Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಸಮುಯೇಲ 3:33 - ಕನ್ನಡ ಸಮಕಾಲಿಕ ಅನುವಾದ

33 ಅರಸನು ಅಬ್ನೇರನಿಗೋಸ್ಕರ ಗೋಳಾಡಿ ಹೀಗೆ ಹಾಡಿದನು: “ಬುದ್ಧಿಹೀನನು ಸತ್ತ ಹಾಗೆಯೇ, ಅಬ್ನೇರನು ಸತ್ತನೋ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

33 ದಾವೀದನು ಅಬ್ನೇರನನ್ನು ಕುರಿತು, “ಅಬ್ನೇರನೇ ನಿನಗೆ ಮೂರ್ಖರಿಗಾಗುವಂತೆ ದುರ್ಮರಣವಾಯಿತೋ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

33 ದಾವೀದನು ಅಬ್ನೇರನನ್ನು ಕುರಿತು, “ಅಬ್ನೇರನೇ, ಮೂರ್ಖರಿಗಾಗುವಂತೆ ನಿನಗೆ ದುರ್ಮರಣವಾಯಿತೇ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

33 ದಾವೀದನು ಅಬ್ನೇರನನ್ನು ಕುರಿತು - ಅಬ್ನೇರನೇ, ನಿನಗೆ ಮೂರ್ಖರಿಗಾಗುವಂತೆ ದುರ್ಮರಣವಾಯಿತೇ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

33 ರಾಜನಾದ ದಾವೀದನು ಅಬ್ನೇರನಿಗಾಗಿ ಈ ಶೋಕಗೀತೆಯನ್ನು ಹಾಡಿದನು: “ಅಬ್ನೇರನು ಮೂರ್ಖ ಅಪರಾಧಿಯಂತೆ ಸತ್ತನೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಸಮುಯೇಲ 3:33
10 ತಿಳಿವುಗಳ ಹೋಲಿಕೆ  

ಯೆರೆಮೀಯನು ಯೋಷೀಯನಿಗೋಸ್ಕರ ದುಃಖ ಗೀತವನ್ನು ಬರೆದನು. ಹಾಡುಗಾರರೂ, ಹಾಡುಗಾರ್ತಿಯರೂ ಯೋಷೀಯನನ್ನು ಇದುವರೆಗೂ ತಮ್ಮ ಗೋಳಾಟ ಪದ್ಯಗಳಲ್ಲಿ ಸ್ಮರಿಸಿಕೊಳ್ಳುತ್ತಾರೆ. ಇದು ಇಸ್ರಾಯೇಲಿನಲ್ಲಿ ಸಂಪ್ರದಾಯವಾಯಿತು ಮತ್ತು ಈ ಗೀತೆಗಳು ಪ್ರಲಾಪಗಳಲ್ಲಿ ಬರೆದಿರುತ್ತವೆ.


ಆಗ ದಾವೀದನು ಸೌಲನ ಮೇಲೆಯೂ, ಅವನ ಮಗ ಯೋನಾತಾನನ ಮೇಲೆಯೂ ಶೋಕದಿಂದ ಈ ಗೀತೆ ಹಾಡಿ ಗೋಳಾಡಿದನು.


ಕೌಜುಗವು ತನ್ನದಲ್ಲದ ಮರಿಗಳನ್ನು ಕೂಡಿಸಿಕೊಳ್ಳುವ ಹಾಗೆ, ಅನ್ಯಾಯವಾಗಿ ಐಶ್ವರ್ಯವನ್ನು ಸಂಪಾದಿಸುವವನು ಹಾಗೆಯೇ ಇದ್ದಾನೆ. ಅವನು ತನ್ನ ಮಧ್ಯಪ್ರಾಯದಲ್ಲಿ ಅದನ್ನು ಬಿಡುವನು. ತನ್ನ ಅಂತ್ಯದಲ್ಲಿ ಅವನು ಮೂರ್ಖನೆಂದು ಸಾಬೀತಾಗುತ್ತದೆ.


ಬುದ್ಧಿಹೀನನ ಬಾಯಿಯು ಅವನ ನಾಶನ; ಅವನ ತುಟಿಗಳು ಅವನ ಪ್ರಾಣಕ್ಕೆ ಪಾಶ.


ನಿನ್ನ ಕೈಗಳು ಕಟ್ಟಿರಲಿಲ್ಲ. ನಿನ್ನ ಕಾಲಿಗೆ ಬೇಡಿ ಹಾಕಿರಲಿಲ್ಲ. ಒಬ್ಬನು ದುಷ್ಟರ ಮುಂದೆ ಬೀಳುವ ಹಾಗೆಯೇ ನೀನು ಬಿದ್ದು ಹೋದೆ.” ಆಗ ಜನರೆಲ್ಲರು ತಿರುಗಿ ಅವನಿಗೋಸ್ಕರ ಅತ್ತರು.


“ಇದು ಅವರು ಗೋಳಾಡುವಂತಹ ಗೋಳಾಟವಾಗಿದೆ. ಈಜಿಪ್ಟಿನ ವಿಷಯವಾಗಿಯೂ ಅದರ ಎಲ್ಲಾ ಜನಸಮೂಹದ ವಿಷಯವಾಗಿಯೂ ಜನಾಂಗಗಳ ಪುತ್ರಿಯರು ಇದನ್ನು ಕುರಿತು ಗೋಳಾಡುವರು, ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.”


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು