Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಸಮುಯೇಲ 8:17 - ಕನ್ನಡ ಸಮಕಾಲಿಕ ಅನುವಾದ

17 ಅಹೀಟೂಬನ ಮಗ ಚಾದೋಕನೂ ಅಬಿಯಾತರನ ಮಗ ಅಹೀಮೆಲೆಕನೂ ಯಾಜಕರಾಗಿದ್ದರು. ಸೆರಾಯನು ಕಾರ್ಯದರ್ಶಿಯಾಗಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 ಅಹೀಟೂಬನ ಮಗನಾದ ಚಾದೋಕನೂ ಅಹೀಮೆಲೆಕನ ಮಗನಾದ ಎಬ್ಯಾತಾರನೂ ಅವನ ಯಾಜಕರು, ಸೆರಾಯನು ಲೇಖಕನು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

17 ಅಹೀಟೂಬನ ಮಗ ಚಾದೋಕನೂ ಹಾಗು ಅಹೀಮೆಲೆಕನ ಮಗನಾದ ಎಬ್ಯಾತಾರನೂ ಅವನ ಯಾಜಕರಾಗಿದ್ದರು; ಸರಾಯನು ಅವನಿಗೆ ಲೇಖಕ ಆಗಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

17 ಅಹೀಟೂಬನ ಮಗನಾದ ಚಾದೋಕನೂ ಅಹೀಮೆಲೆಕನ ಮಗನಾದ ಎಬ್ಯಾತಾರನೂ ಅವನ ಯಾಜಕರು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

17 ಅಹೀಟೂಬನ ಮಗನಾದ ಚಾದೋಕನೂ ಎಬ್ಯಾತಾರನ ಮಗನಾದ ಅಹೀಮೆಲೆಕನೂ ಯಾಜಕರಾಗಿದ್ದರು. ಸೆರಾಯನು ಕಾರ್ಯದರ್ಶಿಯಾಗಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಸಮುಯೇಲ 8:17
21 ತಿಳಿವುಗಳ ಹೋಲಿಕೆ  

ಅಹೀಟೂಬನ ಮಗ ಚಾದೋಕನೂ, ಅಬಿಯಾತರನ ಮಗ ಅಹೀಮೆಲೆಕನೂ ಯಾಜಕರಾಗಿದ್ದರು. ಶವ್ಷನು ಕಾರ್ಯದರ್ಶಿಯಾಗಿದ್ದನು.


ಅಹೀಟೂಬನು ಚಾದೋಕನನ್ನು ಪಡೆದನು, ಚಾದೋಕನು ಅಹೀಮಾಚನನ್ನು ಪಡೆದನು,


ಗಿಬ್ಯೋನಿನಲ್ಲಿರುವ ಉನ್ನತ ಸ್ಥಳದಲ್ಲಿ ಯೆಹೋವ ದೇವರ ಗುಡಾರದ ಮುಂದೆ ಸೇವೆಮಾಡುವದಕ್ಕೆ ದಾವೀದನು ಯಾಜಕನಾದ ಚಾದೋಕನನ್ನೂ ಮತ್ತು ಅವನ ಸಹೋದರರನ್ನು ನೇಮಿಸಿದನು.


ಅವನ ಮಗನು ಚಾದೋಕನು, ಅವನ ಮಗನು ಅಹೀಮಾಚನು.


ಅವನು ಮಹಾಯಾಜಕನಾದ ಅಬಿಯಾತರನ ಕಾಲದಲ್ಲಿ, ದೇವರ ಆಲಯದೊಳಗೆ ಹೋಗಿ ಯಾಜಕರ ಹೊರತು ಬೇರೆಯವರು ತಿನ್ನುವುದಕ್ಕೆ ನಿಯಮ ಸಮ್ಮತವಲ್ಲದ ನೈವೇದ್ಯದ ರೊಟ್ಟಿಯನ್ನು ತೆಗೆದುಕೊಂಡು ತಿಂದು, ತನ್ನ ಸಂಗಡಿಗರಿಗೂ ಕೊಟ್ಟನು,” ಎಂದರು.


ಚಾದೋಕನೂ, ಅವನ ಸಂಗಡ ಇರುವ ಸಮಸ್ತ ಲೇವಿಯರೂ ದೇವರ ಒಡಂಬಡಿಕೆಯ ಮಂಜೂಷವನ್ನು ಹೊತ್ತುಕೊಂಡು ಬಂದು ಇಳಿಸಿದರು. ಅಬಿಯಾತರನು, ಜನರೆಲ್ಲರು ಪಟ್ಟಣದಿಂದ ದಾಟಿಹೋಗುವವರೆಗೆ ಯಜ್ಞ ಸಮರ್ಪಿಸುತ್ತಾ ಮುಂದೆ ನಡೆಯುತ್ತಿದ್ದನು.


ಪೆಟ್ಟಿಗೆಯಲ್ಲಿ ಬಹಳ ಹಣ ಉಂಟೆಂದು ಅವರು ಕಂಡಾಗಲೆಲ್ಲಾ ಅರಸನ ಲೇಖಕನೂ, ಮಹಾಯಾಜಕನೂ ಬಂದು, ಯೆಹೋವ ದೇವರ ಆಲಯದಲ್ಲಿ ತಂದಿದ್ದ ಹಣವನ್ನು ಎಣಿಸಿ, ಚೀಲಗಳಲ್ಲಿ ಹಾಕಿದರು.


ಅವರು ಅರಸನನ್ನು ಕರೆಕಳುಹಿಸಿದರು. ಅರಮನೆಯ ಕಾರ್ಯನಿರ್ವಾಹಕನಾದ ಹಿಲ್ಕೀಯನ ಮಗ ಎಲ್ಯಾಕೀಮ್, ಕಾರ್ಯದರ್ಶಿಯಾದ ಶೆಬ್ನ, ದಾಖಲೆಗಾರನಾದ ಆಸಾಫನ ಮಗ ಯೋವ ಎಂಬುವರು ಅವರ ಬಳಿಗೆ ಬಂದರು.


ಎಲಿಯಾಜರನು ಫೀನೆಹಾಸನನ್ನು ಪಡೆದನು, ಫೀನೆಹಾಸನು ಅಬೀಷೂವನನ್ನು ಪಡೆದನು,


ಇದಲ್ಲದೆ ಬಲವುಳ್ಳ ಪರಾಕ್ರಮಶಾಲಿಯಾದ ಪ್ರಾಯಸ್ತನಾಗಿದ್ದ ಚಾದೋಕನೂ, ಅವನ ತಂದೆಯ ಮನೆಯಿಂದ 22 ಮಂದಿ ಪ್ರಧಾನರೂ.


ಯೆಹೋವ ದೇವರು ಇಸ್ರಾಯೇಲಿಗೆ ಆಜ್ಞಾಪಿಸಿದ ಮೋಶೆಯ ನಿಯಮದಲ್ಲಿ ಬರೆದಿದ್ದ ಎಲ್ಲಾದರ ಪ್ರಕಾರ ಮಾಡಲೂ ಅವರು ಪ್ರತಿದಿನವೂ ಉದಯಕಾಲದಲ್ಲಿ ಮತ್ತು ಸಾಯಂಕಾಲದಲ್ಲಿ ದಹನಬಲಿಪೀಠದ ಮೇಲೆ ಯೆಹೋವ ದೇವರಿಗೆ ದಹನಬಲಿಗಳನ್ನು ಅರ್ಪಿಸುತ್ತಿದ್ದರು.


ಆಗ ಬಾರೂಕನು ಪುಸ್ತಕದಿಂದ ಯೆರೆಮೀಯನ ವಾಕ್ಯಗಳನ್ನು ಯೆಹೋವ ದೇವರ ಆಲಯದಲ್ಲಿ ಲೇಖಕನಾಗಿರುವ ಶಾಫಾನನ ಮಗನಾಗಿರುವ ಗೆಮರೀಯನ ಕೊಠಡಿಯಲ್ಲಿ ಮೇಲಿನ ಅಂಗಳದಲ್ಲಿ, ಯೆಹೋವ ದೇವರ ಆಲಯದ ಹೊಸ ಬಾಗಿಲಿನ ಪ್ರವೇಶದಲ್ಲಿ ಎಲ್ಲಾ ಜನರು ಕೇಳುವಂತೆ ಓದಿ ಹೇಳಿದನು.


ಹೂಷೈಯು ಯಾಜಕರಾದ ಚಾದೋಕನಿಗೂ, ಅಬಿಯಾತರನಿಗೂ, “ಅಹೀತೋಫೆಲನು ಅಬ್ಷಾಲೋಮನಿಗೂ, ಇಸ್ರಾಯೇಲಿನ ಹಿರಿಯರಿಗೂ ಇಂಥಿಂಥ ಆಲೋಚನೆ ಹೇಳಿದನು.


ನೀವು ನನ್ನ ಸಹೋದರರೂ, ನನ್ನ ರಕ್ತವೂ, ನನ್ನ ಮಾಂಸವೂ ಆಗಿದ್ದೀರಿ. ಹಾಗಾದರೆ ಅರಸನನ್ನು ತಿರುಗಿ ಬರಮಾಡುವಂತೆ ನೀವು ಹಿಂಜರಿದದ್ದೇನು?’ ಎಂದು ತಿಳಿಸಿರಿ.


ಆದರೆ ನಿನ್ನ ಸೇವಕನಾದ ನನ್ನನ್ನೂ, ಯಾಜಕನಾದ ಚಾದೋಕನನ್ನೂ, ಯೆಹೋಯಾದಾವನ ಮಗ ಬೆನಾಯನನ್ನೂ, ನಿಮ್ಮ ಸೇವಕನಾದ ಸೊಲೊಮೋನನನ್ನೂ, ಅವನು ಕರೆಯಲೇ ಇಲ್ಲ.


ದೇವರ ಮನೆಯ ಅಧಿಕಾರಿಯಾದ ಅಹೀಟೂಬನ ಮಗ ಮೆರಾಯೋತನ ಮಗ ಚಾದೋಕನ ಮಗ ಮೆಷುಲ್ಲಾಮನ ಮಗನಾದ ಹಿಲ್ಕೀಯನ ಮಗನು ಅಜರ್ಯನೂ;


ಸೌಲನ ಸಹೋದರರಾಗಿರುವ ಬೆನ್ಯಾಮೀನನ ಮಕ್ಕಳಲ್ಲಿ 3,000 ಮಂದಿ. ಇಂದಿನವರೆಗೂ ಅವರಲ್ಲಿ ಅನೇಕರು ಸೌಲನ ಮನೆಯ ವಿಚಾರಣೆಯನ್ನು ಮಾಡುತ್ತಿದ್ದರು.


ಆಗ ದಾವೀದನು ಚಾದೋಕನು, ಅಬಿಯಾತರನು ಎಂಬ ಯಾಜಕರನ್ನೂ; ಉರೀಯೇಲನು, ಅಸಾಯನು, ಯೋಯೇಲನು, ಶೆಮಾಯನು, ಎಲೀಯೇಲನು, ಅಮ್ಮೀನಾದಾಬನು ಎಂಬ ಲೇವಿಯರನ್ನೂ ಕರೆಕಳುಹಿಸಿ ಅವರಿಗೆ,


ಇವನು ಶಲ್ಲೂಮನ ಮಗನು; ಇವನು ಚಾದೋಕನ ಮಗನು; ಇವನು ಅಹೀಟೂಬನ ಮಗನು;


“ ‘ಆದರೆ ಇಸ್ರಾಯೇಲರು ನನ್ನನ್ನು ಬಿಟ್ಟುಹೋದಾಗ ನನ್ನ ಪರಿಶುದ್ಧಸ್ಥಳದ ಕಾಯಿದೆಯನ್ನು ಪಾಲಿಸಿದ ಚಾದೋಕನ ಮಕ್ಕಳಾಗಿರುವ ಲೇವಿಯರಾದ ಯಾಜಕರೂ ಇವರು ನನಗೆ ಸೇವೆಮಾಡುವಂತೆ ನನ್ನ ಸಮೀಪಕ್ಕೆ ಬಂದು, ನನ್ನ ಮುಂದೆ ನಿಂತು, ನನಗೆ ಕೊಬ್ಬನ್ನೂ ರಕ್ತವನ್ನೂ ಅರ್ಪಿಸುವರೆಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು