Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 27:5 - ಕನ್ನಡ ಸಮಕಾಲಿಕ ಅನುವಾದ

5 ಕಿಲಿಕ್ಯಯ ಹಾಗೂ ಪಂಫುಲ್ಯ ಪ್ರಾಂತ ತೀರಗಳ ಎದುರಾಗಿರುವ ಸಮುದ್ರವನ್ನು ದಾಟಿ, ಲುಕೀಯ ಪ್ರಾಂತದ ಮುರ ಪಟ್ಟಣ ಎಂಬಲ್ಲಿಗೆ ತಲುಪಿದೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ಕಿಲಿಕ್ಯಕ್ಕೂ, ಪಂಫುಲ್ಯಕ್ಕೂ ಎದುರಾಗಿರುವ ಸಮುದ್ರವನ್ನು ದಾಟಿ ಲುಕೀಯ ಸೀಮೆಯಲ್ಲಿರುವ ಮುರಕ್ಕೆ ಬಂದೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

5 ಸಿಲಿಸಿಯಕ್ಕೂ ಪಾಂಫೀಲಿಯಕ್ಕೂ ಎದುರಾಗಿರುವ ಸಮುದ್ರವನ್ನು ದಾಟಿ ಲುಸಿಯ ಪ್ರಾಂತ್ಯದಲ್ಲಿರುವ ‘ಮುರ’ ಎಂಬ ಊರಿಗೆ ಬಂದೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

5 ಕಿಲಿಕ್ಯಕ್ಕೂ ಪಂಫೂಲ್ಯಕ್ಕೂ ಎದುರಾಗಿರುವ ಸಮುದ್ರವನ್ನು ದಾಟಿ ಲುಕೀಯ ಸೀಮೆಯಲ್ಲಿರುವ ಮುರಕ್ಕೆ ಬಂದೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

5 ಸಿಲಿಸಿಯಾಕ್ಕೂ ಪಾಂಫೀಲಿಯಕ್ಕೂ ಎದುರಾಗಿರುವ ಸಮುದ್ರವನ್ನು ನಾವು ದಾಟಿದೆವು. ಬಳಿಕ ನಾವು ಲುಸಿಯ ಪ್ರಾಂತ್ಯದಲ್ಲಿರುವ “ಮುರ” ಎಂಬ ಊರಿಗೆ ಬಂದೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

5 ಸಿಲಿಸಿಯಾಕ್ ಅನಿ ಪಾಂಪಿಲಿಯಾಕ್ ಇದ್ರಾಕ್ ಹೊತ್ತ್ಯಾ ಸಮುಂದರಾತ್ನಾ ಅಮಿ ದಾಟ್ಲಾಂವ್ ಅನಿ ಲುಸಿಯಾಚ್ಯಾ ಮುರ್ ಮನ್ತಲ್ಯಾ ಜಾಗ್ಯಾಕ್ ಅಮಿ ಯೆಲ್ಯಾಂವ್.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 27:5
9 ತಿಳಿವುಗಳ ಹೋಲಿಕೆ  

ಆದರೆ, “ಬಿಡುಗಡೆ ಹೊಂದಿದವರು” ಎಂಬ ಯೆಹೂದ್ಯ ಸಭಾಮಂದಿರಕ್ಕೆ ಸೇರಿದವರಿಂದ ವಿರೋಧ ಉಂಟಾಯಿತು. ಅವರು ಕುರೇನ್ಯ ಅಲೆಕ್ಸಾಂದ್ರಿಯ ಕಿಲಿಕ್ಯ ಮತ್ತು ಏಷ್ಯಾ ಪ್ರಾಂತಗಳಿಂದ ಬಂದ ಯೆಹೂದ್ಯರಾಗಿದ್ದರು. ಅವರು ಸ್ತೆಫನನೊಂದಿಗೆ ತರ್ಕಿಸುವುದಕ್ಕೆ ಪ್ರಾರಂಭಿಸಿದರು.


ಪಾಫೋಸಿನಿಂದ, ಪೌಲ ಮತ್ತು ಅವನ ಸಂಗಡಿಗರು ಪಂಫುಲ್ಯಕ್ಕೆ ಸೇರಿದ ಪೆರ್ಗೆ ಎಂಬಲ್ಲಿಗೆ ನೌಕೆಯಲ್ಲಿ ಪ್ರಯಾಣಮಾಡಿದರು, ಅಲ್ಲಿ ಯೋಹಾನನು ಅವರನ್ನು ಬಿಟ್ಟು ಯೆರೂಸಲೇಮಿಗೆ ಹಿಂತಿರುಗಿ ಹೋದನು.


ಆಮೇಲೆ ಸಿರಿಯಾ ಮತ್ತು ಕಿಲಿಕ್ಯ ಪ್ರಾಂತಗಳಿಗೆ ಬಂದೆನು.


“ನಾನು ಕಿಲಿಕ್ಯದ ತಾರ್ಸದಲ್ಲಿ ಜನಿಸಿದ ಯೆಹೂದ್ಯನು, ಈ ಪಟ್ಟಣದಲ್ಲಿಯೇ ಬೆಳೆದವನು, ಗಮಲಿಯೇಲನ ಪಾದ ಸನ್ನಿಧಿಯಲ್ಲಿ ನಮ್ಮ ಪಿತೃಗಳ ನಿಯಮವನ್ನು ಸೂಕ್ಷ್ಮವಾಗಿ ಅಭ್ಯಾಸ ಮಾಡಿದೆ. ದೇವರ ವಿಷಯದಲ್ಲಿ, ಇಂದು ನೀವೆಲ್ಲರೂ ಇರುವಂತೆಯೇ ನಾನೂ ಆಸಕ್ತಿವುಳ್ಳವನಾಗಿದ್ದೆನು.


ಅದಕ್ಕೆ ಪೌಲನು, “ನಾನೊಬ್ಬ ಯೆಹೂದ್ಯನು, ಕಿಲಿಕ್ಯದ ತಾರ್ಸದವನು, ಪ್ರಸಿದ್ಧ ಪಟ್ಟಣದ ನಾಗರಿಕನು. ದಯವಿಟ್ಟು ಜನರೊಂದಿಗೆ ಮಾತನಾಡಲು ನನಗೆ ಅವಕಾಶ ಕೊಡಬೇಕು,” ಎಂದು ಸಹಸ್ರಾಧಿಪತಿಯನ್ನು ಬೇಡಿಕೊಂಡನು.


ಪೌಲನು ಸಿರಿಯ ಮತ್ತು ಕಿಲಿಕ್ಯ ಸೀಮೆಗಳನ್ನು ಹಾದುಹೋಗುತ್ತಾ, ಅಲ್ಲಿದ್ದ ಸಭೆಗಳ ನಂಬಿಕೆಯನ್ನು ಬಲಪಡಿಸಿದನು.


ಆದರೆ ಪಂಫುಲ್ಯದಲ್ಲಿ ತಮ್ಮನ್ನು ಬಿಟ್ಟು ತಮ್ಮೊಂದಿಗೆ ಸೇವೆಗೆ ಸಹಕರಿಸದೆ ಹೋದ ಮಾರ್ಕನನ್ನು ಕರೆದುಕೊಂಡು ಹೋಗುವುದು ಸರಿಯಲ್ಲವೆಂದು ಪೌಲನು ಭಾವಿಸಿದನು.


ಅವರ ಕೈಯಿಂದ ಬರೆದು ಕೊಟ್ಟದ್ದೇನೆಂದರೆ: ಅಪೊಸ್ತಲರು ಹಾಗೂ ಹಿರಿಯ ಸಹೋದರರು, ಅಂತಿಯೋಕ್ಯ, ಸಿರಿಯ ಮತ್ತು ಕಿಲಿಕ್ಯದಲ್ಲಿ ವಾಸಿಸುವ ಯೆಹೂದ್ಯರಲ್ಲದವರೊಳಗಿನ ಸಹೋದರರಿಗೆ: ವಂದನೆಗಳು.


ಫ್ರುಗ್ಯ ಮತ್ತು ಪಂಫುಲ್ಯ, ಈಜಿಪ್ಟ್ ಹಾಗೂ ಕುರೇನೆದ ಹತ್ತಿರದ ಲಿಬ್ಯದ ಭಾಗಗಳ ನಿವಾಸಿಗಳು; ರೋಮ್ ಪಟ್ಟಣದಿಂದ ಬಂದ ಸಂದರ್ಶಕರು ಇಲ್ಲಿ ಬಂದಿದ್ದಾರೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು