Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಸಮುಯೇಲ 7:24 - ಕನ್ನಡ ಸಮಕಾಲಿಕ ಅನುವಾದ

24 ದೇವರಾದ ಯೆಹೋವ ದೇವರೇ, ಇಸ್ರಾಯೇಲ್ ಜನರನ್ನು ಶಾಶ್ವತವಾಗಿ ನಿಮ್ಮ ಸ್ವಂತ ಜನರಾಗಿ ಇರುವ ಹಾಗೆ ಸ್ಥಿರಪಡಿಸಿದಿರಿ; ಯೆಹೋವ ದೇವರೇ, ನೀವೇ ಅವರಿಗೆ ದೇವರಾದಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

24 ಇಸ್ರಾಯೇಲರು ಸದಾಕಾಲವೂ ನಿನ್ನ ಪ್ರಜೆಯಾಗಿರಬೇಕೆಂದು ನಿರ್ಣಯಿಸಿದ ಯೆಹೋವನೇ, ನೀನು ಅವರಿಗೆ ದೇವರಾದಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

24 ಇಸ್ರಯೇಲರು ಸದಾಕಾಲ ನಿಮ್ಮ ಪ್ರಜೆಗಳಾಗಿರಬೇಕೆಂದು ನಿರ್ಣಯಿಸಿದಿರಿ; ಸರ್ವೇಶ್ವರಾ, ತಾವಾದಿರಿ ಅವರಿಗೆ ದೇವರು!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

24 ಇಸ್ರಾಯೇಲ್ಯರು ಸದಾಕಾಲವೂ ನಿನ್ನ ಪ್ರಜೆಗಳಾಗಿರಬೇಕೆಂದು ನಿರ್ಣಯಿಸಿದಿ; ಯೆಹೋವನೇ, ನೀನು ಅವರಿಗೆ ದೇವರಾದಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

24 ಇಸ್ರೇಲಿನ ಜನರನ್ನು ಎಂದೆಂದಿಗೂ ನಿನ್ನ ಸ್ವಂತ ಜನರನ್ನಾಗಿ ಮಾಡಿಕೊಂಡೆ. ಯೆಹೋವನೇ, ನೀನು ಅವರಿಗಾಗಿ ದೇವರಾದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಸಮುಯೇಲ 7:24
20 ತಿಳಿವುಗಳ ಹೋಲಿಕೆ  

ಈ ಹೊತ್ತು ನಿಮಗೆ ಯೆಹೋವ ದೇವರು ಘೋಷಿಸಿದಂತೆ, ನೀವು ಅವರ ಜನರೂ ಅವರ ಸಂಗ್ರಹಿಸಿದ ಆಸ್ತಿಯೂ ಆಗಿದ್ದೀರೆಂದು ವಾಗ್ದಾನಮಾಡಿದ್ದಾರೆ. ನೀವು ಅವರ ಎಲ್ಲಾ ಆಜ್ಞೆಗಳನ್ನು ಪಾಲಿಸಿರಿ.


ಮೊದಲು ನೀವು ಪ್ರಜೆಗಳಾಗಿರಲಿಲ್ಲ. ಈಗ ದೇವರ ಪ್ರಜೆಗಳಾಗಿದ್ದೀರಿ. ಮೊದಲು ಕರುಣೆ ಹೊಂದಿರಲಿಲ್ಲ. ಈಗ ಕರುಣೆ ಹೊಂದಿದ್ದೀರಿ.


ಆದರೂ ಯಾರಾರು ಅವರನ್ನು ಸ್ವೀಕರಿಸಿದರೋ, ಅಂದರೆ ಅವರ ಹೆಸರಿನಲ್ಲಿ ವಿಶ್ವಾಸವಿಟ್ಟರೋ ಅವರೆಲ್ಲರಿಗೆ ದೇವರ ಮಕ್ಕಳಾಗುವ ಅಧಿಕಾರವನ್ನು ಕೊಟ್ಟರು.


“ಆ ದಿನಗಳು ಬಂದ ಮೇಲೆ ನಾನು ಇಸ್ರಾಯೇಲ್ ವಂಶದವರೊಂದಿಗೆ ಮಾಡಿಕೊಳ್ಳುವ ಒಡಂಬಡಿಕೆಯು ಹೀಗಿರುವುದು,” ಎಂದು ಯೆಹೋವ ದೇವರು ಹೇಳುತ್ತಾರೆ. “ನನ್ನ ನಿಯಮವನ್ನು ಅವರ ಅಂತರಂಗದಲ್ಲಿ ಇಡುವೆನು. ಅವರ ಹೃದಯದ ಹಲಗೆಯ ಮೇಲೆ ಬರೆಯುವೆನು. ನಾನು ಅವರಿಗೆ ದೇವರಾಗಿರುವೆನು, ಅವರು ನನಗೆ ಪ್ರಜೆಯಾಗಿರುವರು.


ನಿಜವಾಗಿಯೂ ದೇವರೇ ನನಗೆ ರಕ್ಷಣೆಯು, ನಾನು ಭರವಸವಿಡುವೆನು ಮತ್ತು ಭಯಪಡೆನು. ಕರ್ತರಾದ ಯೆಹೋವ ದೇವರೇ ನನ್ನ ಬಲವೂ ನನ್ನ ಕೀರ್ತನೆಯೂ, ಅವರೇ ನನಗೆ ರಕ್ಷಣೆಯೂ ಆಗಿದ್ದಾರೆ.”


ಏಕೆಂದರೆ, ಈ ದೇವರು ಯುಗಯುಗಾಂತರಗಳಿಗೂ ನಮ್ಮ ದೇವರಾಗಿದ್ದಾರೆ; ಅವರು ಅಂತ್ಯದವರೆಗೂ ನಮ್ಮ ಮಾರ್ಗದರ್ಶಿಯಾಗಿರುವರು.


ಇದಲ್ಲದೆ ನಿನಗೂ ನಿನ್ನ ಸಂತತಿಗೂ ದೇವರಾಗಿರುವೆನು. ಈ ನನ್ನ ಒಡಂಬಡಿಕೆಯನ್ನು ನಿನಗೋಸ್ಕರವೂ ನಿನ್ನ ತರುವಾಯ ಬರುವ ನಿನ್ನ ಸಂತತಿಗೋಸ್ಕರವೂ ತಲತಲಾಂತರದವರೆಗೂ ನಿತ್ಯವಾದ ಒಡಂಬಡಿಕೆಯಾಗಿ ಸ್ಥಾಪಿಸುವೆನು.


ಈ ಮೂರನೆಯ ಪಾಲನ್ನು ನಾನು ಬೆಂಕಿಯಲ್ಲಿ ಹಾಕಿ, ಬೆಳ್ಳಿಯನ್ನು ಶುದ್ಧ ಮಾಡುವಂತೆ ಶುದ್ಧಮಾಡುವೆನು. ಬಂಗಾರವನ್ನು ಶೋಧಿಸುವ ಪ್ರಕಾರ ಅವರನ್ನು ಶೋಧಿಸುವೆನು. ಅವರು ನನ್ನ ಹೆಸರನ್ನು ಕರೆಯುವರು. ನಾನು ಅವರಿಗೆ ಉತ್ತರಕೊಡುವೆನು. ನಾನು, ‘ಇವರು ನನ್ನ ಜನರೆಂದು ಹೇಳುವೆನು,’ ‘ಯೆಹೋವ ದೇವರು ನಮ್ಮ ದೇವರು’ ಎಂದು ಅವರು ಹೇಳುವರು,” ಎಂದು ಹೇಳುತ್ತೇನೆ.


“ಆದರೂ ಇಸ್ರಾಯೇಲ್ ಜನರು ಅಳೆಯುವುದಕ್ಕೂ ಎಣಿಸುವುದಕ್ಕೂ ಅಸಾಧ್ಯವಾದ ಕಡಲತೀರದ ಮರಳಿನಂತಾಗುವರು. ದೇವರು ಯಾವ ಸ್ಥಳದಲ್ಲಿ ಅವರನ್ನು, ‘ನೀವು ನನ್ನ ಜನರಲ್ಲ’ ಎಂದಿದ್ದಾರೋ ಆ ಸ್ಥಳದಲ್ಲಿಯೇ, ‘ನೀವು ಜೀವಸ್ವರೂಪಿಯಾದ ದೇವರ ಮಕ್ಕಳು’ ಎನಿಸಿಕೊಳ್ಳುವ ದಿನ ಬರುವುದು.


ಅವರು ನನ್ನ ಜನರಾಗಿರುವರು. ನಾನು ಅವರಿಗೆ ದೇವರಾಗಿರುವೆನು.


“ಆ ಕಾಲದಲ್ಲಿ ನಾನು ಇಸ್ರಾಯೇಲಿನ ಸಮಸ್ತ ಕುಟುಂಬಗಳಿಗೆ ದೇವರಾಗಿರುವೆನು. ಅವರು ನನ್ನ ಜನರಾಗಿರುವರು,” ಎಂದು ಯೆಹೋವ ದೇವರು ಸಾರುತ್ತಾರೆ.


ನೀವು ಇಸ್ರಾಯೇಲ್ ಜನರನ್ನು ಶಾಶ್ವತವಾಗಿ ನಿಮ್ಮ ಸ್ವಂತ ಜನರಾಗಿ ಮಾಡಿದಿರಿ; ಯೆಹೋವ ದೇವರೇ, ನೀವೇ ಅವರಿಗೆ ದೇವರಾದಿರಿ.


ಭೂಲೋಕದಲ್ಲಿ ನಿಮ್ಮ ಜನರಾದ ಇಸ್ರಾಯೇಲರಿಗೆ ಸಮಾನವಾದ ಜನಾಂಗ ಯಾವುದು? ನೀವೇ ಹೋಗಿ ಅವರನ್ನು ಸ್ವಜನರಾಗಿ ವಿಮೋಚಿಸಿ ನಿಮ್ಮ ಹೆಸರನ್ನು ಪ್ರಸಿದ್ಧಿಪಡಿಸಿದ್ದೀರಿ. ಈಜಿಪ್ಟಿನಿಂದ ವಿಮೋಚಿಸಿ ತಂದ ನಿಮ್ಮ ಪ್ರಜೆಗಳ ಎದುರಿನಿಂದ ಜನಾಂಗಗಳನ್ನು ಮತ್ತು ಅವರ ದೇವರುಗಳನ್ನು ಓಡಿಸುವ ಮೂಲಕ ವಿಸ್ಮಯಕರವಾದ ಮಹಾ ಅದ್ಭುತಗಳನ್ನು ಮಾಡಿದ್ದೀರಲ್ಲವೇ?


ಆಗ ಮೋಶೆಯೂ ಯಾಜಕರಾದ ಲೇವಿಯರೂ ಸಮಸ್ತ ಇಸ್ರಾಯೇಲಿನ ಸಂಗಡ ಮಾತನಾಡಿ, “ಇಸ್ರಾಯೇಲರೇ, ಶಾಂತರಾಗಿದ್ದು ಕೇಳಿರಿ. ನೀವು ಈ ಹೊತ್ತು ನಿಮ್ಮ ದೇವರಾದ ಯೆಹೋವ ದೇವರ ಜನಾಂಗವಾಗಿದ್ದೀರಿ.


“ಯೆಹೋವ ದೇವರು ನನ್ನ ಬಲವೂ ಕೀರ್ತನೆಯೂ ಆಗಿದ್ದಾರೆ; ಅವರು ನನ್ನ ರಕ್ಷಣೆಯಾದರು; ಅವರು ನನ್ನ ದೇವರು, ಅವರನ್ನು ಕೊಂಡಾಡುವೆನು; ಅವರು ನನ್ನ ತಂದೆಯ ದೇವರು, ನಾನು ಅವರನ್ನು ಘನಪಡಿಸುವೆನು.


ನಿಮ್ಮನ್ನು ನನ್ನ ಜನರನ್ನಾಗಿ ತೆಗೆದುಕೊಂಡು ನಿಮಗೆ ದೇವರಾಗಿರುವೆನು. ಈಜಿಪ್ಟಿನ ಬಿಟ್ಟಿಕೆಲಸಗಳೊಳಗಿಂದ ನಿಮ್ಮನ್ನು ಹೊರಗೆ ಬರಮಾಡಿದಾಗ, ಯೆಹೋವ ದೇವರಾಗಿರುವ ನಾನೇ ನಿಮ್ಮ ದೇವರಾಗಿದ್ದೇನೆಂದು ನಿಮಗೆ ತಿಳಿಯುವುದು.


ನೀನು ಪ್ರವಾಸಿಯಾಗಿರುವ ಕಾನಾನ್ ದೇಶವನ್ನೆಲ್ಲಾ ನಿನಗೂ ನಿನ್ನ ತರುವಾಯ ನಿನ್ನ ಸಂತತಿಗೂ ಶಾಶ್ವತವಾದ ಸ್ವತ್ತನ್ನಾಗಿ ಕೊಟ್ಟು, ನಾನು ಅವರಿಗೆ ದೇವರಾಗಿರುವೆನು,” ಎಂದರು.


ಯೆಹೋವ ದೇವರಿಗೆ ಪ್ರತಿಯಾಗಿ ಹೀಗೆ ವರ್ತಿಸುವುದು ಸರಿಯೋ? ಜ್ಞಾನವಿಲ್ಲದ ಬುದ್ಧಿಹೀನ ಜನರೇ, ದೇವರು ನಿಮ್ಮನ್ನು ಸೃಷ್ಟಿಸಿದ ತಂದೆಯಲ್ಲವೋ? ನಿಮ್ಮನ್ನು ಸೃಷ್ಟಿಸಿ ಸ್ಥಿರಪಡಿಸಿದ್ದು ದೇವರಲ್ಲವೋ?


“ಈಗ ದೇವರಾದ ಯೆಹೋವ ದೇವರೇ, ನೀವು ನಿಮ್ಮ ಸೇವಕನನ್ನು ಕುರಿತೂ, ಅವನ ಕುಟುಂಬವನ್ನು ಕುರಿತೂ ಮಾಡಿದ ವಾಗ್ದಾನವನ್ನು ನೆರವೇರಿಸಿ ಅದನ್ನು ಶಾಶ್ವತವಾಗಿ ಸ್ಥಿರಪಡಿಸಿರಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು