Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 12:7 - ಕನ್ನಡ ಸಮಕಾಲಿಕ ಅನುವಾದ

7 ಫಕ್ಕನೆ ದೇವದೂತನೊಬ್ಬನು ಪ್ರತ್ಯಕ್ಷನಾಗಲು ಕೋಣೆಯೆಲ್ಲಾ ಪ್ರಕಾಶಮಯವಾಯಿತು. ಅವನು ಪೇತ್ರನನ್ನು ತಟ್ಟಿ ಎಬ್ಬಿಸಿ, “ಬೇಗ ಎದ್ದೇಳು!” ಎಂದನು. ಪೇತ್ರನ ಕೈಗಳಿಗೆ ಬಂಧಿಸಿದ್ದ ಸರಪಣಿಗಳು ಕಳಚಿಬಿದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 ಫಕ್ಕನೆ ಕರ್ತನ ದೂತನು ಪೇತ್ರನೆದುರಿಗೆ ನಿಂತನು; ಅವನಿದ್ದ ಕೋಣೆಯಲ್ಲಿ ಬೆಳಕು ಹೊಳೆಯಿತು. ಅವನು ಪೇತ್ರನ ಪಕ್ಕೆಯನ್ನು ತಟ್ಟಿ ಎಬ್ಬಿಸಿ; “ತಟ್ಟನೆ ಏಳು” ಅಂದನು. ಆಗಲೇ ಅವನ ಕೈಗಳಿಗೆ ಹಾಕಿದ್ದ ಸರಪಣಿಗಳು ಕಳಚಿಬಿದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

7 ಫಕ್ಕನೆ ದೇವದೂತನೊಬ್ಬನು ಕಾಣಿಸಿಕೊಂಡನು. ಆ ಕೋಣೆಯೆಲ್ಲಾ ಪ್ರಕಾಶಮಯವಾಯಿತು. ದೂತನು ಪೇತ್ರನ ಭುಜವನ್ನು ತಟ್ಟಿ, ಎಬ್ಬಿಸಿ, “ಬೇಗನೆ ಏಳು,” ಎಂದನು. ಆ ಕ್ಷಣವೇ ಪೇತ್ರನ ಕೈಗಳಿಗೆ ಕಟ್ಟಿದ್ದ ಸರಪಣಿಗಳು ಕಳಚಿಬಿದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

7 ಫಕ್ಕನೆ ಕರ್ತನ ದೂತನು ಪೇತ್ರನೆದುರಿಗೆ ನಿಂತನು. ಅವನಿದ್ದ ಕೋಣೆಯಲ್ಲಿ ಬೆಳಕು ಹೊಳೆಯಿತು. ಅವನು ಪೇತ್ರನನ್ನು ಪಕ್ಕೆ ತಟ್ಟಿ ಎಬ್ಬಿಸಿ - ತಟ್ಟನೆ ಏಳು ಅಂದನು. ಆಗಲೇ ಅವನ ಕೈಗಳಿಗೆ ಹಾಕಿದ್ದ ಸರಪಣಿಗಳು ಕಳಚಿಬಿದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

7 ಇದ್ದಕ್ಕಿದ್ದಂತೆ, ಪ್ರಭುವಿನ ದೂತನೊಬ್ಬನು ಅಲ್ಲಿ ನಿಂತುಕೊಂಡನು. ಬೆಳಕು ಕೋಣೆಯಲ್ಲಿ ಪ್ರಕಾಶಿಸಿತು. ದೇವದೂತನು ಪೇತ್ರನ ಪಕ್ಕೆಯನ್ನು ಮುಟ್ಟಿ ಅವನನ್ನು ಎಬ್ಬಿಸಿ, “ಬೇಗನೆ ಎದ್ದೇಳು!” ಎಂದನು. ಆ ಕೂಡಲೆ ಸರಪಣಿಗಳು ಪೇತ್ರನ ಕೈಗಳಿಂದ ಕಳಚಿಬಿದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

7 ಎಗ್ದಮ್, ಧನಿಯಾಚೊ ದುತ್ ಥೈ ಇಬೆ ರ್‍ಹಾಲೊ, ತ್ಯಾ ಖೊಲಿತ್ ಉಜ್ವೊಡ್ ಹೊಲೊ, ದೆವ್ ದುತಾನ್ ಪೆದ್ರುಕ್ ಆಪ್ಡುನ್ ಉಟ್ವುನ್ “ಲಗ್ಗುನಾ ಉಟ್!” ಮಟ್ಲ್ಯಾನ್, ತನ್ನಾ ತಾಬೊಡ್ತೊಬ್ ತೆಚ್ಯಾ ಹಾತಿಚಿ ಸರ್ಪೊಳಿಯಾ ಸುಟುನ್ ಪಡ್ಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 12:7
37 ತಿಳಿವುಗಳ ಹೋಲಿಕೆ  

ಆದರೆ ರಾತ್ರಿಯಲ್ಲಿ ಕರ್ತದೇವರ ದೂತನೊಬ್ಬನು ಸೆರೆಮೆನೆಯ ದ್ವಾರಗಳನ್ನು ತೆರೆದು ಅವರನ್ನು ಹೊರಗೆ ನಡೆಸಿಕೊಂಡು ಬಂದು,


ಆಗ ತಕ್ಷಣವೇ ಭೀಕರವಾದ ಭೂಕಂಪವಾಗಿ ಸೆರೆಮನೆಯ ಅಸ್ತಿವಾರವು ಕದಲಿತು. ಕೂಡಲೇ ಸೆರೆಮನೆಯ ಎಲ್ಲಾ ಬಾಗಿಲುಗಳು ತೆರೆದವು. ಎಲ್ಲರನ್ನು ಬಂಧಿಸಿದ್ದ ಸರಪಣಿಗಳು ಸಡಿಲಗೊಂಡವು.


ಅವರು ದಬ್ಬಾಳಿಕೆಯಾದ ನ್ಯಾಯತೀರಿಸುತ್ತಾರೆ, ಹಸಿದವರಿಗೆ ಆಹಾರವನ್ನು ಕೊಡುತ್ತಾರೆ. ಯೆಹೋವ ದೇವರು ಸೆರೆಯವರನ್ನು ಬಿಡಿಸುತ್ತಾರೆ.


ಕತ್ತಲೆಯೊಳಗಿಂದಲೂ, ಮರಣದ ನೆರಳಿನಿಂದಲೂ ದೇವರು ಅವರನ್ನು ಹೊರಗೆ ತಂದು ಅವರ ಬಂಧನಗಳನ್ನು ಮುರಿದುಬಿಟ್ಟರು.


ದೇವರಿಗೆ ಭಯಪಡುವವರ ಸುತ್ತಲೂ ಯೆಹೋವ ದೇವರ ದೂತನು ಇಳಿದುಕೊಂಡು ಅವರನ್ನು ಕಾಪಾಡುತ್ತಾನೆ.


ಆಗ ಕೊರ್ನೇಲ್ಯನು, “ನಾಲ್ಕು ದಿನಗಳ ಹಿಂದೆ ಈ ಸಮಯದಲ್ಲಿ ಅಂದರೆ, ಮಧ್ಯಾಹ್ನ ಮೂರು ಗಂಟೆಯ ಸಮಯದಲ್ಲಿ ನಾನು ನನ್ನ ಮನೆಯಲ್ಲಿದ್ದುಕೊಂಡು ಪ್ರಾರ್ಥನೆ ಮಾಡುತ್ತಿದ್ದೆನು. ಆಗ ಫಕ್ಕನೆ ಹೊಳೆಯುತ್ತಿರುವ ವಸ್ತ್ರ ಧರಿಸಿದ್ದ ಒಬ್ಬನು ನನ್ನೆದುರು ಬಂದು ನಿಂತುಕೊಂಡನು.


ಆದ್ದರಿಂದ ಹೀಗೆ ಹೇಳಲಾಗಿದೆ: “ನಿದ್ರೆ ಮಾಡುವವನೇ, ಎಚ್ಚರವಾಗು, ಸತ್ತವರಿಂದ ಎದ್ದೇಳು, ಕ್ರಿಸ್ತನು ನಿನ್ನ ಮೇಲೆ ಪ್ರಕಾಶಿಸುವನು.”


ಆದರೆ ದೇವರು ಯೇಸುವನ್ನು ಮರಣ ವೇದನೆಯಿಂದ ಬಿಡಿಸಿ ಜೀವಂತವಾಗಿ ಎಬ್ಬಿಸಿದರು. ಏಕೆಂದರೆ ಯೇಸುವನ್ನು ಹಿಡಿದಿಟ್ಟುಕೊಂಡಿರಲು ಮರಣಕ್ಕೆ ಸಾಧ್ಯವಾಗಲಿಲ್ಲ.


ಅವರು ಬಹಳವಾಗಿ ಗಲಿಬಿಲಿಗೊಂಡರು. ಆಗ ಮಿಂಚಿನಂತೆ ಹೊಳೆಯುವ ವಸ್ತ್ರಗಳನ್ನು ಧರಿಸಿದ್ದ ಇಬ್ಬರು ಪುರುಷರು ಫಕ್ಕನೆ ಅವರ ಬಳಿ ನಿಂತಿದ್ದರು.


ಆಗ ಕರ್ತದೇವರ ದೂತನು ಅವರಿಗೆ ಪ್ರತ್ಯಕ್ಷನಾದನು. ಕರ್ತದೇವರ ಮಹಿಮೆಯು ಅವರ ಸುತ್ತಲೂ ಪ್ರಕಾಶಿಸಿತು, ಅವರು ಬಹಳವಾಗಿ ಹೆದರಿದರು.


ನಾನು ಯೆಹೋವ ದೇವರಿಗೆ ವಿರೋಧವಾಗಿ ಪಾಪಮಾಡಿದ್ದರಿಂದ ಅವರು ನನ್ನ ವ್ಯಾಜ್ಯವಾಡಿ ನನ್ನ ನ್ಯಾಯವನ್ನು ನಡೆಸುವ ತನಕ ಅವರ ಕೋಪವನ್ನು ತಾಳುವೆನು. ಆತನು ನನ್ನನ್ನು ಬೆಳಕಿಗೆ ತರುವನು. ಆತನ ನೀತಿಯನ್ನು ನೋಡುವೆನು.


ನನ್ನ ದೇವರು ತಮ್ಮ ದೂತನನ್ನು ಕಳುಹಿಸಿ, ನನಗೆ ಯಾವ ಹಾನಿಯೂ ಆಗದಂತೆ ಸಿಂಹಗಳ ಬಾಯಿಗಳನ್ನು ಮುಚ್ಚಿಹಾಕಿದ್ದಾರೆ. ಏಕೆಂದರೆ ಅವರ ಮುಂದೆ ನಾನು ಯಥಾರ್ಥನೆಂದು ಗೋಚರವಾಗಿದ್ದೇನೆ. ಅರಸನೇ, ನಿನ್ನ ಮುಂದೆಯೂ ಸಹ ನಾನು ಯಾರಿಗೂ ತಪ್ಪನ್ನು ಮಾಡಲಿಲ್ಲ,” ಎಂದು ಹೇಳಿದನು.


ತಿರುಗಿ ಎರಡನೆಯ ಸಾರಿ ಯೆಹೋವ ದೇವರ ದೂತನು ಬಂದು, ಅವನನ್ನು ತಟ್ಟಿ ಅವನಿಗೆ, “ನೀನೆದ್ದು ತಿನ್ನು, ಏಕೆಂದರೆ ನೀನು ಬಹುದೂರ ಪ್ರಯಾಣ ಮಾಡಬೇಕಾಗಿದೆ,” ಎಂದನು.


ಹೆರೋದನು ದೇವರಿಗೆ ಸಲ್ಲಿಸಬೇಕಾದ ಮಹಿಮೆ ಸಲ್ಲಿಸದೇ ಹೋದದ್ದರಿಂದ ಕೂಡಲೇ ಒಬ್ಬ ದೇವದೂತನು ಅವನನ್ನು ಹೊಡೆಯಲು ಅವನು ಹುಳ ಬಿದ್ದು ಸತ್ತುಹೋದನು.


ಸೌಲನು ಪ್ರಯಾಣ ಮಾಡುತ್ತಾ ದಮಸ್ಕಕ್ಕೆ ಸಮೀಪ ಬಂದಾಗ, ಫಕ್ಕನೆ ಪರಲೋಕದಿಂದ ಒಂದು ಬೆಳಕು ಅವನ ಸುತ್ತಲೂ ಹೊಳೆಯಿತು.


ಅವರ ತೇಜಸ್ಸು ಸೂರ್ಯೋದಯದ ಹಾಗಿತ್ತು. ಕಿರಣಗಳು ಅವರ ಹಸ್ತಗಳಿಂದ ಮಿಂಚಿದವು. ಅದರಲ್ಲಿ ಅವರ ಬಲ ಅಡಗಿತ್ತು.


ಇಸ್ರಾಯೇಲಿನ ದೇವರ ಮಹಿಮೆಯು ಪೂರ್ವಮಾರ್ಗವಾಗಿ ಬಂದಿತು ಮತ್ತು ಅವರ ಧ್ವನಿಯು ಹರಿಯುವ ನೀರಿನ ಘರ್ಜನೆಯಂತಿತ್ತು; ಭೂಮಿಯು ಅವರ ಮಹಿಮೆಯಿಂದ ಪ್ರಕಾಶಿಸುತ್ತಿತ್ತು.


ಏಳು, ಪ್ರಕಾಶಿಸು. ಏಕೆಂದರೆ ನಿನ್ನ ಮೇಲೆ ಬೆಳಕು ಬಂತು, ಯೆಹೋವ ದೇವರ ಮಹಿಮೆಯು ನಿನ್ನ ಮೇಲೆ ಉದಯವಾಯಿತು.


ಯೆಹೋವ ದೇವರೇ, ನಿಜವಾಗಿ ನಾನು ನಿಮ್ಮ ಸೇವಕನು; ಹೌದು, ನನ್ನ ತಾಯಿ ನಿಮಗೆ ಸೇವೆಮಾಡಿದಂತೆ ನಾನು ಸಹ ನಿಮ್ಮ ಸೇವಕನು; ನೀವು ನನ್ನ ಬಂಧನಗಳಿಂದ ನನ್ನನ್ನು ಬಿಡಿಸಿದ್ದೀರಿ.


ಅವನು ಜಾಲೀಗಿಡದ ಕೆಳಗೆ ಮಲಗಿಕೊಂಡು ನಿದ್ರೆಮಾಡಿದನು. ಆಗ ಒಬ್ಬ ದೂತನು ಅವನನ್ನು ತಟ್ಟಿ, ಅವನಿಗೆ, “ಎದ್ದು ತಿನ್ನು,” ಎಂದನು.


ಇದಾದನಂತರ ಮಹಾ ಅಧಿಕಾರವುಳ್ಳ ಮತ್ತೊಬ್ಬ ದೂತನು ಪರಲೋಕದಿಂದ ಕೆಳಗೆ ಇಳಿದು ಬರುವುದನ್ನು ಕಂಡೆನು. ಅವನ ತೇಜಸ್ಸಿನಿಂದ ಭೂಮಿಯು ಬೆಳಗಿತು.


ಈ ದೇವದೂತರೆಲ್ಲರೂ ರಕ್ಷಣೆಯನ್ನು ಬಾಧ್ಯವಾಗಿ ಹೊಂದಬೇಕಾಗಿರುವವರ ಸೇವೆಗೋಸ್ಕರ ಕಳುಹಿಸಲಾದ ಸೇವೆಯ ಆತ್ಮಗಳು ಅಲ್ಲವೇ?


ಹೆರೋದನು ಅವನನ್ನು ವಿಚಾರಣೆಗೆ ತರಲಿಕ್ಕಿದ್ದ ದಿನದ ಹಿಂದಿನ ರಾತ್ರಿ ಪೇತ್ರನು ಸರಪಣಿಗಳಿಂದ ಬಂಧಿಸಲಾಗಿ ಇಬ್ಬರು ಸಿಪಾಯಿಗಳ ಮಧ್ಯೆ ನಿದ್ರಿಸುತ್ತಿದ್ದನು. ಕಾವಲುಗಾರರು ದ್ವಾರದ ಬಳಿಯಲ್ಲಿ ಕಾಯುತ್ತಿದ್ದರು.


ನಿನ್ನ ಹಾರುವ ಬಾಣಗಳ ಬೆಳಗಿಗೂ, ನಿನ್ನ ಮಿಂಚುವ ಈಟಿಯ ಹೊಳಪಿಗೂ ಸೂರ್ಯ ಚಂದ್ರರು ಆಕಾಶದಲ್ಲಿ ಸ್ಥಿರವಾಗಿದ್ದಾರೆ.


“ಹಿಜ್ಕೀಯನೇ, “ಈ ವರ್ಷದಲ್ಲಿ ತನ್ನಷ್ಟಕ್ಕೆ ತಾನೇ ಬೆಳೆದದ್ದನ್ನೂ ಎರಡನೆಯ ವರ್ಷದಲ್ಲಿ ಅದರಿಂದ ಮೊಳೆತದ್ದನ್ನೂ ತಿನ್ನುವಿರಿ. ಆದರೆ ಮೂರನೆಯ ವರ್ಷದಲ್ಲಿ ನೀವು ಬೀಜವನ್ನು ಬಿತ್ತಿ ಕೊಯ್ಯುವಿರಿ. ದ್ರಾಕ್ಷಿತೋಟಗಳಲ್ಲಿ ವ್ಯವಸಾಯಮಾಡಿ, ಅವುಗಳ ಫಲಗಳನ್ನು ತಿನ್ನುವುದೇ ನಿಮಗೆ ಸಂಕೇತವಾಗಿರುವದು.


ಯೆಹೋವ ದೇವರೇ, ನನ್ನ ದೀಪವು ನೀವೇ; ಯೆಹೋವ ದೇವರು ನನ್ನ ಕತ್ತಲೆಯನ್ನು ಬೆಳಕನ್ನಾಗಿ ಮಾರ್ಪಡಿಸುವರು.


ದೇವರು ಒಂಟಿಗರನ್ನು ಕುಟುಂಬಸ್ತರನ್ನಾಗಿ ಮಾಡುತ್ತಾರೆ. ಸೆರೆಯವರನ್ನು ಹರ್ಷಗೊಳಿಸಿ ಬಿಡುಗಡೆ ಮಾಡುತ್ತಾರೆ. ಆದರೆ ಎದುರು ಬೀಳುವವರು ಒಣಭೂಮಿಯಲ್ಲಿ ವಾಸಿಸುತ್ತಾರೆ.


ಕಾವಲಿನವರ ಅಧಿಪತಿಯಾದ ನೆಬೂಜರದಾನನು ಯೆರೆಮೀಯನನ್ನು ಸಂಕೋಲೆಗಳಿಂದ ಕಟ್ಟಿಸಿ, ಬಾಬಿಲೋನಿಗೆ ಒಯ್ಯುವ ಯೆರೂಸಲೇಮಿನ ಯೆಹೂದದ ಸೆರೆಯವರೆಲ್ಲರ ಮಧ್ಯದಲ್ಲಿ ತೆಗೆದುಕೊಂಡುಹೋಗಿ, ರಾಮದಿಂದ ಬಿಟ್ಟು ಕಳುಹಿಸಿದ ಮೇಲೆ, ಯೆರೆಮೀಯನಿಗೆ ಯೆಹೋವ ದೇವರಿಂದ ವಾಕ್ಯವು ಬಂದಿತು.


ನೆಬೂಕದ್ನೆಚ್ಚರನು ಮಾತನಾಡಿ, “ಶದ್ರಕ್, ಮೇಶಕ್, ಅಬೇದ್‌ನೆಗೋ ಎಂಬುವರ ದೇವರಿಗೆ ಸ್ತೋತ್ರವಾಗಲಿ. ಅವರು ತಮ್ಮ ದೂತನನ್ನು ಕಳುಹಿಸಿ, ತಮ್ಮ ಸೇವಕರನ್ನು ರಕ್ಷಿಸಿದ್ದಾರೆ. ಅವರು ದೇವರಲ್ಲಿ ನಂಬಿಕೆ ಇಟ್ಟರು. ಅರಸನ ಆಜ್ಞೆಯನ್ನು ಮೀರಿದರು. ಸ್ವಂತ ದೇವರನ್ನೇ ಹೊರತು ಬೇರೆ ಯಾವ ದೇವರನ್ನೂ ಸೇವಿಸದೆ, ಆರಾಧಿಸದೆ ಇರುವ ಹಾಗೆ ತಮ್ಮ ಪ್ರಾಣಗಳನ್ನು ಕೊಡಲೂ ಸಿದ್ಧರಾದರು.


ಆ ಜ್ಞಾನಿಗಳು ಹೊರಟುಹೋದ ಮೇಲೆ, ಕರ್ತನ ದೂತನು ಯೋಸೇಫನಿಗೆ ಕನಸಿನಲ್ಲಿ ಪ್ರತ್ಯಕ್ಷನಾಗಿ, “ಎದ್ದೇಳು, ಮಗುವನ್ನೂ ತಾಯಿಯನ್ನೂ ಕರೆದುಕೊಂಡು ಈಜಿಪ್ಟಿಗೆ ಓಡಿಹೋಗು. ನಾನು ನಿನಗೆ ತಿಳಿಸುವವರೆಗೆ ಅಲ್ಲಿಯೇ ಇರು, ಏಕೆಂದರೆ ಹೆರೋದನು ಮಗುವನ್ನು ಹುಡುಕಿ ಕೊಲ್ಲಬೇಕೆಂದಿದ್ದಾನೆ,” ಎಂದನು.


“ನಿನ್ನ ಬಟ್ಟೆಗಳನ್ನೂ ಮೆಟ್ಟುಗಳನ್ನೂ ಧರಿಸಿಕೋ,” ಎಂದು ದೇವದೂತನು ಅವನಿಗೆ ಹೇಳಲು, ಪೇತ್ರನು ಅದರಂತೆ ಮಾಡಿದನು. “ನಿನ್ನ ನಿಲುವಂಗಿಯನ್ನು ಸುತ್ತಿಕೊಂಡು ನನ್ನನ್ನು ಹಿಂಬಾಲಿಸು,” ಎಂದು ದೇವದೂತನು ಹೇಳಿದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು