ಅಪೊಸ್ತಲರ ಕೃತ್ಯಗಳು 25:23 - ಕನ್ನಡ ಸಮಕಾಲಿಕ ಅನುವಾದ23 ಮರುದಿನ ಅಗ್ರಿಪ್ಪನು ಹಾಗೂ ಬೆರ್ನಿಕೆಯು ಮಹಾ ವೈಭವದಿಂದ ಸೈನ್ಯಾಧಿಕಾರಿಗಳೊಂದಿಗೂ ಪಟ್ಟಣದ ಗಣ್ಯವ್ಯಕ್ತಿಗಳೊಂದಿಗೂ ಆಸ್ಥಾನವನ್ನು ಪ್ರವೇಶಿಸಿದರು. ಫೆಸ್ತನ ಆಜ್ಞೆಯಂತೆ ಪೌಲನನ್ನು ಕರೆದುಕೊಂಡು ಬಂದರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201923 ಮರುದಿನ ಅಗ್ರಿಪ್ಪರಾಜನೂ, ಬೆರ್ನಿಕೆರಾಣಿಯೂ ಬಹು ಆಡಂಬರದಿಂದ ಬಂದು ಸಹಸ್ರಾಧಿಪತಿಗಳ ಮತ್ತು ಪಟ್ಟಣದ ಮುಖಂಡರ ಸಂಗಡ ಸಭಾಂಗಣದೊಳಗೆ ಸೇರಿಬಂದಾಗ ಫೆಸ್ತನು ಅಪ್ಪಣೆ ಕೊಡಲು, ಪೌಲನನ್ನು ಕರತಂದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)23 ಮಾರನೆಯ ದಿನ ಅಗ್ರಿಪ್ಪ ಮತ್ತು ಬೆರ್ನಿಸ್ ಮಹಾಸಡಗರದಿಂದ ಆಗಮಿಸಿದರು. ಸೇನಾಧಿಪತಿಗಳ ಹಾಗೂ ಪುರಪ್ರಮುಖರ ಸಮೇತ ಆಸ್ಥಾನವನ್ನು ಪ್ರವೇಶಿಸಿದರು. ಫೆಸ್ತನ ಆಜ್ಞೆಯ ಪ್ರಕಾರ ಪೌಲನನ್ನು ಹಾಜರುಪಡಿಸಲಾಯಿತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)23 ಮರುದಿನ ಅಗ್ರಿಪ್ಪರಾಜನೂ ಬೆರ್ನಿಕೆರಾಣಿಯೂ ಬಹು ಆಡಂಬರದಿಂದ ಬಂದು ಸಹಸ್ರಾಧಿಪತಿಗಳ ಮತ್ತು ಪಟ್ಟಣದ ಮುಖಂಡರ ಸಂಗಡ ಸಭಾಸ್ಥಾನದೊಳಗೆ ಸೇರಿದಾಗ ಫೆಸ್ತನು ಅಪ್ಪಣೆಕೊಡಲು ಪೌಲನನ್ನು ಕರತಂದರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್23 ಮರುದಿನ ಅಗ್ರಿಪ್ಪ ರಾಜ ಮತ್ತು ಬೆರ್ನಿಕೆ ರಾಣಿ ವೈಭವದ ಬಟ್ಟೆಗಳನ್ನು ಧರಿಸಿಕೊಂಡು ಸೇನಾಧಿಕಾರಿಗಳೊಡನೆ ಹಾಗೂ ಸೆಜರೇಯದ ಪ್ರಮುಖರೊಡನೆ ನ್ಯಾಯಾಲಯದೊಳಗೆ ಬಂದರು. ಪೌಲನನ್ನು ಒಳಗೆ ಕರೆದುಕೊಂಡು ಬರಬೇಕೆಂದು ಫೆಸ್ತನು ಸೈನಿಕರಿಗೆ ಆಜ್ಞಾಪಿಸಿದನು. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್23 ದುಸ್ರ್ಯಾಂದಿಸಿ ಅಗ್ರಿಪ್ಪರಾಜಾ, ಅನಿ ಬೆರ್ನಿಕೆ ರಾನಿ ಆಡಂಬರಾಚೆ ಕಪ್ಡೆನೆಸುನ್ ಘೆವ್ನ್ ಸೈನಿಕಾಂಚ್ಯಾ ಅಧಿಕಾರ್ಯ್ಯಾಚ್ಯಾ ವಾಂಗ್ಡಾ ಅನಿ ಸೆಜರೆಯಾತ್ಲ್ಯಾ ಪ್ರಮುಖ್ ಲೊಕಾಂಚ್ಯಾ ವಾಂಗ್ಡಾ ಝಡ್ತಿ ಕರ್‍ತಲ್ಯಾ ಜಾಗ್ಯಾರ್ ಯೆಲೆ, ತನ್ನಾ ಪಾವ್ಲುಕ್ ಭುತ್ತುರ್ ಹಾನುಚೆ ಮನುನ್ ಫೆಸ್ತಾನ್ ಸೈನಿಕಾಕ್ನಿ ಹುಕುಮ್ ಕರ್‍ಲ್ಯಾನ್. ಅಧ್ಯಾಯವನ್ನು ನೋಡಿ |