ಅಪೊಸ್ತಲರ ಕೃತ್ಯಗಳು 19:9 - ಕನ್ನಡ ಸಮಕಾಲಿಕ ಅನುವಾದ9 ಆದರೆ ಅವರಲ್ಲಿ ಕೆಲವರು ಕಠಿಣ ಹೃದಯದವರಾಗಿ; ಒಡಂಬಡದೆ ಈ ಮಾರ್ಗವನ್ನು ಬಹಿರಂಗವಾಗಿ ದೂಷಿಸಿದರು. ಆದ್ದರಿಂದ ಪೌಲನು ಅವರನ್ನು ಬಿಟ್ಟು, ಶಿಷ್ಯರನ್ನು ತನ್ನೊಂದಿಗೆ ಕರೆದುಕೊಂಡು ಹೋಗಿ, ಅನುದಿನವೂ ತುರನ್ನನ ತರ್ಕಶಾಲೆಯಲ್ಲಿ ಅವರೊಂದಿಗೆ ಚರ್ಚಿಸುತ್ತಾ ಬಂದನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20199 ಕೆಲವರು ತಮ್ಮ ಮನಸ್ಸುಗಳನ್ನು ಕಠಿಣಮಾಡಿಕೊಂಡು ಒಡಂಬಡದೆ ಗುಂಪುಕೂಡಿದ ಜನರ ಮುಂದೆ ಈ ಮಾರ್ಗವು ಕೆಟ್ಟದ್ದೆಂದು ಹೇಳಲು ಅವನು ಅವರನ್ನು ಬಿಟ್ಟುಹೋಗಿ ಶಿಷ್ಯರನ್ನು ಬೇರೆಮಾಡಿ ತುರನ್ನ ಎಂಬುವನ ತರ್ಕಶಾಲೆಯಲ್ಲಿ ಪ್ರತಿದಿನವೂ ವಾದಿಸಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)9 ಆದರೆ ಅವರಲ್ಲಿ ಕೆಲವರು ಹಠಮಾರಿಗಳು; ಅವರು ವಿಶ್ವಾಸವನ್ನು ನಿರಾಕರಿಸಿದ್ದೂ ಅಲ್ಲದೆ ಈ ಹೊಸಮಾರ್ಗವನ್ನು ಸಭೆಯ ಮುಂದೆ ದೂಷಿಸತೊಡಗಿದರು. ಈ ಕಾರಣ ಪೌಲನು ಅವರನ್ನು ಬಿಟ್ಟು ಶಿಷ್ಯರನ್ನು ಕರೆದುಕೊಂಡು ತುರಾನ್ನ ಎಂಬವನ ತರ್ಕಶಾಲೆಯಲ್ಲಿ ಪ್ರತಿದಿನವೂ ಚರ್ಚೆ ನಡೆಸುತ್ತಾ ಬಂದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)9 ಕೆಲವರು ತಮ್ಮ ಮನಸ್ಸುಗಳನ್ನು ಕಠಿಣಮಾಡಿಕೊಂಡು ಒಡಂಬಡದೆ ಗುಂಪುಕೂಡಿದ ಜನರ ಮುಂದೆ ಈ ಮಾರ್ಗವು ಕೆಟ್ಟದ್ದೆಂದು ಹೇಳಲು ಅವನು ಅವರನ್ನು ಬಿಟ್ಟುಹೋಗಿ ಶಿಷ್ಯರನ್ನು ಬೇರೆಮಾಡಿ ತುರನ್ನನ ತರ್ಕಶಾಲೆಯಲ್ಲಿ ಪ್ರತಿದಿನವೂ ವಾದಿಸಿದನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್9 ಆದರೆ ಆ ಯೆಹೂದ್ಯರಲ್ಲಿ ಕೆಲವರು ಮೊಂಡರಾದರು. ಅವರು ನಂಬದೆ ದೇವರ ಮಾರ್ಗವನ್ನು ಜನರೆಲ್ಲರ ಎದುರಿನಲ್ಲಿ ದೂಷಿಸಿದರು. ಆದ್ದರಿಂದ ಪೌಲನು ಏಷ್ಯಾ ಪ್ರಾಂತ್ಯದ ಆ ಯೆಹೂದ್ಯರನ್ನೆಲ್ಲ ಬಿಟ್ಟು, ಯೇಸುವಿನ ಶಿಷ್ಯರನ್ನು ತನ್ನೊಂದಿಗೆ ಕರೆದುಕೊಂಡು ಹೋಗಿ, ತುರನ್ನನ ಶಾಲೆಯಲ್ಲಿ ಪ್ರತಿದಿನವೂ ಚರ್ಚೆ ನಡೆಸಿದನು. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್9 ತ್ಯಾತುರ್ಲ್ಯಾ ಉಲ್ಲ್ಯಾ ಲೊಕಾನಿ ಅಪ್ಲೊ ಮನ್ ಘಟ್ ಕರುನ್ ಘೆಟ್ಲ್ಯಾನಿ, ಅನಿ ವಿಶ್ವಾಸ್ ಕರುಕ್ ನಾತ್, ಸಗ್ಳ್ಯಾ ಲೊಕಾಂಚ್ಯಾ ತಾಂಡ್ಯಾಚ್ಯಾ ಇದ್ರಾಕ್ ತಿರಾನ್ನ್ ಮನ್ತಲ್ಯಾಚ್ಯಾ ಸಾಳೆತ್ ಧನಿಯಾಚ್ಯಾ ವಾಟೆಚ್ಯಾ ವಿಶಯಾತ್ ಬುರ್ಶೆ ಬೊಲ್ಲ್ಯಾನಿ, ತಸೆ ಹೊವ್ನ್ ಪಾವ್ಲುನ್ ತೆಂಕಾ ಸೊಡುನ್ ವಿಶ್ವಾಸಿ ಲೊಕಾಕ್ನಿ ಅಪ್ನಾ ವಾಂಗ್ಡಾ ಬಲ್ವುನ್ ನೆಲ್ಯಾನ್, ಅನಿ ಸದ್ದಿ ತೆಂಕಾ ತುರ್ ಮನ್ತಲ್ಯಾ ಶಿಕ್ವುತಲ್ಯಾ ಖೊಲಿಕ್ ಬಲ್ವುನ್ ಘೆವ್ನ್ ಜಾವ್ನ್ ತೆಂಚ್ಯಾ ವಾಂಗ್ಡಾ ಚರ್ಚಾ ಕರ್‍ಲ್ಯಾನ್. ಅಧ್ಯಾಯವನ್ನು ನೋಡಿ |