2 ಸಮುಯೇಲ 9:10 - ಕನ್ನಡ ಸಮಕಾಲಿಕ ಅನುವಾದ10 ಆದ್ದರಿಂದ ನೀನೂ, ನಿನ್ನ ಪುತ್ರರೂ, ನಿನ್ನ ದಾಸರೂ ನಿನ್ನ ಯಜಮಾನನ ಮಗನಿಗೆ ಆಹಾರ ಒದಗಿಸುವ ಹಾಗೆ, ಅವನಿಗೋಸ್ಕರ ಭೂಮಿಯನ್ನು ವ್ಯವಸಾಯಮಾಡಿ, ಅದರ ಫಲವನ್ನು ತರಬೇಕು. ಆದರೆ ನಿನ್ನ ಯಜಮಾನನ ಮೊಮ್ಮಗ ಮೆಫೀಬೋಶೆತನು ನಿತ್ಯವೂ ನನ್ನ ಮೇಜಿನಲ್ಲಿ ಊಟಮಾಡುವನು,” ಎಂದನು. ಈ ಚೀಬನಿಗೆ ಹದಿನೈದು ಮಂದಿ ಪುತ್ರರೂ ಇಪ್ಪತ್ತು ಮಂದಿ ದಾಸರೂ ಇದ್ದರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201910 ನೀನು, ನಿನ್ನ ಮಕ್ಕಳೂ ಮತ್ತು ನಿನ್ನ ದಾಸರು ನಿನ್ನ ಯಜಮಾನನ ಮೊಮ್ಮಗನ ಆಹಾರಕ್ಕಾಗಿ ಭೂಮಿಯನ್ನು ವ್ಯವಸಾಯ ಮಾಡಿ, ಅದರ ಬೆಳೆಯನ್ನು ಇವರ ಮನೆಯವರ ಅಶನಾರ್ಥವಾಗಿ (ಜೀವನಾಂಶಕ್ಕಾಗಿ) ತಂದು ಕೊಡಬೇಕು. ಆದರೆ ಮೆಫೀಬೋಶೆತ್ತಿಗಾದರೋ ನಿತ್ಯವೂ ನನ್ನ ಪಂಕ್ತಿಯಲ್ಲಿ ಭೋಜನವಾಗುವುದು” ಎಂದು ಹೇಳಿದನು. ಚೀಬನಿಗೆ ಹದಿನೈದು ಮಂದಿ ಗಂಡು ಮಕ್ಕಳೂ, ಇಪ್ಪತ್ತು ಮಂದಿ ಸೇವಕರು ಇದ್ದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)10 ನೀನೂ ನಿನ್ನ ಮಕ್ಕಳೂ ಆಳುಗಳೂ ನಿನ್ನ ಯಜಮಾನನ ಮೊಮ್ಮಗನಿಗಾಗಿ ಆ ಭೂಮಿಯನ್ನು ವ್ಯವಸಾಯಮಾಡಿ ಅದರ ಬೆಳೆಯನ್ನು ಇವನ ಮನೆಯವರ ಅಶನಾರ್ಥವಾಗಿ ತಂದುಕೊಡಬೇಕು. ಇವನಿಗಾದರೋ ನಿತ್ಯವೂ ನನ್ನ ಪಂಕ್ತಿಯಲ್ಲೇ ಭೋಜನವಾಗುವುದು,” ಎಂದು ಹೇಳಿದನು. ಚೀಬನಿಗೆ ಹದಿನೈದು ಮಂದಿ ಗಂಡು ಮಕ್ಕಳೂ ಇಪ್ಪತ್ತು ಮಂದಿ ಆಳುಗಳೂ ಇದ್ದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)10 ನೀನೂ ನಿನ್ನ ಮಕ್ಕಳೂ ದಾಸರೂ ನಿನ್ನ ಯಜಮಾನನ ಮೊಮ್ಮಗನಿಗೋಸ್ಕರ ಆ ಭೂವಿುಯನ್ನು ವ್ಯವಸಾಯ ಮಾಡಿ ಅದರ ಬೆಳೆಯನ್ನು ಇವನ ಮನೆಯವರ ಅಶನಾರ್ಥವಾಗಿ ತಂದುಕೊಡಬೇಕು. ಇವನಿಗಾದರೋ ನಿತ್ಯವೂ ನನ್ನ ಪಂಕ್ತಿಯಲ್ಲಿ ಭೋಜನವಾಗುವದು ಎಂದು ಹೇಳಿದನು. ಚೀಬನಿಗೆ ಹದಿನೈದು ಮಂದಿ ಗಂಡುಮಕ್ಕಳೂ ಇಪ್ಪತ್ತು ಮಂದಿ ಸೇವಕರೂ ಇದ್ದರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್10 ನೀನು ಮೆಫೀಬೋಶೆತನಿಗಾಗಿ ಭೂಮಿಯಲ್ಲಿ ವ್ಯವಸಾಯ ಮಾಡು. ನಿನ್ನ ಮಕ್ಕಳೂ ನಿನ್ನ ಸೇವಕರೂ ಮೆಫೀಬೋಶೆತನಿಗಾಗಿ ಇದನ್ನು ಮಾಡಲಿ. ನೀನು ಬೆಳೆಗಳನ್ನು ಕೊಯ್ದು ಸುಗ್ಗಿಮಾಡು. ಆಗ ನಿನ್ನ ಒಡೆಯನ ಮೊಮ್ಮಗನಿಗೆ ಬೇಕಾದಷ್ಟು ಆಹಾರವಿರುತ್ತದೆ. ಆದರೆ ನಿನ್ನ ಒಡೆಯನ ಮೊಮ್ಮಗನಾದ ಮೆಫೀಬೋಶೆತನು ಯಾವಾಗಲೂ ನನ್ನ ಪಂಕ್ತಿಯಲ್ಲಿ ಊಟ ಮಾಡಬೇಕು” ಎಂದನು. ಚೀಬನಿಗೆ ಹದಿನೈದು ಮಂದಿ ಗಂಡುಮಕ್ಕಳೂ, ಇಪ್ಪತ್ತು ಮಂದಿ ಸೇವಕರೂ ಇದ್ದರೂ. ಅಧ್ಯಾಯವನ್ನು ನೋಡಿ |