Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 20:34 - ಕನ್ನಡ ಸಮಕಾಲಿಕ ಅನುವಾದ

34 ನನ್ನ ಹಸ್ತಗಳೇ ನನ್ನ ಅಗತ್ಯಗಳನ್ನೂ ನನ್ನೊಂದಿಗಿದ್ದವರ ಅಗತ್ಯಗಳನ್ನೂ ಪೂರೈಸಿದವೆಂಬುದನ್ನು ನೀವು ಬಲ್ಲವರಾಗಿದ್ದೀರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

34 ಈ ಕೈಗಳಿಂದಲೇ ಕೆಲಸಮಾಡಿ, ನನ್ನ ಕೊರತೆಗಳನ್ನೂ, ನನ್ನ ಜೊತೆಯಲ್ಲಿದ್ದವರ ಕೊರತೆಗಳನ್ನು ನೀಗಿಸಿದ್ದನ್ನು ನೀವೇ ಬಲ್ಲಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

34 ನನ್ನ ಹಾಗೂ ನನ್ನ ಸಂಗಡಿಗರ ಅವಶ್ಯಕತೆಗಳನ್ನು ನೀಗಿಸಲು ಈ ಕೈಗಳೇ ದುಡಿದಿವೆಯೆಂಬುದು ನಿಮ್ಮೆಲ್ಲರಿಗೂ ತಿಳಿದಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

34 ಈ ಕೈಗಳೇ ಕೆಲಸಮಾಡಿ ನನ್ನ ಕೊರತೆಗಳನ್ನೂ ನನ್ನ ಜೊತೆಯಲ್ಲಿದ್ದವರ ಕೊರತೆಗಳನ್ನೂ ನೀಗಿದ್ದನ್ನು ನೀವೇ ಬಲ್ಲಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

34 ನಾನು ಯಾವಾಗಲೂ ನನ್ನ ಅಗತ್ಯತೆಗಳನ್ನು ಮತ್ತು ನನ್ನೊಂದಿಗಿರುವವರ ಅಗತ್ಯತೆಗಳನ್ನು ಪೂರೈಸುವುದಕ್ಕಾಗಿ ದುಡಿಯುತ್ತಿದ್ದೆನು ಎಂಬುದು ನಿಮಗೆ ಗೊತ್ತಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

34 ಮಿಯಾ ಮಾಜ್ಯಾ ಸ್ವತಾಚ್ಯಾ ಹಾತಾನಿ ರಾಬುನ್ ಮಾಜಿ ಅನಿ ಮಾಜ್ಯಾ ವಾಂಗ್ಡಾ ಹೊತ್ತ್ಯಾಂಚಿ ಗರ್ಜ್ ಪುರಾ ಕರ್ಲಾ, ಹೆ ತುಮ್ಕಾ ಗೊತ್ತ್ ಹಾಯ್.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 20:34
9 ತಿಳಿವುಗಳ ಹೋಲಿಕೆ  

ಅವರು ತನ್ನಂತೆಯೇ ಗುಡಾರಮಾಡುವ ಕೆಲಸದವರಾದ್ದರಿಂದ ಪೌಲನು ಅವರೊಂದಿಗಿದ್ದು ಅವರೊಂದಿಗೆ ಗುಡಾರ ಕೆಲಸ ಮಾಡುತ್ತಿದ್ದನು.


ಸ್ವಂತ ಕೈಯಿಂದ ಕೆಲಸಮಾಡಿ ದುಡಿಯುವವರೂ ಆಗಿದ್ದೇವೆ. ಶಪಿಸಿಕೊಂಡು ಆಶೀರ್ವದಿಸುತ್ತೇವೆ, ಹಿಂಸೆಪಟ್ಟು ಸಹಿಸಿಕೊಳ್ಳುತ್ತೇವೆ,


ಪ್ರಿಯರೇ, ನಾವು ನಿಮ್ಮಲ್ಲಿ ಯಾರ ಮೇಲೆಯೂ ಭಾರಹಾಕಬಾರದೆಂದು ಹಗಲಿರುಳು ದುಡಿದು ಕಷ್ಟ ಪ್ರಯಾಸದಿಂದ ದೇವರ ಸುವಾರ್ತೆಯನ್ನು ನಿಮಗೆ ಸಾರಿದೆವೆಂಬುದು ನಿಮ್ಮ ನೆನಪಿನಲ್ಲಿರುವುದಷ್ಟೆ.


ತನ್ನ ಇಬ್ಬರು ಸಹಾಯಕರಾದ ತಿಮೊಥೆ ಮತ್ತು ಎರಸ್ತನನ್ನು ಮಕೆದೋನ್ಯಕ್ಕೆ ಕಳುಹಿಸಿ ತಾನು ಇನ್ನೂ ಸ್ವಲ್ಪಕಾಲ ಏಷ್ಯಾ ಪ್ರಾಂತದಲ್ಲಿ ಇದ್ದನು.


ಕೂಡಲೇ ಇಡೀ ಪಟ್ಟಣದಲ್ಲೆಲ್ಲಾ ಕೋಲಾಹಲ ಉಂಟಾಯಿತು. ಜನರು ಗುಂಪಾಗಿ ಕೂಡಿಕೊಂಡು ಬಂದು ಮಕೆದೋನ್ಯದಿಂದ ಪೌಲನೊಂದಿಗೆ ಪ್ರಯಾಣಮಾಡಿ ಬಂದ, ಗಾಯ ಮತ್ತು ಅರಿಸ್ತಾರ್ಕರನ್ನು ಬಂಧಿಸಿ ಕ್ರೀಡಾಂಗಣದೊಳಗೆ ಎಳೆದುಕೊಂಡು ಬಂದರು.


ಈ ರೀತಿಯ ಪರಿಶ್ರಮದ ದುಡಿಮೆಯಿಂದ ನಾವು ಬಲಹೀನರಿಗೆ ಸಹಾಯ ಮಾಡಬೇಕೆಂಬುದನ್ನು ನನ್ನ ಮಾದರಿಯಿಂದ ನಿಮಗೆ ತೋರಿಸಿಕೊಟ್ಟೆನು. ‘ತೆಗೆದುಕೊಳ್ಳುವುದಕ್ಕಿಂತ ಕೊಡುವುದೇ ಹೆಚ್ಚಿನ ಆಶೀರ್ವಾದ,’ ಎಂದು ಕರ್ತ ಆಗಿರುವ ಯೇಸುವೇ ಹೇಳಿದ ಮಾತುಗಳನ್ನು ನಿಮಗೆ ಜ್ಞಾಪಕಪಡಿಸುತ್ತೇನೆ,” ಎಂದನು.


ನನ್ನೊಂದಿಗಿರುವವರೆಲ್ಲರೂ ನಿನಗೆ ವಂದನೆ ಹೇಳುತ್ತಾರೆ. ವಿಶ್ವಾಸದಲ್ಲಿ ನಮ್ಮನ್ನು ಪ್ರೀತಿಸುವವರಿಗೆ ವಂದನೆಗಳನ್ನು ಹೇಳು. ಕೃಪೆಯು ನಿಮ್ಮೆಲ್ಲರೊಂದಿಗೆ ಇರಲಿ!


ನಾವು ಯೊರ್ದನಿನವರೆಗೂ ಹೋಗಿ, ಪ್ರತಿ ಮನುಷ್ಯನು ಅಲ್ಲಿಂದ ಒಂದೊಂದು ತೊಲೆಯನ್ನು ತೆಗೆದುಕೊಂಡು ಬಂದು, ವಾಸವಾಗಿರುವುದಕ್ಕೆ ನಮಗೋಸ್ಕರ ಒಂದು ಸ್ಥಳವನ್ನು ಅಲ್ಲಿ ಮಾಡುವೆವು,” ಎಂದರು. ಅವನು, “ಹೋಗಿರಿ,” ಎಂದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು