2 ಸಮುಯೇಲ 4:8 - ಕನ್ನಡ ಸಮಕಾಲಿಕ ಅನುವಾದ8 ಅನಂತರ ಹೆಬ್ರೋನಿನಲ್ಲಿರುವ ದಾವೀದನ ಬಳಿಗೆ ಈಷ್ಬೋಶೆತನ ತಲೆಯನ್ನು ತಂದು ಅರಸನಿಗೆ, “ಇಗೋ, ನಿನ್ನ ಪ್ರಾಣವನ್ನು ಹುಡುಕಿದ ನಿನ್ನ ಶತ್ರುವಾಗಿದ್ದ ಸೌಲನ ಮಗ ಈಷ್ಬೋಶೆತನ ತಲೆಯು. ಈ ದಿನದಲ್ಲಿ ಯೆಹೋವ ದೇವರು ಅರಸನಾದ ನಮ್ಮ ಒಡೆಯನಿಗೋಸ್ಕರ ಸೌಲನಿಗೂ, ಅವನ ಸಂತಾನಕ್ಕೂ ಮುಯ್ಯಿ ತೀರಿಸಿದ್ದಾರೆ,” ಎಂದರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20198 ಹೆಬ್ರೋನಿನಲ್ಲಿದ್ದ ಅರಸನಾದ ದಾವೀದನ ಬಳಿಗೆ ಬಂದು, ಆ ತಲೆಯನ್ನು ಅವನಿಗೆ ತೋರಿಸಿ, “ಇಗೋ ನಿನ್ನ ಜೀವತೆಗೆಯಬೇಕೆಂದಿದ್ದ ನಿನ್ನ ಶತ್ರುವಾದ ಸೌಲನ ಮಗ ಈಷ್ಬೋಶೆತನ ತಲೆ. ಅರಸನಾದ ನಮ್ಮ ಒಡೆಯನಿಗಾಗಿ ಸೌಲನಿಗೂ ಅವನ ಸಂತಾನಕ್ಕೂ ಯೆಹೋವನು ಈ ಹೊತ್ತು ಮುಯ್ಯಿ ತೀರಿಸಿದ್ದಾನೆ” ಅಂದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)8 ಹೆಬ್ರೋನಿನಲ್ಲಿದ್ದ ಅರಸನಾದ ದಾವೀದನ ಬಳಿಗೆ ಬಂದು ಆ ತಲೆಯನ್ನು ಅವನಿಗೆ ತೋರಿಸಿದರು; “ಇಗೋ, ನಿಮ್ಮ ಜೀವತೆಗೆಯಬೇಕೆಂದಿದ್ದ ನಿಮ್ಮ ಶತ್ರುವಾದ ಸೌಲನ ಮಗ ಈಷ್ಬೋಶೆತನ ತಲೆ; ಅರಸರಾದ ನಮ್ಮ ಒಡೆಯರಿಗಾಗಿ ಸರ್ವೇಶ್ವರಸ್ವಾಮಿ ಸೌಲನಿಗೂ ಅವನ ಸಂತಾನಕ್ಕೂ ಈ ಹೊತ್ತು ಸೇಡುತೀರಿಸಿದ್ದಾರೆ,” ಎಂದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)8 ಹೆಬ್ರೋನಿನಲ್ಲಿದ್ದ ಅರಸನಾದ ದಾವೀದನ ಬಳಿಗೆ ಬಂದು ಆ ತಲೆಯನ್ನು ಅವನಿಗೆ ತೋರಿಸಿ - ಇಗೋ, ನಿನ್ನ ಜೀವತೆಗೆಯಬೇಕೆಂದಿದ್ದ ನಿನ್ನ ಶತ್ರುವಾದ ಸೌಲನ ಮಗ ಈಷ್ಬೋಶೆತನ ತಲೆ! ಅರಸನಾದ ನಮ್ಮ ಒಡೆಯನಿಗಾಗಿ ಸೌಲನಿಗೂ ಅವನ ಸಂತಾನಕ್ಕೂ ಯೆಹೋವನು ಈ ಹೊತ್ತು ಮುಯ್ಯಿತೀರಿಸಿದ್ದಾನೆ ಅಂದರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್8 ಹೆಬ್ರೋನಿಗೆ ಬಂದು ಈಷ್ಬೋಶೆತನ ತಲೆಯನ್ನು ದಾವೀದನಿಗೆ ಕೊಟ್ಟರು. ರೇಕಾಬನು ಮತ್ತು ಬಾಣನು ರಾಜನಾದ ದಾವೀದನಿಗೆ, “ಸೌಲನ ಮಗನೂ ನಿನ್ನ ಶತ್ರುವೂ ಅದ ಈಷ್ಬೋಶೆತನ ತಲೆಯು ಇಲ್ಲಿದೆ. ಅವನು ನಿನ್ನನ್ನು ಕೊಲ್ಲಲು ಪ್ರಯತ್ನಿಸಿದನು. ನಿನಗಾಗಿ ಯೆಹೋವನು ಈ ದಿನ ಸೌಲನನ್ನೂ ಅವನ ಕುಲವನ್ನೂ ದಂಡಿಸಿದನು” ಎಂದು ಹೇಳಿದರು. ಅಧ್ಯಾಯವನ್ನು ನೋಡಿ |