Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 24:17 - ಕನ್ನಡ ಸಮಕಾಲಿಕ ಅನುವಾದ

17 “ಅನೇಕ ವರ್ಷಗಳ ನಂತರ ದಾನಧರ್ಮಗಳನ್ನೂ ಕಾಣಿಕೆಗಳನ್ನೂ ನನ್ನ ಸ್ವದೇಶದವರಿಗೆ ಕೊಡಲು ಬಂದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 “ಕೆಲವು ವರ್ಷಗಳಾದ ಮೇಲೆ ನಾನು, ನನ್ನ ಸ್ವದೇಶದವರಿಗೆ ಧರ್ಮದ್ರವ್ಯಗಳನ್ನು, ತರುವುದಕ್ಕೂ, ಕಾಣಿಕೆಗಳನ್ನು ಒಪ್ಪಿಸುವುದಕ್ಕೂ ಬಂದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

17 ಹಲವಾರು ವರ್ಷಗಳಿಂದ ದೂರವಿದ್ದ ನಾನು, ಈಗ ನನ್ನ ಸ್ವದೇಶಿಯರಿಗೆ ದಾನಧರ್ಮ ತರಲೂ ಕಾಣಿಕೆಯನ್ನು ಅರ್ಪಿಸಲೂ ಜೆರುಸಲೇಮಿಗೆ ಬಂದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

17 ಕೆಲವು ವರುಷಗಳಾದ ಮೇಲೆ ನಾನು ನನ್ನ ಸ್ವದೇಶದವರಿಗೆ ಧರ್ಮದ್ರವ್ಯಗಳನ್ನು ತರುವದಕ್ಕೂ ಕಾಣಿಕೆಗಳನ್ನು ಒಪ್ಪಿಸುವದಕ್ಕೂ ಬಂದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

17 “ನಾನು ಅನೇಕ ವರ್ಷಗಳಿಂದ ಜೆರುಸಲೇಮಿನಲ್ಲಿ ಇರಲಿಲ್ಲ. ಬಳಿಕ ನಾನು ನನ್ನ ಜನರಿಗಾಗಿ ಹಣವನ್ನು ತರುವುದಕ್ಕಾಗಿಯೂ ಉಡುಗೊರೆಗಳನ್ನು ಕೊಡುವುದಕ್ಕಾಗಿಯೂ ಜೆರುಸಲೇಮಿಗೆ ಮರಳಿ ಹೋದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

17 ಮಿಯಾ ಲೈ ವರ್ಸಾಕ್ನಾ ಜೆರುಜಲೆಮಾತ್ ನತ್ತೊ ಮಾನಾ ಲೊಕಾಕ್ನಿ ಪೈಸೊ ಅನಿ ಆಯಾರಾ ದಿವ್ಕ್ ಮನುನ್ ಜರುಜಲೆಮಾಕ್ ಪರ್ತುನ್ ಗೆಲೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 24:17
14 ತಿಳಿವುಗಳ ಹೋಲಿಕೆ  

ಅವರು ನಾವು ಬಡವರನ್ನು ಜ್ಞಾಪಕಮಾಡಿಕೊಳ್ಳಬೇಕೆಂಬ ಒಂದು ವಿಷಯವನ್ನು ಮಾತ್ರ ಕೇಳಿಕೊಂಡರು. ನಾನು ಇದನ್ನು ಮಾಡುವುದರಲ್ಲಿ ಆಸಕ್ತನಾಗಿದ್ದೆನು.


ಈ ನಿಮ್ಮ ಸೇವೆಯು ಬರೀ ದೇವಜನರ ಕೊರತೆಯನ್ನು ನೀಗಿಸುವುದು ಮಾತ್ರವಲ್ಲ, ಅನೇಕರು ದೇವರಿಗೆ ತುಂಬಿ ಹರಿಯುವಷ್ಟು ಕೃತಜ್ಞತಾಸ್ತುತಿ ಸಲ್ಲಿಸುವಂತೆ ಮಾಡುವುದು.


ನಮಗೆ ಕರ್ತ ಆಗಿರುವ ಯೇಸುಕ್ರಿಸ್ತರ ಕೃಪೆಯನ್ನು ನೀವು ಬಲ್ಲವರಾಗಿದ್ದೀರಿ. ಅವರು ಐಶ್ವರ್ಯವಂತರಾಗಿದ್ದರೂ ತಮ್ಮ ಬಡತನದ ಮೂಲಕ ನೀವು ಐಶ್ವರ್ಯವಂತರಾಗುವಂತೆ ಅವರು ನಿಮಗೋಸ್ಕರ ಬಡವರಾದರು.


ನಾನು ಯೂದಾಯ ಪ್ರಾಂತದಲ್ಲಿ ಅವಿಶ್ವಾಸಿಗಳ ಕೈಯಿಂದ ಕಾಪಾಡಬೇಕೆಂತಲೂ ನನ್ನ ಸೇವೆಯು ಯೆರೂಸಲೇಮಿನಲ್ಲಿರುವ ದೇವಜನರಿಗೆ ಮೆಚ್ಚುಗೆಯಾಗಿರಬೇಕೆಂತಲೂ ಪ್ರಾರ್ಥಿಸಿರಿ.


ಸಾಧ್ಯವಾದರೆ, ಪೆಂಟೆಕೋಸ್ಟ್ ಎಂಬ ಐವತ್ತನೆಯ ದಿನದ ಹಬ್ಬಕ್ಕೆ ಯೆರೂಸಲೇಮನ್ನು ತಲುಪಬೇಕೆಂಬ ಅವಸರ ಪೌಲನಿಗಿದ್ದುದ್ದರಿಂದ, ಏಷ್ಯಾ ಪ್ರಾಂತದಲ್ಲಿ ಕಾಲ ಕಳೆಯುವುದನ್ನು ತಪ್ಪಿಸಿ ಎಫೆಸವನ್ನು ದಾಟಿ ಹೋಗಬೇಕೆಂದು ನಿರ್ಧರಿಸಿದ್ದನು.


ಮರುದಿನ ಪೌಲನು ಆ ನಾಲ್ವರೊಂದಿಗೆ ತನ್ನನ್ನು ಶುದ್ಧೀಕರಿಸಿಕೊಂಡನು. ಅನಂತರ ಶುದ್ಧಾಚಾರ ಮುಗಿಯುವ ದಿನಗಳ ಬಗ್ಗೆ ತಿಳಿಸುವುದಕ್ಕಾಗಿ ದೇವಾಲಯಕ್ಕೆ ಹೋದನು. ಅವರಲ್ಲಿ ಪ್ರತಿಯೊಬ್ಬನಿಗಾಗಿ ಯಾವಾಗ ಅರ್ಪಣೆಯು ಆಗಬೇಕೆಂಬುದರ ಬಗ್ಗೆಯೂ ಸೂಚಿಸಿದನು.


ಆದ್ದರಿಂದ ನಾನು ಮೂರು ವರ್ಷಗಳ ಕಾಲ ಹಗಲುರಾತ್ರಿ ಕಣ್ಣೀರಿಡುತ್ತಾ ಎಡಬಿಡದೆ ನಿಮ್ಮನ್ನು ಎಚ್ಚರಿಸುತ್ತಾ ಇದ್ದೇನೆಂಬುದನ್ನು ಜ್ಞಾಪಕದಲ್ಲಿಟ್ಟುಕೊಂಡು ಎಚ್ಚರವಾಗಿರಿ.


ಅದೇ ಸಮಯದಲ್ಲಿ ಅವನು ಪೌಲನು ತನಗೇನಾದರು ಹಣ ಕೊಡುವನೋ ಎಂಬುದಾಗಿಯೂ ನಿರೀಕ್ಷಿಸಿ, ಆಗಾಗ್ಗೆ ಅವನನ್ನು ಕರೆಯಿಸಿ ಅವನೊಂದಿಗೆ ಮಾತನಾಡುತ್ತಿದ್ದನು.


ಹೀಗಿರಲಾಗಿ, ತೀತನು ಪ್ರಾರಂಭಿಸಿದ ಈ ದಾನ ಕಾರ್ಯವನ್ನು ನಿಮ್ಮಲ್ಲಿ ಸಹ ಪೂರ್ಣಗೊಳಿಸಬೇಕೆಂದು ನಾವು ಅವನನ್ನು ಬಹಳವಾಗಿ ಕೇಳಿಕೊಂಡೆವು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು