Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 13:52 - ಕನ್ನಡ ಸಮಕಾಲಿಕ ಅನುವಾದ

52 ಶಿಷ್ಯರು ಬಹಳ ಸಂತೋಷದಿಂದಲೂ ಪವಿತ್ರಾತ್ಮ ದೇವರಿಂದಲೂ ತುಂಬಿದವರಾದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

52 ಶಿಷ್ಯರಾದವರು ಸಂತೋಷಭರಿತರೂ, ಪವಿತ್ರಾತ್ಮಭರಿತರೂ ಆಗಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

52 ಭಕ್ತ ವಿಶ್ವಾಸಿಗಳಾದರೋ ಪರಮಾನಂದಪಟ್ಟರು, ಪವಿತ್ರಾತ್ಮಭರಿತರಾದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

52 ಶಿಷ್ಯರಾದವರು ಸಂತೋಷಪೂರ್ಣರೂ ಪವಿತ್ರಾತ್ಮಭರಿತರೂ ಆದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

52 ಆದರೆ ಯೇಸುವಿನ ಶಿಷ್ಯರು ಸಂತೋಷವಾಗಿದ್ದರು ಮತ್ತು ಪವಿತ್ರಾತ್ಮಭರಿತರಾಗಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

52 ಖರೆ ಅಂತಿಯೊಕ್ಯಾತ್ಲಿ ದೆವಾಚಿ ಲೊಕಾ ಕುಶಿನ್ ಹೊತ್ತಿ ಅನಿ ಪವಿತ್ರ್ ಆತ್ಮ್ಯಾನ್ ಭರುನ್ ಹೊತ್ತಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 13:52
18 ತಿಳಿವುಗಳ ಹೋಲಿಕೆ  

ನೀವು ಬಹು ಹಿಂಸೆಯಿಂದಲೂ ಪವಿತ್ರಾತ್ಮ ಪ್ರೇರಿತ ಆನಂದದಿಂದಲೂ ವಾಕ್ಯವನ್ನು ಅಂಗೀಕರಿಸಿ ನಮ್ಮನ್ನೂ ಕರ್ತ ಯೇಸುವನ್ನೂ ಅನುಸರಿಸುವವರಾಗಿದ್ದೀರಿ.


ನಿರೀಕ್ಷೆಯ ದೇವರು, ನೀವು ಪವಿತ್ರಾತ್ಮನ ಶಕ್ತಿಯಿಂದ ನಿಮ್ಮ ನಿರೀಕ್ಷೆಯನ್ನು ಹೆಚ್ಚಿಸಿ, ನೀವು ನಿಮ್ಮ ವಿಶ್ವಾಸದಿಂದ ಸಕಲ ಸಂತೋಷದಿಂದಲೂ ಸಮಾಧಾನದಿಂದಲೂ ಪ್ರವಾಹಿಸುವಂತೆ ಮಾಡಲಿ.


ಪವಿತ್ರಾತ್ಮರ ಫಲವೇನೆಂದರೆ: ಪ್ರೀತಿ, ಆನಂದ, ಸಮಾಧಾನ, ಸಹನೆ, ದಯೆ, ಸದ್ಗುಣ, ನಂಬಿಗಸ್ತಿಕೆ,


ಹೀಗೆ ಪ್ರಾರ್ಥನೆ ಮಾಡಿದ ತರುವಾಯ ಅವರು ನೆರೆದಿದ್ದ ಸ್ಥಳವು ಕಂಪನಗೊಂಡಿತು. ಅವರೆಲ್ಲರೂ ಪವಿತ್ರಾತ್ಮಭರಿತರಾದರು ಮತ್ತು ಧೈರ್ಯದಿಂದ ದೇವರ ವಾಕ್ಯವನ್ನು ಸಾರತೊಡಗಿದರು.


ಅವರು ಘೋರ ಹಿಂಸೆಯ ನಡುವೆಯಿದ್ದರೂ ಕಡುಬಡತನದಲ್ಲಿ ಬಳಲುತ್ತಿದ್ದರೂ ಅವರು ಬಹಳ ಸಂತೋಷದಿಂದ, ಉದಾರಮನಸ್ಸಿನಿಂದ ಕೊಡುವವರಾಗಿದ್ದಾರೆ.


ಅಷ್ಟು ಮಾತ್ರವೇ ಅಲ್ಲ, ನಮ್ಮ ಕಷ್ಟಸಂಕಟಗಳಲ್ಲಿಯೂ ಸಂತೋಷ ಪಡುವವರಾಗಿರುತ್ತೇವೆ. ಏಕೆಂದರೆ ಕಷ್ಟಸಂಕಟವು ತಾಳ್ಮೆಯನ್ನು ಉಂಟುಮಾಡುತ್ತದೆಂದೂ


ಅವರೆಲ್ಲರೂ ಪವಿತ್ರಾತ್ಮಭರಿತರಾದರು. ಮಾತ್ರವಲ್ಲದೆ ಪವಿತ್ರಾತ್ಮ ದೇವರು ಕೊಟ್ಟ ಪ್ರೇರಣೆಯ ಪ್ರಕಾರ ಬೇರೆ ಬೇರೆ ಭಾಷೆಗಳಲ್ಲಿ ಮಾತನಾಡಲು ಪ್ರಾರಂಭಿಸಿದರು.


ಸಂತೋಷಪಟ್ಟು ಆನಂದಿಸಿರಿ. ಏಕೆಂದರೆ ಪರಲೋಕದಲ್ಲಿ ನಿಮಗೆ ಮಹಾ ಪ್ರತಿಫಲ ಸಿಕ್ಕುವುದು. ಅವರು ನಿಮಗಿಂತ ಮುಂಚೆ ಇದ್ದ ಪ್ರವಾದಿಗಳನ್ನು ಸಹ ಇದೇ ರೀತಿಯಲ್ಲಿ ಹಿಂಸೆಪಡಿಸಿದರು.


ನೀವು ಕ್ರಿಸ್ತ ಯೇಸುವಿನ ಬಾಧೆಗಳಲ್ಲಿ ಪಾಲುಗಾರರಾಗಿರುವುದರಿಂದ ಸಂತೋಷವುಳ್ಳವರಾಗಿರಿ. ಆಗ ಕ್ರಿಸ್ತ ಯೇಸುವಿನ ಮಹಿಮೆಯ ಪ್ರತ್ಯಕ್ಷತೆಯಲ್ಲಿ ನೀವು ಸಂತೋಷಪಟ್ಟು ಅತ್ಯಂತ ಉಲ್ಲಾಸಗೊಳ್ಳುವಿರಿ.


ನನ್ನ ಪ್ರಿಯರೇ, ನಿಮ್ಮ ನಂಬಿಕೆಯು ವಿವಿಧ ಕಷ್ಟಗಳಿಗೆ ಗುರಿಯಾಗುವಾಗ ಅವುಗಳನ್ನು ಸಂತೋಷದಿಂದ ಎಣಿಸಿಕೊಳ್ಳಿರಿ.


ಏಕೆಂದರೆ ತಿನ್ನುವುದೂ ಕುಡಿಯುವುದೂ ದೇವರ ರಾಜ್ಯವಲ್ಲ. ನೀತಿ, ಸಮಾಧಾನ, ಪವಿತ್ರಾತ್ಮರಲ್ಲಿರುವ ಆನಂದವೂ ಆಗಿದೆ.


ಆದ್ದರಿಂದ ಯೇಸುವಿನ ನಾಮದ ನಿಮಿತ್ತ ಅವಮಾನಪಡಲು ತಾವು ಯೋಗ್ಯರಾದೆವಲ್ಲಾ ಎಂದು ಅಪೊಸ್ತಲರು ಸಂತೋಷಪಡುತ್ತಾ ನ್ಯಾಯಸಭೆಯಿಂದ ಹೊರಗೆ ಹೋದರು.


ಪ್ರತಿದಿನವೂ ದೇವಾಲಯದಲ್ಲಿ ಒಮ್ಮನಸ್ಸಿನಿಂದ ಸಭೆ ಕೂಡಿಬರುವುದನ್ನು ಕ್ರಮವಾಗಿ ಮುಂದುವರೆಸಿದರು. ತಮ್ಮ ಮನೆಗಳಲ್ಲಿ ರೊಟ್ಟಿ ಮುರಿಯುತ್ತಾ ಆನಂದದಿಂದಲೂ ಸರಳ ಹೃದಯದಿಂದಲೂ ಊಟಮಾಡುತ್ತಿದ್ದರು.


ಯೂದಾಯದಲ್ಲಿ ವಾಸಿಸುತ್ತಿದ್ದ ಸಹೋದರರಿಗೆ ಸಹಾಯ ಒದಗಿಸಲು ಅನುಕೂಲಸ್ಥರಾದ ಶಿಷ್ಯರು ತಮ್ಮ ಶಕ್ತ್ಯಾನುಸಾರ ಕೊಡಲು ನಿರ್ಧರಿಸಿದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು