Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 22:30 - ಕನ್ನಡ ಸಮಕಾಲಿಕ ಅನುವಾದ

30 ಯೆಹೂದ್ಯರು ಪೌಲನ ವಿರುದ್ಧ ಏಕೆ ದೋಷಾರೋಪಣೆ ಮಾಡುತ್ತಿದ್ದಾರೆ ಎಂಬುದಕ್ಕೆ ನಿಜಸಂಗತಿಯನ್ನು ಕಂಡುಹಿಡಿಯಲು ಸಹಸ್ರಾಧಿಪತಿಯು ಅಪೇಕ್ಷೆಪಟ್ಟನು. ಮರುದಿನ ಪೌಲನನ್ನು ಬಿಡುಗಡೆ ಮಾಡಿ, ಮುಖ್ಯಯಾಜಕರೂ ನ್ಯಾಯಸಭೆಯೂ ಕೂಡಿಬರಬೇಕೆಂದು ಅಪ್ಪಣೆಮಾಡಿದನು. ಆಮೇಲೆ ಪೌಲನನ್ನು ತಂದು ಅವರ ಎದುರಿನಲ್ಲಿ ನಿಲ್ಲಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

30 ಪೌಲನ ವಿರುದ್ಧ ಯೆಹೂದ್ಯರು ಯಾವ ತಪ್ಪು ಹೊರಿಸುತ್ತಾರೆಂಬುವ ವಿಷಯದಲ್ಲಿ ನಿಜವಾದ ಸಂಗತಿಯನ್ನು, ತಿಳಿಯಬೇಕೆಂದು ಅಪೇಕ್ಷಿಸಿ ಸಹಸ್ರಾಧಿಪತಿಯು ಮರುದಿನ ಅವನ ಬೇಡಿಗಳನ್ನು ಬಿಚ್ಚಿ, ಮುಖ್ಯಯಾಜಕರೂ, ಹಿರೀಸಭೆಯವರೆಲ್ಲರೂ ಕೂಡಿಬರುವುದಕ್ಕೆ ಅಪ್ಪಣೆ ಕೊಟ್ಟು, ಪೌಲನನ್ನು ಕರೆದುಕೊಂಡು ಹೋಗಿ ಅವರ ಮುಂದೆ ನಿಲ್ಲಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

30 ಯೆಹೂದ್ಯರು ಪೌಲನ ವಿರುದ್ಧ ತಂದ ಆಪಾದನೆ ಏನೆಂದು ಖಚಿತವಾಗಿ ತಿಳಿದುಕೊಳ್ಳಲು ಸಹಸ್ರಾಧಿಪತಿ ಅಪೇಕ್ಷಿಸಿದನು. ಮಾರನೆಯ ದಿನ ಪೌಲನನ್ನು ಬಿಡುಗಡೆ ಮಾಡಿದನು. ಮುಖ್ಯಯಾಜಕರು ಮತ್ತು ನ್ಯಾಯಸಭೆಯ ಪ್ರಮುಖರು ಕೂಡುವಂತೆ ಆಜ್ಞಾಪಿಸಿದನು. ಪೌಲನನ್ನು ಕರೆದುಕೊಂಡು ಹೋಗಿ ಆ ಸಭೆಯ ಮುಂದೆ ನಿಲ್ಲಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

30 ಪೌಲನ ಮೇಲೆ ಯೆಹೂದ್ಯರು ಯಾವ ತಪ್ಪು ಹೊರಿಸುತ್ತಾರೆಂಬುವ ವಿಷಯದಲ್ಲಿ ನಿಜವಾದ ಸಂಗತಿಯನ್ನು ತಿಳಿಯಬೇಕೆಂದು ಅಪೇಕ್ಷಿಸಿ ಸಹಸ್ರಾಧಿಪತಿಯು ಮರುದಿನ ಅವನ ಬೇಡಿಗಳನ್ನು ಬಿಚ್ಚಿ ಮಹಾಯಾಜಕರೂ ಹಿರೀಸಭೆಯವರೆಲ್ಲರೂ ಕೂಡಿಬರುವದಕ್ಕೆ ಅಪ್ಪಣೆಕೊಟ್ಟು ಪೌಲನನ್ನು ಕರೆದುಕೊಂಡು ಹೋಗಿ ಅವರ ಮುಂದೆ ನಿಲ್ಲಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

30 ಮರುದಿನ, ಪೌಲನಿಗೆ ವಿರೋಧವಾಗಿ ಯೆಹೂದ್ಯರು ತಂದ ಆಪಾದನೆ ಏನೆಂದು ತಿಳಿದುಕೊಳ್ಳಲು ಸೇನಾಧಿಪತಿಯು ನಿರ್ಧರಿಸಿದನು. ಆದ್ದರಿಂದ ಅವನು ಮಹಾಯಾಜಕರಿಗೂ ಯೆಹೂದ್ಯರ ನ್ಯಾಯಸಭೆಯವರಿಗೂ ಒಟ್ಟಾಗಿ ಸೇರಿಬರಲು ಆಜ್ಞಾಪಿಸಿದನು. ಸೇನಾಧಿಪತಿಯು ಪೌಲನ ಸರಪಣಿಗಳನ್ನು ತೆಗೆದುಹಾಕಿ ಅವನನ್ನು ಹೊರಗೆ ಕರೆದುಕೊಂಡು ಬಂದು ಸಭೆಯ ಮುಂದೆ ನಿಲ್ಲಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

30 ದುಸ್ರೆಂದಿಸಿ ಪಾವ್ಲುಕ್ ವಿರೊಧ್ ಹೊವ್ನ್ ಜುದೆವಾಂಚ್ಯಾ ಲೊಕಾನಿ ಹಾನಲ್ಲೆ ಅಪರಾಧ್ ಕಾಯ್ ಮನುನ್ ಕಳ್ವುನ್ ಘೆವ್ಕ್ ಸೆನಾಧಿಪತಿನ್ ನಿರ್ಧಾರ್ ಕರ್‍ಲ್ಯಾನ್, ತೆಚಾ ಸಾಟ್ನಿ ತೆನಿ ಮುಖ್ಯ್ ಯಾಜಕ್ ಜುದೆವಾಂಚ್ಯಾ ಝಡ್ತಿ ಕರ್‍ತಲ್ಯಾ ತಾಂಡ್ಯಾಚ್ಯಾ ಲೊಕಾಕ್ನಿಬಿ ಗೊಳಾ ಹೊವ್ನ್ ಯೆವ್ಕ್ ಹುಕುಮ್ ದಿಲ್ಲ್ಯಾನ್, ಸೆನಾಧಿಪತಿನ್ ಪಾವ್ಲುಚಿ ಬಾಂದಲ್ಲಿ ಸರ್ಪೊಳಿಯಾ ಕಾಡುನ್ ಟಾಕುನ್ ತೆಕಾ ಭಾಯ್ರ್ ಬಲ್ವುನ್ ಘೆವ್ನ್ ಯೆವ್ನ್ ತಾಂಡ್ಯಾಚ್ಯಾ ಇದ್ರಾಕ್ ಇಬೆ ಕರ್‍ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 22:30
13 ತಿಳಿವುಗಳ ಹೋಲಿಕೆ  

ಅವರು ಏಕೆ ಪೌಲನ ಮೇಲೆ ದೋಷಾರೋಪಣೆ ಮಾಡುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಅಪೇಕ್ಷಿಸಿ ಇವನನ್ನು ಅವರ ನ್ಯಾಯಸಭೆಯ ಮುಂದೆ ಕರೆದುಕೊಂಡು ಹೋದೆನು.


ಸಹಸ್ರಾಧಿಪತಿ ಅಲ್ಲಿಗೆ ಬಂದು ಪೌಲನನ್ನು ಬಂಧಿಸಿ, ಅವನನ್ನು ಎರಡು ಸರಪಣಿಗಳಿಂದ ಕಟ್ಟಬೇಕೆಂದು ಆಜ್ಞಾಪಿಸಿದನು. ಅನಂತರ “ಇವನು ಯಾರು? ಇವನು ಮಾಡಿದ್ದೇನು?” ಎಂದು ವಿಚಾರಿಸಿದನು.


ಪೌಲನು, “ಅಲ್ಪ ಕಾಲದಲ್ಲಾಗಲಿ, ದೀರ್ಘಕಾಲದಲ್ಲಾಗಲಿ ನೀವಷ್ಟೇ ಅಲ್ಲ, ನನ್ನ ಮಾತುಗಳನ್ನು ಇಂದು ಆಲಿಸುತ್ತಿರುವ ಪ್ರತಿಯೊಬ್ಬರೂ ಈ ಬೇಡಿಗಳನ್ನು ಹೊರತು ನನ್ನಂತೆಯೇ ಆಗಬೇಕೆಂದು ದೇವರನ್ನು ಪ್ರಾರ್ಥಿಸುತ್ತೇನೆ,” ಎಂದನು.


ಆದ್ದರಿಂದ ಈಗ ವಿಚಾರಣೆಯ ಬಗ್ಗೆ ಹೆಚ್ಚಿನ ನಿರ್ದಿಷ್ಟವಾದ ಮಾಹಿತಿಗಳನ್ನು ತಿಳಿದುಕೊಳ್ಳಬೇಕೆಂಬ ನೆಪದಿಂದ ಪೌಲನನ್ನು ನಿಮ್ಮ ಮುಂದೆ ತರುವಂತೆ ನೀವೂ ನ್ಯಾಯಸಭೆಯೂ ಸಹಸ್ರಾಧಿಪತಿಯನ್ನು ಬೇಡಿಕೊಳ್ಳಿರಿ. ಇಲ್ಲಿಗೆ ಬರುವ ಮೊದಲೇ ಪೌಲನನ್ನು ನಾವು ಕೊಂದುಬಿಡುತ್ತೇವೆ,” ಎಂದರು.


ಮಹಾಯಾಜಕನೂ ಹಿರಿಸಭೆಯವರೆಲ್ಲರೂ ಇದಕ್ಕೆ ಸಾಕ್ಷಿ. ಅವರಿಂದಲೇ ದಮಸ್ಕದಲ್ಲಿದ್ದ ಸಹೋದರರಿಗೆ ಪತ್ರಗಳನ್ನು ತೆಗೆದುಕೊಂಡು, ಅಲ್ಲಿಗೆ ಹೋದವರನ್ನೂ ದಂಡಿಸುವುದಕ್ಕಾಗಿಯೂ ಸೆರೆಹಿಡಿದು ಯೆರೂಸಲೇಮಿಗೆ ತರುವುದಕ್ಕಾಗಿಯೂ ದಮಸ್ಕಕ್ಕೆ ಪ್ರಯಾಣಮಾಡಿದೆನು.


ಅವನು ನಮ್ಮ ಬಳಿಗೆ ಬಂದು ಪೌಲನ ನಡುಪಟ್ಟಿಯನ್ನು ತೆಗೆದುಕೊಂಡು ತನ್ನ ಕೈಕಾಲುಗಳಿಗೆ ಅದನ್ನು ಕಟ್ಟಿಕೊಂಡು, “ಪವಿತ್ರಾತ್ಮರು ಇಂತೆನ್ನುತ್ತಾರೆ, ‘ಈ ನಡುಪಟ್ಟಿ ಯಾರದೋ ಆ ಮನುಷ್ಯನನ್ನು ಯೆರೂಸಲೇಮಿನ ಯೆಹೂದ್ಯರು ಈ ರೀತಿಯಲ್ಲಿ ಬಂಧಿಸಿ, ಯೆಹೂದ್ಯರಲ್ಲದವರ ಕೈಗೆ ಒಪ್ಪಿಸುವರು,’ ” ಎಂದನು.


ಪ್ರಾತಃಕಾಲದಲ್ಲಿ ಅವರು ತಮಗೆ ಹೇಳಿದಂತೆಯೇ ದೇವಾಲಯವನ್ನು ಪ್ರವೇಶಿಸಿ ಜನರಿಗೆ ಬೋಧಿಸಲು ಪ್ರಾರಂಭಿಸಿದರು. ಮಹಾಯಾಜಕನು ಮತ್ತು ಅವನೊಂದಿಗಿದ್ದವರು ಕೂಡಿಬಂದಾಗ, ನ್ಯಾಯಸಭೆಯನ್ನೂ ಇಸ್ರಾಯೇಲರ ಹಿರಿಯರ ಪೂರ್ಣಮಂಡಳಿಯನ್ನೂ ಕೂಡಿಸಿ, ಸೆರೆಮನೆಯಿಂದ ಅಪೊಸ್ತಲರನ್ನು ಕರೆಕಳುಹಿಸಿದರು.


ಅವರು ಯೇಸುವನ್ನು ಕಟ್ಟಿ, ಕರೆದುಕೊಂಡು ಹೋಗಿ ರಾಜ್ಯಪಾಲ ಪಿಲಾತನಿಗೆ ಒಪ್ಪಿಸಿದರು.


ಆದರೆ ಜನರ ವಿಷಯದಲ್ಲಿ ಎಚ್ಚರಿಕೆಯಾಗಿರಿ. ಏಕೆಂದರೆ ಅವರು ನಿಮ್ಮನ್ನು ನ್ಯಾಯಸ್ಥಾನಗಳಿಗೆ ಒಪ್ಪಿಸುವರು. ತಮ್ಮ ಸಭಾಮಂದಿರಗಳಲ್ಲಿ ನಿಮ್ಮನ್ನು ಕೊರಡೆಗಳಿಂದ ಹೊಡೆಯುವರು.


ಆದರೆ ನಾನು ನಿಮಗೆ ಹೇಳುವುದೇನೆಂದರೆ: ತನ್ನ ಸಹೋದರನ ಮೇಲೆ ಕೋಪಿಸಿಕೊಳ್ಳುವ ಪ್ರತೀ ಮನುಷ್ಯನು ನ್ಯಾಯತೀರ್ಪಿಗೆ ಗುರಿಯಾಗುವನು. ಮಾತ್ರವಲ್ಲದೆ, ಯಾವನಾದರೂ ತನ್ನ ಸಹೋದರನನ್ನು ‘ಬುದ್ಧಿ ಇಲ್ಲದವನೇ’ ಎಂದರೂ ನ್ಯಾಯಸಭೆಯ ವಿಚಾರಣೆಗೆ ಒಳಗಾಗುವನು. ಯಾರನ್ನಾದರೂ, ‘ಮೂರ್ಖಾ,’ ಎನ್ನುವವನು ಅಗ್ನಿನರಕಕ್ಕೆ ಗುರಿಯಾಗುವನು.


ಪೌಲನು ನ್ಯಾಯಸಭೆಯ ಸದಸ್ಯರನ್ನು ದಿಟ್ಟಿಸಿ ನೋಡಿ, “ನನ್ನ ಸಹೋದರರೇ, ಇಂದಿನವರೆಗೂ ಒಳ್ಳೆಯ ಮನಸ್ಸಾಕ್ಷಿಯಿಂದ ನಾನು ದೇವರ ಮುಂದೆ ನಡೆದುಕೊಂಡಿದ್ದೇನೆ,” ಎಂದನು.


ಅಲ್ಲಿ ಸಭೆ ಸೇರಿದ್ದವರಲ್ಲಿ ಕೆಲವರು ಸದ್ದುಕಾಯರು, ಇನ್ನು ಕೆಲವರು ಫರಿಸಾಯರು ಎಂಬುದನ್ನು ಪೌಲನು ತಿಳಿದುಕೊಂಡು ನ್ಯಾಯಸಭೆಯಲ್ಲಿ, “ನನ್ನ ಸಹೋದರರೇ, ನಾನು ಫರಿಸಾಯನು, ಫರಿಸಾಯನ ಮಗನು. ಸತ್ತವರ ಪುನರುತ್ಥಾನದ ನಿರೀಕ್ಷೆಯ ವಿಷಯದಲ್ಲಿ ನಾನು ನ್ಯಾಯವಿಚಾರಣೆಗೆ ಗುರಿಯಾಗಿದ್ದೇನೆ,” ಎಂದು ಕೂಗಿ ಹೇಳಿದನು.


ಆ ಯುವಕನು, “ಪೌಲನ ಬಗ್ಗೆ ನಿರ್ದಿಷ್ಟ ಮಾಹಿತಿಯನ್ನು ಪಡೆಯುವ ಅಪೇಕ್ಷೆಯ ನೆಪದಲ್ಲಿ ಅವನನ್ನು ನ್ಯಾಯಸಭೆಯ ಮುಂದೆ ಕರೆತರುವಂತೆ ನಿಮ್ಮನ್ನು ಕೇಳಿಕೊಳ್ಳಲು ಯೆಹೂದ್ಯರು ತೀರ್ಮಾನಿಸಿಕೊಂಡಿದ್ದಾರೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು