Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 21:31 - ಕನ್ನಡ ಸಮಕಾಲಿಕ ಅನುವಾದ

31 ಅವರು ಪೌಲನನ್ನು ಕೊಲ್ಲುವುದಕ್ಕೆ ಪ್ರಯತ್ನಿಸುತ್ತಿದ್ದಾಗ, ಯೆರೂಸಲೇಮ ಪಟ್ಟಣದಲ್ಲೆಲ್ಲಾ ಗೊಂದಲವೆದ್ದಿದೆ ಎಂಬ ಸುದ್ದಿ ಅಲ್ಲಿದ್ದ ರೋಮ್ ಸಹಸ್ರಾಧಿಪತಿಗೆ ತಲುಪಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

31 ಅವರು ಅವನನ್ನು ಕೊಲ್ಲುವುದಕ್ಕೆ ಯತ್ನಿಸುತ್ತಿದ್ದಾಗ ಯೆರೂಸಲೇಮಿನಲ್ಲೆಲ್ಲಾ ಗಲಿಬಿಲಿಯಾಯಿತೆಂದು ಪಟಾಲಮಿನ ಸಹಸ್ರಾಧಿಪತಿಗೆ ವರದಿ ಬಂದಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

31 ಜನರ ಗುಂಪು ಪೌಲನನ್ನು ಕೊಲ್ಲಲು ಯತ್ನಿಸುತ್ತಿದ್ದಾಗ ಜೆರುಸಲೇಮಿನಾದ್ಯಂತ ಗಲಭೆಯುಂಟಾಗಿದೆ ಎಂದು ಅಲ್ಲಿನ ರೋಮ್ ಸೈನ್ಯಾಧಿಪತಿಗೆ ವರದಿ ಬಂದಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

31 ಅವರು ಅವನನ್ನು ಕೊಲ್ಲುವದಕ್ಕೆ ಪ್ರಯತ್ನಿಸುತ್ತಿದ್ದಾಗ ಯೆರೂಸಲೇವಿುನಲ್ಲೆಲ್ಲಾ ಗಲಿಬಿಲಿಯಾಯಿತೆಂದು ಪಟಾಲವಿುನ ಸಹಸ್ರಾಧಿಪತಿಗೆ ವರದಿ ಬಂತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

31 ಅವರು ಪೌಲನನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದಾಗ ಇಡೀ ಪಟ್ಟಣದಲ್ಲೇ ಗಲಭೆಯುಂಟಾಗಿದೆ ಎಂಬ ಸುದ್ದಿಯು ಜೆರುಸಲೇಮಿನಲ್ಲಿದ್ದ ರೋಮ್ ಸೇನಾಧಿಪತಿಗೆ ತಿಳಿಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

31 ತೆನಿ ಪಾವ್ಲುಕ್ ಜಿವ್ ಕಾಡುಚೆ ಮನುನ್ ಕಟ್ಪಟ್ ಕರಿತ್ ರಾತಾನಾ ಸಗ್ಳ್ಯಾ ಶಾರಾತ್ ಗದ್ದಲ್ ಉಟ್ಲೊ ಮನ್ತಲಿ ಖಬರ್ ಜೆರುಜಲೆಮಾತ್ಲ್ಯಾ ರೊಮ್ ಸೆನಾಧಿಪತಿಕ್ ಗೊತ್ತ್ ಹೊಲೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 21:31
19 ತಿಳಿವುಗಳ ಹೋಲಿಕೆ  

ಆದರೆ ಯೆಹೂದ್ಯರು ಮತ್ಸರದಿಂದ ಕೂಡಿ, ಬೀದಿಗಳಲ್ಲಿ ತಿರುಗಾಡುವ ಕೆಲವು ದುಷ್ಟವ್ಯಕ್ತಿಗಳನ್ನು ಕೂಡಿಸಿ ಪಟ್ಟಣದಲ್ಲಿ ಗಲಭೆ ಎಬ್ಬಿಸಿದರು. ಜನಸಮೂಹದ ಮುಂದೆ ಪೌಲ, ಸೀಲರನ್ನು ಎಳೆದು ತರುವಂತೆ ಅವರನ್ನು ಹುಡುಕುತ್ತಾ ಯಾಸೋನ ಎಂಬುವನ ಮನೆಯನ್ನು ಮುತ್ತಿದರು.


ಮರುದಿನ ಅಗ್ರಿಪ್ಪನು ಹಾಗೂ ಬೆರ್ನಿಕೆಯು ಮಹಾ ವೈಭವದಿಂದ ಸೈನ್ಯಾಧಿಕಾರಿಗಳೊಂದಿಗೂ ಪಟ್ಟಣದ ಗಣ್ಯವ್ಯಕ್ತಿಗಳೊಂದಿಗೂ ಆಸ್ಥಾನವನ್ನು ಪ್ರವೇಶಿಸಿದರು. ಫೆಸ್ತನ ಆಜ್ಞೆಯಂತೆ ಪೌಲನನ್ನು ಕರೆದುಕೊಂಡು ಬಂದರು.


ಈ ಮಾರ್ಗದ ವಿಷಯದ ಬಗ್ಗೆ ಬಹು ಸೂಕ್ಷ್ಮವಾಗಿ ತಿಳಿದುಕೊಂಡಿದ್ದ ಫೇಲಿಕ್ಸನು ವಿಚಾರಣೆಯನ್ನು ಮುಂದಕ್ಕೆ ಹಾಕಿದನು. ಅನಂತರ ಅವನು, “ಸಹಸ್ರಾಧಿಪತಿ ಲೂಸ್ಯನು ಬಂದ ಮೇಲೆ ನಿನ್ನ ಈ ವ್ಯಾಜ್ಯ ತೀರ್ಮಾನಿಸುತ್ತೇನೆ,” ಎಂದು ಹೇಳಿದನು.


ಇವನು ದೇವಾಲಯವನ್ನು ಭ್ರಷ್ಟಮಾಡಲು ಪ್ರಯತ್ನಿಸಿದ್ದರಿಂದ ನಾವು ಇವನನ್ನು ಬಂಧಿಸಿದೆವು.


ಆಗ ಪೌಲನು ಶತಾಧಿಪತಿಗಳಲ್ಲಿ ಒಬ್ಬನನ್ನು ಕರೆದು, “ಈ ಯುವಕನನ್ನು ಸಹಸ್ರಾಧಿಪತಿಯ ಬಳಿಗೆ ಕರೆದುಕೊಂಡು ಹೋಗಿರಿ. ಏಕೆಂದರೆ ಇವನಿಗೆ ತಿಳಿಸಲು ಏನೋ ವಿಷಯವಿದೆಯಂತೆ,” ಎಂದನು.


ಇದನ್ನು ಹೇಳುವವರೆಗೆ ಜನರು ಪೌಲನ ಮಾತುಗಳನ್ನು ಗಮನವಿಟ್ಟು ಕೇಳುತ್ತಿದ್ದರು. ಅನಂತರ ಅವರು ತಮ್ಮ ಸ್ವರವೆತ್ತಿ, “ಇಂಥವನನ್ನು ಭೂಲೋಕದಿಂದ ತೊಲಗಿಸಿರಿ! ಇವನು ಜೀವಿಸುವುದಕ್ಕೆ ಯೋಗ್ಯನಲ್ಲ!” ಎಂದು ಕೂಗಿದರು.


“ಹಾಗಾದರೆ ಕೆಲವು ಸಮಯದ ಹಿಂದೆ ದಂಗೆಯೆಬ್ಬಿಸಿ ನಾಲ್ಕು ಸಾವಿರ ಉಗ್ರಗಾಮಿಗಳನ್ನು ಅರಣ್ಯಕ್ಕೆ ಕರೆದುಕೊಂಡುಹೋದ ಈಜಿಪ್ಟಿನವನು ನೀನಲ್ಲವೋ?” ಎಂದನು.


ಈಗ ಇದ್ದ ಪರಿಸ್ಥಿತಿಯಲ್ಲಿ ಇಂದಿನ ಘಟನೆಯಿಂದ ನಾವು ದಂಗೆಯೆದ್ದಿದ್ದೇವೆ ಎಂಬ ಅಪರಾಧ ನಮ್ಮ ಮೇಲೆ ಬರುವ ಆಸ್ಪದವಿದೆ. ಈ ಗಲಭೆಗೆ ಕಾರಣವೇನೆಂದು ವಿವರಿಸಲು ನಮಗೆ ಸಾಧ್ಯವಾಗುವುದಿಲ್ಲ. ಏಕೆಂದರೆ ಇದು ಕಾರಣವಿಲ್ಲದೇ ಎದ್ದ ದಂಗೆ,” ಎಂದನು.


ಕೈಸರೈಯದಲ್ಲಿ ಕೊರ್ನೇಲ್ಯ ಎಂಬುವನಿದ್ದನು. “ಇಟಲಿಯ ದಳ” ಎಂದು ಹೆಸರಿನ ದಳಕ್ಕೆ ಅವನು ಶತಾಧಿಪತಿ.


ತರುವಾಯ ಸೈನಿಕರೂ ಸೈನ್ಯಾಧಿಕಾರಿಯೂ ಯೆಹೂದ್ಯರ ಕಾವಲಾಳುಗಳೂ ಯೇಸುವನ್ನು ಹಿಡಿದು ಕಟ್ಟಿದರು.


ಜನರು ನಿಮ್ಮನ್ನು ಸಭಾಮಂದಿರದಿಂದ ಹೊರಗೆ ಹಾಕುವರು. ಆದರೆ ನಿಮ್ಮನ್ನು ಕೊಲ್ಲುವವರು ದೇವರಿಗೆ ಸೇವೆ ಸಲ್ಲಿಸುತ್ತಾರೆಂದು ಭಾವಿಸುವ ಸಮಯ ಬರುತ್ತದೆ.


ಆದರೆ ಅವರು, “ಜನರು ದಂಗೆ ಎದ್ದಾರು, ಹಬ್ಬದಲ್ಲಿ ಬೇಡ,” ಎಂದು ಮಾತನಾಡಿಕೊಂಡರು.


ಆದರೆ ಅವರು, “ಜನರಲ್ಲಿ ಗದ್ದಲವಾದೀತು, ಹಬ್ಬದಲ್ಲಿ ಬೇಡ,” ಎಂದರು.


ಆಗ ಅದೋನೀಯನೂ, ಅವನ ಸಂಗಡ ಕರೆಹೊಂದಿದವರೂ ತಿಂದು, ತೀರಿಸಿದಾಗ ಅದನ್ನು ಕೇಳಿದರು. ಯೋವಾಬನು ತುತೂರಿಯ ಶಬ್ದವನ್ನು ಕೇಳಿದಾಗ, “ಪಟ್ಟಣದಲ್ಲಿ ಗದ್ದಲದ ಶಬ್ದವೇಕೆ?” ಎಂದನು.


ತರುವಾಯ ರಾಜ್ಯಪಾಲನ ಸೈನಿಕರು ಯೇಸುವನ್ನು ರಾಜಭವನದೊಳಕ್ಕೆ ತೆಗೆದುಕೊಂಡುಹೋಗಿ ಸೈನ್ಯದ ಪೂರ್ಣತಂಡವನ್ನು ಯೇಸುವಿನ ಸುತ್ತಲೂ ಕೂಡಿಸಿದರು.


ಈ ಕಾರಣದಿಂದಲೇ ಯೆಹೂದ್ಯರು ನನ್ನನ್ನು ದೇವಾಲಯದಲ್ಲಿ ಬಂಧಿಸಿ ಕೊಲ್ಲಲು ಪ್ರಯತ್ನಿಸಿದರು.


ಆದರೆ ಸಹಸ್ರಾಧಿಪತಿ ಲೂಸ್ಯನು ಮಧ್ಯೆಬಂದು ಬಲಾತ್ಕಾರದಿಂದ ಇವನನ್ನು ನಮ್ಮಿಂದ ಬಿಡಿಸಿಕೊಂಡು ಹೋದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು