Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 21:29 - ಕನ್ನಡ ಸಮಕಾಲಿಕ ಅನುವಾದ

29 ಅವರು ಮೊದಲು ಪಟ್ಟಣದಲ್ಲಿ ಪೌಲನೊಂದಿಗೆ ಎಫೆಸದ ತ್ರೊಫಿಮ ಎಂಬವನು ಇದ್ದುದನ್ನು ಕಂಡಿದ್ದರಿಂದ, ಪೌಲನು ಈಗ ಅವನನ್ನು ದೇವಾಲಯದೊಳಗೆ ಕರೆದುಕೊಂಡು ಬಂದಿರಬಹುದೆಂದು ಅವರು ಭಾವಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

29 ಮೊದಲು ಅವರು ಎಫೆಸದ ತ್ರೊಫಿಮನನ್ನು ಅವನ ಸಂಗಡ ಪಟ್ಟಣದಲ್ಲಿ ನೋಡಿದ್ದರಿಂದ ಅವನನ್ನು ಪೌಲನು ದೇವಾಲಯದೊಳಗೆ ಕರೆದುಕೊಂಡು ಬಂದನೆಂದು ಭಾವಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

29 ಎಫೆಸದ ತ್ರೊಫಿಮ ಎಂಬವನು ಪೌಲನ ಸಂಗಡ ಪಟ್ಟಣದಲ್ಲಿ ಇದ್ದುದನ್ನು ಅವರು ನೋಡಿದ್ದರು. ಈಗ ಅವನನ್ನೂ ದೇವಾಲಯದೊಳಕ್ಕೆ ಪೌಲನು ಕರೆದುಕೊಂಡು ಬಂದಿರಬಹುದೆಂದು ಅವರು ಭಾವಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

29 ಮುಂಚೆ ಅವರು ಎಫೆಸದ ತ್ರೊಫಿಮನನ್ನು ಅವನ ಸಂಗಡ ಪಟ್ಟಣದಲ್ಲಿ ಕಂಡಿದ್ದರಿಂದ ಅವನನ್ನು ಪೌಲನು ದೇವಾಲಯದೊಳಗೆ ಕರೆದುಕೊಂಡು ಬಂದನೆಂದು ಭಾವಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

29 (ಜೆರುಸಲೇಮಿನಲ್ಲಿ ಪೌಲನೊಂದಿಗಿದ್ದ ತ್ರೊಫಿಮ ಎಂಬವನನ್ನು ಆ ಯೆಹೂದ್ಯರು ನೋಡಿದ್ದರು. ಎಫೆಸದ ತ್ರೊಫಿಮನು ಗ್ರೀಕನಾಗಿದ್ದನು. ಪೌಲನು ಇವನನ್ನು ಪವಿತ್ರ ಸ್ಥಳದೊಳಗೆ ಕರೆದುಕೊಂಡು ಹೋಗಿದ್ದಾನೆಂದು ಅವರು ಭಾವಿಸಿಕೊಂಡರು.)

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

29 ತ್ರೊಪಿಯ್ ಮನ್ತಲ್ಯಾ ಗ್ರಿಕಾಂಚ್ಯಾ ಮಾನ್ಸಾಕ್ ಜೆರುಜಲೆಮಾತ್ ಪಾವ್ಲು ವಾಂಗ್ಡಾ ಬಗಲ್ಲ್ಯಾನಿ, ತ್ರೊಪಿಮ್ ಎಫೆಸಾತ್ಲೊ, ತಸೆ ಹೊವ್ನ್ ಪಾವ್ಲುನ್ ತೆಕಾ ಪವಿತ್ರ್ ಜಾಗ್ಯಾರ್‍ನಿ ಬಲ್ವುನ್ ನ್ಹೆಲಾ ಮನುನ್ ಚಿಂತಾಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 21:29
5 ತಿಳಿವುಗಳ ಹೋಲಿಕೆ  

ಬೆರೋಯದ ಪುರ್ರನ ಮಗ ಸೋಪತ್ರನು, ಥೆಸಲೋನಿಕದ ಅರಿಸ್ತಾರ್ಕ ಮತ್ತು ಸೆಕುಂದ, ದೆರ್ಬೆಯ ಗಾಯ, ತಿಮೊಥೆ ಅಲ್ಲದೆ ಏಷ್ಯಾ ಪ್ರಾಂತದ ತುಖಿಕ ಹಾಗೂ ತ್ರೊಫಿಮ ಅವನೊಂದಿಗೆ ಹೋದರು.


ಎರಸ್ತನು ಕೊರಿಂಥದಲ್ಲಿ ಉಳಿದುಕೊಂಡಿದ್ದಾನೆ. ಆದರೆ ತ್ರೊಫಿಮನು ಅಸ್ವಸ್ಥನಾಗಿದ್ದುದರಿಂದ ಅವನನ್ನು ನಾನು ಮಿಲೇತದಲ್ಲಿ ಬಿಟ್ಟಿದ್ದೇನೆ.


ಎಫೆಸಕ್ಕೆ ತಲುಪಿದಾಗ, ಪೌಲನು ಅವರನ್ನು ಅಲ್ಲಿಯೇ ಬಿಟ್ಟು ಸಭಾಮಂದಿರಕ್ಕೆ ಹೋಗಿ ಯೆಹೂದ್ಯರೊಂದಿಗೆ ಚರ್ಚೆ ನಡೆಸಿದನು.


ಆದರೆ ಅವನು ಅಲ್ಲಿಂದ ಹೊರಟು ಹೋಗಲಿಕ್ಕಿದ್ದಾಗ, “ದೇವರ ಚಿತ್ತವಾದರೆ, ನಾನು ಹಿಂದಿರುಗಿ ಬರುವೆ,” ಎಂದನು. ಆಮೇಲೆ ಎಫೆಸದಿಂದ ನೌಕೆಯಲ್ಲಿ ಪ್ರಯಾಣಮಾಡಿದನು.


ಅಪೊಲ್ಲೋಸನು ಕೊರಿಂಥದಲ್ಲಿ ಇದ್ದಾಗಲೇ, ಕಾಲ್ನಡಿಗೆಯಾಗಿ ಪೌಲನು ಪ್ರಯಾಣಮಾಡಿ ಎಫೆಸ ಪಟ್ಟಣಕ್ಕೆ ಬಂದನು. ಅಲ್ಲಿ ಕೆಲವು ಶಿಷ್ಯರನ್ನು ಕಂಡು,


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು