Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಸಮುಯೇಲ 4:2 - ಕನ್ನಡ ಸಮಕಾಲಿಕ ಅನುವಾದ

2 ಆದರೆ ಸೌಲನ ಮಗನಿಗೆ ಸೇನಾಪತಿಗಳು ಇಬ್ಬರಿದ್ದರು. ಒಬ್ಬನ ಹೆಸರು ಬಾಣನು. ಮತ್ತೊಬ್ಬನ ಹೆಸರು ರೇಕಾಬನು. ಇವರು ಬೆನ್ಯಾಮೀನ್ ಗೋತ್ರದಲ್ಲಿ ಬೇರೋತ್ ಗ್ರಾಮದವನಾದ ರಿಮ್ಮೋನನ ಮಕ್ಕಳು. ಏಕೆಂದರೆ ಬೇರೋತ್ ಬೆನ್ಯಾಮೀನ್ಯರಿಗೆ ಸೇರಿದ ಗ್ರಾಮ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ಸೌಲನ ಮಗನಿಗೆ ಬಾಣ, ರೇಕಾಬ ಎಂಬ ಇಬ್ಬರು ಸೇನಾಧಿಪತಿಗಳಿದ್ದರು. ಅವರು ಬೆನ್ಯಾಮೀನ್ ಕುಲದ ಬೇರೋತಿನವನಾದ ರಿಮ್ಮೋನನ ಮಕ್ಕಳು. ಬೇರೋತ ಎಂಬುದು ಬೆನ್ಯಾಮೀನ್ಯರಿಗೆ ಸೇರಿದ ಗ್ರಾಮ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

2 ಸೌಲನ ಮಗನಿಗೆ ಬಾಣ ಹಾಗು ರೇಕಾಬ್ ಎಂಬ ಇಬ್ಬರು ಸೇನಾಪತಿಗಳಿದ್ದರು. ಇವರು ಬೆನ್ಯಾಮೀನ್ ಕುಲದ ಬೇರೋತಿನವನಾದ ರಿಮ್ಮೋನನ ಮಕ್ಕಳು. (ಈ ಬೇರೋತ್ ಎಂಬುದು ಬೆನ್ಯಾಮೀನ್ಯರಿಗೆ ಸೇರಿದ ಗ್ರಾಮ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

2 ಸೌಲನ ಮಗನಿಗೆ ಬಾಣ, ರೇಕಾಬ್ ಎಂಬ ಇಬ್ಬರು ಸೇನಾಪತಿಗಳಿದ್ದರು. ಅವರು ಬೆನ್ಯಾಮೀನ್ ಕುಲದ ಬೇರೋತಿನವನಾದ ರಿಮ್ಮೋನನ ಮಕ್ಕಳು. (ಬೇರೋತ್ ಎಂಬದು ಬೆನ್ಯಾಮೀನ್ಯರಿಗೆ ಸೇರಿದ ಗ್ರಾಮ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 ಬಾಣ ಮತ್ತು ರೇಕಾಬ್ ಎಂಬವರು ಸೌಲನ ಮಗನ ಸೈನ್ಯದಲ್ಲಿ, ಸೇನಾಧಿಪತಿಗಳಾಗಿದ್ದರು. ಅವರಿಬ್ಬರೂ ಬೇರೋತಿನವನಾದ ರಿಮ್ಮೋನನ ಮಕ್ಕಳು. ಅವರು ಬೆನ್ಯಾಮೀನ್ ಕುಲದವರಾಗಿದ್ದರು. ಬೇರೋತ್ ಪಟ್ಟಣವು ಬೆನ್ಯಾಮೀನ್ ಕುಲದವರಿಗೆ ಸೇರಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಸಮುಯೇಲ 4:2
9 ತಿಳಿವುಗಳ ಹೋಲಿಕೆ  

ಇದಲ್ಲದೆ ಗಿಬ್ಯೋನ್, ರಾಮಾ, ಬೇರೋತ್,


ಆಗ ಇಸ್ರಾಯೇಲರು ಪ್ರಯಾಣ ಮಾಡುವಾಗ ಮೂರನೆಯ ದಿವಸದಲ್ಲಿ ಗಿಬ್ಯೋನ್, ಕೆಫೀರಾ, ಬೇರೋತ್, ಕಿರ್ಯತ್ ಯಾರೀಮ್ ಎಂಬ ಅವರ ಪಟ್ಟಣಗಳಿಗೆ ಬಂದರು.


ಆಗ ಅವರಿಗೋಸ್ಕರ ದೊಡ್ಡ ಔತಣ ಮಾಡಿಸಿದನು. ಅವರು ತಿಂದು ಕುಡಿದ ತರುವಾಯ ಅವರನ್ನು ಕಳುಹಿಸಿಬಿಟ್ಟನು. ಅವರು ತಮ್ಮ ಯಜಮಾನನ ಬಳಿಗೆ ಹೋದರು. ಅರಾಮ್ಯರ ದಂಡುಗಳು ಇಸ್ರಾಯೇಲ್ ದೇಶದ ಮೇಲೆ ಮತ್ತೆ ದಾಳಿಮಾಡಲಿಲ್ಲ.


ಅರಾಮಿನವರು ಗುಂಪುಗುಂಪಾಗಿ ಹೊರಟು, ಇಸ್ರಾಯೇಲ್ ದೇಶದಿಂದ ಒಬ್ಬ ಹುಡುಗಿಯನ್ನು ಸೆರೆಯಾಗಿ ಹಿಡಿದುಕೊಂಡು ಬಂದರು. ಅವಳು ನಾಮಾನನ ಹೆಂಡತಿಗೆ ಸೇವಕಿಯಾದಳು.


ಆಗ ದಾವೀದನ ಸೇವಕರೂ ಯೋವಾಬನೂ ಒಂದು ಸೈನ್ಯದಿಂದ ದೊಡ್ಡ ಕೊಳ್ಳೆಯನ್ನು ತೆಗೆದುಕೊಂಡು ಬಂದರು. ಆಗ ಅಬ್ನೇರನು ಹೆಬ್ರೋನಿನಲ್ಲಿ ದಾವೀದನ ಸಂಗಡ ಇರಲಿಲ್ಲ. ಏಕೆಂದರೆ ಅವನು ಅಬ್ನೇರನನ್ನು ಕಳುಹಿಸಿಬಿಟ್ಟದ್ದರಿಂದ, ಅವನು ಸಮಾಧಾನವಾಗಿ ಹೋದನು.


ಬೇರೋತಿನ ರಿಮ್ಮೋನನ ಮಕ್ಕಳಾದ ರೇಕಾಬನೂ, ಬಾಣನೂ ಹೊರಟು ಮಧ್ಯಾಹ್ನದ ಬಿಸಿಲು ಹೊತ್ತಿನಲ್ಲಿ ಈಷ್ಬೋಶೆತನ ಮನೆಗೆ ಬಂದರು. ಅವನು ಮಂಚದ ಮೇಲೆ ಮಲಗಿಕೊಂಡಿದ್ದನು.


ಆಗ ದಾವೀದನು ಬೇರೋತಿನ ರಿಮ್ಮೋನನ ಮಕ್ಕಳಾದ ರೇಕಾಬನಿಗೂ, ಅವನ ಸಹೋದರ ಬಾಣನಿಗೂ ಉತ್ತರವಾಗಿ, “ಎಲ್ಲಾ ಇಕ್ಕಟ್ಟಿನಿಂದ ನನ್ನ ಪ್ರಾಣವನ್ನು ವಿಮೋಚಿಸಿದ ಯೆಹೋವ ದೇವರ ಜೀವದಾಣೆ,


ಅಮ್ಮೋನಿಯನಾದ ಚೆಲೆಕನು; ಚೆರೂಯಳ ಮಗನಾದ ಯೋವಾಬನ ಆಯುಧವಾಹಕನು ಆಗಿದ್ದ ಬೇರೋತ್ಯನಾದ ನಹರೈ;


ಮಿಚ್ಪೆ, ಕೆಫೀರಾ, ಮೋಚಾ,


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು