Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಸಮುಯೇಲ 5:1 - ಕನ್ನಡ ಸಮಕಾಲಿಕ ಅನುವಾದ

1 ಇಸ್ರಾಯೇಲಿನ ಎಲ್ಲಾ ಗೋತ್ರದವರು ಹೆಬ್ರೋನಿನಲ್ಲಿರುವ ದಾವೀದನ ಬಳಿಗೆ ಬಂದು, “ನಾವು ನಿನ್ನ ಎಲುಬೂ, ನಿನ್ನ ಮಾಂಸವೂ ಆಗಿದ್ದೇವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ಅನಂತರ ಇಸ್ರಾಯೇಲರ ಎಲ್ಲಾ ಕುಲಗಳವರು ಹೆಬ್ರೋನಿನಲ್ಲಿದ್ದ ದಾವೀದನ ಬಳಿಗೆ ಬಂದು ಅವನಿಗೆ, “ನಾವು ನಿನ್ನ ರಕ್ತಸಂಬಂಧಿಗಳಾಗಿದ್ದೇವೆ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

1 ಅನಂತರ ಇಸ್ರಯೇಲರ ಎಲ್ಲ ಕುಲಗಳವರು ಹೆಬ್ರೋನಿನಲ್ಲಿದ್ದ ದಾವೀದನ ಬಳಿಗೆ ಬಂದರು. “ನಾವು ನಿಮ್ಮ ರಕ್ತಸಂಬಂಧಿಗಳು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

1 ಅನಂತರ ಇಸ್ರಾಯೇಲ್ಯರ ಎಲ್ಲಾ ಕುಲಗಳವರು ಹೆಬ್ರೋನಿನಲ್ಲಿದ್ದ ದಾವೀದನ ಬಳಿಗೆ ಬಂದು ಅವನಿಗೆ -

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

1 ಆಗ ಇಸ್ರೇಲಿನ ಕುಲಗಳವರೆಲ್ಲಾ ಹೆಬ್ರೋನಿನಲ್ಲಿದ್ದ ದಾವೀದನ ಬಳಿಗೆ ಬಂದು, “ನಾವೆಲ್ಲಾ ಒಂದೇ ಕುಲದವರಾಗಿದ್ದೇವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಸಮುಯೇಲ 5:1
13 ತಿಳಿವುಗಳ ಹೋಲಿಕೆ  

ನಾವು ಕ್ರಿಸ್ತ ಯೇಸುವಿನ ದೇಹದ ಅಂಗಗಳಾಗಿದ್ದೇವೆ.


ಇದಲ್ಲದೆ ನೀವು ಅಮಾಸನಿಗೆ, ‘ನೀನು ನನ್ನ ರಕ್ತವೂ, ನನ್ನ ಮಾಂಸವೂ ಅಲ್ಲವೋ? ನೀನು ಯೋವಾಬನಿಗೆ ಬದಲಾಗಿ ಯಾವಾಗಲೂ ನನ್ನ ಮುಂದೆ ಸೈನ್ಯದ ಪ್ರಧಾನನಾಗಿರದೆ ಹೋದರೆ, ದೇವರು ನನಗೆ ಏನಾದರೂ ಮಾಡಲಿ,’ ಎಂದು ಹೇಳಿರಿ,” ಎಂದನು.


ಆಗ ಲಾಬಾನನು ಅವನಿಗೆ, “ನಿಶ್ಚಯವಾಗಿ ನೀನು ನನ್ನ ರಕ್ತಸಂಬಂಧಿಯಾಗಿದ್ದೀ,” ಎಂದನು. ಯಾಕೋಬನು ಅವನ ಸಂಗಡ ಒಂದು ತಿಂಗಳು ವಾಸವಾಗಿದ್ದನು.


ಮಕ್ಕಳು ರಕ್ತಮಾಂಸಧಾರಿಗಳು ಆಗಿರುವುದರಿಂದ ಯೇಸು ತಮ್ಮ ಮರಣದಿಂದಲೇ ಮರಣಾಧಿಕಾರಿಯನ್ನು ಅಂದರೆ, ಸೈತಾನನನ್ನು ನಾಶಮಾಡುವುದಕ್ಕೂ


“ನೀವು ದಯಮಾಡಿ ಶೆಕೆಮಿನ ಹಿರಿಯರಿಗೆ, ‘ಯೆರುಬ್ಬಾಳನ ಮಕ್ಕಳಾದ ಎಪ್ಪತ್ತು ಮಂದಿಯು ನಿಮ್ಮನ್ನು ಆಳುವುದು ಒಳ್ಳೆಯದೋ? ಒಬ್ಬನು ಆಳುವುದು ಒಳ್ಳೆಯದೋ?’ ಎಂದು ವಿಚಾರಿಸಿರಿ. ನಾನು ನಿಮ್ಮ ಎಲುಬೂ, ನಿಮ್ಮ ಮಾಂಸವೂ ಆಗಿದ್ದೇನೆಂದು ಜ್ಞಾಪಕಮಾಡಿಕೊಳ್ಳಿರಿ,” ಎಂದನು.


ನಿಮ್ಮ ದೇವರಾದ ಯೆಹೋವ ದೇವರು ಆಯ್ದುಕೊಳ್ಳುವವನನ್ನು ನಿಮಗೆ ಅರಸನನ್ನಾಗಿ ನೇಮಿಸಿಕೊಳ್ಳಬೇಕು. ನಿಮ್ಮ ಇಸ್ರಾಯೇಲ್ ಸಹೋದರರಲ್ಲಿಂದ ಒಬ್ಬನನ್ನು ನಿಮ್ಮ ಅರಸನನ್ನಾಗಿ ನೇಮಿಸಿಕೊಳ್ಳಬೇಕು. ನಿಮ್ಮ ಸಹೋದರನಲ್ಲದ ಅನ್ಯದೇಶದವನನ್ನು ನಿಮ್ಮ ಮೇಲೆ ನೇಮಿಸಿಕೊಳ್ಳಬಾರದು.


ಅನಂತರ ಯೆಹೋಶುವನು ಸಮಸ್ತ ಇಸ್ರಾಯೇಲರ ಸಂಗಡ ಎಗ್ಲೋನಿನಿಂದ ಹೆಬ್ರೋನಿಗೆ ಹೊರಟುಹೋಗಿ, ಅದರ ಮೇಲೆ ಯುದ್ಧಮಾಡಿದನು.


ನೀವು ನನ್ನ ಸಹೋದರರೂ, ನನ್ನ ರಕ್ತವೂ, ನನ್ನ ಮಾಂಸವೂ ಆಗಿದ್ದೀರಿ. ಹಾಗಾದರೆ ಅರಸನನ್ನು ತಿರುಗಿ ಬರಮಾಡುವಂತೆ ನೀವು ಹಿಂಜರಿದದ್ದೇನು?’ ಎಂದು ತಿಳಿಸಿರಿ.


ಆದರೆ ಇಸ್ರಾಯೇಲರು ಯೆಹೂದ ಜನರಿಗೆ ಉತ್ತರವಾಗಿ, “ಅರಸನಲ್ಲಿ ನಮಗೆ ಹತ್ತು ಪಾಲು ಉಂಟು. ನಿಮಗಿಂತ ನಮಗೆ ದಾವೀದನ ಬಾಧ್ಯತೆಯು ಅಧಿಕವಾಗಿದೆ. ನಮ್ಮ ಅರಸನನ್ನು ತಿರುಗಿ ಕರೆದುಕೊಂಡು ಬರುವುದರ ವಿಷಯದಲ್ಲಿ ಮೊದಲು ಮಾತನಾಡಿದವರು ನಾವಲ್ಲವೋ? ಹಾಗಾದರೆ ನಮ್ಮನ್ನು ಏಕೆ ಅಲ್ಪರಾಗಿ ಎಣಿಸಿದಿರಿ?” ಎಂದರು. ಆದರೆ ಇಸ್ರಾಯೇಲರ ಮಾತುಗಳಿಗಿಂತ ಯೆಹೂದ ಜನರ ಮಾತುಗಳು ಕಠಿಣವಾಗಿದ್ದವು.


ಅವರು ಅಸಾಯೇಲನನ್ನು ಎತ್ತಿಕೊಂಡು ಬೇತ್ಲೆಹೇಮಿನಲ್ಲಿರುವ ಅವನ ತಂದೆಯ ಸಮಾಧಿಯಲ್ಲಿ ಹೂಳಿಟ್ಟರು. ಯೋವಾಬನೂ, ಅವನ ಜನರೂ ರಾತ್ರಿಯೆಲ್ಲಾ ನಡೆದು ಉದಯವಾದಾಗ ಹೆಬ್ರೋನಿಗೆ ಬಂದರು.


ಅರಸನು ಸಕಲ ಯೆಹೂದ ಜನರ ಹೃದಯವನ್ನು ಸಂಪೂರ್ಣವಾಗಿ ಗೆದ್ದುಕೊಂಡದ್ದರಿಂದ, ಅವರು ಅರಸನಿಗೆ, “ನೀನೂ, ನಿನ್ನ ಸಮಸ್ತ ಸೇವಕರೂ ತಿರುಗಿ ಬನ್ನಿರಿ,” ಎಂದು ಹೇಳಿ ಕಳುಹಿಸಿದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು