Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 3:11 - ಕನ್ನಡ ಸಮಕಾಲಿಕ ಅನುವಾದ

11 ಭಿಕ್ಷುಕನು ಇನ್ನೂ ಪೇತ್ರ ಯೋಹಾನರೊಂದಿಗೆ ಇದ್ದಾಗ, ಆಶ್ಚರ್ಯಚಕಿತರಾದ ಜನರೆಲ್ಲರು ಅವರಿದ್ದ “ಸೊಲೊಮೋನನ ಮಂಟಪ” ಎಂದು ಕರೆಯಲಾಗುತ್ತಿದ್ದ ಸ್ಥಳಕ್ಕೆ ಓಡಿ ಬಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ಗುಣಹೊಂದಿದ ಕುಂಟನು ಪೇತ್ರ ಮತ್ತು ಯೋಹಾನನ್ನು ಹಿಡುಕೊಂಡೇ ಇರುವಾಗ, ಆಶ್ಚರ್ಯಪಡುತ್ತಿರುವ ಆ ಜನರೆಲ್ಲರು ಸೊಲೊಮೋನನದೆಂದು ಹೆಸರುಳ್ಳ ಮಂಟಪಕ್ಕೆ ಒಟ್ಟಾಗಿ ಓಡಿಬಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

11 ‘ಸೊಲೊಮೋನನ ಮಂಟಪ’ದಲ್ಲಿ ಪೇತ್ರ ಮತ್ತು ಯೊವಾನ್ನರ ಜೊತೆ ಆ ಭಿಕ್ಷುಕನು ಇನ್ನೂ ನಿಂತಿದ್ದನು. ಆಶ್ಚರ್ಯಭರಿತರಾದ ಜನರು ಅಲ್ಲಿಗೆ ಓಡಿಬಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

11 ಅವನು ಪೇತ್ರ ಯೋಹಾನರನ್ನು ಹಿಡುಕೊಂಡೇ ಇರುವಾಗ ಆಶ್ಚರ್ಯಪಡುತ್ತಿರುವ ಆ ಜನರೆಲ್ಲರು ಅವರ ಬಳಿಗೆ ಸೊಲೊಮೋನನದೆಂಬ ಹೆಸರುಳ್ಳ ಮಂಟಪಕ್ಕೆ ಗುಂಪು ಗುಂಪಾಗಿ ಓಡಿಬಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 ಆ ಮನುಷ್ಯನು ಪೇತ್ರ ಮತ್ತು ಯೋಹಾನರನ್ನು ಹಿಡಿದುಕೊಂಡೇ ನಿಂತಿದ್ದನು. ಅವನಿಗೆ ಗುಣವಾದದ್ದರಿಂದ ಜನರೆಲ್ಲರೂ ಆಶ್ಚರ್ಯಗೊಂಡಿದ್ದರು. ಸೊಲೊಮೋನನ ಮಂಟಪದ ಬಳಿ ನಿಂತಿದ್ದ ಪೇತ್ರ ಮತ್ತು ಯೋಹಾನರ ಬಳಿ ಅವರು ಓಡಿಬಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

11 ತೊ ಸೊಟ್ಟೊ ಪೆದ್ರುಕ್ ಅನಿ ಜುವಾಂವಾಚ್ಯಾ ವಾಂಗ್ಡಾ ಜಾಯ್ತ್ ಹೊತ್ತೊ. ತೆಕಾ ಗುನ್ ಹೊಲ್ಲೆ ಬಗುನ್ ಲೊಕಾ ಸಗ್ಳಿ ಅಜಾಪ್ ಹೊಲ್ಯಾನಿ ಸೊಲೊಮನಾಚ್ಯಾ ದಾರಾಚ್ಯಾ ಜಗ್ಗೊಳ್ ಇಬೆ ಹೊತ್ತ್ಯಾ ತೆಂಚ್ಯಾಕ್ಡೆ ಸಗ್ಳಿ ಲೊಕಾ ಪಳುನ್ ಯೆಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 3:11
9 ತಿಳಿವುಗಳ ಹೋಲಿಕೆ  

ಜನರ ಮಧ್ಯದಲ್ಲಿ ಅಪೊಸ್ತಲರಿಂದ ಅನೇಕ ಸೂಚಕಕಾರ್ಯಗಳೂ ಅದ್ಭುತಕಾರ್ಯಗಳೂ ನಡೆದವು. ಅವರೆಲ್ಲರೂ ಒಂದೇ ಮನಸ್ಸುಳ್ಳವರಾಗಿ “ಸೊಲೊಮೋನನ ಮಂಟಪ” ಎಂದು ಕರೆಯಲಾಗುತ್ತಿದ್ದ ಸ್ಥಳದಲ್ಲಿ ಸೇರುತ್ತಿದ್ದರು.


ಯೇಸು ದೇವಾಲಯದೊಳಗೆ ಸೊಲೊಮೋನನ ಮಂಟಪದಲ್ಲಿ ತಿರುಗಾಡುತ್ತಿದ್ದರು.


ಆಗ ದೆವ್ವಗಳು ಬಿಟ್ಟುಹೋಗಿದ್ದ ಆ ಮನುಷ್ಯನು ತಾನೂ ಅವರ ಜೊತೆಯಲ್ಲಿ ಬರುವೆನೆಂದು, ಯೇಸುವನ್ನು ಬೇಡಿಕೊಂಡನು, ಆದರೆ ಯೇಸು ಅವನಿಗೆ,


ಈ ಶಬ್ದ ಕೇಳಿದಾಗ, ಜನರ ಗುಂಪೊಂದು ಕೂಡಿಬಂದಿತು. ಬಂದವರೆಲ್ಲರೂ ತಮ್ಮ ತಮ್ಮ ಭಾಷೆಗಳಲ್ಲಿಯೇ ಆ ಶಿಷ್ಯರು ಮಾತಾಡುತ್ತಿರುವುದನ್ನು ಕೇಳಿ, ಆಶ್ಚರ್ಯಗೊಂಡರು.


ಯೇಸು ಪೇತ್ರ ಯೋಹಾನರನ್ನು ಕರೆದು, “ನೀವು ಹೋಗಿ ನಮಗೋಸ್ಕರ ಪಸ್ಕಭೋಜನವನ್ನು ಸಿದ್ಧಮಾಡಿರಿ,” ಎಂದರು.


ಈ ದೇವಾಲಯಕ್ಕೆ ಶೀಲೋವಿನ ಹಾಗೆ ಆಗುವುದೆಂದೂ, ಈ ಪಟ್ಟಣವೂ ನಿವಾಸಿಗಳಿಲ್ಲದೆ ಹಾಳಾಗುವುದೆಂದೂ ಯೆಹೋವ ದೇವರ ಹೆಸರಿನಲ್ಲಿ ಏಕೆ ನೀನು ಪ್ರವಾದಿಸಿದ್ದೀ?” ಎಂದರು. ಆಗ ಜನರೆಲ್ಲರು ಯೆಹೋವ ದೇವರ ಆಲಯದಲ್ಲಿ ಯೆರೆಮೀಯನಿಗೆ ವಿರೋಧವಾಗಿ ಕೂಡಿಕೊಂಡರು.


ಅವನು ಪೇತ್ರ, ಯೋಹಾನರು ದೇವಾಲಯದೊಳಗೆ ಪ್ರವೇಶಿಸುತ್ತಿರುವುದನ್ನು ಕಂಡು, ಭಿಕ್ಷೆ ಬೇಡಿದನು.


ಪೇತ್ರ ಯೋಹಾನರಿಬ್ಬರೂ ಭಿಕ್ಷುಕನನ್ನು ನೇರವಾಗಿ ದೃಷ್ಟಿಸಿ ನೋಡಿದರು. ಪೇತ್ರನು ಭಿಕ್ಷುಕನಿಗೆ, “ನಮ್ಮನ್ನು ನೋಡು!” ಎಂದು ಹೇಳಿದನು.


ಜನರನ್ನು ಕಂಡು ಪೇತ್ರನು ಅವರಿಗೆ ಹೇಳಿದ ಮಾತುಗಳಿವು: “ಇಸ್ರಾಯೇಲಿನ ಜನರೇ, ಈ ಘಟನೆಯಿಂದ ನೀವೇಕೆ ಆಶ್ಚರ್ಯಚಕಿತರಾಗಿದ್ದೀರಿ? ನಮ್ಮ ಸ್ವಂತ ಬಲದಿಂದಾಗಲಿ, ಭಕ್ತಿಯಿಂದಾಗಲಿ ಈ ಮನುಷ್ಯನನ್ನು ನಡೆಯುವಂತೆ ಮಾಡಿದೆವೆಂದು ಭಾವಿಸಿ ನಮ್ಮ ಕಡೆಗೆ ಏಕೆ ನೋಡುತ್ತಿರುವಿರಿ?


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು