Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 20:37 - ಕನ್ನಡ ಸಮಕಾಲಿಕ ಅನುವಾದ

37 ಅವರೆಲ್ಲರೂ ಪೌಲನ ಕೊರಳನ್ನು ಅಪ್ಪಿಕೊಂಡು ಕಣ್ಣೀರಿಡುತ್ತಾ ಅವನಿಗೆ ಮುದ್ದಿಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

37 ಬಳಿಕ ಪೌಲನು; “ನೀವು ನನ್ನ ಮುಖವನ್ನು ಇನ್ನೆಂದೂ ಕಾಣಲಾರಿರಿ” ಅನ್ನಲು, ಅವರೆಲ್ಲರು ವ್ಯಥೆಪಟ್ಟು, ದುಃಖದಿಂದ ಅಳುತ್ತಾ, ಅವನ ಕೊರಳನ್ನು ತಬ್ಬಿಕೊಂಡು ಅವನಿಗೆ ಮುದ್ದಿಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

37 ಅನಂತರ ಅವರು ಅವನನ್ನು ತಬ್ಬಿಕೊಂಡು ಮುದ್ದಿಟ್ಟು ಬೀಳ್ಕೊಟ್ಟರು. ಅವರ ಕಣ್ಣಲ್ಲಾದರೋ ನೀರು ಧಾರಾಕಾರವಾಗಿ ಹರಿಯುತ್ತಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

37-38 ನೀವು ಇನ್ನು ಮೇಲೆ ನನ್ನ ಮುಖವನ್ನು ಕಾಣುವದಿಲ್ಲವೆಂದು ಪೌಲನು ಹೇಳಿದ ಮಾತಿಗೆ ಅವರು ವಿಶೇಷವಾಗಿ ವ್ಯಥೆಪಟ್ಟು ಅವನ ಕೊರಳನ್ನು ತಬ್ಬಿಕೊಂಡು ಅವನಿಗೆ ಮುದ್ದಿಟ್ಟರು. ಆಮೇಲೆ ಅವರು ಅವನನ್ನು ಹಡಗಿಗೆ ಸಾಗಕಳುಹಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

37-38 ಅವರೆಲ್ಲರೂ ಬಹಳವಾಗಿ ಅತ್ತರು. “ನೀವು ನನ್ನನ್ನು ಮತ್ತೆಂದಿಗೂ ನೋಡುವುದಿಲ್ಲ”ವೆಂದು ಪೌಲನು ಹೇಳಿದ್ದರಿಂದ ಅವರು ಬಹಳ ದುಃಖಗೊಂಡಿದ್ದರು. ಅವರು ಪೌಲನನ್ನು ಅಪ್ಪಿಕೊಂಡು ಮುದ್ದಿಟ್ಟರು. ಅವರು ಹಡಗಿನವರೆಗೂ ಹೋಗಿ ಅವನನ್ನು ಬೀಳ್ಕೊಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

37 ಮಾನಾ ತೆನಿ ಸಗ್ಳ್ಯಾನಿ ರಡ್ಲ್ಯಾನಿ, ಅನಿ ಪಾವ್ಲುಕ್ ಯಾಂಗ್ ಮಾರುನ್, ಉಪ್ಪಾ ದಿವ್ನ್ ಜಾವ್ನ್ ಯೆ ಮಟ್ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 20:37
17 ತಿಳಿವುಗಳ ಹೋಲಿಕೆ  

ನಾನು ನಿನ್ನ ಕಣ್ಣೀರನ್ನು ನೆನಪಿಗೆ ತಂದು, ನಿನ್ನನ್ನು ನೋಡಿ ಆನಂದಭರಿತನಾಗಬೇಕೆಂದು ಬಹಳವಾಗಿ ಹಂಬಲಿಸುತ್ತೇನೆ.


‘ದೇವರು ಅವರ ಕಣ್ಣೀರನ್ನೆಲ್ಲಾ ಒರೆಸಿಬಿಡುವರು. ಇನ್ನು ಮರಣವಿರುವುದಿಲ್ಲ.’ ಇನ್ನು ದುಃಖವಾಗಲಿ, ಗೋಳಾಟವಾಗಲಿ, ನೋವಾಗಲಿ ಇರುವುದಿಲ್ಲ. ಮೊದಲಿದ್ದದ್ದೆಲ್ಲಾ ಇಲ್ಲದಂತಾಯಿತು!” ಎಂದು ಹೇಳಿತು.


ಪವಿತ್ರವಾದ ಮುದ್ದಿಟ್ಟು ದೇವಜನರೆಲ್ಲರನ್ನೂ ವಂದಿಸಿರಿ.


ಪವಿತ್ರವಾದ ಮುದ್ದಿಟ್ಟು ಒಬ್ಬರನ್ನೊಬ್ಬರು ವಂದಿಸಿರಿ.


ಸಹೋದರರೆಲ್ಲರೂ ನಿಮ್ಮನ್ನು ವಂದಿಸುತ್ತಾರೆ. ಪವಿತ್ರವಾದ ಮುದ್ದಿಟ್ಟು, ಒಬ್ಬರನ್ನೊಬ್ಬರು ವಂದಿಸಿರಿ.


ಪವಿತ್ರವಾದ ಮುದ್ದನ್ನಿಟ್ಟು ಒಬ್ಬರನ್ನೊಬ್ಬರು ವಂದಿಸಿರಿ. ಕ್ರಿಸ್ತನ ಎಲ್ಲಾ ಸಭೆಗಳವರೂ ನಿಮಗೆ ವಂದನೆಗಳನ್ನು ಕಳುಹಿಸುತ್ತಾರೆ.


ಎದ್ದು ತನ್ನ ತಂದೆಯ ಬಳಿಗೆ ಹೋದನು. “ಆದರೆ ಅವನು ಇನ್ನೂ ಬಹಳ ದೂರದಲ್ಲಿರುವಾಗಲೇ, ಅವನ ತಂದೆಯು ಅವನನ್ನು ಕಂಡು, ಕನಿಕರಪಟ್ಟು, ಓಡಿಬಂದು, ಅವನ ಕೊರಳನ್ನು ಅಪ್ಪಿಕೊಂಡು ಅವನಿಗೆ ಮುದ್ದಿಟ್ಟನು.


ಏಕೆಂದರೆ, ಸಿಂಹಾಸನದ ಮಧ್ಯದಲ್ಲಿರುವ ಕುರಿಮರಿ ಆಗಿರುವವರು ಇವರನ್ನು ಮೇಯಿಸಿ; ‘ಜೀವಜಲದ ಒರತೆಗಳ ಬಳಿ ನಡೆಸುವರು.’ ‘ಮತ್ತು ದೇವರು ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವರು,’” ಎಂದು ಹೇಳಿದನು.


ಕಣ್ಣೀರಿನಿಂದ ಬಿತ್ತುವವರು, ಆನಂದ ಗೀತದೊಡನೆ ಕೊಯ್ಯುವರು;


ಅವರು ಯೋಬನನ್ನು ದೂರದಿಂದ ನೋಡಿದಾಗ, ಅವನನ್ನು ಗುರುತಿಸಲು ಸಾಧ್ಯವಾಗಲಿಲ್ಲ. ಅವರು ಗಟ್ಟಿಯಾಗಿ ಅಳಲು ಪ್ರಾರಂಭಿಸಿದರು. ತಮ್ಮ ತಮ್ಮ ಮೇಲಂಗಿಗಳನ್ನು ಹರಿದುಕೊಂಡು, ಧೂಳನ್ನು ತಮ್ಮ ತಲೆಯ ಮೇಲೆ ಸುರಿಸಿಕೊಂಡರು.


ಎಜ್ರನು ಪ್ರಾರ್ಥಿಸಿ ಅರಿಕೆಮಾಡಿ ಅತ್ತು ದೇವರ ಆಲಯದ ಮುಂದೆ ಅಡ್ಡಬಿದ್ದ ತರುವಾಯ ಇಸ್ರಾಯೇಲರಲ್ಲಿ ಸ್ತ್ರೀಯರೂ, ಪುರುಷರೂ, ಮಕ್ಕಳು ಮಹಾಕೂಟವಾಗಿ ಅವನ ಬಳಿಯಲ್ಲಿ ಕೂಡಿಕೊಂಡು ಬಂದರು. ಜನರು ಬಹಳವಾಗಿ ಅತ್ತರು.


“ಯೆಹೋವ ದೇವರೇ, ನಾನು ಸತ್ಯದಿಂದಲೂ, ಪೂರ್ಣಹೃದಯದಿಂದಲೂ ನಿಮ್ಮ ಮುಂದೆ ನಡೆದು, ನಿಮ್ಮ ದೃಷ್ಟಿಯಲ್ಲಿ ಒಳ್ಳೆಯದನ್ನು ಮಾಡಿದ್ದೇನೆಂಬುದನ್ನು ಜ್ಞಾಪಕಕ್ಕೆ ತಂದುಕೊಳ್ಳಿರಿ,” ಎಂದು ಬೇಡಿಕೊಂಡನು. ಹೀಗೆ ಹಿಜ್ಕೀಯನು ವ್ಯಥೆಪಟ್ಟು ಅತ್ತನು.


ದಾವೀದನು ಅಳುತ್ತಾ ತನ್ನ ತಲೆಯನ್ನು ಮುಚ್ಚಿಕೊಂಡು, ಬರಿಗಾಲಿನಿಂದ ಎಣ್ಣೆಮರಗಳ ಗುಡ್ಡವನ್ನು ಏರಿದನು. ಅವನ ಸಂಗಡ ಇರುವ ಸಮಸ್ತ ಜನರೂ, ತಮ್ಮ ತಮ್ಮ ತಲೆಗಳನ್ನು ಮುಚ್ಚಿಕೊಂಡು ಅಳುತ್ತಾ ಮೇಲಕ್ಕೆ ಏರಿದರು.


ಹುಡುಗನು ಹೋಗುತ್ತಲೇ ದಾವೀದನು ದಕ್ಷಿಣ ಕಡೆಯಿಂದ ಎದ್ದು ಬಂದು ಯೋನಾತಾನನ ಮುಂದೆ ಬೋರಲು ಬಿದ್ದು ಮೂರು ಸಾರಿ ವಂದಿಸಿದನು. ಅವರು ಒಬ್ಬರಿಗೊಬ್ಬರು ಮುದ್ದಿಟ್ಟುಕೊಂಡು, ಒಬ್ಬರನ್ನೊಬ್ಬರು ನೋಡಿ ಅತ್ತರು. ದಾವೀದನು ಬಹಳವಾಗಿ ಅತ್ತನು.


ಆಗ ಯೋಸೇಫನು ತನ್ನ ರಥವನ್ನು ಸಿದ್ಧಮಾಡಿಕೊಂಡು, ತನ್ನ ತಂದೆ ಇಸ್ರಾಯೇಲನಿಗೆ ಎದುರಾಗಿ ಗೋಷೆನಿಗೆ ಹೋದನು. ಯೋಸೇಫನು ತನ್ನ ತಂದೆಯನ್ನು ಸಂಧಿಸಿ, ಅಪ್ಪಿಕೊಂಡು, ಬಹಳ ಹೊತ್ತಿನವರೆಗೆ ಅತ್ತನು.


ಅವನು ತನ್ನ ತಮ್ಮ ಬೆನ್ಯಾಮೀನನ ಕುತ್ತಿಗೆಯನ್ನು ಅಪ್ಪಿಕೊಂಡು ಅತ್ತನು, ಬೆನ್ಯಾಮೀನನೂ ಅತ್ತನು.


ಆಗ ಅವನು ಎತ್ತುಗಳನ್ನು ಬಿಟ್ಟು, ಎಲೀಯನ ಹಿಂದೆ ಓಡಿಹೋಗಿ ಅವನಿಗೆ, “ಅಪ್ಪಣೆಯಾದರೆ, ನಾನು ನನ್ನ ತಂದೆತಾಯಿಗಳನ್ನು ಮುದ್ದಿಟ್ಟು ಬಂದು ನಿನ್ನನ್ನು ಹಿಂಬಾಲಿಸುವೆನು,” ಎಂದನು. ಎಲೀಯನು, “ಹೋಗು, ನಾನು ನಿನಗೆ ಏನು ಮಾಡಿದೆ?” ಎಂದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು