು ಇಸ್ರಾಯೇಲರಿಗೆ ಹೇಳಿದವನು ಈ ಮೋಶೆಯೇ.


ಆದರೆ ನಿಯಮಿತ ಕಾಲವು ಪರಿಪೂರ್ಣವಾದಾಗ, ದೇವರು ತಮ್ಮ ಮಗನನ್ನು ಸ್ತ್ರೀಯಿಂದ ಹುಟ್ಟಿದವನಾಗಿಯೂ ನಿಯಮಕ್ಕೆ ಒಳಗಾದವನನ್ನಾಗಿಯೂ ಕಳುಹಿಸಿಕೊಟ್ಟರು.


ಏಕೆಂದರೆ ನಿಯಮವು ಮೋಶೆಯ ಮೂಲಕ ಕೊಡಲಾಯಿತು. ಕೃಪೆಯೂ ಸತ್ಯವೂ ಕ್ರಿಸ್ತ ಯೇಸುವಿನ ಮೂಲಕ ಬಂದವು.


ಹೀಗೆ ಯೇಸು ಪರಿಪೂರ್ಣರಾಗಿ ತಮಗೆ ವಿಧೇಯರಾಗುವ ಎಲ್ಲರಿಗೂ ನಿರಂತರವಾಗಿ ರಕ್ಷಣೆಗೆ ಕಾರಣರಾದರು.


“ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ನನ್ನ ವಾಕ್ಯವನ್ನು ಕೇಳಿ ನನ್ನನ್ನು ಕಳುಹಿಸಿದ ತಂದೆಯನ್ನು ನಂಬುವವರು ನಿತ್ಯಜೀವವನ್ನು ಹೊಂದಿದ್ದಾರೆ. ಅವರು ನ್ಯಾಯತೀರ್ಪಿಗೆ ಗುರಿಯಾಗುವುದಿಲ್ಲ, ಮರಣದಿಂದ ಪಾರಾಗಿ ಜೀವವನ್ನು ಹೊಂದಿದ್ದಾರೆ.


ಇದು ಕ್ರಿಸ್ತ ಯೇಸುವಿನ ಪ್ರಕಟನೆ. ಶೀಘ್ರವೇ ಸಂಭವಿಸಲಿಕ್ಕಿರುವ ಸಂಗತಿಗಳನ್ನು ತಮ್ಮ ದಾಸರಿಗೆ ತೋರಿಸುವುದಕ್ಕಾಗಿ ದೇವರಿಂದ ಈ ಪ್ರಕಟನೆಯನ್ನು ಹೊಂದಿದರು. ಇದಲ್ಲದೆ ದೇವರು ತಮ್ಮ ದೇವದೂತನನ್ನು ಕಳುಹಿಸಿ, ಅವನ ಮುಖಾಂತರ ಆ ಸಂಗತಿಗಳನ್ನು ತಮ್ಮ ದಾಸನಾದ ಯೋಹಾನನಿಗೆ ತಿಳಿಸಿದರು.


ನಮ್ಮ ಪಿತೃಗಳು ಅವರಿಗೆ ಸೇರಿದವರು. ಕ್ರಿಸ್ತ ಯೇಸುವು ಮನುಷ್ಯರಾಗಿ ಹುಟ್ಟಿದ್ದು ಅವರ ವಂಶದಲ್ಲಿಯೇ; ಈ ಕ್ರಿಸ್ತ ಯೇಸುವೇ ಎಲ್ಲರ ಮೇಲಿರುವ ದೇವರೂ ಎಂದೆಂದಿಗೂ ಸ್ತುತಿಹೊಂದತಕ್ಕವರೂ ಆಗಿದ್ದಾರೆ! ಆಮೆನ್.


ನನ್ನಲ್ಲಿ ನಂಬಿಕೆಯಿಡುವವರು ಕತ್ತಲೆಯಲ್ಲಿ ಉಳಿಯಬಾರದೆಂದು ನಾನು ಬೆಳಕಾಗಿ ಲೋಕಕ್ಕೆ ಬಂದಿದ್ದೇನೆ.


ನಿಯಮವು ನಮ್ಮ ಮಾಂಸಭಾವದ ಬಲಹೀನತೆಯಿಂದ ಯಾವುದನ್ನು ಮಾಡಲಿಕ್ಕೆ ಸಾಧ್ಯವಾಗದೆ ಹೋಯಿತೋ ಅದನ್ನು ದೇವರೇ ಮಾಡಿದರು. ಪಾಪ ಪರಿಹಾರಕ್ಕಾಗಿ ದೇವರು ತಮ್ಮ ಸ್ವಂತ ಪುತ್ರನನ್ನು ಪಾಪಮಯವಾದ ನರಮಾಂಸದ ರೂಪದಲ್ಲಿ ಕಳುಹಿಸಿಕೊಟ್ಟರು. ಆ ನರಮಾಂಸದಲ್ಲಿಯೇ ಪಾಪಕ್ಕೆ ದಂಡನಾತೀರ್ಪು ಮಾಡಿ ಸಾಧ್ಯಗೊಳಿಸಿದರು.


ಯೇಸು ಪುನಃ ಜನರೊಂದಿಗೆ ಮಾತನಾಡುತ್ತಾ, “ನಾನೇ ಲೋಕದ ಬೆಳಕಾಗಿದ್ದೇನೆ. ನನ್ನನ್ನು ಹಿಂಬಾಲಿಸುವವರು ಎಂದಿಗೂ ಕತ್ತಲೆಯಲ್ಲಿ ನಡೆಯುವುದಿಲ್ಲ. ಅವರು ಜೀವದ ಬೆಳಕನ್ನು ಹೊಂದಿರುವರು,” ಎಂದು ಹೇಳಿದರು.


ಅದಕ್ಕೆ ಯೇಸು ಅವರಿಗೆ, “ಯಾವ ಘಟನೆ?” ಎಂದು ಕೇಳಲು, ಅವರು ಯೇಸುವಿಗೆ, “ನಜರೇತಿನ ಯೇಸುವಿನ ವಿಷಯಗಳೇ, ಅವರು ಕೃತ್ಯಗಳಲ್ಲಿಯೂ ಮಾತುಗಳಲ್ಲಿಯೂ ದೇವರ ದೃಷ್ಟಿಯಲ್ಲಿಯೂ ಜನರೆಲ್ಲರ ದೃಷ್ಟಿಯಲ್ಲಿಯೂ ಬಹುಶಕ್ತಿವಂತರಾಗಿದ್ದ ಪ್ರವಾದಿಯಾಗಿದ್ದರು.


ಆದರೂ ಈ ದಿವಸ ಮತ್ತು ನಾಳೆ ಮತ್ತು ನಾಡಿದ್ದು ನಾನು ಪ್ರಯಾಣ ಮಾಡಲೇಬೇಕು. ಏಕೆಂದರೆ ಒಬ್ಬ ಪ್ರವಾದಿಯು ಯೆರೂಸಲೇಮಿನ ಹೊರಗೆ ಕೊಲೆಗೀಡಾಗಬಾರದು!


ಆದ್ದರಿಂದ ದಾರಿಬಿಟ್ಟು ಹೋಗದಂತೆ, ನಾವು ಕೇಳಿದ ಸಂಗತಿಗಳಿಗೆ ಹೆಚ್ಚು ಲಕ್ಷ್ಯ ಕೊಡುವವರಾಗಿರಬೇಕು.


ಅದಕ್ಕೆ ಜನಸಮೂಹವು, “ಇವರು ಯೇಸು, ಗಲಿಲಾಯದ ನಜರೇತಿನ ಪ್ರವಾದಿ,” ಎಂದು ಹೇಳಿತು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು