Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 2:22 - ಕನ್ನಡ ಸಮಕಾಲಿಕ ಅನುವಾದ

22 “ಇಸ್ರಾಯೇಲ್ ಜನರೇ, ಈ ವಿಷಯವನ್ನು ಕೇಳಿರಿ: ದೇವರು ನಜರೇತಿನ ಯೇಸುಸ್ವಾಮಿಯವರ ಮುಖಾಂತರ ನಿಮ್ಮ ಮಧ್ಯದಲ್ಲಿ ಅದ್ಭುತಕಾರ್ಯಗಳನ್ನೂ ಆಶ್ಚರ್ಯಕಾರ್ಯಗಳನ್ನೂ ಸೂಚಕಕಾರ್ಯಗಳನ್ನೂ ನಡೆಸಿದ್ದರಿಂದ, ಯೇಸು ದೇವರ ಮೆಚ್ಚಿಕೆ ಪಡೆದವರಾಗಿದ್ದಾರೆಂಬುದನ್ನು, ನೀವೇ ತಿಳಿದಿರುವಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

22 “ಇಸ್ರಾಯೇಲ್ ಜನರೇ, ನನ್ನ ಮಾತುಗಳನ್ನು ಕೇಳಿರಿ;, ನಜರೇತಿನ ಯೇಸು ಇದ್ದನಲ್ಲಾ, ನಿಮಗೂ ತಿಳಿದಿರುವಂತೆ ದೇವರು ಆತನ ಕೈಯಿಂದ ಮಹತ್ತುಗಳನ್ನೂ ಅದ್ಭುತಗಳನ್ನೂ ಸೂಚಕಕಾರ್ಯಗಳನ್ನೂ ನಿಮ್ಮಲ್ಲಿ ನಡಿಸಿ ಆತನನ್ನು ತನಗೆ ಮೆಚ್ಚಿಕೆಯಾದವನೆಂದು ನಿಮಗೆ ತೋರಿಸಿಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

22 “ಇಸ್ರಯೇಲ್‍ಬಾಂಧವರೇ, ನನ್ನ ಮಾತುಗಳನ್ನು ಆಲಿಸಿರಿ. ನಜರೇತಿನ ಯೇಸುಸ್ವಾಮಿ ದೈವನಿಯಮಿತ ವ್ಯಕ್ತಿ ಎಂಬುದನ್ನು ದೇವರೇ ಅವರ ಮುಖಾಂತರ ನಡೆಸಿದ ಅದ್ಭುತಕಾರ್ಯಗಳಿಂದ, ಮಹತ್ಕಾರ್ಯಗಳಿಂದ ಹಾಗೂ ಸೂಚಕಕಾರ್ಯಗಳಿಂದ ನಿಮಗೆ ಸ್ಪಷ್ಟಪಡಿಸಲಾಗಿದೆ. ಇದು ನಿಮಗೆ ತಿಳಿದಿರುವ ವಿಷಯ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

22 ಇಸ್ರಾಯೇಲ್ ಜನರೇ, ನನ್ನ ಮಾತುಗಳನ್ನು ಲಾಲಿಸಿರಿ - ನಜರೇತಿನ ಯೇಸು ಇದ್ದನಲ್ಲಾ, ದೇವರು ನಿಮಗೂ ತಿಳಿದಿರುವಂತೆ ಆತನ ಕೈಯಿಂದ ಮಹತ್ತುಗಳನ್ನೂ ಅದ್ಭುತಗಳನ್ನೂ ಸೂಚಕಕಾರ್ಯಗಳನ್ನೂ ನಿಮ್ಮಲ್ಲಿ ನಡಿಸಿ ಆತನನ್ನು ತನಗೆ ಮೆಚ್ಚಿಕೆಯಾದವನೆಂದು ನಿಮಗೆ ತೋರಿಸಿಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

22 “ಯೆಹೂದ್ಯರೇ, ಈ ಮಾತುಗಳನ್ನು ಕೇಳಿರಿ: ನಜರೇತಿನ ಯೇಸು ಬಹು ವಿಶೇಷವಾದ ವ್ಯಕ್ತಿ. ದೇವರು ತಾನು ಯೇಸುವಿನ ಮೂಲಕ ಮಾಡಿದ ಶಕ್ತಿಯುತವಾದ ಮತ್ತು ಅದ್ಭುತವಾದ ಕಾರ್ಯಗಳ ಮೂಲಕ ಇದನ್ನು ಸ್ಪಷ್ಟವಾಗಿ ನಿರೂಪಿಸಿದ್ದಾನೆ. ಈ ಸಂಗತಿಗಳನ್ನು ನೀವೆಲ್ಲರೂ ನೋಡಿದಿರಿ. ಆದ್ದರಿಂದ ಇದು ಸತ್ಯವೆಂದು ನಿಮಗೆ ಗೊತ್ತಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

22 ಇಸ್ರಾಯೆಲಾಚ್ಯಾ ಲೊಕಾನು ಮಾಜಿ ಹಿ ಗೊಸ್ಟಿಯಾ ಆಯ್ಕಾ, ದೆವಾನ್ ಅಪ್ನಿ ಜೆಜುಚ್ಯಾ ವೈನಾ ಕರಲ್ಲಿ ತಾಕ್ತಿಚ್ಯಾ ಅನಿ ಚಮತ್ಕಾರಾಚ್ಯಾ ಕಾಮಾಂಚ್ಯಾ ವೈನಾ ನಜರೆತಾತ್ಲ್ಯಾ ಜೆಜುಚೊ ದೈವಿಕ್ ಅದಿಕಾರ್ ಸ್ಪಸ್ಟ್ ಹೊವ್ನ್ ದಾಕ್ವುನ್ ದಿಲ್ಲೊ ಹಾಯ್, ಹಿ ಸಂಗ್ತಿಯಾ ತುಮಿ ಸಗ್ಳ್ಯಾನಿ ಬಗ್ಲ್ಯಾಸಿ, ತಸೆ ಹೊವ್ನ್ ಹೆ ಸಗ್ಳೆ ಖರೆ ಮನುನ್ ತುಮ್ಕಾ ಗೊತ್ತ್ ಹಾಯ್.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 2:22
42 ತಿಳಿವುಗಳ ಹೋಲಿಕೆ  

ಇವನು ಒಂದು ರಾತ್ರಿ ಯೇಸುವಿನ ಬಳಿಗೆ ಬಂದು, “ಗುರುವೇ, ನೀವು ದೇವರ ಬಳಿಯಿಂದ ಬಂದ ಬೋಧಕರೆಂದು ನಾವು ಬಲ್ಲೆವು. ಏಕೆಂದರೆ ದೇವರು ಒಬ್ಬನ ಸಂಗಡ ಇಲ್ಲದಿದ್ದರೆ ನೀವು ಮಾಡುವ ಸೂಚಕಕಾರ್ಯಗಳನ್ನು ಯಾವ ಮನುಷ್ಯನೂ ಮಾಡಲಾರನು,” ಎಂದನು.


ನಿಮಗೂ ಎಲ್ಲಾ ಇಸ್ರಾಯೇಲ್ ಜನರಿಗೂ ಇದು ತಿಳಿದಿರಲಿ: ನೀವು ಯೇಸುವನ್ನು ಶಿಲುಬೆಗೆ ಹಾಕಿದಿರಿ. ಆದರೆ ದೇವರು ಸತ್ತವರೊಳಗಿಂದ ಎಬ್ಬಿಸಿದ ನಜರೇತಿನ ಕ್ರಿಸ್ತ ಯೇಸುವಿನ ಹೆಸರಿನಿಂದಲೇ ಈ ಮನುಷ್ಯನು ಪೂರ್ಣ ಸ್ವಸ್ಥನಾಗಿ ನಿಮ್ಮೆದುರಿನಲ್ಲಿ ನಿಂತಿರುವನು.


ನಾನು ದೇವರ ಬಲದಿಂದಲೇ ದೆವ್ವಗಳನ್ನು ಓಡಿಸುವುದಾದರೆ, ದೇವರ ರಾಜ್ಯವು ನಿಸ್ಸಂದೇಹವಾಗಿ ನಿಮ್ಮ ಬಳಿಗೆ ಬಂದಿದೆಯಲ್ಲಾ.


ನಾನು ದೇವರ ಆತ್ಮನಿಂದ ದೆವ್ವಗಳನ್ನು ಓಡಿಸುವುದಾದರೆ ದೇವರ ರಾಜ್ಯವು ನಿಸ್ಸಂದೇಹವಾಗಿ ನಿಮ್ಮ ಬಳಿಗೆ ಬಂದಿದೆಯಲ್ಲಾ.


ಜನರ ಗುಂಪು ಇದನ್ನು ಕಂಡು ಬೆರಗಾಗಿ, ಮನುಷ್ಯರಿಗೆ ಇಂಥ ಅಧಿಕಾರವನ್ನು ಕೊಟ್ಟ ದೇವರನ್ನು ಕೊಂಡಾಡಿದರು.


ದೇವರು ಸಹ ಸೂಚಕಕಾರ್ಯಗಳಿಂದಲೂ ಅದ್ಭುತಕಾರ್ಯಗಳಿಂದಲೂ ನಾನಾ ವಿಧವಾದ ಮಹತ್ಕಾರ್ಯಗಳಿಂದಲೂ ತಮ್ಮ ಚಿತ್ತಾನುಸಾರವಾಗಿ ದಯಪಾಲಿಸಿದ ಪವಿತ್ರಾತ್ಮರ ವರದಾನಗಳಿಂದಲೂ ಸಾಕ್ಷಿನೀಡಿ ದೃಢಪಡಿಸಿದ್ದಾರೆ.


ನಾನು ಸೂಚಕಕಾರ್ಯಗಳನ್ನೂ, ಅದ್ಭುತಗಳನ್ನೂ, ಮಹತ್ಕಾರ್ಯಗಳನ್ನೂ ನಡೆಸುವುದರಲ್ಲಿ ಸರ್ವ ಸಹನೆಯಲ್ಲಿಯೂ ಸತ್ಯ ಅಪೊಸ್ತಲನಿಗೆ ಇರತಕ್ಕ ಲಕ್ಷಣಗಳನ್ನು ನಿಮ್ಮ ನಡುವೆ ತೋರಿಸಿದೆನು.


ಏಕೆಂದರೆ ರಾಜರಿಗೆ ಈ ಎಲ್ಲಾ ಸಂಗತಿಗಳ ಪರಿಚಯವಿದೆ. ರಾಜರೊಂದಿಗೆ ನಾನು ಸಹ ಭರವಸೆಯಿಂದ ಮಾತನಾಡುತ್ತಿರುವೆನು. ಇವುಗಳಲ್ಲಿ ಯಾವುದೂ ರಾಜರ ಗಮನಕ್ಕೆ ಬಾರದೆ ಹೋಗಿಲ್ಲ ಎಂಬುದು ನನ್ನ ದೃಢ ನಂಬಿಕೆ. ಏಕೆಂದರೆ ಇದು ಮೂಲೆಯಲ್ಲಿ ನಡೆದ ಸಂಗತಿಯಲ್ಲ.


“ನಜರೇತಿನ ಯೇಸುವಿನ ಹೆಸರನ್ನು ವಿರೋಧಿಸಲು ಅನೇಕ ಸಂಗತಿಗಳನ್ನು ಮಾಡಬೇಕೆಂದು ನಾನು ಸಹ ಒಮ್ಮೆ ಯೋಚಿಸಿಕೊಂಡಿದ್ದೆನು.


“ಜಗತ್ತಿನಲ್ಲಿ ಇರುವ ಯೆಹೂದ್ಯರ ಮಧ್ಯದಲ್ಲಿ ದಂಗೆಯೆಬ್ಬಿಸಿ ಪೌಲನೆಂಬ ಈ ಮನುಷ್ಯನು ತೊಂದರೆ ಕೊಡುವವನಾಗಿದ್ದಾನೆಂತಲೂ ನಜರೇತಿನವರ ಪಂಗಡಕ್ಕೆ ಇವನು ನಾಯಕನೆಂದೂ ನಾವು ಕಂಡೆವು.


“ನಾನು, ‘ಸ್ವಾಮಿ, ತಾವು ಯಾರು?’ ಎಂದು ಕೇಳಲು, “ ‘ನೀನು ಹಿಂಸೆಪಡಿಸುತ್ತಿರುವ ನಜರೇತಿನ ಯೇಸುವೇ ನಾನು,’ ಎಂದು ಅವರು ನನಗೆ ಹೇಳಿದರು.


“ಇಸ್ರಾಯೇಲರೇ, ನಮಗೆ ಸಹಾಯಮಾಡಿರಿ! ನಮ್ಮ ಜನರಿಗೂ ನಮ್ಮ ನಿಯಮಕ್ಕೂ ಈ ಸ್ಥಳಕ್ಕೂ ವಿರೋಧವಾಗಿ ಎಲ್ಲಾ ಜನರಿಗೆ ಬೋಧಿಸುತ್ತಿರುವ ಮನುಷ್ಯನು ಇವನೇ. ಅಷ್ಟೇ ಅಲ್ಲ, ಗ್ರೀಕರನ್ನು ದೇವಾಲಯದೊಳಗೆ ಕರೆದುಕೊಂಡು ಬಂದು ಈ ಪವಿತ್ರ ಸ್ಥಳವನ್ನು ಭ್ರಷ್ಟಗೊಳಿಸಿದ್ದಾನೆ,” ಎಂದು ಕೂಗಿ ಹೇಳಿದರು.


ಇಲ್ಲಿಗೆ ತಲುಪಿದಾಗ, ಅವರು ಸಭೆಯನ್ನು ಒಟ್ಟುಕೂಡಿಸಿದರು. ದೇವರು ಅವರಿಗೆ ತಮ್ಮ ಮುಖಾಂತರವಾಗಿ ಮಾಡಿದ್ದನ್ನೂ ಯೆಹೂದ್ಯರಲ್ಲದವರಿಗೂ ದೇವರು ವಿಶ್ವಾಸದ ದ್ವಾರವನ್ನು ತೆರೆದಿರುವುದನ್ನೂ ವರದಿಮಾಡಿದರು.


ಪೌಲನು ಎದ್ದು ನಿಂತು, ಕೈಸನ್ನೆ ಮಾಡಿ ಹೀಗೆ ಹೇಳಿದನು: “ಇಸ್ರಾಯೇಲ್ ಜನರೇ, ದೇವರಲ್ಲಿ ಭಯಭಕ್ತಿಯುಳ್ಳವರೇ, ಕೇಳಿರಿ!


ನಜರೇತಿನ ಯೇಸು ಈ ಸ್ಥಳವನ್ನು ನಾಶಮಾಡಿಬಿಡುತ್ತಾರೆಂದೂ ನಮಗೆ ಒಪ್ಪಿಸಿದ ಮೋಶೆಯ ಪದ್ಧತಿಗಳನ್ನು ಬದಲಾಯಿಸುತ್ತಾರೆಂದೂ ಇವನು ಹೇಳುವುದನ್ನು ನಾವು ಕೇಳಿದ್ದೇವೆ,” ಎಂದು ಅವನ ವಿರುದ್ಧ ಸಾಕ್ಷಿ ಹೇಳಿಸಿದರು.


ಗಮಲಿಯೇಲನು ಸಭೆಯನ್ನುದ್ದೇಶಿಸಿ, “ಇಸ್ರಾಯೇಲರೇ, ಈ ಜನರ ವಿರುದ್ಧ ಮಾಡಬೇಕೆಂದಿರುವುದರ ಬಗ್ಗೆ ಎಚ್ಚರಿಕೆಯುಳ್ಳವರಾಗಿರಿ.


ಜನರನ್ನು ಕಂಡು ಪೇತ್ರನು ಅವರಿಗೆ ಹೇಳಿದ ಮಾತುಗಳಿವು: “ಇಸ್ರಾಯೇಲಿನ ಜನರೇ, ಈ ಘಟನೆಯಿಂದ ನೀವೇಕೆ ಆಶ್ಚರ್ಯಚಕಿತರಾಗಿದ್ದೀರಿ? ನಮ್ಮ ಸ್ವಂತ ಬಲದಿಂದಾಗಲಿ, ಭಕ್ತಿಯಿಂದಾಗಲಿ ಈ ಮನುಷ್ಯನನ್ನು ನಡೆಯುವಂತೆ ಮಾಡಿದೆವೆಂದು ಭಾವಿಸಿ ನಮ್ಮ ಕಡೆಗೆ ಏಕೆ ನೋಡುತ್ತಿರುವಿರಿ?


ಪಿಲಾತನು ಒಂದು ಫಲಕದ ಮೇಲೆ ಶಿರೋನಾಮವನ್ನು ಬರೆಸಿ, ಅದನ್ನು ಶಿಲುಬೆಯ ಮೇಲಿಟ್ಟಿದ್ದನು. ಅದೇನಂದರೆ: ಯೆಹೂದ್ಯರ ಅರಸನಾದ ನಜರೇತಿನ ಯೇಸು.


ಬೇರೆ ಯಾರೂ ಮಾಡದ ಕ್ರಿಯೆಗಳನ್ನು ನಾನು ಅವರ ನಡುವೆ ಮಾಡದೆ ಹೋಗಿದ್ದರೆ ಅವರಿಗೆ ಪಾಪವು ಇರುತ್ತಿರಲಿಲ್ಲ. ಆದರೆ ಈಗ ಅವರು ನನ್ನ ಕ್ರಿಯೆಗಳನ್ನು ಕಂಡೂ ನನ್ನನ್ನೂ ನನ್ನ ತಂದೆಯನ್ನೂ ದ್ವೇಷಮಾಡಿದ್ದಾರೆ.


ಯೇಸು ಲಾಜರನನ್ನು ಸಮಾಧಿಯೊಳಗಿಂದ ಕರೆದು ಅವನನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದಾಗ ಅವರ ಸಂಗಡ ಇದ್ದ ಜನರೇ ಈ ವಿಷಯವನ್ನು ಸಾರುತ್ತಿದ್ದರು.


ಆಗ ಮುಖ್ಯಯಾಜಕರೂ ಫರಿಸಾಯರೂ ಆಲೋಚನಾ ಸಭೆಯನ್ನು ಕೂಡಿಸಿ, “ಈತನು ಅನೇಕ ಸೂಚಕಕಾರ್ಯಗಳನ್ನು ಮಾಡುತ್ತಾನಲ್ಲಾ, ನಾವು ಏನು ಮಾಡೋಣ?


ನನ್ನ ತಂದೆಯ ಕಾರ್ಯಗಳನ್ನು ನಾನು ಮಾಡದಿದ್ದರೆ ನನ್ನನ್ನು ನಂಬಬೇಡಿರಿ.


ಅವರು ದೇವರಿಂದ ಬಂದವರಲ್ಲದಿದ್ದರೆ ಅವರಿಂದ ಏನೂ ಮಾಡಲಾಗುತ್ತಿರಲಿಲ್ಲ,” ಎಂದನು.


ಜನರಲ್ಲಿ ಅನೇಕರು ಯೇಸುವನ್ನು ನಂಬಿ, “ಕ್ರಿಸ್ತನು ಬಂದಾಗ ಈತನು ಮಾಡಿದ್ದಕ್ಕಿಂತ ಹೆಚ್ಚು ಸೂಚಕಕಾರ್ಯಗಳನ್ನು ಮಾಡುವನೋ?” ಎಂದರು.


ನಾಶವಾಗುವ ಆಹಾರಕ್ಕಾಗಿ ದುಡಿಯಬೇಡಿರಿ, ನೀವು ನಿತ್ಯಜೀವಕ್ಕೆ ಉಳಿಯುವ ಆಹಾರಕ್ಕಾಗಿಯೇ ದುಡಿಯಿರಿ. ಅದನ್ನು ಮನುಷ್ಯಪುತ್ರನಾದ ನಾನು ನಿಮಗೆ ಕೊಡುವೆನು. ಇದಕ್ಕಾಗಿ ತಂದೆ ದೇವರು ಮೆಚ್ಚುಗೆಯ ಮುದ್ರೆಯನ್ನು ನನ್ನ ಮೇಲೆ ಹಾಕಿದ್ದಾರೆ,” ಎಂದರು.


ಆ ಜನರು ಯೇಸು ಮಾಡಿದ ಸೂಚಕಕಾರ್ಯವನ್ನು ಕಂಡು, “ಸತ್ಯವಾಗಿಯೂ ಲೋಕಕ್ಕೆ ಬರಬೇಕಾಗಿದ್ದ ಪ್ರವಾದಿಯು ಇವರೇ,” ಎಂದರು.


“ಆದರೆ ನನಗೆ ಯೋಹಾನನಿಗಿಂತಲೂ ಮಹಾ ಸಾಕ್ಷಿ ಉಂಟು. ಹೇಗೆಂದರೆ, ತಂದೆ ನನಗೆ ಮಾಡಿ ಮುಗಿಸಲು ಕೊಟ್ಟ ಕೆಲಸಗಳು, ಅಂದರೆ, ನಾನು ಮಾಡುತ್ತಿರುವ ಈ ಕೆಲಸಗಳೇ, ತಂದೆ ನನ್ನನ್ನು ಕಳಿಹಿಸಿದ್ದಾರೆಂದು ನನ್ನನ್ನು ಕುರಿತು ಸಾಕ್ಷಿ ಕೊಡುತ್ತವೆ.


ಯೇಸು ಅವನಿಗೆ, “ನೀವು ಸೂಚಕಕಾರ್ಯಗಳನ್ನೂ ಅದ್ಭುತಕಾರ್ಯಗಳನ್ನೂ ಕಾಣದ ಹೊರತು ನಂಬುವುದೇ ಇಲ್ಲ,” ಎಂದರು.


ಫಿಲಿಪ್ಪನು ನತಾನಯೇಲನನ್ನು ಕಂಡು, “ಮೋಶೆಯ ನಿಯಮದಲ್ಲಿ ಸೂಚಿಸಿದವರೂ ಪ್ರವಾದಿಗಳೂ ಯಾರನ್ನು ಕುರಿತು ಬರೆದಿದ್ದಾರೋ ಅವರು ನಮಗೆ ಸಿಕ್ಕಿದ್ದಾರೆ. ಅವರೇ ಯೋಸೇಫನ ಪುತ್ರರಾಗಿರುವ ನಜರೇತಿನ ಯೇಸು,” ಎಂದನು.


ಆಗ ಅವರಲ್ಲಿ ಒಬ್ಬನಾದ, ಕ್ಲೆಯೊಫ ಎಂಬುವನು ಯೇಸುವಿಗೆ, “ಇತ್ತೀಚೆಗೆ ಯೆರೂಸಲೇಮಿನೊಳಗೆ ನಡೆದಿರುವ ಘಟನೆಗಳನ್ನು ತಿಳಿಯದ ಪರಸ್ಥಳದವನು ನೀನೊಬ್ಬನೇ ಆಗಿದ್ದೀಯಾ?” ಎಂದು ಕೇಳಿದನು.


ಅಲ್ಲಿ ನಜರೇತ್ ಎಂಬ ಊರಲ್ಲಿ ವಾಸಮಾಡಿದನು. ಹೀಗೆ, “ನಜರಾಯನೆಂಬ ಹೆಸರು ಯೇಸುವಿಗೆ ಬರುವುದು,” ಎಂದು ಪ್ರವಾದಿಗಳು ಹೇಳಿದ ಮಾತು ನೆರವೇರಿತು.


ಹುಳುವಿನಂತಿರುವ ಯಾಕೋಬೇ, ಪುಟ್ಟ ಇಸ್ರಾಯೇಲೇ, ಭಯಪಡಬೇಡ. ನಾನೇ ನಿನಗೆ ಸಹಾಯ ಮಾಡುತ್ತೇನೆ,” ಎಂದು ಯೆಹೋವ ದೇವರು ಹೇಳುತ್ತಾರೆ. ನಿನ್ನ ವಿಮೋಚಕನೂ ಇಸ್ರಾಯೇಲಿನ ಪರಿಶುದ್ಧನೂ ಹೇಳುತ್ತಾರಲ್ಲಾ!


ನಾನು ಆಕಾಶದಲ್ಲಿ ಅದ್ಭುತಗಳನ್ನು, ಭೂಮಿಯಲ್ಲಿ ಸೂಚಕಕಾರ್ಯಗಳನ್ನು, ರಕ್ತ, ಬೆಂಕಿ, ಹಬೆಯನ್ನು ತೋರಿಸುವೆನು.


ಪ್ರತಿಯೊಬ್ಬರೂ ಭಯಭಕ್ತಿಉಳ್ಳವರಾಗಿದ್ದರು. ಅಪೊಸ್ತಲರು ಅನೇಕ ಅದ್ಭುತಕಾರ್ಯಗಳನ್ನೂ ಸೂಚಕಕಾರ್ಯಗಳನ್ನೂ ಮಾಡುತ್ತಿದ್ದರು.


ಆಗ ಪೇತ್ರನು, “ಬೆಳ್ಳಿಬಂಗಾರ ನನ್ನಲ್ಲಿಲ್ಲ, ನನ್ನಲ್ಲಿರುವುದನ್ನು ನಿನಗೆ ಕೊಡುತ್ತೇನೆ. ನಜರೇತಿನ ಕ್ರಿಸ್ತ ಯೇಸುವಿನ ಹೆಸರಿನಲ್ಲಿ, ಎದ್ದು ನಡೆ,” ಎಂದು ಹೇಳಿ,


“ನಜರೇತಿನ ಯೇಸು ಹಾದು ಹೋಗುತ್ತಿದ್ದಾರೆ,” ಎಂದು ಜನರು ಅವನಿಗೆ ಹೇಳಿದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು