Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 21:8 - ಕನ್ನಡ ಸಮಕಾಲಿಕ ಅನುವಾದ

8 ಮರುದಿನ ಹೊರಟು ಕೈಸರೈಯ ಪಟ್ಟಣವನ್ನು ತಲುಪಿದೆವು. ಅಲ್ಲಿ ಏಳು ಜನರಲ್ಲಿ ಒಬ್ಬನಾದ, ಫಿಲಿಪ್ಪನೆಂಬ ಸುವಾರ್ತಿಕನ ಮನೆಯಲ್ಲಿ ತಂಗಿದೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ಮರುದಿನ ಹೊರಟು ಕೈಸರೈಯಕ್ಕೆ ಬಂದು, ಸುವಾರ್ತಿಕನಾದ ಫಿಲಿಪ್ಪನ ಮನೆಗೆ ಹೋಗಿ ಅವನ ಬಳಿಯಲ್ಲಿಯೇ ಇಳುಕೊಂಡೆವು. ಅವನು ಆ ಏಳು ಮಂದಿಯಲ್ಲಿ ಒಬ್ಬನಾಗಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

8 ಮಾರನೆಯ ದಿನ ಅಲ್ಲಿಂದ ಹೊರಟು ಸೆಜರೇಯಕ್ಕೆ ಬಂದೆವು. ಅಲ್ಲಿ ಶುಭಸಂದೇಶ ಪ್ರಚಾರಕ ಫಿಲಿಪ್ಪನ ಮನೆಗೆ ಹೋಗಿ ಅವನೊಡನೆ ತಂಗಿದೆವು. ಜೆರುಸಲೇಮಿನಲ್ಲಿ ಆಯ್ಕೆಯಾದ ಏಳುಮಂದಿಯಲ್ಲಿ ಇವನೂ ಒಬ್ಬನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

8 ಮರುದಿನ ಹೊರಟು ಕೈಸರೈಯಕ್ಕೆ ಬಂದು ಸೌವಾರ್ತಿಕನಾದ ಫಿಲಿಪ್ಪನ ಮನೆಗೆ ಹೋಗಿ ಅವನ ಬಳಿಯಲ್ಲಿಯೇ ಇಳುಕೊಂಡೆವು. ಅವನು ಆ ಏಳ್ವರಲ್ಲಿ ಒಬ್ಬನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

8 ಮರುದಿನ ನಾವು ಪ್ಟೊಲೊಮಾಯದಿಂದ ಹೊರಟು ಸೆಜರೇಯ ಪಟ್ಟಣಕ್ಕೆ ಹೋದೆವು. ಅಲ್ಲಿ ನಾವು ಫಿಲಿಪ್ಪನ ಮನೆಗೆ ಹೋಗಿ ಅವನೊಂದಿಗೆ ತಂಗಿದೆವು. ಸುವಾರ್ತೆಯನ್ನು ತಿಳಿಸುವುದೇ ಫಿಲಿಪ್ಪನ ಕೆಲಸವಾಗಿತ್ತು. ಏಳುಮಂದಿ ಸಹಾಯಕರುಗಳಲ್ಲಿ ಅವನೂ ಒಬ್ಬನಾಗಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

8 ದುಸ್ರೆ ದಿಸಿ ಸೆಜಾರೆಯ ಶಾರಾಕ್ ಯೆವ್ನ್ ಪಾವ್ನ್ ಫಿಲಿಪ್ಪಾಚ್ಯಾ ಘರಾತ್ ರಾಲ್ಯಾಂವ್, ಬರಿ ಖಬರ್ ಲೊಕಾಕ್ನಿ ಪರ್ಗಟ್ ಕರ್ತಲೆಚ್ ಹೆಜೆ ಕಾಮ್, ಹ್ಯೊ ಜೆರುಜಲೆಮಾಕ್ ಮಜತ್ ಕಾರಿ ಕರುನ್ ಎಚುನ್ ಕಾಡಲ್ಲ್ಯಾ ಸಾತ್ ಲೊಕಾತ್ನಿ ಎಕ್ಲೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 21:8
18 ತಿಳಿವುಗಳ ಹೋಲಿಕೆ  

ಈ ಮಾತು ಇಡೀ ಸಮೂಹಕ್ಕೆ ಮೆಚ್ಚುಗೆಯಾಯಿತು. ಅವರು ಪೂರ್ಣನಂಬಿಕೆಯುಳ್ಳವನೂ ಪವಿತ್ರಾತ್ಮಭರಿತನೂ ಆದ ಸ್ತೆಫನನ್ನು ಆರಿಸಿಕೊಂಡರು; ಅಲ್ಲದೆ ಫಿಲಿಪ್ಪ, ಪ್ರೊಖೋರ, ನಿಕನೋರ, ತಿಮೋನ, ಪರ್ಮೇನ ಮತ್ತು ಯೆಹೂದ್ಯ ಮಾರ್ಗ ಅನುಸರಿಸುತ್ತಿದ್ದ ಅಂತಿಯೋಕ್ಯದ ನಿಕೊಲಾಯನನ್ನು ಆಯ್ಕೆಮಾಡಿದರು.


ಕ್ರಿಸ್ತನು ಕೆಲವರನ್ನು ಅಪೊಸ್ತಲರನ್ನಾಗಿಯೂ ಕೆಲವರನ್ನು ಪ್ರವಾದಿಗಳನ್ನಾಗಿಯೂ ಕೆಲವರನ್ನು ಸುವಾರ್ತಿಕರನ್ನಾಗಿಯೂ ಕೆಲವರನ್ನು ಸಭಾಪಾಲಕರನ್ನಾಗಿಯೂ ಕೆಲವರನ್ನು ಉಪದೇಶಿಗಳನ್ನಾಗಿಯೂ ಸಭೆಗೆ ಕೊಟ್ಟರು.


ಆದರೆ ನೀನು ಎಲ್ಲಾ ವಿಷಯಗಳಲ್ಲಿ ಸ್ವಸ್ಥಚಿತ್ತನಾಗಿರು. ಶ್ರಮೆಗಳನ್ನು ತಾಳಿಕೋ. ಸುವಾರ್ತಿಕನ ಕೆಲಸವನ್ನು ಮಾಡು. ನಿನ್ನ ಸೇವೆಯ ಎಲ್ಲಾ ಕರ್ತವ್ಯಗಳನ್ನು ನೆರವೇರಿಸು.


ನಾವು ರೋಮ್ ಪಟ್ಟಣಕ್ಕೆ ಬಂದಾಗ, ತನ್ನ ಕಾವಲುಗಾರನಾಗಿದ್ದ ಸೈನಿಕನೊಂದಿಗೆ ಪ್ರತ್ಯೇಕವಾಗಿ ಇರಲು ಪೌಲನಿಗೆ ಅನುಮತಿ ದೊರೆಯಿತು.


ಪ್ರಾರ್ಥನೆಯ ಸ್ಥಳ ಸಿಕ್ಕಬಹುದೆಂದು ಭಾವಿಸಿ ಸಬ್ಬತ್ ದಿನದಂದು ಪಟ್ಟಣದ ದ್ವಾರದ ಹೊರಗಿದ್ದ ನದಿತೀರಕ್ಕೆ ಹೋದೆವು. ಅಲ್ಲಿ ಕುಳಿತುಕೊಂಡು ಕೂಡಿಬಂದಿದ್ದ ಮಹಿಳೆಯರೊಂದಿಗೆ ಮಾತನಾಡಲು ಪ್ರಾರಂಭಿಸಿದೆವು.


ಪೌಲನಿಗೆ ಈ ದರ್ಶನವಾದಾಗ ಆ ಜನರಿಗೆ ಸುವಾರ್ತೆ ಸಾರಲು ದೇವರು ನಮ್ಮನ್ನು ಕರೆಯುತ್ತಿದ್ದಾರೆಂದು ತಿಳಿದುಕೊಂಡು ಕೂಡಲೇ ಮಕೆದೋನ್ಯಕ್ಕೆ ಹೊರಡಲು ಸಿದ್ಧರಾದೆವು.


ಸಹೋದರರಿಗೆ ಈ ಸುದ್ದಿ ತಿಳಿದಾಗ, ಅವರು ಸೌಲನನ್ನು ಕೈಸರೈಯಕ್ಕೆ ಕರೆದುಕೊಂಡು ಹೋಗಿ ಅಲ್ಲಿಂದ ತಾರ್ಸಕ್ಕೆ ಕಳುಹಿಸಿದರು.


ಮೂರು ತಿಂಗಳ ಸಮಯ ದಾಟಿದ ತರುವಾಯ ಆ ದ್ವೀಪದಲ್ಲಿ ಚಳಿಗಾಲ ಕಳೆದ ಮೇಲೆ ಒಂದು ನೌಕೆಯನ್ನು ಹತ್ತಿ ಹೊರಟೆವು. ಅದು ಅಶ್ವಿನಿ ಚಿಹ್ನೆಯಿದ್ದ ಅಲೆಕ್ಸಾಂದ್ರಿಯದ ಒಂದು ನೌಕೆಯಾಗಿತ್ತು.


ನಾವು ಇಟಲಿಗೆ ಸಮುದ್ರ ಪ್ರಯಾಣ ಮಾಡಬೇಕೆಂದು ತೀರ್ಮಾನವಾದ ಮೇಲೆ ಪೌಲನನ್ನೂ ಇತರ ಕೈದಿಗಳನ್ನೂ ಯೂಲ್ಯನೆಂಬ ಹೆಸರಿನ ಒಬ್ಬ ಶತಾಧಿಪತಿಗೆ ಒಪ್ಪಿಸಿದರು. ಅವನು ಚಕ್ರವರ್ತಿಯ ದಳಕ್ಕೆ ಸೇರಿದವನು.


ಆಮೇಲೆ ಸಹಸ್ರಾಧಿಪತಿಯು ತನ್ನ ಇಬ್ಬರು ಶತಾಧಿಪತಿಗಳನ್ನು ಕರೆದು, “ಈ ರಾತ್ರಿ ಒಂಬತ್ತು ಗಂಟೆಗೆ ಕೈಸರೈಯಕ್ಕೆ ಹೋಗಲು ಇನ್ನೂರು ಜನ ಸೈನಿಕರನ್ನೂ ಎಪ್ಪತ್ತು ಕುದುರೆ ಸವಾರರನ್ನೂ ಇನ್ನೂರು ಜನ ಭರ್ಜಿಧರಿಸಿದವರನ್ನೂ ಸಿದ್ಧಗೊಳಿಸಿರಿ.


ಮೊದಲು ನಾವು ನೌಕೆ ಇದ್ದ ಸ್ಥಳಕ್ಕೆ ಹೋಗಿ ಅಸ್ಸೊಸಿ ಎಂಬಲ್ಲಿಗೆ ಸಮುದ್ರ ಪ್ರಯಾಣಮಾಡಿದೆವು. ಅಲ್ಲಿ ಪೌಲನು ಬಂದು ನಮ್ಮೊಂದಿಗೆ ನೌಕೆಯಲ್ಲಿ ಪ್ರಯಾಣ ಮಾಡಬೇಕಿತ್ತು. ಅಲ್ಲಿಗೆ ಕಾಲ್ನಡಿಗೆಯಾಗಿ ಹೋಗಬೇಕಾದ್ದರಿಂದ ಅವನು ಈ ಏರ್ಪಾಡು ಮಾಡಿದನು.


ಹುಳಿಯಿಲ್ಲದ ರೊಟ್ಟಿಯ ಹಬ್ಬದ ನಂತರ ನಾವು ಫಿಲಿಪ್ಪಿಯಿಂದ ಸಮುದ್ರ ಮಾರ್ಗವಾಗಿ ಪ್ರಯಾಣಮಾಡಿ, ಐದು ದಿನಗಳ ತರುವಾಯ ತ್ರೋವದಲ್ಲಿದ್ದ ಇತರರೊಂದಿಗೆ ಸೇರಿ, ಅಲ್ಲಿ ಏಳು ದಿನ ಇದ್ದೆವು.


ಅನಂತರ ಅವನು ಕೈಸರೈಯವನ್ನು ಸೇರಿದಾಗ, ಅಲ್ಲಿದ್ದ ಸಭೆಯನ್ನು ವಂದಿಸಿ ಅಂತಿಯೋಕ್ಯಕ್ಕೆ ಹೊರಟುಹೋದನು.


ಒಂದು ದಿನ ನಾವು ಪ್ರಾರ್ಥನೆಯ ಸ್ಥಳಕ್ಕೆ ಹೋಗುತ್ತಿದ್ದೆವು, ಆಗ ಭವಿಷ್ಯ ಹೇಳುವ ದುರಾತ್ಮವುಳ್ಳ ದಾಸಿಯೊಬ್ಬಳು ನಮ್ಮನ್ನು ಭೇಟಿಯಾದಳು. ಭವಿಷ್ಯ ಹೇಳುವುದರಿಂದ ಆಕೆ ತನ್ನ ಯಜಮಾನನಿಗೆ ಬಹಳ ಹಣ ಸಂಪಾದಿಸುತ್ತಿದ್ದಳು.


ಕೈಸರೈಯದಲ್ಲಿ ಕೊರ್ನೇಲ್ಯ ಎಂಬುವನಿದ್ದನು. “ಇಟಲಿಯ ದಳ” ಎಂದು ಹೆಸರಿನ ದಳಕ್ಕೆ ಅವನು ಶತಾಧಿಪತಿ.


ಕೈಸರೈಯದಿಂದ ಕೆಲವು ಶಿಷ್ಯರು ನಮ್ಮೊಂದಿಗೆ ಬಂದು, ಮ್ನಾಸೋನ ಎಂಬುವನ ಮನೆಗೆ ನಾವು ಇಳಿದುಕೊಳ್ಳುವಂತೆ ಕರೆದುಕೊಂಡು ಹೋದರು. ಅವನು ಸೈಪ್ರಸ್ ದಿಂದ ಬಂದ ಪ್ರಥಮ ಶಿಷ್ಯರಲ್ಲಿ ಒಬ್ಬನಾಗಿದ್ದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು