ಅಪೊಸ್ತಲರ ಕೃತ್ಯಗಳು 26:7 - ಕನ್ನಡ ಸಮಕಾಲಿಕ ಅನುವಾದ7 ರಾಜರೇ, ನಮ್ಮ ಹನ್ನೆರಡು ಗೋತ್ರಗಳವರು ಅತ್ಯಾಸಕ್ತಿಯಿಂದ ಹಗಲಿರುಳು ದೇವರ ಸೇವೆಮಾಡುತ್ತಾ, ಆ ವಾಗ್ದಾನವು ನೆರವೇರುವುದೆಂದು ನಿರೀಕ್ಷಿಸುತ್ತಾ ಇದ್ದಾರೆ. ರಾಜರೇ, ಈ ನಿರೀಕ್ಷೆಯ ನಿಮಿತ್ತವಾಗಿಯೇ ಯೆಹೂದ್ಯರು ನನ್ನ ಮೇಲೆ ದೋಷಾರೋಪಣೆ ಮಾಡುತ್ತಿದ್ದಾರೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20197 ನಮ್ಮ ಹನ್ನೆರಡು ಕುಲದವರು ಹಗಲಿರುಳು ಆಸಕ್ತಿಯಿಂದ ದೇವರನ್ನು ಆರಾಧಿಸುತ್ತಾ, ಆ ವಾಗ್ದಾನದ ಫಲವನ್ನು ಹೊಂದುವುದಕ್ಕಾಗಿ ನಿರೀಕ್ಷಿಸುತ್ತಾ ಇದ್ದಾರೆ. ಅರಸನೇ, ಅದೇ ನಿರೀಕ್ಷೆಯ ವಿಷಯದಲ್ಲಿಯೇ ಯೆಹೂದ್ಯರು, ನನ್ನ ವಿರುದ್ಧ ದೋಷಾರೋಪಣೆಮಾಡುತ್ತಿದ್ದಾರೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)7 ಹನ್ನೆರಡು ಗೋತ್ರಗಳ ನಮ್ಮ ಜನರು, ಹಗಲಿರುಳು ದೇವರನ್ನು ಆರಾಧಿಸುತ್ತಾ, ಆ ವಾಗ್ದಾನ ಈಡೇರಿಯೇ ತೀರುವುದೆಂದು ನಂಬಿದ್ದಾರೆ. ಈ ನಂಬಿಕೆಗಾಗಿಯೇ, ಓ ರಾಜರೇ, ಯೆಹೂದ್ಯರು ನನ್ನ ಮೇಲೆ ದೋಷಾರೋಪಣೆ ಮಾಡಿದ್ದಾರೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)7 ನಮ್ಮ ಹನ್ನೆರಡು ಕುಲದವರು ಹಗಲಿರುಳು ಆಸಕ್ತಿಯಿಂದ ದೇವರನ್ನು ಸೇವಿಸುತ್ತಾ ಆ ವಾಗ್ದಾನದ ಫಲವನ್ನು ಹೊಂದುವದಕ್ಕೆ ನಿರೀಕ್ಷಿಸುತ್ತಾ ಇದ್ದಾರೆ. ರಾಜಾ, ಆ ನಿರೀಕ್ಷೆಯ ವಿಷಯದಲ್ಲಿಯೇ ಯೆಹೂದ್ಯರು ನನ್ನ ಮೇಲೆ ದೋಷಾರೋಪಣೆಮಾಡುತ್ತಾರೆ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್7 ಈ ವಾಗ್ದಾನವು ಖಂಡಿತವಾಗಿ ನೆರವೇರುತ್ತದೆ ಎಂದು ಹನ್ನೆರಡು ಕುಲಗಳ ನಮ್ಮ ಜನರು ನಿರೀಕ್ಷಿಸಿಕೊಂಡಿದ್ದಾರೆ. ಯೆಹೂದ್ಯರು ಹಗಲಿರುಳು ದೇವರ ಸೇವೆ ಮಾಡುತ್ತಿರುವುದು ಈ ನಿರೀಕ್ಷೆಯಿಂದಲೇ. ನಾನು ಸಹ ಇದೇ ನಿರೀಕ್ಷೆಯನ್ನು ಹೊಂದಿರುವುದರಿಂದ ಇವರು ನನ್ನ ಮೇಲೆ ಆಪಾದನೆಗಳನ್ನು ಹೊರಿಸಿದ್ದಾರೆ! ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್7 ಹಿ ಗೊಸ್ಟಿಯಾ ಖರೆಚ್ ಖರಿ ಹೊತ್ಯಾತ್ ಮನುನ್ ಬಾರಾ ಕುಳಿಚ್ಯಾ ಅಮ್ಚ್ಯಿ ಲೊಕಾ ಬರೊಸೊ ಥವ್ನ್ ಹಾತ್, ಜುದೆವಾಂಚಿ ಲೊಕಾ ದಿಸ್ ರಾತ್ ದೆವಾಚಿ ಸೆವಾ ಕರ್‍ತಲೆ ಹ್ಯೊ ಬರೊಸೊ ಘೆವ್ನ್ ಹಾಯ್ ಮನುನ್ ಹೆನಿ ಮಾಜ್ಯಾ ವರ್‍ತಿ ಅಪ್ವಾದಾ ಸಗ್ಳ್ಯಿ ಘಾಟ್ಲಾತ್! ಅಧ್ಯಾಯವನ್ನು ನೋಡಿ |