Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 14:17 - ಕನ್ನಡ ಸಮಕಾಲಿಕ ಅನುವಾದ

17 ಆದರೂ ದೇವರು ತಮ್ಮ ಬಗ್ಗೆ ಸಾಕ್ಷಿಕೊಡದೆ ಇರಲಿಲ್ಲ. ಆಕಾಶದಿಂದ ಮಳೆಯನ್ನೂ ಸಕಾಲದಲ್ಲಿ ಬೆಳೆಯನ್ನೂ ನಿಮಗೆ ದಯಪಾಲಿಸಿ ಆಹಾರಕೊಟ್ಟು ನಿಮ್ಮ ಹೃದಯಗಳನ್ನು ಆನಂದದಿಂದ ತುಂಬಿಸಿ ಒಳ್ಳೆಯದನ್ನು ಮಾಡುತ್ತಾ ಬಂದವರು ದೇವರೇ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 ಆದರೆ ದೇವರು ತನ್ನ ಅಸ್ತಿತ್ವವನ್ನು ಅರಿತುಕೊಳ್ಳುವಂತೆ ಸುಕೃತ್ಯಗಳ ಮೂಲಕ ಸಾಕ್ಷಿ ನೀಡುತ್ತಲೇ ಬಂದಿದ್ದಾನೆ; ಆಕಾಶದಿಂದ ಮಳೆಯನ್ನೂ ಸಕಾಲಕ್ಕೆ, ಸುಗ್ಗಿಕಾಲಗಳನ್ನೂ ದಯಪಾಲಿಸಿ, ಆಹಾರ ಕೊಟ್ಟು ನಿಮ್ಮ ಮನಸ್ಸುಗಳನ್ನು ಆನಂದದಿಂದ ತುಂಬಿಸಿ, ಉಪಕಾರಮಾಡುತ್ತಾ ಬಂದವನು ಆತನೇ” ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

17 ಆದರೆ ತಮ್ಮ ಅಸ್ತಿತ್ವವನ್ನು ಅರಿತುಕೊಳ್ಳುವಂತೆ ಸುಕೃತ್ಯಗಳ ಸಾಕ್ಷ್ಯ ನೀಡುತ್ತಲೇ ಬಂದಿದ್ದಾರೆ; ನಿಮಗೆ ಆಕಾಶದಿಂದ ಮಳೆಯನ್ನೂ ಸಕಾಲಕ್ಕೆ ಬೆಳೆಯನ್ನೂ ಕೊಡುತ್ತಾ ಆಹಾರವನ್ನು ಒದಗಿಸಿ, ನಿಮ್ಮ ಹೃದಯವನ್ನು ಪರಮಾನಂದಗೊಳಿಸುತ್ತಾ ಬಂದಿದ್ದಾರೆ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

17 ಆದರೂ ಆತನು ತನ್ನ ವಿಷಯದಲ್ಲಿ ಸಾಕ್ಷಿಕೊಡದೆ ಇರಲಿಲ್ಲ; ನಿಮಗೆ ಆಕಾಶದಿಂದ ಮಳೆಯನ್ನೂ ಸುಗ್ಗೀಕಾಲಗಳನ್ನೂ ದಯಪಾಲಿಸಿ ಆಹಾರಕೊಟ್ಟು ನಿಮ್ಮ ಮನಸ್ಸುಗಳನ್ನು ಆನಂದದಿಂದ ತುಂಬಿಸಿ ಉಪಕಾರ ಮಾಡುತ್ತಾ ಬಂದವನು ಆತನೇ ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

17 ಆದರೆ ತಾನೊಬ್ಬನೇ ನಿಜದೇವರೆಂಬುದನ್ನು ಆತನು ತನ್ನ ಒಳ್ಳೆಯ ಕಾರ್ಯಗಳಿಂದ ನಿರೂಪಿಸುತ್ತಿದ್ದಾನೆ. ಆತನು ನಿಮಗೆ ಆಕಾಶದಿಂದ ಮಳೆಯನ್ನೂ ನಿಮ್ಮ ಆಹಾರಕೋಸ್ಕರ ಸಕಾಲದಲ್ಲಿ ಸುಗ್ಗಿಯನ್ನೂ ದಯಪಾಲಿಸಿ ನಿಮ್ಮ ಹೃದಯಗಳನ್ನು ಆನಂದದಿಂದ ತುಂಬಿಸುತ್ತಿದ್ದಾನೆ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

17 ಖರೆ ಅಪ್ನಿ ಎಕ್ಲೊಚ್ ಖರೊ ದೆವ್ ಮನ್ತಲೆ ತೆನಿ ಅಪ್ಲ್ಯಾ ಬರ್‍ಯಾ ಕಾಮಾನಿ ದಾಕ್ವುಲ್ಯಾನ್, ತೆನಿ ತುಮ್ಕಾ ಮಳ್ಬಕ್ನಾ ಪಾವ್ಸ್ ದಿವ್ನ್ ಜೆವ್ನಾ ಸಾಟ್ನಿ ಸಮಾ ಎಳಾರ್ ಪಿಕ್ ದಿವ್ನ್ ತುಮ್ಚ್ಯಾ ಮನಾಕ್ನಿ ಉಮ್ಮೆದಿನ್ ಭರಿಸಾರ್ಕೆ ಕರ್‍ಲಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 14:17
35 ತಿಳಿವುಗಳ ಹೋಲಿಕೆ  

ಚೀಯೋನಿನ ಜನರೇ, ನಿಮ್ಮ ದೇವರಾದ ಯೆಹೋವ ದೇವರಲ್ಲಿ ಉಲ್ಲಾಸಿಸಿರಿ, ಸಂತೋಷವಾಗಿರಿ. ಏಕೆಂದರೆ ನಿಮಗೆ ಮುಂಗಾರು ಮಳೆಯನ್ನು ಸಾಕಷ್ಟು ಕೊಡುವರು. ಮುಂಗಾರು, ಹಿಂಗಾರು ಮಳೆಗಳನ್ನು ಮೊದಲಿನ ಹಾಗೆ ನಿಮಗೆ ಸುರಿಸುವರು.


ಭೂಮಿಯ ಮೇಲೆ ಮಳೆಯನ್ನು ಕೊಡುತ್ತಾರೆ; ಹೊಲಗಳ ಮೇಲೆ ನೀರನ್ನು ಸುರಿಸುತ್ತಾರೆ.


ನೀವು ನಿಮ್ಮ ಧಾನ್ಯವನ್ನೂ, ಹೊಸ ದ್ರಾಕ್ಷಾರಸವನ್ನೂ, ಎಣ್ಣೆಯನ್ನೂ ಕೂಡಿಸುವಂತೆ ದೇವರು ನಿಮ್ಮ ಭೂಮಿಗೆ ಅದರ ತಕ್ಕ ಕಾಲದಲ್ಲಿ ಮಳೆಯನ್ನೂ, ಮುಂಗಾರು ಹಿಂಗಾರುಗಳನ್ನೂ ಕೊಡುವರು.


ಅದನ್ನು ನಾನು ಹಾಳಾಗಲು ಬಿಡುವೆನು. ಅದರ ಕುಡಿ ಯಾರೂ ಕತ್ತರಿಸುವುದಿಲ್ಲ, ಅಗೆಯುವುದೂ ಇಲ್ಲ, ಅದರಲ್ಲಿ ಮುಳ್ಳು ಕಳೆ ಬೆಳೆಯುವುದು. ಅದರ ಮೇಲೆ ಮಳೆ ಸುರಿಸಬಾರದೆಂದು ಮೋಡಗಳಿಗೆ ಆಜ್ಞಾಪಿಸುವೆನು.”


ಈ ಲೋಕದಲ್ಲಿ ಅಹಂಕಾರಿಗಳಾಗಿರದೆ, ಅಸ್ತಿರವಾದ ಐಶ್ವರ್ಯದ ಮೇಲೆ ನಿರೀಕ್ಷೆಯನ್ನಿಡದೆ ನಮ್ಮ ಸುಖಕ್ಕೋಸ್ಕರ ಎಲ್ಲವನ್ನೂ ಸಮೃದ್ಧಿಯಾಗಿ ದಯಪಾಲಿಸುವ ದೇವರ ಮೇಲೆ ನಿರೀಕ್ಷೆಯನ್ನಿಡಬೇಕೆಂದು ಐಶ್ವರ್ಯವಂತರಿಗೆ ಆಜ್ಞಾಪಿಸು.


ಅವರನ್ನೂ ನನ್ನ ಪರ್ವತಗಳ ಸುತ್ತಣ ಪ್ರದೇಶಗಳನ್ನೂ ಆಶೀರ್ವಾದವನ್ನಾಗಿ ಮಾಡುವೆನು. ಕಾಲಕ್ಕೆ ಸರಿಯಾಗಿ ಮಳೆಯನ್ನು ಸುರಿಸುವೆನು. ದಿವ್ಯಾಶೀರ್ವಾದದ ಮಳೆಯಾಗುವುದು.


ತಮ್ಮ ಹೃದಯದಲ್ಲಿ, ‘ಮುಂಗಾರು ಹಿಂಗಾರು ಮಳೆಯನ್ನು ಅದರದರ ಕಾಲದಲ್ಲಿ ನಮಗೆ ಕೊಡುವಂಥ ಸುಗ್ಗಿಗೆ ನೇಮಕವಾದ ವಾರಗಳನ್ನು ನಮಗೆ ಪ್ರತ್ಯೇಕಿಸುವಂಥ ನಮ್ಮ ದೇವರಾದ ಯೆಹೋವ ದೇವರಿಗೆ ಭಯಪಡೋಣ,’ ಎಂದುಕೊಳ್ಳುವುದಿಲ್ಲ.


ಯೆಹೋವ ದೇವರು ಸರ್ವರಿಗೂ ಒಳ್ಳೆಯವರು. ಅವರ ಅನುಕಂಪವು ತಮ್ಮ ಎಲ್ಲಾ ಸೃಷ್ಟಿಗಳ ಮೇಲೆ ಇದೆ.


ಯೆಹೋವ ದೇವರು ಆಕಾಶವೆಂಬ ತಮ್ಮ ಒಳ್ಳೆಯ ಉಗ್ರಾಣವನ್ನು ನಿಮಗೆ ತೆರೆದು, ನಿಮ್ಮ ಭೂಮಿಗೆ ತಕ್ಕ ಕಾಲದಲ್ಲಿ ಮಳೆಯನ್ನು ಕೊಟ್ಟು, ನಿಮ್ಮ ಕೈಕೆಲಸವನ್ನೆಲ್ಲಾ ಆಶೀರ್ವದಿಸುವರು. ನೀವು ಅನೇಕ ಜನಾಂಗಗಳಿಗೆ ಸಾಲಕೊಡುವಿರೇ ಹೊರತು ಸಾಲ ತೆಗೆದುಕೊಳ್ಳುವುದಿಲ್ಲ.


ನಿಮಗೆ ಮಳೆಯನ್ನು ತಕ್ಕ ಕಾಲದಲ್ಲಿ ಸುರಿಸುವೆನು. ಆಗ ಭೂಮಿಯು ಅದರ ಬೆಳೆಯನ್ನು ಕೊಡುವುದು. ಭೂಮಿಯ ಮರಗಳು ಅವುಗಳ ಫಲವನ್ನು ಕೊಡುವವು.


ಆದರೆ ನಿಮ್ಮ ವೈರಿಗಳನ್ನು ಪ್ರೀತಿಸಿರಿ, ಅವರಿಗೆ ಒಳ್ಳೆಯದನ್ನು ಮಾಡಿರಿ. ಏನನ್ನೂ ತಿರುಗಿ ನಿರೀಕ್ಷಿಸದೆ ಸಾಲ ಕೊಡಿರಿ, ಆಗ ನಿಮ್ಮ ಪ್ರತಿಫಲ ದೊಡ್ಡದಾಗಿರುವುದು. ನೀವು ಮಹೋನ್ನತ ದೇವರ ಮಕ್ಕಳಾಗಿರುವಿರಿ, ಅವರು ಕೃತಜ್ಞತೆಯಿಲ್ಲದವರಿಗೂ ಕೆಟ್ಟವರಿಗೂ ದಯೆಯುಳ್ಳವರಾಗಿದ್ದಾರೆ.


ಜನಾಂಗಗಳ ವ್ಯರ್ಥ ವಿಗ್ರಹಗಳೊಳಗೆ ಮಳೆಯನ್ನು ಸುರಿಸಬಲ್ಲವುಗಳುಂಟೇ? ಆಕಾಶವು ತಾನಾಗಿ ಹದ ಮಳೆಗಳನ್ನು ಕೊಟ್ಟೀತೇ? ಅಲ್ಲ, ನೀವೇ, ನಮ್ಮ ದೇವರಾದ ಯೆಹೋವ ದೇವರು, ನೀವೇ ವೃಷ್ಟಿದಾತರು, ನಾವು ನಿಮ್ಮನ್ನೇ ನಿರೀಕ್ಷಿಸುವೆವು, ನೀವು ಇವುಗಳನ್ನೆಲ್ಲಾ ನಡಿಸುವವರಾಗಿದ್ದೀರಷ್ಟೆ.


ಬಲಿಷ್ಠನೇ, ನೀನು ಕೆಟ್ಟತನದಲ್ಲಿ ಹೆಚ್ಚಳ ಪಡುವುದೇಕೆ? ದೇವರ ದೃಷ್ಟಿಯಲ್ಲಿ ಅಪಕೀರ್ತಿಯಾದವನೇ, ದೇವರ ಅನಂತ ಕೃಪೆಯು ಯಾವಾಗಲೂ ಇರುವದು.


ದೇವರು ಹಿಮಕ್ಕೆ, ‘ಹದವಾಗಿ ಭೂಮಿಗೆ ಬೀಳು’ ಎಂದು ಹೇಳುತ್ತಾರೆ. ಮಳೆಗೆ, ‘ಭೂಮಿಯ ಮೇಲೆ ರಭಸದಿಂದ ಸುರಿ’ ಎಂದು ಆಜ್ಞಾಪಿಸುತ್ತಾರೆ.


ಅವರು ಕೋಟೆ ಪಟ್ಟಣಗಳನ್ನೂ, ರಸವತ್ತಾದ ಭೂಮಿಯನ್ನೂ ವಶಪಡಿಸಿಕೊಂಡರು. ಉತ್ತಮವಾದವುಗಳಿಂದ ತುಂಬಿದ ಮನೆಗಳನ್ನೂ, ಅಗಿದ ಬಾವಿಗಳನ್ನೂ, ದ್ರಾಕ್ಷಿತೋಟಗಳನ್ನೂ, ಓಲಿವ್ ತೋಪುಗಳನ್ನೂ, ಸಮೃದ್ಧಿಯಾದ ಹಣ್ಣಿನ ಮರಗಳನ್ನೂ ಸ್ವಾಧೀನಮಾಡಿಕೊಂಡರು. ಹೀಗೆ ಅವರು ತಿಂದು ತೃಪ್ತಿಪಟ್ಟು, ಪುಷ್ಟಿಯಾಗಿ ನಿಮ್ಮ ಮಹಾ ಉಪಕಾರದಲ್ಲಿ ಆನಂದಿಸುತ್ತಿದ್ದರು.


ಅನೇಕ ದಿವಸಗಳಾದ ತರುವಾಯ, ಮೂರನೆಯ ವರ್ಷದಲ್ಲಿ, ಯೆಹೋವ ದೇವರ ವಾಕ್ಯವು ಎಲೀಯನಿಗೆ ಬಂದಿತು, “ನೀನು ಹೋಗಿ ಅಹಾಬನಿಗೆ ನಿನ್ನನ್ನು ಪ್ರಕಟಿಸಿಕೋ. ಆಗ ನಾನು ಭೂಮಿಯ ಮೇಲೆ ಮಳೆಯನ್ನು ಕಳುಹಿಸುವೆನು,” ಎಂದು ಹೇಳಿದರು.


ಹೀಗೆ ಮಾಡಿದರೆ, ನೀವು ಪರಲೋಕದಲ್ಲಿರುವ ನಿಮ್ಮ ತಂದೆಗೆ ಮಕ್ಕಳಾಗುವಿರಿ. ಅವರು ಕೆಟ್ಟವರ ಮೇಲೆಯೂ ಒಳ್ಳೆಯವರ ಮೇಲೆಯೂ ತಮ್ಮ ಸೂರ್ಯನು ಉದಯಿಸುವಂತೆ ಮಾಡುತ್ತಾರೆ. ನೀತಿವಂತರ ಮೇಲೂ ಅನೀತಿವಂತರ ಮೇಲೂ ಮಳೆ ಸುರಿಸುತ್ತಾರೆ.


ಆದರೆ ಉತ್ಸಾಹವು, ಸಂತೋಷವು, ದನ ಕೊಳ್ಳುವುದು, ಕುರಿ ಕಡಿಯುವುದು, ಮಾಂಸವನ್ನು ತಿನ್ನುವುದು, ದ್ರಾಕ್ಷಾರಸ ಕುಡಿಯುವುದು, ನಾಳೆ ಸಾಯುತ್ತೇವೆಂದು ತಿಂದು ಕುಡಿಯುವುದೇ ನಿಮ್ಮ ಕಾರ್ಯ.


ಈ ರೀತಿಯಾಗಿ ದೇವರು ದೇಶಗಳನ್ನು ಆಳುತ್ತಾರೆ ಸಮೃದ್ಧಿಯಾಗಿ ದೇವರು ಆಹಾರ ಕೊಡುತ್ತಾರೆ.


ಧಾನ್ಯವೂ ಹೊಸ ದ್ರಾಕ್ಷಾರಸವೂ ಸುಗ್ಗಿಕಾಲದಲ್ಲಿ ಸಮೃದ್ಧಿಯಾದಾಗ ಇರುವುದಕ್ಕಿಂತಲೂ ಅಧಿಕವಾದ ಆನಂದವನ್ನು ನೀವು ನನ್ನ ಹೃದಯದಲ್ಲಿ ಇಟ್ಟಿದ್ದೀರಿ.


ನಿಮಗೆ ತಿಳಿದಿಲ್ಲವೋ? ನೀವು ಕೇಳಲಿಲ್ಲವೋ? ಆದಿಯಿಂದಲೇ ನಿಮಗೆ ತಿಳಿದಿಲ್ಲವೋ? ಭೂಮಿಯು ಸ್ಥಾಪಿತವಾದಂದಿನಿಂದ ನಿಮಗೆ ಅರ್ಥವಾಗಲಿಲ್ಲವೋ?


ಹೀಗೆ ಹೇಳಿದರೂ ಆ ಜನಸಮೂಹ ಅವರಿಗೆ ಬಲಿಯರ್ಪಿಸುವುದನ್ನು ತಡೆಯಲು ಕಷ್ಟವಾಯಿತು.


ದೇವರು ಒಬ್ಬ ಮನುಷ್ಯನಿಂದ ಎಲ್ಲಾ ದೇಶಗಳನ್ನು ಸೃಷ್ಟಿಸಿ, ಜನರು ಇಡೀ ಭೂಲೋಕವನ್ನು ತುಂಬಿಕೊಳ್ಳುವಂತೆ ಮಾಡಿದರು; ಅವರವರು ಇರತಕ್ಕ ಕಾಲಾವಧಿಯನ್ನೂ ವಾಸಿಸಲು ನಿರ್ದಿಷ್ಟ ಸ್ಥಳಗಳನ್ನೂ ನೇಮಿಸಿದ್ದಾರೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು