Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಸಮುಯೇಲ 24:10 - ಕನ್ನಡ ಸಮಕಾಲಿಕ ಅನುವಾದ

10 ದಾವೀದನು ಜನರನ್ನು ಲೆಕ್ಕಿಸಿದ ತರುವಾಯ ಅವನ ಮನಸ್ಸಾಕ್ಷಿ ಹಂಗಿಸತೊಡಗಿತು. ಆದ್ದರಿಂದ ದಾವೀದನು ಯೆಹೋವ ದೇವರಿಗೆ, “ನಾನು ಈ ಕಾರ್ಯವನ್ನು ಮಾಡಿದ್ದರಿಂದ ಮಹಾಪಾಪ ಮಾಡಿದೆನು. ಯೆಹೋವ ದೇವರೇ, ದಯಮಾಡಿ ನಿಮ್ಮ ಸೇವಕನ ಅಕ್ರಮವನ್ನು ಪರಿಹರಿಸಿರಿ; ಏಕೆಂದರೆ ನಾನು ಇದರಲ್ಲಿ ಬಹಳ ಬುದ್ಧಿಹೀನನಾಗಿ ನಡೆದೆನು,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ಜನಗಣತಿ ಮಾಡಿಸಿದ ನಂತರ ದಾವೀದನಿಗೆ ಮನಸ್ಸಾಕ್ಷಿಯು ಚುಚ್ಚತೊಡಗಿತು. ಆದುದರಿಂದ ಅವನು ಯೆಹೋವನನ್ನು, “ಯೆಹೋವನೇ, ನಾನು ಬುದ್ಧಿಹೀನಕಾರ್ಯವನ್ನು ಮಾಡಿ ಪಾಪಿಯಾದೆನು. ದಯವಿಟ್ಟು ನಿನ್ನ ಸೇವಕನ ಅಪರಾಧವನ್ನು ಕ್ಷಮಿಸು” ಎಂದು ಪ್ರಾರ್ಥಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

10 ಜನರ ಎಣಿಕೆ ಮಾಡಿಸಿದ ನಂತರ ದಾವೀದನನ್ನು ಮನಸ್ಸಾಕ್ಷಿ ಕಾಡತೊಡಗಿತು. ಆದುದರಿಂದ ಅವನು, “ಸರ್ವೇಶ್ವರಾ, ನಾನು ಬುದ್ಧಿಹೀನ ಕಾರ್ಯವನ್ನು ಮಾಡಿ ಪಾಪಿಯಾದೆ; ದಯವಿಟ್ಟು ನಿಮ್ಮ ದಾಸನ ಅಪರಾಧವನ್ನು ಕ್ಷಮಿಸಿ,” ಎಂದು ಪ್ರಾರ್ಥಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

10 ಖಾನೇಷುಮಾರಿ ಮಾಡಿಸಿದನಂತರ ದಾವೀದನನ್ನು ಮನಸ್ಸಾಕ್ಷಿಯು ಹಂಗಿಸತೊಡಗಿತು. ಆದದರಿಂದ ಅವನು ಯೆಹೋವನನ್ನು - ಯೆಹೋವನೇ, ನಾನು ಬುದ್ಧಿಹೀನಕಾರ್ಯವನ್ನು ಮಾಡಿ ಪಾಪಿಯಾದೆನು; ದಯವಿಟ್ಟು ನಿನ್ನ ಸೇವಕನ ಅಪರಾಧವನ್ನು ಕ್ಷವಿುಸು ಎಂದು ಪ್ರಾರ್ಥಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

10 ದಾವೀದನು ಜನರನ್ನು ಲೆಕ್ಕಹಾಕಿದ ನಂತರ ಅವಮಾನಗೊಂಡಂತೆ ಭಾವಿಸಿದನು. ದಾವೀದನು ಯೆಹೋವನಿಗೆ, “ನಾನು ಈ ಕಾರ್ಯವನ್ನು ಮಾಡಿ ಮಹಾಪಾಪಕ್ಕೆ ಒಳಗಾದೆನು! ಯೆಹೋವನೇ, ನನ್ನ ಪಾಪಕ್ಕಾಗಿ ನನ್ನನ್ನು ಕ್ಷಮಿಸೆಂದು ಬೇಡುತ್ತೇನೆ. ನಾನು ಬಹಳ ಮೂರ್ಖನಾಗಿಬಿಟ್ಟೆ” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಸಮುಯೇಲ 24:10
27 ತಿಳಿವುಗಳ ಹೋಲಿಕೆ  

ಆಗ ದಾವೀದನು ನಾತಾನನಿಗೆ, “ನಾನು ಯೆಹೋವ ದೇವರಿಗೆ ವಿರೋಧವಾಗಿ ಪಾಪಮಾಡಿದ್ದೇನೆ,” ಎಂದನು. ನಾತಾನನು ದಾವೀದನಿಗೆ, “ನೀನು ಸಾಯದ ಹಾಗೆ ಯೆಹೋವ ದೇವರು ನಿನ್ನ ಪಾಪವನ್ನು ಪರಿಹರಿಸಿದರು.


ಸಮುಯೇಲನು ಸೌಲನಿಗೆ, “ನೀನು ಬುದ್ಧಿಹೀನವಾದ ಕೆಲಸಮಾಡಿದ್ದೀ; ನಿನ್ನ ದೇವರಾದ ಯೆಹೋವ ದೇವರು ನಿನಗೆ ಆಜ್ಞಾಪಿಸಿದ ಆಜ್ಞೆಯನ್ನು ಕೈಗೊಳ್ಳಲಿಲ್ಲ. ಯೆಹೋವ ದೇವರು ಇಸ್ರಾಯೇಲರಲ್ಲಿ ನಿನ್ನ ರಾಜ್ಯವನ್ನು ಎಂದೆಂದಿಗೂ ಸ್ಥಿರಪಡಿಸುವುದಕ್ಕೆ ಇದ್ದರು.


ತನ್ನ ಪಾಪಗಳನ್ನು ಮುಚ್ಚಿಕೊಳ್ಳುವವನಿಗೆ ಏಳಿಗೆ ಆಗುವುದಿಲ್ಲ. ಆದರೆ ಪಾಪಗಳನ್ನು ಒಪ್ಪಿಕೊಂಡು ಬಿಟ್ಟುಬಿಡುವವನಿಗೆ ಕರುಣೆ ದೊರಕುವುದು.


ಆದರೆ ಹಾಗೆ ಮಾಡಿದ ಮೇಲೆ, ಸೌಲನ ನಿಲುವಂಗಿಯ ಅಂಚನ್ನು ಕತ್ತರಿಸಿಕೊಂಡದ್ದರಿಂದ ದಾವೀದನ ಮನಃಸ್ಸಾಕ್ಷಿ ಅವನನ್ನು ಹಂಗಿಸತೊಡಗಿತು.


ನಾವು ನಮ್ಮ ಪಾಪಗಳನ್ನು ದೇವರಿಗೆ ಅರಿಕೆಮಾಡಿದರೆ ಅವರು ನಂಬಿಗಸ್ತರೂ ನೀತಿವಂತರೂ ಆಗಿರುವುದರಿಂದ ನಮ್ಮ ಪಾಪಗಳನ್ನು ಕ್ಷಮಿಸಿ, ಸಕಲ ಅನೀತಿಯಿಂದ ನಮ್ಮನ್ನು ಶುದ್ಧಿಮಾಡುವರು.


ಏಕೆಂದರೆ ಯೆಹೋವ ದೇವರಿಗೆ ಪೂರ್ಣವಾಗಿ ಸಮರ್ಪಿಸಿಕೊಂಡವರ ಹೃದಯವನ್ನು ಬಲಪಡಿಸುವುದಕ್ಕೆ ಅವರ ಕಣ್ಣುಗಳು ಭೂಲೋಕದ ಎಲ್ಲಾ ಕಡೆ ಇವೆ. ಆದರೆ ಈಗ ನೀನು ಬುದ್ಧಿಹೀನನಾಗಿ ನಡೆದುಕೊಂಡಿದ್ದೀಯೆ. ನಿಶ್ಚಯವಾಗಿ ಇಂದಿನಿಂದ ನಿನಗೆ ಯುದ್ಧಗಳು ಇದ್ದೇ ಇರುತ್ತವೆ,” ಎಂದನು.


ದಾವೀದನು ದೇವರಿಗೆ, “ನಾನು ಈ ಕಾರ್ಯವನ್ನು ಮಾಡಿದ್ದರಿಂದ, ಮಹಾಪಾಪ ಮಾಡಿದೆನು. ನೀವು ದಯಮಾಡಿ ನಿಮ್ಮ ಸೇವಕನ ಅಕ್ರಮವನ್ನು ಪರಿಹರಿಸಿರಿ. ಏಕೆಂದರೆ ನಾನು ಇದರಲ್ಲಿ ಬಹಳ ಬುದ್ಧಿಹೀನನಾಗಿ ನಡೆದೆನು,” ಎಂದನು.


ನಾವು ಸಹ ಮೊದಲು ಅವಿವೇಕಿಗಳೂ ಅವಿಧೇಯರೂ ಮೋಸ ಹೋದವರೂ ವಿವಿಧ ಆಶೆಗಳಿಗೂ ಭೋಗಗಳಿಗೂ ದಾಸರಾಗಿದ್ದೆವು. ಕೆಟ್ಟತನ ಹಾಗೂ ಮತ್ಸರಗಳಲ್ಲಿ ಜೀವಿಸುವವರೂ ಅಸಹ್ಯರೂ ಒಬ್ಬರನ್ನೊಬ್ಬರು ದ್ವೇಷಿಸುವವರೂ ಆಗಿದ್ದೆವು.


ಅದನ್ನು ಅವರು ಕೇಳಿ ಹಿರಿಯರು ಮೊದಲುಗೊಂಡು ಕಿರಿಯರವರೆಗೂ ಒಬ್ಬೊಬ್ಬರಾಗಿ ಹೊರಟು ಹೋದರು; ಆಗ ಯೇಸು ಒಬ್ಬರೇ ಉಳಿದರು. ಆ ಸ್ತ್ರೀಯು ಅಲ್ಲಿಯೇ ನಿಂತಿದ್ದಳು.


ಮರುದಿನ ಯೇಸು ತನ್ನ ಕಡೆಗೆ ಬರುತ್ತಿರುವುದನ್ನು ಯೋಹಾನನು ಕಂಡು, “ಇಗೋ, ಲೋಕದ ಪಾಪವನ್ನು ತೆಗೆದುಹಾಕುವ ದೇವರ ಕುರಿಮರಿ,


ವ್ಯಭಿಚಾರ, ಲೋಭ, ದುಷ್ಟತ್ವ, ವಂಚನೆ, ಅಶ್ಲೀಲತೆ, ಅಸೂಯೆ, ನಿಂದೆ, ಗರ್ವ ಮತ್ತು ಮೂರ್ಖತನ ಮುಂತಾದ ದುರಾಲೋಚನೆಗಳು ಹೊರಡುತ್ತವೆ.


ಮಾತುಗಳನ್ನು ನಿಮ್ಮ ಸಂಗಡ ತೆಗೆದುಕೊಂಡು, ಯೆಹೋವ ದೇವರ ಕಡೆಗೆ ತಿರುಗಿಕೊಂಡು, ಅವರಿಗೆ ಹೇಳಿರಿ: “ನಮ್ಮ ಪಾಪಗಳನ್ನೆಲ್ಲಾ ಕ್ಷಮಿಸಿ, ನಮ್ಮಲ್ಲಿ ಒಳ್ಳೆಯದನ್ನು ಸ್ವೀಕರಿಸಿರಿ. ಆಗ ನಮ್ಮ ಸ್ತೋತ್ರ ಬಲಿಯನ್ನು ನಿಮಗೆ ಅರ್ಪಿಸುವೆವು.


ನನ್ನ ಪಾಪವನ್ನು ನಿಮಗೆ ತಿಳಿಸಿ, ನನ್ನ ಅನ್ಯಾಯವನ್ನು ಮರೆಮಾಡದೆ, “ನನ್ನ ಉಲ್ಲಂಘನೆಗಳನ್ನು ಯೆಹೋವ ದೇವರಿಗೆ ಅರಿಕೆ ಮಾಡುವೆನು,” ಎಂದು ಹೇಳಿದೆನು; ಆಗ, ನೀವು ನನ್ನ ಪಾಪದ ಅಪರಾಧವನ್ನು ಪರಿಹರಿಸಿದಿರಿ.


ನೀವು ನನ್ನ ಅಪರಾಧವನ್ನು ಪರಿಹರಿಸಬಾರದೇ? ನನ್ನ ಪಾಪವನ್ನು ಕ್ಷಮಿಸಬಾರದೇ? ನಾನು ಬೇಗ ಮಣ್ಣಿಗೆ ಸೇರಿಬಿಡುವೆನು; ನೀವು ನನ್ನನ್ನು ಹುಡುಕಿದರೆ ನಾನು ಇರುವುದಿಲ್ಲ.”


ಅನಂತರ ಹಿಜ್ಕೀಯನೂ, ಯೆರೂಸಲೇಮಿನ ನಿವಾಸಿಗಳೂ ತಮ್ಮ ಹೃದಯದ ಗರ್ವದ ವಿಷಯದಲ್ಲಿ ತಮ್ಮನ್ನು ತಾವು ತಗ್ಗಿಸಿಕೊಂಡದ್ದರಿಂದ, ಹಿಜ್ಕೀಯನ ದಿವಸಗಳಲ್ಲಿ ಯೆಹೋವ ದೇವರ ರೌದ್ರವು ಅವರ ಮೇಲೆ ಬರಲಿಲ್ಲ.


ಆಗ ಸೌಲನು, “ನಾನು ಪಾಪಮಾಡಿದೆನು. ನನ್ನ ಮಗನಾದ ದಾವೀದನೇ ತಿರುಗಿ ಬಾ. ಏಕೆಂದರೆ ನನ್ನ ಪ್ರಾಣ ಈ ಹೊತ್ತು ನಿನ್ನ ದೃಷ್ಟಿಗೆ ಅಮೂಲ್ಯವಾಗಿದ್ದರಿಂದ ನಾನು ಇನ್ನು ಮೇಲೆ ನಿನಗೆ ಕೇಡು ಮಾಡೆನು. ಇದುವರೆಗೆ ನಾನು ಮಾಡಿದ್ದು ಹುಚ್ಚುತನವೂ, ದೊಡ್ಡ ತಪ್ಪೂ ಆಗಿದೆ,” ಎಂದನು.


ಯೆಹೋವ ದೇವರಿಗೆ ಪ್ರತಿಯಾಗಿ ಹೀಗೆ ವರ್ತಿಸುವುದು ಸರಿಯೋ? ಜ್ಞಾನವಿಲ್ಲದ ಬುದ್ಧಿಹೀನ ಜನರೇ, ದೇವರು ನಿಮ್ಮನ್ನು ಸೃಷ್ಟಿಸಿದ ತಂದೆಯಲ್ಲವೋ? ನಿಮ್ಮನ್ನು ಸೃಷ್ಟಿಸಿ ಸ್ಥಿರಪಡಿಸಿದ್ದು ದೇವರಲ್ಲವೋ?


ಆರೋನನು ಮೋಶೆಗೆ, “ಅಯ್ಯೋ ನನ್ನ ಒಡೆಯನೇ, ನಾವು ಪಾಪಮಾಡಿದೆವು. ಬುದ್ಧಿ ಇಲ್ಲದೆ ಮಾಡಿದ ಈ ಪಾಪವನ್ನು ನಮ್ಮ ಮೇಲೆ ಹಾಕಬೇಡ.


ದಾವೀದನು ಜನರನ್ನು ಹೊಡೆಯುವ ದೂತನನ್ನು ನೋಡಿದಾಗ, ಅವನು ಯೆಹೋವ ದೇವರಿಗೆ, “ಇಗೋ, ನಾನೇ ಪಾಪಮಾಡಿದೆನು. ಕುರುಬನಂತಿರುವ ನಾನೇ ಕೆಟ್ಟದ್ದನ್ನು ಮಾಡಿದೆನು. ಆದರೆ ಕುರಿಗಳಂತಿರುವ ಇವರು ಮಾಡಿದ್ದೇನು? ನಿಮ್ಮ ಹಸ್ತವು ನನಗೆ ವಿರೋಧವಾಗಿಯೂ ನನ್ನ ಕುಟುಂಬದ ವಿರೋಧವಾಗಿಯೂ ಇರಲಿ ಎಂದು ನಾನು ಬೇಡುತ್ತೇನೆ,” ಎಂದನು.


“ಅವರು ನಿಮಗೆ ವಿರೋಧವಾಗಿ ಪಾಪವನ್ನು ಮಾಡಿದ್ದರಿಂದ, ನೀವು ಆಕಾಶವನ್ನು ಮಳೆಗರೆಯದಂತೆ ಮುಚ್ಚಿ ಅವರನ್ನು ಕುಂದಿಸಿದಾಗ ಅವರು ತಮ್ಮ ಪಾಪವನ್ನು ಬಿಟ್ಟು ಈ ಸ್ಥಳದ ಕಡೆಗೆ ತಿರುಗಿಕೊಂಡು, ನಿಮ್ಮ ನಾಮವನ್ನು ಕೊಂಡಾಡಿ ಪ್ರಾರ್ಥಿಸಿದರೆ,


ಆಗ ಫರೋಹನು ಮೋಶೆ ಆರೋನರನ್ನು ತ್ವರೆಯಾಗಿ ಕರೆಯಿಸಿ ಅವರಿಗೆ, “ನಾನು ನಿಮ್ಮ ದೇವರಾದ ಯೆಹೋವ ದೇವರಿಗೂ, ನಿಮಗೂ ವಿರೋಧವಾಗಿ ಪಾಪಮಾಡಿದ್ದೇನೆ.


ದಾವೀದನು ತನ್ನ ಜನರಿಗೆ, “ಅವನು ಯೆಹೋವ ದೇವರ ಅಭಿಷಿಕ್ತನಾದದರಿಂದ ನನ್ನ ಕೈ ಅವನಿಗೆ ವಿರೋಧವಾಗಿ ಚಾಚಿ, ನನ್ನ ಒಡೆಯನಿಗೆ ಈ ಕಾರ್ಯ ಮಾಡುವುದನ್ನು ಯೆಹೋವ ದೇವರು ತಡೆಯಲಿ,” ಎಂದನು.


ಇದಲ್ಲದೆ ಈ ಕಾರ್ಯವು ದೇವರ ಸಮ್ಮುಖದಲ್ಲಿ ಕೆಟ್ಟದ್ದಾದದ್ದರಿಂದ, ದೇವರು ಇಸ್ರಾಯೇಲನ್ನು ಶಿಕ್ಷಿಸಿದರು.


ಯೆಹೋವ ದೇವರು ಹೀಗೆ ಘೋಷಿಸುತ್ತಾರೆ, “ಈಗಲಾದರೂ ಉಪವಾಸದಿಂದಲೂ ಅಳುವಿಕೆಯಿಂದಲೂ ಗೋಳಾಟದಿಂದಲೂ ನಿಮ್ಮ ಪೂರ್ಣಹೃದಯದಿಂದ ನನ್ನ ಕಡೆಗೆ ತಿರುಗಿಕೊಳ್ಳಿರಿ.”


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು