ಅಪೊಸ್ತಲರ ಕೃತ್ಯಗಳು 24:1 - ಕನ್ನಡ ಸಮಕಾಲಿಕ ಅನುವಾದ1 ಐದು ದಿನಗಳ ನಂತರ ಮಹಾಯಾಜಕ ಅನನೀಯನು ಕೆಲವು ಹಿರಿಯರೊಂದಿಗೆ ಕೈಸರೈಯಕ್ಕೆ ಬಂದನು. ತನ್ನೊಂದಿಗೆ ಟೆರ್ಟುಲಸ್ ಎಂಬ ವಕೀಲನನ್ನು ಕರೆದುಕೊಂಡು ಬಂದು, ರಾಜ್ಯಪಾಲನಿಗೆ ಪೌಲನ ವಿರೋಧವಾಗಿ ದೂರುಗಳನ್ನಿಟ್ಟರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20191 ಐದು ದಿನಗಳಾದ ಮೇಲೆ ಮಹಾಯಾಜಕನಾದ ಅನನೀಯನು, ಹಿರಿಯರಲ್ಲಿ ಕೆಲವರನ್ನೂ ತೆರ್ತುಲ್ಯನೆಂಬ ಒಬ್ಬ ವಕೀಲನನ್ನೂ ಕರೆದುಕೊಂಡು ಬಂದು, ಪೌಲನ ಮೇಲೆ ದೇಶಾಧಿಪತಿಗೆ ದೂರು ಹೇಳಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)1 ಐದು ದಿನಗಳ ನಂತರ ಪ್ರಧಾನಯಾಜಕ ಅನನೀಯನು, ಕೆಲವು ಪ್ರಮುಖರನ್ನೂ ತೆರ್ತುಲ್ಲ ಎಂಬ ವಕೀಲನನ್ನೂ ಕರೆದುಕೊಂಡು ಬಂದನು. ಅವರು ರಾಜ್ಯಪಾಲ ಫೆಲಿಕ್ಸನ ಸನ್ನಿಧಾನದಲ್ಲಿ ಪೌಲನ ವಿರುದ್ಧ ದೂರಿತ್ತರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)1 ಐದು ದಿವಸಗಳಾದ ಮೇಲೆ ಮಹಾಯಾಜಕನಾದ ಅನನೀಯನು ಸಭೇಹಿರಿಯರಲ್ಲಿ ಕೆಲವರನ್ನೂ ತೆರ್ತುಲ್ಲನೆಂಬ ಒಬ್ಬ ವಕೀಲನನ್ನೂ ಕರೆದುಕೊಂಡು ಬಂದು ಪೌಲನ ಮೇಲೆ ದೇಶಾಧಿಪತಿಗೆ ಫಿರಿಯಾದಿ ಹೇಳಿದನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್1 ಐದು ದಿನಗಳ ನಂತರ, ಪ್ರಧಾನಯಾಜಕ ಅನನೀಯನು ಯೆಹೂದ್ಯರ ಹಿರೀನಾಯಕರಲ್ಲಿ ಕೆಲವರನ್ನು ಮತ್ತು ತೆರ್ತುಲ್ಲ ಎಂಬ ವಕೀಲನನ್ನು ಕರೆದುಕೊಂಡು ರಾಜ್ಯಪಾಲನ ಎದುರಿನಲ್ಲಿ ಪೌಲನ ಮೇಲೆ ದೋಷಾರೋಪಣೆ ಮಾಡಲು ಸೆಜರೇಯ ಪಟ್ಟಣಕ್ಕೆ ಹೋದನು. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್1 ಪಾಚ್ ದಿಸಾ ಕಳದ್ದ್ಯಾ ಮಾನಾ ಮುಖ್ಯ್ ಯಾಜಕ್ ಅನನಿಯಾ, ಜುದೆವಾಂಚ್ಯಾ ಜಾನ್ತ್ಯಾ ಮುಖಂಡಾಕ್ನಿ ಉಲ್ಲ್ಯಾ ಲೊಕಾಕ್ನಿ ಅನಿ ತೆರ್ತುಲ್ ಮನ್ತಲ್ಯಾ ವಕಿಲಾಕ್ ಬಲ್ವುನ್ ಘೆವ್ನ್ ರಾಜ್ಯ್ ಪಾಲಾಕ್ಡೆ ಪಾವ್ಲುಚೆರ್ ಚುಕ್ ಸಾಂಗುಚೆ ಮನುನ್ ಯೆಲ್ಯಾನಿ. ಅಧ್ಯಾಯವನ್ನು ನೋಡಿ |