Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 21:34 - ಕನ್ನಡ ಸಮಕಾಲಿಕ ಅನುವಾದ

34 ಜನಸಮೂಹದಲ್ಲಿದ್ದ ಇತರರು ವಿವಿಧ ರೀತಿಯಿಂದ ಕೂಗುತ್ತಿರಲು ಗಲಭೆಯ ನಿಮಿತ್ತ ಸಹಸ್ರಾಧಿಪತಿಗೆ ಸತ್ಯಾಂಶ ತಿಳಿಯಲಾಗಲಿಲ್ಲ. ಆದ್ದರಿಂದ ಪೌಲನನ್ನು ಸೈನಿಕ ಪಾಳ್ಯದೊಳಗೆ ತೆಗೆದುಕೊಂಡು ಹೋಗಲು ಆಜ್ಞಾಪಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

34 ಇವನಾರು? ಏನು ಮಾಡಿದ್ದಾನೆ? ಎಂದು ಕೇಳಲು ಕೆಲವರು ಹೀಗೆ, ಕೆಲವರು ಹಾಗೆ ಕೂಗುತ್ತಿರಲು ಗದ್ದಲದ ನಿಮಿತ್ತ ನಿಜ ಸ್ಥಿತಿಯನ್ನು ತಿಳಿಯಲಾರದೆ ಅವನನ್ನು ಕೋಟೆಯೊಳಗೆ ತೆಗೆದುಕೊಂಡು ಹೋಗಿರೆಂದು ಅಪ್ಪಣೆಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

34 ಜನಜಂಗುಳಿಯಲ್ಲಿ ಹಲವರು ಹಲವಿಧವಾಗಿ ಕೂಗಾಡತೊಡಗಿದರು. ಗದ್ದಲ ಹೆಚ್ಚಾಗಿದ್ದುದರಿಂದ ಸೈನ್ಯಾಧಿಪತಿಗೆ ನಿಜಸ್ಥಿತಿಯನ್ನು ತಿಳಿಯಲಾಗಲಿಲ್ಲ. ಆದುದರಿಂದ ಪೌಲನನ್ನು ಕೋಟೆಯೊಳಕ್ಕೆ ಕೊಂಡೊಯ್ಯುವಂತೆ ಆಜ್ಞಾಪಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

34 ಇವನಾರು? ಏನು ಮಾಡಿದ್ದಾನೆ ಎಂದು ಕೇಳಲು ಕೆಲವರು ಹೀಗೆ ಕೆಲವರು ಹಾಗೆ ಕೂಗುತ್ತಿರಲು ಗದ್ದಲದ ನಿವಿುತ್ತ ನಿಜ ಸ್ಥಿತಿಯನ್ನು ತಿಳಿಯಲಾರದೆ ಅವನನ್ನು ಕೋಟೆಯೊಳಗೆ ತೆಗೆದುಕೊಂಡು ಹೋಗಿರೆಂದು ಅಪ್ಪಣೆಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

34 ಅಲ್ಲಿದ್ದ ಜನರಲ್ಲಿ ಕೆಲವರು ಒಂದು ವಿಷಯದ ಬಗ್ಗೆ ಬೊಬ್ಬೆಹಾಕುತ್ತಿದ್ದರೆ, ಉಳಿದವರು ಇತರ ವಿಷಯಗಳ ಬಗ್ಗೆ ಬೊಬ್ಬೆಹಾಕುತ್ತಿದ್ದರು. ಈ ಗಲಿಬಿಲಿಯಿಂದಾಗಿಯೂ ಕೂಗಾಟದಿಂದಾಗಿಯೂ ಏನು ನಡೆಯಿತೆಂಬುದರ ಬಗ್ಗೆ ಸತ್ಯವನ್ನು ತಿಳಿದುಕೊಳ್ಳಲಾಗಲಿಲ್ಲ. ಆದ್ದರಿಂದ ಸೇನಾಧಿಪತಿಯು ಪೌಲನನ್ನು ಸೈನ್ಯದ ಕೋಟೆಯೊಳಕ್ಕೆ ತೆಗೆದುಕೊಂಡು ಹೋಗಲು ಸೈನಿಕರಿಗೆ ತಿಳಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

34 ಥೈತ್ಲಿ ಉಲ್ಲಿ ಲೊಕಾ ಯೆವ್ನ್ ಎಕ್ ವಿಶಯಾತ್ ಬೊಬ್ ಮಾರುಕ್ಲಾಗಲಿ ಹುರಲ್ಲಿ ಲೊಕಾ, ಅನಿ ದುಸ್ರ್ಯಾ ವಿಶಯಾತ್ ಬೊಬ್ ಮಾರುಕ್ಲಾಗಲಿ, ಹ್ಯೊ ಗದ್ದಲ್ ಬೊಬ್ ಮಾರುಲಾಗಲ್ಯಾನ್ ಭರುನ್ ಹೊತ್ತ್ಯಾ ಸಾಟ್ನಿ ಕಾಯ್ ಚಲುಲ್ಲಾ ಮನ್ತಲೆ ಖರೆ ಕಳ್ವುನ್ಗೆವ್ಕ್ ಹೊವ್ಕ್ ನಾ, ತಸೆ ಹೊವ್ನ್, ಸೆನಾಧಿಪತಿನ್ ಪಾವ್ಲುಕ್ ಕೊಟೆತ್ ಘೆವ್ನ್ ಜಾವ್ಕ್ ಹುಕುಮ್ ದಿಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 21:34
8 ತಿಳಿವುಗಳ ಹೋಲಿಕೆ  

ಜನಸಮೂಹವು ಪೌಲನನ್ನು ಎಳೆದು ತುಂಡುತುಂಡಾಗಿ ಮಾಡುವರೇನೋ ಎಂದು ಸಹಸ್ರಾಧಿಪತಿಗೆ ಬಹಳ ಭಯವಾಯಿತು. ಸೈನಿಕರ ಗುಂಪುಗಳು ಕೆಳಗಿಳಿದು ಹೋಗಿ ಬಲಪ್ರಯೋಗದಿಂದ ಪೌಲನನ್ನು ಎತ್ತಿಕೊಂಡು ಸೈನಿಕ ಪಾಳ್ಯದೊಳಗೆ ಬರಬೇಕೆಂದು ಅವನು ಸೈನಿಕರಿಗೆ ಆಜ್ಞಾಪಿಸಿದನು.


ಜನಸಮೂಹ ಗಲಿಬಿಲಿಗೊಂಡಿತ್ತು. ಕೆಲವರು ಒಂದು ರೀತಿಯಾಗಿಯೂ ಇನ್ನು ಕೆಲವರು ಬೇರೊಂದು ವಿಧವಾಗಿಯೂ ಕೂಗುತ್ತಿದ್ದರು. ಬಹು ಪಾಲು ಜನರಿಗೆ ತಾವೇಕೆ ಅಲ್ಲಿಗೆ ಬಂದಿದ್ದೇವೆಂಬುದರ ಬಗ್ಗೆ ತಿಳಿದಿರಲೇ ಇಲ್ಲ.


ಈ ಒಳಸಂಚು ಪೌಲನ ಸಹೋದರಿಯ ಮಗನಿಗೆ ತಿಳಿಯಲು ಅವನು ಸೈನಿಕ ಪಾಳ್ಯದೊಳಗೆ ಹೋಗಿ ಪೌಲನಿಗೆ ತಿಳಿಸಿದನು.


ಸಹಸ್ರಾಧಿಪತಿಯು ಪೌಲನನ್ನು ಸೈನಿಕರ ಪಾಳ್ಯದೊಳಗೆ ಒಯ್ಯಬೇಕೆಂದು, ಅವನನ್ನು ಕೊರಡೆಗಳಿಂದ ಹೊಡೆದು ಯಾವ ಅಪರಾಧಕ್ಕಾಗಿ ಜನರು ಅವನಿಗೆ ವಿರೋಧವಾಗಿ ಅರಚುತ್ತಿದ್ದರು ಎಂಬುದನ್ನು ಅವನಿಂದ ವಿಚಾರಿಸಬೇಕೆಂದು ಆಜ್ಞಾಪಿಸಿದನು.


ಸೈನಿಕರು ಪೌಲನನ್ನು ಅವರ ಪಾಳ್ಯದೊಳಗೆ ಒಯ್ಯುತ್ತಿದ್ದಾಗ, ಅವನು ಸಹಸ್ರಾಧಿಪತಿಗೆ, “ನಾನು ನಿನ್ನೊಡನೆ ಸ್ವಲ್ಪ ಮಾತನಾಡುವುದಕ್ಕೆ ಅಪ್ಪಣೆಯಾದೀತೇ?” ಎಂದು ಕೇಳಲು, ಅದಕ್ಕೆ ಅವನು, “ನಿನಗೆ ಗ್ರೀಕ್ ಭಾಷೆಯೂ ಗೊತ್ತಿದೆಯೋ?”


ಯೆಹೂದ್ಯರು ಪೌಲನ ವಿರುದ್ಧ ಏಕೆ ದೋಷಾರೋಪಣೆ ಮಾಡುತ್ತಿದ್ದಾರೆ ಎಂಬುದಕ್ಕೆ ನಿಜಸಂಗತಿಯನ್ನು ಕಂಡುಹಿಡಿಯಲು ಸಹಸ್ರಾಧಿಪತಿಯು ಅಪೇಕ್ಷೆಪಟ್ಟನು. ಮರುದಿನ ಪೌಲನನ್ನು ಬಿಡುಗಡೆ ಮಾಡಿ, ಮುಖ್ಯಯಾಜಕರೂ ನ್ಯಾಯಸಭೆಯೂ ಕೂಡಿಬರಬೇಕೆಂದು ಅಪ್ಪಣೆಮಾಡಿದನು. ಆಮೇಲೆ ಪೌಲನನ್ನು ತಂದು ಅವರ ಎದುರಿನಲ್ಲಿ ನಿಲ್ಲಿಸಿದರು.


ಆದರೂ ಇವನ ಬಗ್ಗೆ ಖಚಿತವಾಗಿ ತಮಗೆ ಬರೆಯಲು ನನಗೇನು ಇಲ್ಲದಿರುವುದರಿಂದ, ಅಗ್ರಿಪ್ಪ ರಾಜನೇ, ಇವನನ್ನು ತಮ್ಮ ಮುಂದೆ ತಂದಿದ್ದೇನೆ. ಹೀಗೆ ಈ ವಿಚಾರಣೆಯ ಮೂಲಕ ಬರೆಯಲು ನನಗೇನಾದರೂ ಸಿಕ್ಕಬಹುದು.


ಮರುದಿನ ಪೌಲನೊಂದಿಗೆ ಮುಂದೆ ಹೋಗಲು ಕುದುರೆಸವಾರರನ್ನು ಬಿಟ್ಟು, ಸೈನಿಕರು ಅವರ ಪಾಳ್ಯಕ್ಕೆ ಹಿಂದಿರುಗಿದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು