Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 26:25 - ಕನ್ನಡ ಸಮಕಾಲಿಕ ಅನುವಾದ

25 ಆದರೆ ಪೌಲನು, “ಬಹು ಗೌರವವುಳ್ಳ ಫೆಸ್ತರೇ, ನಾನು ಹುಚ್ಚನಲ್ಲ, ಆದರೆ ನಾನು ಸತ್ಯವನ್ನೇ ಸ್ವಸ್ಥಬುದ್ಧಿಯಿಂದ ಮಾತನಾಡುತ್ತಿರುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

25 ಅದಕ್ಕೆ ಪೌಲನು; “ಮಹಾ ಶ್ರೇಷ್ಠನಾದ ಫೆಸ್ತನೇ, ನಾನು ಹುಚ್ಚನಲ್ಲ; ಸ್ವಸ್ಥಬುದ್ಧಿಯುಳ್ಳವನಾಗಿ ಸತ್ಯವಾದ ಮಾತುಗಳನ್ನೇ ಹೇಳುತ್ತಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

25 ಅದಕ್ಕೆ ಪೌಲನು, “ನಾನು ಹುಚ್ಚನಲ್ಲ, ಫೆಸ್ತ ಮಹಾಪ್ರಭೂ, ನಾನು ಆಡುತ್ತಿರುವುದು ತಿಳಿಮನಸ್ಸಿನಿಂದಾಡುವ ಸತ್ಯ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

25 ಅದಕ್ಕೆ ಪೌಲನು - ಶ್ರೀಮನ್ ಮಹಾ ಫೆಸ್ತನೇ, ನಾನು ಮರುಳಾಗಿಲ್ಲ; ಸ್ವಸ್ಥಬುದ್ಧಿಯುಳ್ಳವನಾಗಿ ಸತ್ಯವಾದ ಮಾತುಗಳನ್ನಾಡುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

25 ಪೌಲನು, “ಮಹಾರಾಜಶ್ರೀಗಳಾದ ಫೆಸ್ತನೇ, ನಾನು ಹುಚ್ಚನಲ್ಲ. ನಾನು ಹೇಳುತ್ತಿರುವುದು ಸತ್ಯಸಂಗತಿಗಳಾಗಿವೆ. ನನ್ನ ಮಾತುಗಳು ಮೂರ್ಖನ ಮಾತುಗಳಲ್ಲ. ನಾನು ಸ್ವಸ್ಥಬುದ್ಧಿಯುಳ್ಳವನಾಗಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

25 ತನ್ನಾ ಪಾವ್ಲುನ್ ಶ್ರೆಸ್ಟ್ ರಾಜಾ ಫೆಸ್ತಾ, ಮಿಯಾ ಪಿಸೊ ನ್ಹಯ್, ಮಿಯಾ ಸಾಂಗಲ್ಲಿ ಖರಿ ಸಂಗ್ತಿಯಾ ಮಾಜಿ ಗೊಸ್ಟಿಯಾ ಹುಂಬ್ ಪಾನಾಚಿ ಗೊಸ್ಟಿಯಾ ನ್ಹಯ್, ಮಿಯಾ ಬುದ್ದ್ ಹೊತ್ತೊ ಹೊವ್ನ್ ಹಾಯ್.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 26:25
10 ತಿಳಿವುಗಳ ಹೋಲಿಕೆ  

ಮಹಾಪ್ರಭುಗಳಾದ ರಾಜ್ಯಪಾಲ ಫೇಲಿಕ್ಸ್, ಅವರಿಗೆ ಕ್ಲೌದ್ಯ ಲೂಸ್ಯನು, ಮಾಡುವ ವಂದನೆಗಳು.


ಇತರರನ್ನು ಸ್ವಸ್ಥಬೋಧನೆಯಿಂದ ಪ್ರೋತ್ಸಾಹಿಸುವುದಕ್ಕೂ ಎದುರಿಸುವವರನ್ನು ಖಂಡಿಸುವಂತೆ ಮಾತನಾಡುವುದಕ್ಕೂ ಶಕ್ತನಾಗಿರಲು ಅವನು ಬೋಧಿಸಿದ ಪ್ರಕಾರ ನಂಬತಕ್ಕ ವಾಕ್ಯವನ್ನು ದೃಢವಾಗಿ ಹಿಡಿದುಕೊಂಡವನಾಗಿರಬೇಕು.


ಆದರೆ ಕ್ರಿಸ್ತ ಯೇಸುವನ್ನು ನಿಮ್ಮ ಹೃದಯಗಳಲ್ಲಿ “ಕರ್ತದೇವರು” ಎಂದು ಪ್ರತಿಷ್ಠೆ ಪಡಿಸಿರಿ. ನಿಮ್ಮಲ್ಲಿರುವ ನಿರೀಕ್ಷೆಗೆ ಆಧಾರವೇನೆಂದು ಕೇಳುವವರೆಲ್ಲರಿಗೆ ಸಾತ್ವಿಕತ್ವದಿಂದಲೂ ಗೌರವದಿಂದಲೂ ಉತ್ತರ ಹೇಳುವುದಕ್ಕೆ ಯಾವಾಗಲೂ ಸಿದ್ಧವಾಗಿರಿ.


ಅಪಕಾರಕ್ಕೆ ಅಪಕಾರವನ್ನೂ ನಿಂದೆಗೆ ನಿಂದೆಯನ್ನೂ ಮಾಡದೆ ಆಶೀರ್ವದಿಸಿರಿ. ಇದಕ್ಕಾಗಿ ದೇವರು ನಿಮ್ಮನ್ನು ಕರೆದರಲ್ಲವೇ? ಹೀಗೆ ಮಾಡುವವರಾದ ನೀವು ಆಶೀರ್ವಾದವನ್ನು ಬಾಧ್ಯವಾಗಿ ಹೊಂದುವಿರೆಂದು ನಿಮಗೆ ತಿಳಿದಿದೆಯಲ್ಲಾ.


ಎಲ್ಲಾ ಕಡೆಗಳಲ್ಲಿಯೂ ಎಲ್ಲಾ ವಿಧದಲ್ಲಿಯೂ ಬಹು ಕೃತಜ್ಞತೆಯಿಂದ ಇದನ್ನು ಸ್ವಾಗತಿಸುತ್ತೇವೆ.


ಅದಕ್ಕೆ ಯೇಸು, “ನನಗೆ ದೆವ್ವ ಹಿಡಿದಿಲ್ಲ. ಆದರೆ ನನ್ನ ತಂದೆಯನ್ನು ಸನ್ಮಾನಿಸುತ್ತೇನೆ. ನೀವು ನನ್ನನ್ನು ಅವಮಾನಪಡಿಸುತ್ತೀರಿ.


ಆದ್ದರಿಂದ ನಾನು ಸಹ ಮೊದಲಿನಿಂದ ಎಲ್ಲವನ್ನೂ ಸೂಕ್ಷ್ಮವಾಗಿ ಪರಿಶೋಧಿಸಿ, ಅವುಗಳನ್ನು ಕ್ರಮವಾಗಿ ನಿಮಗೆ ಬರೆಯುವುದು ಒಳ್ಳೆಯದೆಂದು ನನಗೆ ತೋಚಿತು.


‘ಏಕೆಂದರೆ, ಹುಚ್ಚನಾದ ತನ್ನನ್ನು ಪ್ರವಾದಿಯಾಗಿ ಮಾಡಿಕೊಳ್ಳುವಂಥ ಪ್ರತಿ ಮನುಷ್ಯನಿಗೆ ಯೆಹೋವ ದೇವರ ಆಲಯದಲ್ಲಿ ಅಧಿಕಾರಿಗಳು ಇರುವ ಹಾಗೆಯೂ, ನೀನು ಅಂಥವರನ್ನು ಕೋಳದಲ್ಲಿಯೂ, ಸೆರೆಯಲ್ಲಿಯೂ ಇಡುವ ಹಾಗೆಯೂ, ಯೆಹೋವ ದೇವರು ಯಾಜಕನಾದ ಯೆಹೋಯಾದನಿಗೆ ಬದಲಾಗಿ ನಿನ್ನನ್ನು ಯಾಜಕನಾಗಿ ಇಟ್ಟಿದ್ದಾರೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು