Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 16:30 - ಕನ್ನಡ ಸಮಕಾಲಿಕ ಅನುವಾದ

30 ಆಮೇಲೆ ಅವರನ್ನು ಹೊರಗೆ ಕರೆದುಕೊಂಡು ಬಂದು, “ಮಹನೀಯರೇ, ನಾನು ರಕ್ಷಣೆ ಹೊಂದಲು ಏನು ಮಾಡಬೇಕು?” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

30 ಮತ್ತು ಅವರನ್ನು ಹೊರಗೆ ಕರೆದುಕೊಂಡು ಬಂದು; “ಸ್ವಾಮಿಗಳೇ, ನಾನು ರಕ್ಷಣೆಹೊಂದುವುದಕ್ಕೆ ಏನು ಮಾಡಬೇಕೆಂದು?” ಕೇಳಲು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

30 ಅನಂತರ ಅವರನ್ನು ಹೊರಗೆ ಕರೆತಂದು, “ಸ್ವಾಮಿಗಳೇ, ಜೀವೋದ್ಧಾರ ಪಡೆಯಲು ನಾನು ಮಾಡಬೇಕಾದುದು ಏನು?” ಎಂದು ವಿಚಾರಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

30 ಮತ್ತು ಅವರನ್ನು ಹೊರಗೆ ಕರಕೊಂಡು ಬಂದು - ಸ್ವಾವಿುಗಳೇ, ನಾನು ರಕ್ಷಣೆಹೊಂದುವದಕ್ಕೆ ಏನು ಮಾಡಬೇಕೆಂದು ಕೇಳಲು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

30 ಬಳಿಕ ಅವನು ಅವರನ್ನು ಹೊರಗೆ ಕರೆದುಕೊಂಡು ಬಂದು, “ಸ್ವಾಮಿಗಳೇ, ನಾನು ರಕ್ಷಣೆ ಹೊಂದಬೇಕಾದರೆ ಏನು ಮಾಡಬೇಕು?” ಎಂದು ಕೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

30 ಮಾನಾ ತೆಂಕಾ ದೊಗ್ಯಾಕ್ನಿ ಭಾಯ್ರ್ ಬಲ್ವುನ್ ಘೆವ್ನ್ ತೆನಿ, “ಸಾಯ್ಬಾನು, ಮಿಯಾ ದೆವಾಚಿ ರಾಕ್ವನ್ ಘೆವ್ಚೆ ಹೊಲ್ಯಾರ್ ಕಾಯ್ ಕರುಚೆ?” ಮನುನ್ ಇಚಾರ್‍ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 16:30
16 ತಿಳಿವುಗಳ ಹೋಲಿಕೆ  

ಜನರು ಇದನ್ನು ಕೇಳಿದಾಗ ಅವರಿಗೆ ಹೃದಯದಲ್ಲಿ ಅಲಗು ನೆಟ್ಟಂತಾಗಿ, “ಸಹೋದರರೇ, ನಾವೇನು ಮಾಡಬೇಕು?” ಎಂದು ಪೇತ್ರನನ್ನೂ ಉಳಿದ ಅಪೊಸ್ತಲರನ್ನೂ ಕೇಳಿದರು.


“ಆಗ ನಾನು, ‘ಸ್ವಾಮಿ, ನಾನೇನು ಮಾಡಬೇಕು?’ ಎಂದು ಕೇಳಲು, “ ‘ಎದ್ದೇಳು, ದಮಸ್ಕದೊಳಗೆ ಹೋಗು, ನೀನು ಏನೇನು ಮಾಡಬೇಕಾಗಿದೆಯೋ ಅದೆಲ್ಲವನ್ನು ನಿನಗೆ ಅಲ್ಲಿ ಹೇಳಲಾಗುವುದು,’ ಎಂದು ಕರ್ತ ಯೇಸು ನನಗೆ ಹೇಳಿದರು.


“ಪ್ರಿಯ ಜನರೇ, ನೀವಿದನ್ನು ಏಕೆ ಮಾಡುತ್ತಿರುವಿರಿ? ನಾವೂ ನಿಮ್ಮ ಹಾಗೆಯೇ ಮಾನವರು. ಇಂಥಾ ವ್ಯರ್ಥವಾದ ಸಂಗತಿಗಳನ್ನು ಬಿಟ್ಟು ಆಕಾಶವನ್ನೂ ಭೂಮಿಯನ್ನೂ ಸಮುದ್ರವನ್ನೂ ಅದರಲ್ಲಿರುವ ಪ್ರತಿಯೊಂದನ್ನೂ ಸೃಷ್ಟಿಸಿದ ಜೀವಿಸುವ ದೇವರ ಕಡೆಗೆ ತಿರುಗಿಕೊಳ್ಳಿರಿ ಎಂದು ನಿಮಗೆ ಸುವಾರ್ತೆಯನ್ನು ಸಾರುತ್ತಿದ್ದೇವೆ.


ಆಗ ಜನರು, “ಹಾಗಾದರೆ ನಾವೇನು ಮಾಡಬೇಕು?” ಎಂದು ಕೇಳಿದರು.


ನಿಮ್ಮ ಮನಸ್ಸು ದೇವರ ಕಡೆಗೆ ತಿರುಗಿಕೊಂಡದ್ದಕ್ಕೆ ತಕ್ಕ ಫಲಗಳನ್ನು ತೋರಿಸಿರಿ.


ಆಗ ನೀನು ಕರೆದರೆ ಯೆಹೋವ ದೇವರು ಉತ್ತರಕೊಡುವರು. ನೀನು ಕೂಗುವೆ, ಆಗ ಅವರು, ‘ನಾನು ಇಲ್ಲಿ ಇದ್ದೇನೆ,’ ಅನ್ನುವರು. “ನೀನು ನಿನ್ನ ಮಧ್ಯದೊಳಗಿಂದ ದಬ್ಬಾಳಿಕೆಯ ನೊಗವನ್ನೂ, ಬೆರಳ ಸನ್ನೆಯನ್ನೂ, ವ್ಯರ್ಥವಾದ ಸಂಭಾಷಣೆಯನ್ನೂ ತೆಗೆದುಹಾಕಿ,


ಕರುಣೆ ತೋರಿಸದೆ ಇರುವವರಿಗೆ ಕರುಣೆಯಿಲ್ಲದ ನ್ಯಾಯತೀರ್ಪಾಗುವುದು. ಕರುಣೆವುಳ್ಳವರೋ ನ್ಯಾಯತೀರ್ಪಿನ ಮೇಲೆಯೇ ವಿಜಯವನ್ನು ಸಾಧಿಸುವರು.


ಇಂಥಾ ಆಜ್ಞೆಯನ್ನು ಪಡೆದು, ಅವನು ಸೆರೆಮನೆಯ ಒಳಕೋಣೆಯಲ್ಲಿ ಅವರನ್ನು ಹಾಕಿ ಅವರ ಕಾಲುಗಳನ್ನು ಮರದ ದಿಮ್ಮಿಗಳಿಗೆ ಬಂಧಿಸಿದರು.


ಅವಳು, “ಈ ಮನುಷ್ಯರು ಮಹೋನ್ನತ ದೇವರ ದಾಸರು. ರಕ್ಷಣೆಯ ಮಾರ್ಗವನ್ನು ನಿಮಗೆ ಸಾರುತ್ತಾರೆ,” ಎಂದು ಗಟ್ಟಿಯಾಗಿ ಕೂಗುತ್ತಾ ಪೌಲನ ಮತ್ತು ನಮ್ಮ ಹಿಂದೆಯೇ ಬಂದಳು.


ಎದ್ದೇಳು ಪಟ್ಟಣದೊಳಗೆ ಹೋಗು, ನೀನು ಏನು ಮಾಡಬೇಕು ಎಂಬುದನ್ನು ಅಲ್ಲಿ ನಿನಗೆ ತಿಳಿಸಲಾಗುವುದು,” ಎಂದು ಕರ್ತ ಯೇಸು ಹೇಳಿದರು.


ಮನುಷ್ಯನು ದೇವರ ಮುಂದೆ ನೀತಿವಂತನಾಗುವುದು ಹೇಗೆ? ಸ್ತ್ರೀಯಿಂದ ಹುಟ್ಟಿದವನು ಪರಿಶುದ್ಧನಾಗಿರುವುದು ಹೇಗೆ?


ಕರುಣೆಯುಳ್ಳವರು ಧನ್ಯರು, ಅವರು ಕರುಣೆ ಪಡೆಯುವರು.


“ನಾನು ಆಯ್ದುಕೊಳ್ಳುವ ಉಪವಾಸವು ಅನ್ಯಾಯದ ಸರಪಣಿಯನ್ನು ಬಿಚ್ಚುವುದೂ, ಭಾರವಾದ ಹೊರೆಯನ್ನು ಬಿಚ್ಚುವುದೂ, ದಬ್ಬಾಳಿಕೆಯಾದವರನ್ನು ಬಿಡಿಸುವುದೂ, ನೊಗಗಳನ್ನೆಲ್ಲಾ ಮುರಿದುಹಾಕುವುದೂ, ಇವೇ ಅಲ್ಲವೋ?


ದೇವರೇ, ನಾನು ಕಾಣದಿರುವುದನ್ನು ನನಗೆ ಬೋಧಿಸಿರಿ. ನಾನು ತಪ್ಪುಮಾಡಿದ್ದರೂ, ಇನ್ನು ಮೇಲೆ ಅದನ್ನು ಮಾಡುವುದಿಲ್ಲ,’ ಎಂದು ಹೇಳಿದ್ದರೆ ಸರಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು