Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 28:27 - ಕನ್ನಡ ಸಮಕಾಲಿಕ ಅನುವಾದ

27 ಈ ಜನರ ಹೃದಯವು ಕಠೋರವಾಗಿದೆ; ಇವರ ಕಿವಿಗಳು ಕೇಳದ ಹಾಗೆ ಮಂದವಾಗಿವೆ, ಇವರು ತಮ್ಮ ಕಣ್ಣುಗಳನ್ನು ಮುಚ್ಚಿಕೊಂಡಿದ್ದಾರೆ. ಇಲ್ಲವಾದರೆ ಅವರು ತಮ್ಮ ಕಣ್ಣುಗಳಿಂದ ನೋಡಿ, ಕಿವಿಗಳಿಂದ ಕೇಳಿಸಿಕೊಂಡು, ತಮ್ಮ ಹೃದಯದಿಂದ ತಿಳಿದು, ನನ್ನ ಕಡೆಗೆ ತಿರುಗಿಕೊಂಡಿದ್ದರೆ, ನಾನು ಅವರನ್ನು ಸ್ವಸ್ಥಪಡಿಸುತ್ತಿದ್ದೆನು,’ ಎಂಬುದೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

27 ಏಕೆಂದರೆ, ಈ ಜನರ ಹೃದಯವು ಕಲ್ಲಾಗಿದೆ; ಇವರ ಕಿವಿ ಕಿವುಡಾಗಿದೆ; ಇವರು ಕಣ್ಣು ಮುಚ್ಚಿಕೊಂಡಿದ್ದಾರೆ; ತಾವು ಕಣ್ಣಿನಿಂದ ಕಂಡು, ಕಿವಿಯಿಂದ ಕೇಳಿ, ಹೃದಯದಿಂದ ತಿಳಿದು ನನ್ನ ಕಡೆಗೆ ತಿರುಗಿಕೊಂಡು ನನ್ನಿಂದ ಸ್ವಸ್ಥತೆಯನ್ನು ಹೇಗೂ ಹೊಂದಬಾರದೆಂದು ಹೀಗೆ ಮಾಡಿಕೊಂಡಿದ್ದಾರೆ’ ಎಂಬುದೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

27 ಇವರ ಹೃದಯ ಕಲ್ಲಾಗಿದೆ, ಕಿವಿ ಮಂದವಾಗಿದೆ, ಕಣ್ಣು ಮಬ್ಬಾಗಿದೆ. ಇಲ್ಲದಿರೆ ಇವರ ಕಣ್ಣು ಕಾಣುತ್ತಾ, ಕಿವಿ ಕೇಳುತ್ತಾ, ಹೃದಯ ಗ್ರಹಿಸುತ್ತಾ, ನನ್ನತ್ತ ತಿರುಗುತ್ತಿದ್ದರು. ದೇವರಾದ ನಾನಿವರನ್ನು ಸ್ವಸ್ಥಪಡಿಸುತ್ತಿದ್ದೆ.’

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

27 ಯಾಕಂದರೆ ಈ ಜನರ ಹೃದಯವು ಕೊಬ್ಬಿತು; ಇವರ ಕಿವಿ ಮಂದವಾಯಿತು; ಇವರು ಕಣ್ಣು ಮುಚ್ಚಿಕೊಂಡಿದ್ದಾರೆ; ತಾವು ಕಣ್ಣಿನಿಂದ ಕಂಡು ಕಿವಿಯಿಂದ ಕೇಳಿ ಹೃದಯದಿಂದ ತಿಳಿದು ನನ್ನ ಕಡೆಗೆ ತಿರುಗಿಕೊಂಡು ನನ್ನಿಂದ ಸ್ವಸ್ಥತೆಯನ್ನು ಹೇಗೂ ಹೊಂದಬಾರದೆಂದು ಮಾಡಿಕೊಂಡಿದ್ದಾರೆ ಎಂಬದೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

27 ಹೌದು, ಈ ಜನರ ಹೃದಯಗಳು ಕಠಿಣವಾಗಿವೆ. ಈ ಜನರಿಗೆ ಕಿವಿಗಳಿದ್ದರೂ ಕೇಳುವುದಿಲ್ಲ. ಸತ್ಯವಿದ್ದರೂ ನೋಡಬಯಸರು. ಅಲ್ಲದಿದ್ದರೆ ಇವರು ಕಣ್ಣಾರೆ ಕಂಡು, ಕಿವಿಯಾರೆ ಕೇಳಿ, ಮನಸಾರೆ ಗ್ರಹಿಸಿಕೊಂಡು ನನ್ನತ್ತ ತಿರುಗಿಕೊಳ್ಳುತ್ತಿದ್ದರು; ನನ್ನಿಂದ ಗುಣಹೊಂದುತ್ತಿದ್ದರು.’

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

27 ಕಶ್ಯಾಕ್ ಮಟ್ಲ್ಯಾರ್, ಹ್ಯಾ ಲೊಕಾಂಚಿ ಮನಾ ಘಟ್ ಹೊವ್ನ್ ಗೆಲಾತ್ ಅನಿ ತೆನಿ ಆಯ್ಕಲೆ ಸೊಡುನ್ ದಿಲಾತ್, ಡೊಳೆ ಧಾಪುನ್ ಘೆಟ್ಲಾತ್, ನಾ ಹೊಲ್ಯಾರ್ ತೆಂಚ್ಯಾ ಡೊಳ್ಯಾಕ್ನಿ ದಿಸಿ ಹೊತ್ತೆ, ತೆಂಚ್ಯಾ ಕಾನಾಕ್ನಿ ಆಯ್ಕಿಹೊತ್, ತೆ ತೆಂಚಿ ಮಾನಾ ಕಳ್ವುನ್ ಘೆಯ್ ಹೊತ್ತಿ, ಅನಿ ತೆನಿ ಮಾಜ್ಯಾಕ್ಡೆ ಪರ್ತುನ್ ಯೆಯ್ ಹೊತ್ತೆ, ಮಿಯಾ ತೆಂಕಾ ಗುನ್ ಕರಿ ಹೊತ್ತೊ” ಮನುನ್ ದೆವ್ ಸಾಂಗ್ತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 28:27
5 ತಿಳಿವುಗಳ ಹೋಲಿಕೆ  

ತಮ್ಮ ಕಣ್ಣುಗಳಿಂದ ನೋಡದಂತೆಯೂ, ತಮ್ಮ ಕಿವಿಗಳಿಂದ ಕೇಳದಂತೆಯೂ, ತಮ್ಮ ಹೃದಯದಿಂದ ಗ್ರಹಿಸಿ ತಿರುಗಿಕೊಂಡು ಸ್ವಸ್ಥವಾಗದಂತೆಯೂ ಈ ಜನರ ಹೃದಯವನ್ನು ಕಠಿಣಗೊಳಿಸಿ, ಅವರ ಕಿವಿಯನ್ನು ಮಂದಗೊಳಿಸಿ, ಅವರ ಕಣ್ಣುಗಳನ್ನು ಮೊಬ್ಬಾಗಿಸು,” ಎಂದು ನನಗೆ ಹೇಳಿದರು.


ಆದರೂ ಯೆಹೋವ ದೇವರು ಇಂದಿನವರೆಗೂ ತಿಳಿದುಕೊಳ್ಳುವ ಹೃದಯವನ್ನೂ ನೋಡುವ ಕಣ್ಣುಗಳನ್ನೂ ಕೇಳುವ ಕಿವಿಗಳನ್ನೂ ನಿಮಗೆ ಕೊಡಲಿಲ್ಲವಲ್ಲ!


ಅವರ ಹೃದಯವು ಕಠಿಣವೂ ಮಂದವೂ ಆಗಿದೆ, ನಾನಾದರೋ ನಿಮ್ಮ ನಿಯಮದಲ್ಲಿ ಆನಂದಪಡುತ್ತೇನೆ.


ಹೀಗೆ ಯೆಶಾಯನ ಪ್ರವಾದನೆಯು ಅವರಲ್ಲಿ ನೆರವೇರಿತು. ಅದೇನೆಂದರೆ, “ ‘ನೀವು ಕೇಳುತ್ತಲೇ ಇರುವಿರಿ, ಎಂದೆಂದೂ ಅರ್ಥಮಾಡಿಕೊಳ್ಳಲಾರಿರಿ; ನೀವು ಕಾಣುತ್ತಲೇ ಇರುವಿರಿ, ಎಂದೆಂದೂ ಅರಿತುಕೊಳ್ಳಲಾರಿರಿ.


ಈ ಜನರ ಹೃದಯವು ಕಠೋರವಾಗಿದೆ; ಇವರ ಕಿವಿಗಳು ಕೇಳದ ಹಾಗೆ ಮಂದವಾಗಿವೆ, ಇವರು ತಮ್ಮ ಕಣ್ಣುಗಳನ್ನು ಮುಚ್ಚಿಕೊಂಡಿದ್ದಾರೆ. ಇಲ್ಲವಾದರೆ ತಾವು ಕಣ್ಣಿನಿಂದ ಕಂಡು, ಕಿವಿಯಿಂದ ಕೇಳಿ. ತಮ್ಮ ಹೃದಯದಿಂದ ತಿಳಿದು, ನನ್ನ ಕಡೆಗೆ ತಿರುಗಿಕೊಂಡಿದ್ದರೆ, ನಾನು ಅವರನ್ನು ಸ್ವಸ್ಥಪಡಿಸುತ್ತಿದ್ದೆನು,’ ಎಂಬುದೇ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು