Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 20:33 - ಕನ್ನಡ ಸಮಕಾಲಿಕ ಅನುವಾದ

33 ನಾನು ಯಾರ ಬೆಳ್ಳಿ ಬಂಗಾರಕ್ಕಾಗಲಿ, ಬಟ್ಟೆಗಾಗಲಿ ಆಶೆಪಡಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

33 ನಾನು ಯಾರ ಬೆಳ್ಳಿಬಂಗಾರವನ್ನಾಗಲಿ, ಉಡಿಗೆತೊಡಿಗೆಯನ್ನಾಗಲಿ ಬಯಸಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

33 ನಾನು ಯಾರ ಬೆಳ್ಳಿಬಂಗಾರಕ್ಕೂ ಬಟ್ಟೆಬರೆಗೂ ಆಶೆಪಟ್ಟವನಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

33 ನಾನು ಯಾರ ಬೆಳ್ಳಿಬಂಗಾರವನ್ನಾಗಲಿ ಉಡಿಗೆತೊಡಿಗೆಯನ್ನಾಗಲಿ ಬಯಸಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

33 ನಾನು ನಿಮ್ಮೊಂದಿಗೆ ಇದ್ದಾಗ, ಯಾರ ಹಣವನ್ನಾಗಲಿ ಒಳ್ಳೆಯ ಬಟ್ಟೆಗಳನ್ನಾಗಲಿ ಎಂದೂ ಬಯಸಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

33 ಮಿಯಾ ಕೊನಾಚ್ಯಾ ಸೊನೆ ನಾ ತರ್ ಚಾಂದಿಕ್ನಿ ಹೊಂವ್ದಿ ಕಪ್ಡ್ಯಾಕ್ನಿ ಹೊಂವ್ದಿ ಆಸ್ಯಾ ಕರುಕ್ನಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 20:33
13 ತಿಳಿವುಗಳ ಹೋಲಿಕೆ  

ನಾನು ನಿಮ್ಮಲ್ಲಿದ್ದಾಗ, ನನಗೆ ಕೊರತೆಯಾದಾಗ, ನಾನು ನಿಮ್ಮಲ್ಲಿ ಯಾರಿಗೂ ಭಾರವಾಗಲಿಲ್ಲ. ಏಕೆಂದರೆ, ಮಕೆದೋನ್ಯದಿಂದ ಬಂದಿದ್ದ ಸಹೋದರರು ನನ್ನ ಅವಶ್ಯಕತೆಯನ್ನು ಪೂರೈಸಿದರು. ಹೀಗೆ ನಾನು ನಿಮ್ಮಲ್ಲಿ ಯಾರಿಗೂ ಭಾರವಾಗಲಿಲ್ಲ. ಇನ್ನು ಮುಂದೆಯೂ ಭಾರವಾಗಿರುವುದಿಲ್ಲ.


ಇತರರಿಗೆ ನಿಮ್ಮ ಸಹಾಯದಲ್ಲಿ ಪಾಲು ಇದ್ದರೆ, ಅದರಲ್ಲಿ ನಮಗೂ ಹೆಚ್ಚು ಪಾಲು ಇರಬೇಕಲ್ಲಾ? ಆದರೆ ನಾವು ಈ ಅಧಿಕಾರವನ್ನು ಚಲಾಯಿಸಿಲ್ಲ. ಕ್ರಿಸ್ತ ಯೇಸುವಿಗೆ ಸೇರಿದ ಸುವಾರ್ತೆಗೆ ಅಡ್ಡಿಯಾಗಬಾರದೆಂದು ಎಲ್ಲವನ್ನೂ ಸಹಿಸಿಕೊಂಡೆವು.


ಹಾಗಾದರೆ ನನಗೆ ದೊರೆಯುವ ಬಹುಮಾನವೇನು? ನಾನು ಸುವಾರ್ತೆಯನ್ನು ಸಾರುವಾಗ, ಅದನ್ನು ಉಚಿತವಾಗಿ ಸಾರುತ್ತಾ, ಸುವಾರ್ತೆಯ ಪ್ರಸಂಗಿಯಾಗಿ ನನ್ನ ಪೂರ್ಣ ಹಕ್ಕನ್ನು ಉಪಯೋಗಿಸದಿರುವುದೇ ನನ್ನ ಬಹುಮಾನ.


ನಿಮ್ಮ ಹೃದಯಗಳಲ್ಲಿ ನಮಗೆ ಸ್ಥಳ ಕೊಡಿರಿ. ನಾವು ಯಾರಿಗೂ ಅನ್ಯಾಯ ಮಾಡಲಿಲ್ಲ, ಯಾರಿಗೂ ನಾವು ಕೇಡು ಬಗೆಯಲಿಲ್ಲ, ನಾವು ಸ್ವಂತ ಲಾಭಕ್ಕಾಗಿ ಯಾರನ್ನೂ ದುಡಿಸಿಕೊಳ್ಳಲಿಲ್ಲ.


ನಾವು ಎಂದಿಗೂ ನಿಮ್ಮನ್ನು ಹೊಗಳಿ ಮಾತನಾಡಲಿಲ್ಲ, ಕೌಶಲ್ಯವನ್ನು ಪ್ರಯೋಗಿಸಿ ಹಣದಾಸೆಯನ್ನು ಮರೆಮಾಡುವವರು ಆಗಿರಲಿಲ್ಲ ಎಂಬುದನ್ನು ನೀವು ತಿಳಿದಿರುವಿರಿ. ಇದಕ್ಕೆ ದೇವರೇ ಸಾಕ್ಷಿ.


ಆದರೆ ನಾನಂತೂ ಇವುಗಳಲ್ಲಿ ಒಂದು ಹಕ್ಕನ್ನೂ ಉಪಯೋಗಿಸಿಕೊಂಡಿಲ್ಲ. ಅಂಥವುಗಳನ್ನು ನನಗೆ ನೀವು ಮಾಡಬೇಕೆಂಬ ಅಪೇಕ್ಷೆಯಿಂದ ಈ ಸಂಗತಿಗಳನ್ನು ನಾನು ಬರೆಯಲಿಲ್ಲ. ಯಾರಾದರೂ ಈ ಹೆಮ್ಮೆಯನ್ನು ನನ್ನಿಂದ ಅಪಹರಿಸುವುದಕ್ಕಿಂತಲೂ ಸಾಯುವುದೇ ಲೇಸು.


ನಿಮ್ಮಲ್ಲಿರುವ ದೇವರ ಮಂದೆಯನ್ನು ಕಾಯಿರಿ. ಬಲಾತ್ಕಾರದಿಂದಲ್ಲ, ಆದರೆ ದೇವರ ಪ್ರಕಾರ ಇಷ್ಟಪೂರ್ವಕವಾಗಿಯೂ ನೀಚ ದ್ರವ್ಯಾಶೆಯಿಂದಲ್ಲ, ಸಿದ್ಧಮನಸ್ಸಿನಿಂದಲೂ ಮೇಲ್ವಿಚಾರಣೆ ಮಾಡಿರಿ.


ಆಗ ಮೋಶೆಯು ಬಹಳವಾಗಿ ಕೋಪಿಸಿಕೊಂಡು ಯೆಹೋವ ದೇವರಿಗೆ, “ಅವರ ಬಲಿಯನ್ನು ನೀವು ಗೌರವಿಸಬೇಡಿ, ನಾನು ಅವರಿಂದ ಒಂದು ಕತ್ತೆಯನ್ನಾದರೂ ತೆಗೆದುಕೊಳ್ಳಲಿಲ್ಲ. ಅವರಲ್ಲಿ ಒಬ್ಬನಿಗಾದರೂ ಕೇಡು ಮಾಡಲಿಲ್ಲ,” ಎಂದು ಹೇಳಿದನು.


ಅನ್ನಪಾನಗಳಿಗಾಗಿ ನಮಗೆ ಹಕ್ಕಿಲ್ಲವೇ?


ಪ್ರತಿಫಲವನ್ನು ಎದುರುನೋಡದೇ, ದೇವರ ಸುವಾರ್ತೆಯನ್ನು ನೀವು ಉನ್ನತರಾಗಬೇಕೆಂದು, ನನ್ನನ್ನು ನಾನೇ ತಗ್ಗಿಸಿಕೊಂಡು ಉಚಿತವಾಗಿ ಸಾರಿದ್ದು ನನ್ನ ಪಾಪವೋ?


ಏಕೆಂದರೆ ಅವರು ಕ್ರಿಸ್ತ ಯೇಸುವಿನ ಹೆಸರಿನ ನಿಮಿತ್ತವಾಗಿ ಹೊರಟು ಹೋಗಿದ್ದಾರೆ. ಅವಿಶ್ವಾಸಿಗಳಿಂದ ಏನೂ ತೆಗೆದುಕೊಳ್ಳುವವರಲ್ಲ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು