Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಸಮುಯೇಲ 6:5 - ಕನ್ನಡ ಸಮಕಾಲಿಕ ಅನುವಾದ

5 ದಾವೀದನೂ, ಸಮಸ್ತ ಇಸ್ರಾಯೇಲರೂ ಸಕಲ ವಾದ್ಯಗಳಾದ ಕಿನ್ನರಿ, ವೀಣೆ, ದಮ್ಮಡಿ, ಸ್ವರಮಂಡಲ, ತಾಳ, ತುತೂರಿ ಇವುಗಳನ್ನು ತಮ್ಮ ಸಮಸ್ತ ಬಲದಿಂದ ಬಾರಿಸುತ್ತಾ, ಹಾಡುತ್ತಾ ಯೆಹೋವ ದೇವರ ಮುಂದೆ ಹೋದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ದಾವೀದನೂ ಎಲ್ಲಾ ಇಸ್ರಾಯೇಲರೂ ಶಂಕುಮರದಿಂದ (ಸೈಪ್ರಸ್ ಮರ) ಮಾಡಿದ ಕಿನ್ನರಿ, ಸ್ವರಮಂಡಲ, ದಮ್ಮಡಿ, ಝಲ್ಲರಿ, ತಾಳ ಇವುಗಳನ್ನು ಬಾರಿಸಿಕೊಂಡು ಪೂರ್ಣಾಸಕ್ತಿಯಿಂದ ಗೀತೆಗಳನ್ನು ಹಾಡುತ್ತಾ, ಯೆಹೋವನ ಮುಂದೆ ನರ್ತನ ಮಾಡುತ್ತಾ ಹೋದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

5 ದಾವೀದನೂ ಎಲ್ಲ ಇಸ್ರಯೇಲರೂ ಕಿನ್ನರಿ, ಸ್ವರಮಂಡಲ, ತಮಟೆ, ಝಲ್ಲರಿ, ತಾಳ ಇವುಗಳನ್ನು ಬಾರಿಸಿಕೊಂಡು, ಪೂರ್ಣಾವೇಶದಿಂದ ಗೀತೆಗಳನ್ನು ಹಾಡುತ್ತಾ, ಸರ್ವೇಶ್ವರನ ಮುಂದೆ ನರ್ತನ ಮಾಡುತ್ತಾ ಹೋದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

5 ದಾವೀದನೂ ಎಲ್ಲಾ ಇಸ್ರಾಯೇಲ್ಯರೂ ಕಿನ್ನರಿ, ಸ್ವರಮಂಡಲ, ದಮ್ಮಡಿ, ಝಲ್ಲರಿ, ತಾಳ ಇವುಗಳನ್ನು ಬಾರಿಸಿಕೊಂಡು ಪೂರ್ಣಾಸಕ್ತಿಯಿಂದ ಗೀತಗಳನ್ನು ಹಾಡುತ್ತಾ ಯೆಹೋವನ ಮುಂದೆ ನರ್ತನಮಾಡುತ್ತಾ ಹೋದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

5 ದಾವೀದನು ಮತ್ತು ಇಸ್ರೇಲರೆಲ್ಲರು ಕಿನ್ನರಿ, ದಮ್ಮಡಿ, ಝಲ್ಲರಿ, ತಾಳಗಳನ್ನು ಬಾರಿಸುತ್ತಾ ಸನ್ನಿಧಿಯಲ್ಲಿ ನೃತ್ಯಮಾಡುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಸಮುಯೇಲ 6:5
17 ತಿಳಿವುಗಳ ಹೋಲಿಕೆ  

ಆಗ ದಾವೀದನೂ, ಸಮಸ್ತ ಇಸ್ರಾಯೇಲರೂ ಸಕಲ ವಾದ್ಯಗಳಾದ ಕಿನ್ನರಿ, ವೀಣೆ, ದಮ್ಮಡಿ, ತಾಳ, ತುತೂರಿ ಇವುಗಳನ್ನು ತಮ್ಮ ಸಮಸ್ತ ಬಲದಿಂದ ಬಾರಿಸುತ್ತಾ, ಹಾಡುತ್ತಾ ದೇವರ ಮುಂದೆ ಹೋದರು.


ನಿಮ್ಮ ಹಾಡುಗಳ ಬೊಬ್ಬೆಗಳನ್ನು ನನ್ನಿಂದ ತೊಲಗಿಸಿರಿ. ನಿಮ್ಮ ವೀಣೆಗಳ ಮಧುರ ಸ್ವರವನ್ನು ನಾನು ಕೇಳುವುದಿಲ್ಲ.


ವೀಣೆಯ ಸ್ವರಕ್ಕೆ ಹಾಡುತ್ತೀರಿ, ದಾವೀದನ ಹಾಗೆ ನಿಮಗೆ ನೀವೇ ಗಾನವಾದ್ಯಗಳನ್ನು ಕಲ್ಪಿಸಿಕೊಳ್ಳುತ್ತೀರಿ.


ಈಗ ನೀವು ಸಿದ್ಧವಾಗಿದ್ದು ತುತೂರಿ, ಕೊಳಲು, ತಂಬೂರಿ, ವೀಣೆ, ಕಿನ್ನರಿ, ನಾದಸ್ವರ ಎಲ್ಲಾ ವಿಧವಾದ ವಾದ್ಯಗಳ ಶಬ್ದವನ್ನು ಕೇಳುವ ಸಮಯದಲ್ಲಿ ನಾನು ಮಾಡಿಸಿದ ಪ್ರತಿಮೆಯನ್ನು ಆರಾಧಿಸಿದರೆ ಸರಿ, ಆರಾಧಿಸದಿದ್ದರೆ ಅದೇ ಗಳಿಗೆಯಲ್ಲಿ ಉರಿಯುವ ಬೆಂಕಿಯ ಕುಲುಮೆಯ ಮಧ್ಯದಲ್ಲಿ ಹಾಕಲಾಗುವಿರಿ. ನನ್ನ ಕೈಯಿಂದ ನಿಮ್ಮನ್ನು ಬಿಡಿಸುವ ಆ ದೇವರು ಯಾರು?” ಎಂದು ಹೇಳಿದನು.


ತುತೂರಿ, ಕೊಳಲು, ತಂಬೂರಿ, ವೀಣೆ, ಕಿನ್ನರಿ ಮತ್ತು ನಾಗಸ್ವರ ಮುಂತಾದ ಎಲ್ಲಾ ವಿಧವಾದ ವಾದ್ಯಗಳ ಶಬ್ದವನ್ನು ಕೇಳಿದಾಗ ಪ್ರತಿಯೊಬ್ಬ ಮನುಷ್ಯನು ಅಡ್ಡಬಿದ್ದು ಬಂಗಾರದ ಪ್ರತಿಮೆಯನ್ನು ಆರಾಧಿಸಬೇಕೆಂದೂ ಅರಸನು ಆಜ್ಞೆಯನ್ನು ಹೊರಡಿಸಿದ್ದಾನೆ.


ಆದ್ದರಿಂದ ಜನರೆಲ್ಲರು ತುತೂರಿ, ಕೊಳಲು, ತಂಬೂರಿ, ವೀಣೆ, ಕಿನ್ನರಿ, ನಾಗಸ್ವರ ಮೊದಲಾದ ಶಬ್ದವನ್ನು ಕೇಳಿದ ಕೂಡಲೇ, ಎಲ್ಲಾ ಪ್ರಜೆಗಳು ಜನಾಂಗಗಳು ವಿವಿಧ ಭಾಷೆಯವರು ಅಡ್ಡಬಿದ್ದು, ಅರಸನಾದ ನೆಬೂಕದ್ನೆಚ್ಚರನು ನಿಲ್ಲಿಸಿದ ಬಂಗಾರದ ಪ್ರತಿಮೆಯನ್ನು ಆರಾಧಿಸಿದರು.


ನೀವು ಕೊಂಬು, ಪಿಳ್ಳಂಗೋವಿ, ತಂಬೂರಿ, ವೀಣೆ, ಕಿನ್ನರಿ, ನಾಗಸ್ವರ ಮೊದಲಾದ ವಾದ್ಯಗಳ ಶಬ್ದವನ್ನು ಕೇಳಿದ ಕೂಡಲೇ, ಅರಸನಾದ ನೆಬೂಕದ್ನೆಚ್ಚರನು ನಿಲ್ಲಿಸಿದ ಬಂಗಾರದ ಪ್ರತಿಮೆಯ ಮುಂದೆ ಅಡ್ಡಬಿದ್ದು ಆರಾಧಿಸಬೇಕು.


ದೇವರು ಜಯಘೋಷದಿಂದ ಉನ್ನತರಾಗಿದ್ದಾರೆ. ಯೆಹೋವ ದೇವರು ತುತೂರಿಯ ಧ್ವನಿಯೊಡನೆ ಸಾಗಿದ್ದಾರೆ.


ಆದರೆ ಈಗ ವಾದ್ಯಗಾರನನ್ನು ನನ್ನ ಬಳಿಗೆ ಕರೆದುಕೊಂಡು ಬಾ,” ಎಂದನು. ಆ ವಾದ್ಯ ಬಾರಿಸುವವನು ಬಾರಿಸಿದಾಗ, ಯೆಹೋವ ದೇವರ ಕೈ ಎಲೀಷನ ಮೇಲೆ ಬಂತು.


ಕಿನ್ನರಿಯನ್ನು ಬಾರಿಸಲು ನಿಪುಣನಾದ ಒಬ್ಬನನ್ನು ಹುಡುಕುವ ಹಾಗೆ ನಮ್ಮ ಒಡೆಯನಾದ ನೀನು ನಿನ್ನ ಸನ್ನಿಧಿಯಲ್ಲಿರುವ ನಿನ್ನ ಸೇವಕರಿಗೆ ಹೇಳಬೇಕು. ದೇವರಿಂದ ಬಂದ ದುರಾತ್ಮವು ನಿನ್ನ ಮೇಲೆ ಬಂದಿರುವಾಗ, ಅವನು ತನ್ನ ಕೈಯಿಂದ ವಾದ್ಯ ಬಾರಿಸಿದರೆ, ನಿನಗೆ ಒಳ್ಳೆಯದಾಗಿರುವುದು,” ಎಂದರು.


“ತರುವಾಯ ಫಿಲಿಷ್ಟಿಯರ ತಾಣವಿರುವ ದೇವರ ಗಿಬೆಯ ಗುಡ್ಡಕ್ಕೆ ಹೋಗುವಿ. ಅಲ್ಲಿಂದ ನೀನು ಪಟ್ಟಣಕ್ಕೆ ಪ್ರವೇಶಿಸುವಾಗ, ನಿನಗೆದುರಾಗಿ ವೀಣೆ, ದಮ್ಮಡಿ, ಕೊಳಲು, ಕಿನ್ನರಿಗಳನ್ನು ತಮ್ಮ ಮುಂದೆ ಇಟ್ಟುಕೊಂಡು ಮೇಲಿನಿಂದ ಇಳಿದು ಬರುವ ಪ್ರವಾದಿಗಳ ಗುಂಪು ಬರುವುದು. ಅವರು ಪ್ರವಾದಿಸುವರು.


ಹೀಗೆ ಇಸ್ರಾಯೇಲರೆಲ್ಲರೂ ಯೆಹೋವ ದೇವರ ಒಡಂಬಡಿಕೆಯ ಮಂಜೂಷವನ್ನು ಆರ್ಭಟದಿಂದಲೂ, ಕೊಂಬಿನ ಶಬ್ದದಿಂದಲೂ, ತುತೂರಿಗಳಿಂದಲೂ, ತಾಳಗಳಿಂದಲೂ ವೀಣೆಗಳನ್ನೂ, ಕಿನ್ನರಿಗಳನ್ನೂ ಬಾರಿಸುತ್ತಾ ತೆಗೆದುಕೊಂಡು ಬಂದರು.


ಸ್ವರಮಂಡಲ, ಕಿನ್ನರಿ, ತುತೂರಿ ಇವುಗಳೊಡನೆ ಯೆರೂಸಲೇಮಿನಲ್ಲಿರುವ ಯೆಹೋವ ದೇವರ ಆಲಯಕ್ಕೆ ಬಂದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು