Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 15:13 - ಕನ್ನಡ ಸಮಕಾಲಿಕ ಅನುವಾದ

13 ಅವರು ಹೇಳಿ ಮುಗಿಸಿದಾಗ, ಯಾಕೋಬನು ಮಾತನಾಡಿ, “ಸಹೋದರರೇ, ನನ್ನ ಮಾತುಗಳನ್ನು ಆಲಿಸಿರಿ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ಅವರು ಮಾತನಾಡುವುದನ್ನು ಮುಗಿಸಿದ ಮೇಲೆ ಯಾಕೋಬನು ಆ ಸಂಗತಿಯನ್ನು ಕುರಿತು ಹೇಳಿದ್ದೇನಂದರೆ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

13 ಇದಾದ ಮೇಲೆ ಯಕೋಬನು ಎದ್ದು ಹೀಗೆಂದನು: “ಸಹೋದರರೇ ಕೇಳಿ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

13 ಅವರು ಮಾತಾಡುವದನ್ನು ಮುಗಿಸಿದ ಮೇಲೆ ಯಾಕೋಬನು ಆ ಪ್ರಸ್ತಾಪವನ್ನು ಹಿಡಿದು ಹೇಳಿದ್ದೇನಂದರೆ -

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

13 ಬಳಿಕ ಯಾಕೋಬನು, “ನನ್ನ ಸಹೋದರರೇ, ನನಗೆ ಕಿವಿಗೊಡಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

13 ಮಾನಾ ತೆನಿ ಬೊಲುನ್ ಹೊಲ್ಲ್ಯಾ ಮಾನಾ ಜಾಕೊಬಾನ್, “ಮಾಜ್ಯಾ ಭಾವಾನು, ಭೆನಿಯಾನು ಮಿಯಾ ಸಾಂಗ್ತಲೆ ಆಯ್ಕಾ,

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 15:13
15 ತಿಳಿವುಗಳ ಹೋಲಿಕೆ  

ಸುಮ್ಮನಿರಬೇಕೆಂದು ಪೇತ್ರನು ಅವರಿಗೆ ಕೈಸನ್ನೆ ಮಾಡಿ ಕರ್ತದೇವರು ಹೇಗೆ ತನ್ನನ್ನು ಸೆರೆಮನೆಯಿಂದ ಬಿಡಿಸಿ ಹೊರಗೆ ಕರೆದುಕೊಂಡು ಬಂದರು ಎಂಬುದನ್ನು ವಿವರಿಸಿದನು. “ಇದನ್ನು ಯಾಕೋಬನಿಗೆ ಹಾಗೂ ಸಹೋದರರಿಗೆ ತಿಳಿಸಿರಿ,” ಎಂದು ಹೇಳಿ ಬೇರೆ ಸ್ಥಳಕ್ಕೆ ಹೊರಟುಹೋದನು.


ದೇವರಿಗೂ ಕರ್ತ ಆಗಿರುವ ಯೇಸು ಕ್ರಿಸ್ತರಿಗೂ ದಾಸನಾಗಿರುವ ಯಾಕೋಬನು, ವಿವಿಧ ದೇಶಗಳಲ್ಲಿ ಚದರಿರುವ ಇಸ್ರಾಯೇಲರ ಹನ್ನೆರಡು ಗೋತ್ರದವರಿಗೆ ಬರೆಯುವುದು: ನಿಮಗೆ ಶುಭವಾಗಲಿ.


ಏಕೆಂದರೆ ಯಾಕೋಬನ ಕಡೆಯಿಂದ ಕೆಲವರು ಬರುವುದಕ್ಕೆ ಮುಂಚೆ ಪೇತ್ರನು ಯೆಹೂದ್ಯರಲ್ಲದವರೊಡನೆ ಊಟಮಾಡುತ್ತಿದ್ದನು. ಅವರು ಬಂದ ಮೇಲೆ ಯೆಹೂದ್ಯರಿಗೆ ಅವನು ಭಯಪಟ್ಟು ಯೆಹೂದ್ಯರಲ್ಲದವರಿಂದ ತನ್ನನ್ನು ಪ್ರತ್ಯೇಕಿಸಿಕೊಂಡನು.


ಸಭೆಯ ಸ್ತಂಭಗಳಂತಿರುವ ನಾಯಕರಾದ ಯಾಕೋಬ, ಪೇತ್ರ ಹಾಗೂ ಯೋಹಾನರು ನನಗೆ ಕೊಡಲಾದ ಕೃಪೆಯನ್ನು ಗ್ರಹಿಸಿಕೊಂಡರು. ಆಗ ಅವರು, ನನಗೂ ಬಾರ್ನಬನಿಗೂ ಅನ್ಯೋನ್ಯತೆಯ ಬಲಗೈಯನ್ನು ಕೊಟ್ಟರು. ಹೀಗೆ ನಾವು ಯೆಹೂದ್ಯರಲ್ಲದವರ ಬಳಿಗೂ ಅವರು ಯೆಹೂದ್ಯರ ಬಳಿಗೂ ಹೋಗುವಂತೆ ತೀರ್ಮಾನವಾಯಿತು.


ನನ್ನ ಪ್ರಿಯರೇ ಇದನ್ನು ತಿಳಿಯಿರಿ, ಪ್ರತಿಯೊಬ್ಬನು ಕಿವಿಗೊಡುವುದರಲ್ಲಿ ತೀವ್ರವಾಗಿಯೂ ಮಾತನಾಡುವುದರಲ್ಲಿ ಮತ್ತು ಕೋಪಿಸುವುದರಲ್ಲಿ ನಿಧಾನವಾಗಿಯೂ ಇರಲಿ.


ಆದರೆ ಕರ್ತ ಯೇಸುವಿನ ಸಹೋದರನಾದ ಯಾಕೋಬನನ್ನಲ್ಲದೆ ಅಪೊಸ್ತಲರಲ್ಲಿ ಬೇರೆ ಯಾರನ್ನೂ ನಾನು ಕಾಣಲಿಲ್ಲ.


“ಸಹೋದರರೇ, ತಂದೆಗಳೇ, ಈಗ ನಾನು ನಿಮಗೆ ಮಾಡುವ ಪ್ರತಿವಾದಕ್ಕೆ ಕಿವಿಗೊಡಿರಿ,” ಎಂದು ಪ್ರಾರಂಭಿಸಿದನು.


ಮರುದಿನ ನಾವೆಲ್ಲರೂ ಪೌಲನೊಂದಿಗೆ ಯಾಕೋಬನನ್ನು ನೋಡಲು ಹೋದೆವು. ಅಲ್ಲಿ ಎಲ್ಲಾ ಸಭೆಹಿರಿಯರೂ ಇದ್ದರು.


ಅದಕ್ಕೆ ಸ್ತೆಫನನು, “ಸಹೋದರರೇ, ತಂದೆಗಳೇ, ನನ್ನ ಮಾತಿಗೆ ಕಿವಿಗೊಡಿರಿ! ನಮ್ಮ ಪಿತೃ ಅಬ್ರಹಾಮನು ಹಾರಾನಿನಲ್ಲಿ ವಾಸಿಸುವುದಕ್ಕಿಂತ ಮೊದಲು ಮೆಸೊಪೊಟೇಮಿಯಾದಲ್ಲಿ ಇದ್ದನು. ಆಗ ಮಹಿಮೆಯ ದೇವರು ಅವನಿಗೆ ದರ್ಶನ ಕೊಟ್ಟು,


“ಪ್ರಿಯರೇ, ಮೂಲಪಿತೃ ದಾವೀದನು ಮರಣಹೊಂದಿದನು; ಸಮಾಧಿಮಾಡಲಾಯಿತು. ಇಂದಿಗೂ ಅವನ ಸಮಾಧಿ ನಮ್ಮಲ್ಲಿದೆ ಎಂಬುದನ್ನು ನಾನು ನಿಮಗೆ ಧೈರ್ಯದಿಂದ ಹೇಳಬಲ್ಲೆ.


“ಇಸ್ರಾಯೇಲ್ ಜನರೇ, ಈ ವಿಷಯವನ್ನು ಕೇಳಿರಿ: ದೇವರು ನಜರೇತಿನ ಯೇಸುಸ್ವಾಮಿಯವರ ಮುಖಾಂತರ ನಿಮ್ಮ ಮಧ್ಯದಲ್ಲಿ ಅದ್ಭುತಕಾರ್ಯಗಳನ್ನೂ ಆಶ್ಚರ್ಯಕಾರ್ಯಗಳನ್ನೂ ಸೂಚಕಕಾರ್ಯಗಳನ್ನೂ ನಡೆಸಿದ್ದರಿಂದ, ಯೇಸು ದೇವರ ಮೆಚ್ಚಿಕೆ ಪಡೆದವರಾಗಿದ್ದಾರೆಂಬುದನ್ನು, ನೀವೇ ತಿಳಿದಿರುವಿರಿ.


ಆಗ ಹನ್ನೊಂದು ಜನರೊಂದಿಗೆ ಪೇತ್ರನು ಎದ್ದು ನಿಂತುಕೊಂಡು, ಜನಸಮೂಹವನ್ನು ಉದ್ದೇಶಿಸಿ ಹೇಳಿದ್ದೇನೆಂದರೆ: “ಯೆಹೂದ್ಯರೇ, ಯೆರೂಸಲೇಮಿನ ಸರ್ವನಿವಾಸಿಗಳೇ, ಇದರ ಬಗ್ಗೆ ನಾನು ವಿವರಿಸುತ್ತೇನೆ, ಕೇಳಿರಿ. ನಾನು ಹೇಳುವುದನ್ನು ಜಾಗರೂಕತೆಯಿಂದ ಆಲಿಸಿರಿ.


ಅಲ್ಲಿ ಸ್ತ್ರೀಯರು ದೂರದಿಂದ ನೋಡುತ್ತಿದ್ದರು. ಅವರಲ್ಲಿ ಮಗ್ದಲದ ಮರಿಯಳು, ಚಿಕ್ಕ ಯಾಕೋಬನ ಮತ್ತು ಯೋಸೆಯ ತಾಯಿ ಮರಿಯಳು, ಸಲೋಮೆಯು ಇದ್ದರು.


ದೇವರು ಯೆಹೂದ್ಯರಲ್ಲದವರೊಳಗಿಂದ ತಮ್ಮ ಹೆಸರಿಗಾಗಿ ಜನರನ್ನು ಆರಿಸಿಕೊಳ್ಳಲು ಹೇಗೆ ದಯೆತೋರಿಸಿದರೆಂದು ಸೀಮೋನನು ಈಗಾಗಲೇ ನಮಗೆ ವಿವರಿಸಿದ್ದಾನೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು