Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಸಮುಯೇಲ 3:34 - ಕನ್ನಡ ಸಮಕಾಲಿಕ ಅನುವಾದ

34 ನಿನ್ನ ಕೈಗಳು ಕಟ್ಟಿರಲಿಲ್ಲ. ನಿನ್ನ ಕಾಲಿಗೆ ಬೇಡಿ ಹಾಕಿರಲಿಲ್ಲ. ಒಬ್ಬನು ದುಷ್ಟರ ಮುಂದೆ ಬೀಳುವ ಹಾಗೆಯೇ ನೀನು ಬಿದ್ದು ಹೋದೆ.” ಆಗ ಜನರೆಲ್ಲರು ತಿರುಗಿ ಅವನಿಗೋಸ್ಕರ ಅತ್ತರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

34 ನಿನ್ನ ಕೈಗಳು ಕಟ್ಟಲ್ಪಡಲಿಲ್ಲ. ನಿನ್ನ ಕಾಲುಗಳಿಗೆ ಬೇಡಿಗಳು ಹಾಕಿರಲಿಲ್ಲ. ನೀನು ದುಷ್ಟರಿಂದ ಹತನಾದಂತೆ ಹತನಾದಿ” ಎಂದು ಶೋಕಗೀತೆಯನ್ನು ಹಾಡಲು ಜನರು ತಿರುಗಿ ಅತ್ತರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

34 ನಿನ್ನ ಕೈ ಕಂಕಣಬದ್ಧವಾಗಿರಲಿಲ್ಲ, ನಿನ್ನ ಕಾಲಿಗೆ ಬೇಡಿ ಬಿದ್ದಿರಲಿಲ್ಲ, ದುಷ್ಟರಿಂದಲೋ ಎಂಬಂತೆ ನೀನು ಹತನಾದೆಯಲ್ಲಾ!” ಎಂದು ಶೋಕಗೀತೆಯನ್ನು ಹಾಡಿದನು. ಜನರು ಮತ್ತೆ ಕಣ್ಣೀರು ಸುರಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

34 ನಿನ್ನ ಕೈಗಳು ಕಟ್ಟಲ್ಪಡಲಿಲ್ಲ, ನಿನ್ನ ಕಾಲಿಗೆ ಬೇಡಿಗಳು ಬರಲಿಲ್ಲ; ನೀನು ದುಷ್ಟರಿಂದಲೋ ಎಂಬಂತೆ ಹತನಾದಿ ಎಂದು ಶೋಕಗೀತವನ್ನು ಹಾಡಲು ಜನರು ತಿರಿಗಿ ಅತ್ತರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

34 ಅಬ್ನೇರನೇ, ನಿನ್ನ ಕೈಗಳನ್ನು ಹಗ್ಗದಿಂದ ಬಿಗಿದಿರಲಿಲ್ಲ. ನಿನ್ನ ಪಾದಗಳಿಗೆ ಸಂಕೋಲೆಯನ್ನು ತೊಡಿಸಿರಲಿಲ್ಲ. ದುಷ್ಟಜನರೆದುರು ನೀನು ಬಿದ್ದೆಯಲ್ಲ, ನೀನು ಬಿದ್ದು ಸತ್ತೆಯಲ್ಲ.” ಆಗ ಜನರೆಲ್ಲರೂ ಅಬ್ನೇರನಿಗಾಗಿ ಮತ್ತೆ ಗೋಳಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಸಮುಯೇಲ 3:34
8 ತಿಳಿವುಗಳ ಹೋಲಿಕೆ  

ದರೋಡೆಕೋರರು ಮನುಷ್ಯನಿಗೋಸ್ಕರ ಹೊಂಚುಹಾಕುವಂತೆ, ಯಾಜಕರ ಗುಂಪು ದಾರಿಹೋಕರಿಗಾಗಿ ಹೊಂಚುಹಾಕುತ್ತಾ ಶೆಕೆಮಿಗೆ ಹೋಗುವವರನ್ನು ದಾರಿಯಲ್ಲಿ ಕೊಲೆಮಾಡುತ್ತಾರೆ. ಅವರು ನೀಚತನವನ್ನು ಮಾಡುವವರಾಗಿದ್ದಾರೆ.


ಕೊಲೆಗಾರನು ಮುಂಜಾನೆಯೇ ಎದ್ದು, ದಿಕ್ಕಿಲ್ಲದವರನ್ನೂ, ಬಡವರನ್ನೂ ಸಂಹರಿಸುತ್ತಾನೆ; ರಾತ್ರಿಯಲ್ಲಿ ಕಳ್ಳನಂತೆ ವರ್ತಿಸುತ್ತಾನೆ.


ಸೌಲನೂ, ಅವನ ಮಗನಾದ ಯೋನಾತಾನನೂ ಇಸ್ರಾಯೇಲಿನ ಮನೆಯವರೂ ಯೆಹೋವ ದೇವರ ಜನರೂ ಖಡ್ಗದಿಂದ ಬಿದ್ದ ಕಾರಣ, ಅವರಿಗೋಸ್ಕರ ಗೋಳಾಡಿ ಅತ್ತು, ಅಸ್ತಮಾನದವರೆಗೂ ಉಪವಾಸವಾಗಿದ್ದರು.


ಆದರೆ ಫಿಲಿಷ್ಟಿಯರು ಅವನನ್ನು ಹಿಡಿದು, ಅವನ ಕಣ್ಣುಗಳನ್ನು ಕಿತ್ತು, ಅವನನ್ನು ಗಾಜಕ್ಕೆ ಒಯ್ದು ಎರಡು ಕಂಚಿನ ಸಂಕೋಲೆಗಳನ್ನು ಹಾಕಿದರು. ಸೆರೆಮನೆಯಲ್ಲಿ ಅವನನ್ನು ಬೀಸುವುದಕ್ಕೆ ಹಚ್ಚಿದರು.


ಅರಸನು ಅಬ್ನೇರನಿಗೋಸ್ಕರ ಗೋಳಾಡಿ ಹೀಗೆ ಹಾಡಿದನು: “ಬುದ್ಧಿಹೀನನು ಸತ್ತ ಹಾಗೆಯೇ, ಅಬ್ನೇರನು ಸತ್ತನೋ?


ಇನ್ನೂ ಹೊತ್ತಿರುವಾಗಲೇ ಜನರೆಲ್ಲರು ಬಂದು ಊಟಮಾಡು ಎಂದು ದಾವೀದನಿಗೆ ಹೇಳಿದರು. ಅದಕ್ಕೆ ದಾವೀದನು, “ಸೂರ್ಯನು ಅಸ್ತಮಿಸುವುದಕ್ಕಿಂತ ಮುಂಚೆ ನಾನು ರೊಟ್ಟಿಯನ್ನಾಗಲಿ, ಬೇರೆ ಯಾವ ಆಹಾರವನ್ನಾಗಲಿ ರುಚಿ ನೋಡಿದರೆ, ದೇವರು ನನಗೆ ಬೇಕಾದದ್ದನ್ನು ಮಾಡಲಿ, ಅಧಿಕವಾಗಿಯೂ ಮಾಡಲಿ,” ಎಂದು ಆಣೆ ಇಟ್ಟುಕೊಂಡನು.


“ಇದು ಅವರು ಗೋಳಾಡುವಂತಹ ಗೋಳಾಟವಾಗಿದೆ. ಈಜಿಪ್ಟಿನ ವಿಷಯವಾಗಿಯೂ ಅದರ ಎಲ್ಲಾ ಜನಸಮೂಹದ ವಿಷಯವಾಗಿಯೂ ಜನಾಂಗಗಳ ಪುತ್ರಿಯರು ಇದನ್ನು ಕುರಿತು ಗೋಳಾಡುವರು, ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.”


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು