Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 26:29 - ಕನ್ನಡ ಸಮಕಾಲಿಕ ಅನುವಾದ

29 ಪೌಲನು, “ಅಲ್ಪ ಕಾಲದಲ್ಲಾಗಲಿ, ದೀರ್ಘಕಾಲದಲ್ಲಾಗಲಿ ನೀವಷ್ಟೇ ಅಲ್ಲ, ನನ್ನ ಮಾತುಗಳನ್ನು ಇಂದು ಆಲಿಸುತ್ತಿರುವ ಪ್ರತಿಯೊಬ್ಬರೂ ಈ ಬೇಡಿಗಳನ್ನು ಹೊರತು ನನ್ನಂತೆಯೇ ಆಗಬೇಕೆಂದು ದೇವರನ್ನು ಪ್ರಾರ್ಥಿಸುತ್ತೇನೆ,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

29 ಪೌಲನು; “ಅಲ್ಪಪ್ರಯತ್ನದಿಂದಾಗಲಿ, ಅಧಿಕ ಪ್ರಯತ್ನದಿಂದಾಗಲಿ ನೀನು ಮಾತ್ರವಲ್ಲದೆ ಈಹೊತ್ತು ನನ್ನ ಮಾತುಗಳನ್ನು ಕೇಳುವವರೆಲ್ಲರೂ, ಈ ಬೇಡಿಗಳ ಹೊರತು, ನನ್ನಂತೆ ಆಗಬೇಕೆಂದು ದೇವರನ್ನು ಪ್ರಾರ್ಥಿಸುತ್ತೇನೆ” ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

29 ಪೌಲನು ಪ್ರತ್ಯುತ್ತರವಾಗಿ, “ಅಲ್ಪಕಾಲವಾಗಲಿ, ದೀರ್ಘಕಾಲವಾಗಲಿ, ನೀವು ಮಾತ್ರವಲ್ಲ, ಇಂದು ನನ್ನನ್ನು ಆಲಿಸುತ್ತಿರುವ ಎಲ್ಲರೂ ನನ್ನಂತೆಯೇ ಆಗಬೇಕೆಂಬುದೇ ದೇವರಲ್ಲಿ ನಾನು ಮಾಡುವ ಪ್ರಾರ್ಥನೆ. ಆದರೆ ಈ ಸಂಕೋಲೆಗಳು ಮಾತ್ರ ನಿಮಗೆ ಬೇಡ,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

29 ಪೌಲನು - ಅಲ್ಪಪ್ರಯತ್ನದಿಂದಾಗಲಿ ಅಧಿಕಪ್ರಯತ್ನದಿಂದಾಗಲಿ ನೀನು ಮಾತ್ರವಲ್ಲದೆ ಈಹೊತ್ತು ನನ್ನ ಮಾತುಗಳನ್ನು ಕೇಳುವವರೆಲ್ಲರೂ ಈ ಬೇಡಿಗಳ ಹೊರತು ನನ್ನಂತೆ ಆಗಬೇಕೆಂದು ದೇವರನ್ನು ಪ್ರಾರ್ಥಿಸುತ್ತೇನೆ ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

29 ಪೌಲನು, “ಸುಲಭವೋ ಕಷ್ಟವೋ ಅದು ನನಗೆ ಮುಖ್ಯವಲ್ಲ. ನೀನು ಮಾತ್ರವಲ್ಲ, ಇಂದು ನನ್ನನ್ನು ಆಲಿಸುತ್ತಿರುವ ಪ್ರತಿಯೊಬ್ಬರೂ ರಕ್ಷಣೆಹೊಂದಿ ನನ್ನಂತೆಯೇ ಆಗಬೇಕೆಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ. ಆದರೆ ಈ ಸಂಕೋಲೆಗಳು ಮಾತ್ರ ನಿಮಗೆ ಬೇಡ!” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

29 ತನ್ನಾ ಪಾವ್ಲುನ್, “ಸರಳ್ ಕಿ ಕಸ್ಟ್ ಕಿ ತೆ ಮಾಕಾ ಮುಖ್ಯ್ ನ್ಹಯ್ ತಿಯಾ ಎಕುಚ್ ನ್ಹಯ್, ಆಜ್ ಮಿಯಾ ಸಾಂಗಲ್ಲೆ ಆಯ್ಕುನ್ ಘೆಟಲ್ಲೊ ಹರಿಎಕ್ಲೊ ರಾಕನ್ ಹೊವ್ಚೆ ಅನಿ ಮಾಜ್ಯಾ ಸಾರ್ಕೆ ಹೊವ್ಚೆ ಮನುನ್ ಮಿಯಾ ದೆವಾಚ್ಯಾ ಜಗ್ಗೊಳ್ ಮಾಗ್ನಿ ಕರ್‍ತಾ, ಹೊಲ್ಯಾರ್ ಹ್ಯೊ ಅನ್ಮಾನ್ ತುಕಾ ನಕ್ಕೊ!” ಮನುನ್ ಸಾಂಗ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 26:29
18 ತಿಳಿವುಗಳ ಹೋಲಿಕೆ  

ಏಕೆಂದರೆ ಆ ಸುವಾರ್ತೆಗಾಗಿಯೇ ಸೆರೆಯಲ್ಲಿರುವ ರಾಯಭಾರಿಯಾದ ನಾನು ಅದನ್ನು ಸಾರುವುದರಲ್ಲಿ ಧೈರ್ಯವಾಗಿ ಮಾತನಾಡುವ ಹಂಗಿನಲ್ಲಿದ್ದೇನೆ.


ಈ ಕ್ರಿಸ್ತ ಯೇಸುವನ್ನೇ ನಾವು ಸಾರುವವರಾಗಿದ್ದೇವೆ; ಪ್ರತಿಯೊಬ್ಬರೂ ಕ್ರಿಸ್ತ ಯೇಸುವಿನಲ್ಲಿ ಪರಿಪಕ್ವತೆಯುಳ್ಳವರಾಗಿ ಸಮರ್ಪಿಸುವಂತೆ, ಪ್ರತಿಯೊಬ್ಬರನ್ನೂ ಎಚ್ಚರಿಸಿ ಎಲ್ಲಾ ಜ್ಞಾನದಲ್ಲಿ ಪ್ರತಿಯೊಬ್ಬರಿಗೂ ಬೋಧಿಸುತ್ತಿದ್ದೇವೆ.


ಪ್ರಿಯರೇ, ನನ್ನ ಹೃದಯದ ಬಯಕೆಯು, ನಾನು ದೇವರಿಗೆ ಸಲ್ಲಿಸುವ ಪ್ರಾರ್ಥನೆಯು ಇಸ್ರಾಯೇಲರು ರಕ್ಷಣೆ ಹೊಂದಬೇಕೆಂಬುದೇ.


ಸಹಸ್ರಾಧಿಪತಿ ಅಲ್ಲಿಗೆ ಬಂದು ಪೌಲನನ್ನು ಬಂಧಿಸಿ, ಅವನನ್ನು ಎರಡು ಸರಪಣಿಗಳಿಂದ ಕಟ್ಟಬೇಕೆಂದು ಆಜ್ಞಾಪಿಸಿದನು. ಅನಂತರ “ಇವನು ಯಾರು? ಇವನು ಮಾಡಿದ್ದೇನು?” ಎಂದು ವಿಚಾರಿಸಿದನು.


ನನ್ನ ಬುದ್ಧಿಹೀನತೆಯನ್ನು ನೀವು ಇನ್ನೂ ಸ್ವಲ್ಪ ಸಹಿಸಿಕೊಳ್ಳಬೇಕೆಂದು ನಾನು ಅಪೇಕ್ಷಿಸುತ್ತೇನೆ. ಈಗಾಗಲೇ ನೀವು ಸಹಿಸಿಕೊಂಡಿದ್ದೀರಿ.


ನಾನಿರುವಂತೆಯೇ ಎಲ್ಲಾ ಮನುಷ್ಯರು ಇರಬೇಕೆಂಬುದು ನನ್ನ ಇಷ್ಟ. ಆದರೆ ಒಬ್ಬರು ಒಂದು ವಿಧವಾಗಿಯೂ ಮತ್ತೊಬ್ಬರು ಇನ್ನೊಂದು ವಿಧವಾಗಿಯೂ ಸ್ವಂತ ವರವನ್ನು ದೇವರಿಂದ ಪಡೆದುಕೊಂಡಿರುತ್ತಾರೆ.


ಈಗ ನೀವು ತೃಪ್ತರಾಗಿದ್ದೀರಿ! ಈಗಾಗಲೇ ಐಶ್ವರ್ಯವಂತರಾಗಿದ್ದೀರಿ. ನಮ್ಮ ಸಹಾಯವಿಲ್ಲದೆ ಆಳುತ್ತಿದ್ದೀರಿ. ನೀವು ನಿಜವಾಗಿಯೂ ಅರಸರಾಗಿದ್ದರೆ, ನಾವು ಸಹ ನಿಮ್ಮೊಂದಿಗೆ ಸೇರಿ ಆಳುತ್ತಿದ್ದೇವಲ್ಲವೇ?


ಅವರು ಅಲ್ಲಿ ಅನೇಕ ದಿನಗಳನ್ನು ಕಳೆಯುತ್ತಿದ್ದಾಗ, ಫೆಸ್ತನು ಪೌಲನ ವಿಷಯವನ್ನು ರಾಜನೊಂದಿಗೆ ಚರ್ಚಿಸಿ, “ಕೈದಿಯಾಗಿ ಫೇಲಿಕ್ಸನು ಬಿಟ್ಟುಹೋದ ಒಬ್ಬ ಮನುಷ್ಯನಿದ್ದಾನೆ.


ಹೆರೋದನು ಅವನನ್ನು ವಿಚಾರಣೆಗೆ ತರಲಿಕ್ಕಿದ್ದ ದಿನದ ಹಿಂದಿನ ರಾತ್ರಿ ಪೇತ್ರನು ಸರಪಣಿಗಳಿಂದ ಬಂಧಿಸಲಾಗಿ ಇಬ್ಬರು ಸಿಪಾಯಿಗಳ ಮಧ್ಯೆ ನಿದ್ರಿಸುತ್ತಿದ್ದನು. ಕಾವಲುಗಾರರು ದ್ವಾರದ ಬಳಿಯಲ್ಲಿ ಕಾಯುತ್ತಿದ್ದರು.


ನಾನಾದರೋ ಮಾನವರ ಸಾಕ್ಷಿಯನ್ನು ಸ್ವೀಕರಿಸುವುದಿಲ್ಲ. ಆದರೆ ನೀವು ರಕ್ಷಣೆ ಹೊಂದುವಂತೆ ನಾನು ಇವುಗಳನ್ನು ಹೇಳುತ್ತೇನೆ.


ನೀವು ಕೇಳದಿದ್ದರೆ, ನನ್ನ ಆತ್ಮವು ಗುಟ್ಟಾದ ಸ್ಥಳದಲ್ಲಿ ನಿಮ್ಮ ಗರ್ವದ ನಿಮಿತ್ತ ಗೋಳಾಡುವುದು, ಯೆಹೋವ ದೇವರ ಮಂದೆಯು ಸೆರೆಯಾಗಿ ಹೋದದ್ದರಿಂದ ಬಹಳವಾಗಿ ಅಳುವೆನು. ನನ್ನ ನೇತ್ರವು ಅಶ್ರುಧಾರೆಯನ್ನು ಸುರಿಸುವುದು.


ಅವಳು ತನ್ನ ಯಜಮಾನನಿಗೆ, “ನನ್ನ ಧಣಿಯು ಸಮಾರ್ಯದಲ್ಲಿರುವ ಪ್ರವಾದಿಯ ಬಳಿಯಲ್ಲಿರುತ್ತಿದ್ದರೆ, ಅವನು ಧಣಿಯ ಕುಷ್ಠರೋಗವನ್ನು ವಾಸಿಮಾಡುತ್ತಿದ್ದನು,” ಎಂದಳು.


ಆಗ ಅರಸನು ನಡುಗುತ್ತಾ ಊರು ಬಾಗಿಲ ಮೇಲಿರುವ ಕೊಠಡಿಗೆ ಏರಿಹೋದನು. ಹೋಗುವಾಗ, “ನನ್ನ ಮಗನಾದ ಅಬ್ಷಾಲೋಮನೇ, ನನ್ನ ಮಗನೇ, ನನ್ನ ಮಗನಾದ ಅಬ್ಷಾಲೋಮನೇ, ನಿನಗೆ ಬದಲಾಗಿ ನಾನು ಸತ್ತಿದ್ದರೆ ಉತ್ತಮವಾಗುತ್ತಿತ್ತು. ಅಬ್ಷಾಲೋಮನೇ, ನನ್ನ ಮಗನೇ, ನನ್ನ ಮಗನೇ,” ಎಂದು ಹೇಳಿ ಅತ್ತನು.


ಮೋಶೆಯು ಅವನಿಗೆ, “ನನ್ನ ನಿಮಿತ್ತವಾಗಿ ನೀನು ಹೊಟ್ಟೆಕಿಚ್ಚು ಪಡುತ್ತೀಯೋ? ಯೆಹೋವ ದೇವರ ಜನರೆಲ್ಲಾ ಪ್ರವಾದಿಗಳಾಗಿದ್ದು, ಯೆಹೋವ ದೇವರು ತನ್ನ ಆತ್ಮವನ್ನು ಅವರ ಮೇಲೆ ಇಟ್ಟರೆ ಎಷ್ಟೋ ಒಳ್ಳೆಯದು,” ಎಂದನು.


ಇಸ್ರಾಯೇಲರು ಅವರಿಗೆ, “ನಾವು ಈಜಿಪ್ಟ್ ದೇಶದಲ್ಲಿ ಮಾಂಸದ ಪಾತ್ರೆಗಳ ಬಳಿಯಲ್ಲಿ ಕುಳಿತುಕೊಂಡು ಸಾಕಾಗುವಷ್ಟು ರೊಟ್ಟಿಯನ್ನು ತಿನ್ನುತ್ತಿದ್ದಾಗ, ಯೆಹೋವ ದೇವರ ಕೈಯಿಂದ ಸತ್ತು ಹೋಗಿದ್ದರೆ ಒಳ್ಳೆಯದಾಗಿತ್ತು. ಇಡೀ ಜನಾಂಗವೇ ಹಸಿವೆಯಿಂದ ಸತ್ತು ಹೋಗುವಂತೆ ನಮ್ಮನ್ನು ಈ ಮರುಭೂಮಿಗೆ ಬರಮಾಡಿದ್ದೀರಿ,” ಎಂದರು.


ಆದರೆ ಯೆರೆಮೀಯನು, “ಅವರು ನಿನ್ನನ್ನು ಒಪ್ಪಿಸುವುದಿಲ್ಲ” ನಾನು ನಿನಗೆ ಹೇಳುವ ಯೆಹೋವ ದೇವರ ವಾಕ್ಯವನ್ನು ಮಾತ್ರ ಕೇಳು; ಆಗ ನಿನಗೆ ಒಳ್ಳೆಯದಾಗುವುದು. ನಿನ್ನ ಪ್ರಾಣ ಬದುಕುವುದು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು