Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಸಮುಯೇಲ 3:8 - ಕನ್ನಡ ಸಮಕಾಲಿಕ ಅನುವಾದ

8 ಆಗ ಅಬ್ನೇರನು ಈಷ್ಬೋಶೆತನ ಮಾತುಗಳಿಗೆ ಬಹುಕೋಪಗೊಂಡು, “ನಾನು ನಿನ್ನನ್ನು ದಾವೀದನ ಕೈಯಲ್ಲಿ ಒಪ್ಪಿಸಿಕೊಡದೆ ಈ ದಿವಸದವರೆಗೂ ಯೆಹೂದವನ್ನು ವಿರೋಧಿಸಿ, ನಿನ್ನ ತಂದೆ ಸೌಲನ ಕುಟುಂಬಕ್ಕೂ ಅವನ ಸಹೋದರರಿಗೂ, ಸ್ನೇಹಿತರಿಗೂ ದಯೆ ತೋರಿಸಿದ ನನ್ನನ್ನು ನೀನು ಈ ಹೊತ್ತು ಈ ಸ್ತ್ರೀಗೋಸ್ಕರ ನನ್ನಲ್ಲಿ ತಪ್ಪು ಹಿಡಿಯುವುದಕ್ಕೆ ನಾನೇನು ಯೆಹೂದ ನಾಯಿಯ ತಲೆಯೋ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ಅಬ್ನೇರನು ಈ ಮಾತನ್ನು ಕೇಳಿ ಕೋಪಗೊಂಡು ಈಷ್ಬೋಶೆತನಿಗೆ, “ಈ ವರೆಗೆ ನಾನು ನಿನ್ನ ತಂದೆಯಾದ ಸೌಲನ ಕುಟುಂಬಕ್ಕೂ ಅವನ ಬಂಧು ಮಿತ್ರರಿಗೂ ದಯೆತೋರಿಸುತ್ತಿದ್ದೇನಲ್ಲಾ. ನಿನ್ನನ್ನು ದಾವೀದನ ಕೈಗೆ ಒಪ್ಪಿಸಿಕೊಡಲಿಲ್ಲವಷ್ಟೆ. ಈಗ ಈ ಹೆಂಗಸಿನ ದೆಸೆಯಿಂದ ನನ್ನಲ್ಲಿ ತಪ್ಪುಹಿಡಿಯುವುದಕ್ಕೆ ನಾನೇನು ಯೆಹೂದ ನಾಯಿಯ ತಲೆಯೋ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

8 ಅಬ್ನೇರನು ಈ ಮಾತನ್ನು ಕೇಳಿ ಕೋಪಗೊಂಡು ಈಷ್ಬೋಶೆತನಿಗೆ, “ಈವರೆಗೆ ನಾನು ನಿನ್ನ ತಂದೆ ಸೌಲನ ಕುಟುಂಬಕ್ಕೂ ಅವನ ಬಂಧುಮಿತ್ರರಿಗೂ ಪ್ರಾಮಾಣಿಕನಾಗಿ ನಡೆದುಕೊಂಡೆನಲ್ಲವೇ? ನಿನ್ನನ್ನು ದಾವೀದನ ಕೈಗೆ ಒಪ್ಪಿಸಿಕೊಡಲಿಲ್ಲ. ಆದರೂ ಈಗ ಈ ಹೆಂಗಸಿನ ಕಾರಣ ನನ್ನಲ್ಲಿ ತಪ್ಪುಹಿಡಿಯುವುದಕ್ಕೆ ನಾನೇನು ಯೆಹೂದ ನಾಯಿಯ ತಲೆಯೋ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

8 ಅಬ್ನೇರನು ಈ ಮಾತನ್ನು ಕೇಳಿ ಉರಿಗೊಂಡು ಈಷ್ಬೋಶೆತನಿಗೆ - ಈವರೆಗೆ ನಾನು ನಿನ್ನ ತಂದೆಯಾದ ಸೌಲನ ಕುಟುಂಬಕ್ಕೂ ಅವನ ಬಂಧು ವಿುತ್ರರಿಗೂ ದಯೆತೋರಿಸುತ್ತಿದ್ದೆನಲ್ಲಾ; ನಿನ್ನನ್ನು ದಾವೀದನ ಕೈಗೆ ಒಪ್ಪಿಸಿಕೊಡಲಿಲ್ಲವಷ್ಟೆ. ಈಗ ಈ ಹೆಂಗಸಿನ ದೆಸೆಯಿಂದ ನನ್ನಲ್ಲಿ ತಪ್ಪುಹಿಡಿಯುವದಕ್ಕೆ ನಾನೇನು ಯೆಹೂದನಾಯಿಯ ತಲೆಯೋ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

8 ಈಷ್ಬೋಶೆತನ ಮಾತುಗಳಿಂದ ಅಬ್ನೇರನು ಬಹಳ ಕೋಪಗೊಂಡನು. ಅಬ್ನೇರನು, “ನಾನು ಸೌಲನಿಗೂ ಅವನ ವಂಶದವರಿಗೂ ನಂಬಿಗಸ್ತನಾಗಿದ್ದೆನು. ನಾನು ನಿನ್ನನ್ನು ದಾವೀದನಿಗೆ ಒಪ್ಪಿಸಲಿಲ್ಲ ಹಾಗೂ ಅವನಿಂದ ನೀನು ಸೋಲುವಂತೆ ಮಾಡಲಿಲ್ಲ. ನಾನು ಯೆಹೂದಕ್ಕಾಗಿ ಕೆಲಸ ಮಾಡುವ ದ್ರೋಹಿಯಲ್ಲ. ಆದರೆ ಈಗ ನಾನು ಇಂತಹ ಕೆಟ್ಟ ಕೆಲಸವನ್ನು ಮಾಡಿದೆನೆಂದು ಹೇಳುತ್ತಿರುವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಸಮುಯೇಲ 3:8
16 ತಿಳಿವುಗಳ ಹೋಲಿಕೆ  

ಆಗ ಅವನು ಅಡ್ಡಬಿದ್ದು, “ನೀನು ನನ್ನಂಥ ಸತ್ತ ನಾಯಿಯನ್ನು ದೃಷ್ಟಿಸುವ ಹಾಗೆ ನಿನ್ನ ದಾಸನು ಎಷ್ಟರವನು,” ಎಂದನು.


ಆಗ ಚೆರೂಯಳ ಮಗ ಅಬೀಷೈಯನು ಅರಸನಿಗೆ, “ಈ ಸತ್ತ ನಾಯಿ, ಅರಸನಾದ ನನ್ನ ಒಡೆಯನನ್ನು ದೂಷಿಸುವುದೇನು? ನಾನು ದಾಟಿ ಹೋಗಿ ಅವನ ತಲೆಯನ್ನು ತೆಗೆದುಕೊಳ್ಳಲು ಅಪ್ಪಣೆ ಆಗಲಿ,” ಎಂದನು.


ನೀನು ಯಾರನ್ನು ನಿಂದಿಸಿ ಯಾರನ್ನು ದೂಷಿಸಿದೆ? ಯಾರಿಗೆ ವಿರೋಧವಾಗಿ ನಿನ್ನ ಧ್ವನಿಯನ್ನು ಎತ್ತಿದ್ದೀ? ನಿನ್ನ ಕಣ್ಣುಗಳು ಗರ್ವದಿಂದ ನೋಡಿದ್ದು ಯಾರನ್ನು? ಇಸ್ರಾಯೇಲಿನ ಪರಿಶುದ್ಧ ದೇವರಿಗೆ ವಿರೋಧವಾಗಿಯಲ್ಲವೇ?


ಮನುಷ್ಯರ ವಿರುದ್ಧ ನಿಮ್ಮ ಕೋಪವು ನಿಮಗೆ ಘನವನ್ನು ತರುವುದು. ಉಳಿದಿರುವವರು ಕೋಪಕ್ಕೆ ತುತ್ತಾಗುವುದಿಲ್ಲ.


ಆದರೆ ಹಜಾಯೇಲನು, “ನಿಮ್ಮ ಸೇವಕನು ಕೇವಲ ನಾಯಿ, ಇಂಥಾ ಮಹಾ ಕೆಲಸವನ್ನು ಮಾಡುವುದಕ್ಕೆ ಹೇಗೆ ಸಾಧ್ಯ?” ಎಂದನು. ಎಲೀಷನು, “ನೀನು ಅರಾಮಿನ ಮೇಲೆ ಅರಸನಾಗುವೆ ಎಂದು ಯೆಹೋವ ದೇವರು ನನಗೆ ತಿಳಿಸಿದ್ದಾರೆ,” ಎಂದನು.


ಇದಲ್ಲದೆ ಪೂರ್ವದಲ್ಲಿ ಸೌಲನು ನಮ್ಮ ಮೇಲೆ ಅರಸನಾಗಿದ್ದಾಗ, ನೀನು ದಳಪತಿಯಾಗಿ ಇಸ್ರಾಯೇಲನ್ನು ಹೊರಗೆ ನಡೆಸುವವನಾಗಿಯೂ ಒಳಗೆ ತರುವವನಾಗಿಯೂ ಇದ್ದವನು. ಆದ್ದರಿಂದ ಯೆಹೋವ ದೇವರು ನಿನಗೆ, ‘ನೀನು ನನ್ನ ಜನರಾದ ಇಸ್ರಾಯೇಲರ ನಾಯಕನೂ ಪಾಲಕನೂ ಆಗಿರುವೆ ಎಂದು ಹೇಳಿದರು,’ ” ಎಂದರು.


ಆದರೆ ಈಗ ಅದನ್ನು ಮಾಡಿರಿ. ಏಕೆಂದರೆ, ‘ನಾನು ನನ್ನ ದಾಸನಾದ ದಾವೀದನ ಕೈಯಿಂದ ಜನರಾದ ಇಸ್ರಾಯೇಲರನ್ನು ಫಿಲಿಷ್ಟಿಯರ ಕೈಯಿಂದಲೂ, ಅವರ ಸಮಸ್ತ ಶತ್ರುಗಳ ಕೈಯಿಂದಲೂ ತಪ್ಪಿಸಿ ರಕ್ಷಿಸುವೆನು,’ ಎಂದು ಯೆಹೋವ ದೇವರು ದಾವೀದನ ವಿಷಯದಲ್ಲಿ ಹೇಳಿದ್ದಾರೆ,” ಎಂದನು.


ನಾನು ಸೌಲನ ಕುಟುಂಬದಿಂದ ರಾಜ್ಯವನ್ನು ತಪ್ಪಿಸಿ, ಯೆಹೋವ ದೇವರು ದಾವೀದನಿಗೆ ಆಣೆ ಇಟ್ಟ ಪ್ರಕಾರವೇ,


ಸಮುಯೇಲನು ಅವನಿಗೆ, “ನಿನ್ನ ಬಳಿಯಿಂದ ಇಸ್ರಾಯೇಲಿನ ರಾಜ್ಯವನ್ನು ಯೆಹೋವ ದೇವರು ಈ ಹೊತ್ತು ಕಿತ್ತು, ನಿನಗಿಂತ ಒಳ್ಳೆಯವನಾಗಿರುವ ನಿನ್ನ ನೆರೆಯವನಿಗೆ ಅದನ್ನು ಕೊಟ್ಟರು.


ಇಸ್ರಾಯೇಲರ ಪುರುಷ ಅಥವಾ ಸ್ತ್ರೀಯು ಸೂಳೆಗಾರಿಕೆಯಿಂದ ಸಂಪಾದಿಸಿದ ಹಣವನ್ನು ಹರಕೆಯಾಗಿ ದೇವ ಮಂದಿರದೊಳಗೆ ತರಬಾರದು. ಏಕೆಂದರೆ ಅವೆರಡನ್ನು ನಿನ್ನ ದೇವರಾದ ಯೆಹೋವ ದೇವರು ದ್ವೇಷಿಸುತ್ತಾರೆ.


“ನೀನು ಕೋಲು ಹಿಡಿದುಕೊಂಡು ನನ್ನ ಬಳಿಗೆ ಬರುವ ಹಾಗೆ ನಾನು ನಾಯಿಯೋ?” ಎಂದು ಹೇಳಿ ಆ ಫಿಲಿಷ್ಟಿಯನು ತನ್ನ ದೇವರುಗಳಿಂದ ದಾವೀದನನ್ನು ಶಪಿಸಿದನು.


ಸೌಲನ ಸೈನ್ಯಾಧಿಪತಿಯಾದ ನೇರನ ಮಗನಾಗಿರುವ ಅಬ್ನೇರನು ಸೌಲನ ಮಗ ಈಷ್ಬೋಶೆತನನ್ನು ಮಹನಯಿಮಿಗೆ ಕರೆದುಕೊಂಡು ಹೋದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು