Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಸಮುಯೇಲ 21:4 - ಕನ್ನಡ ಸಮಕಾಲಿಕ ಅನುವಾದ

4 ಆಗ ಗಿಬ್ಯೋನ್ಯರು ಅವನಿಗೆ, “ಸೌಲನ ಕೈಯಿಂದಲಾದರೂ, ಅವನ ಮನೆಯವರ ಕೈಯಿಂದಲಾದರೂ, ನಮಗೆ ಬೆಳ್ಳಿಯಾದರೂ, ಬಂಗಾರವಾದರೂ ಬೇಡ. ನೀನು ಈ ಕಾರ್ಯಕ್ಕೋಸ್ಕರ ಇಸ್ರಾಯೇಲಿನಲ್ಲಿ ಒಬ್ಬನನ್ನಾದರೂ ಕೊಂದುಹಾಕಬೇಕೆಂಬುದು ನಮಗೆ ಅಗತ್ಯವಿಲ್ಲ,” ಎಂದರು. ಆಗ ಅವನು, “ನೀವು ನನಗೆ ಏನು ಹೇಳುತ್ತೀರೋ, ನಾನು ನಿಮಗೆ ಮಾಡುವೆನು,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ಅದಕ್ಕೆ ಅವರು, “ಸೌಲನ ಸಂತಾನದವರಿಗೂ ನಮಗೂ ಇರುವ ವ್ಯಾಜ್ಯವು ಬೆಳ್ಳಿ ಬಂಗಾರದಿಂದ ಮುಗಿಯಲಾರದು. ಇಸ್ರಾಯೇಲ್ಯರನ್ನು ಕೊಲ್ಲುವ ಅಧಿಕಾರವು ನಮಗಿಲ್ಲ” ಎಂದು ಉತ್ತರ ಕೊಟ್ಟರು. ಆಗ ಅರಸನು ಅವರಿಗೆ, “ಏನು ಮಾಡಬೇಕು ಹೇಳಿರಿ ಮಾಡುತ್ತೇನೆ” ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

4 ಅದಕ್ಕೆ ಅವರು, “ಸೌಲನ ಸಂತಾನದವರಿಗೂ ನಮಗೂ ಇರುವ ವ್ಯಾಜ್ಯ ಬೆಳ್ಳಿಬಂಗಾರದಿಂದ ತೀರಲಾರದು; ಇಸ್ರಯೇಲರನ್ನು ಕೊಲ್ಲುವ ಅಧಿಕಾರ ನಮಗಿಲ್ಲ,” ಎಂದು ಉತ್ತರಕೊಟ್ಟರು. ಅರಸನು ಅವರಿಗೆ, “ಏನು ಮಾಡಬೇಕು ಹೇಳಿ; ಮಾಡುತ್ತೇನೆ,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ಅದಕ್ಕೆ ಅವರು - ಸೌಲನ ಸಂತಾನದವರಿಗೂ ನಮಗೂ ಇರುವ ವ್ಯಾಜ್ಯವು ಬೆಳ್ಳಿಬಂಗಾರದಿಂದ ತೀರಲಾರದು; ಇಸ್ರಾಯೇಲ್ಯರನ್ನು ಕೊಲ್ಲುವ ಅಧಿಕಾರವು ನಮಗಿಲ್ಲ ಎಂದು ಉತ್ತರ ಕೊಡಲು ಅರಸನು ಅವರಿಗೆ - ಏನು ಮಾಡಬೇಕು ಹೇಳಿರಿ, ಮಾಡುತ್ತೇನೆ ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ಗಿಬ್ಯೋನ್ಯರು ದಾವೀದನಿಗೆ, “ಸೌಲನ ಬೆಳ್ಳಿಬಂಗಾರವಾಗಲಿ ಅವನ ಮನೆಯಾಗಲಿ ನಮಗೆ ಬೇಕಾಗಿಲ್ಲ ಮತ್ತು ಇಸ್ರೇಲಿನ ಯಾವ ವ್ಯಕ್ತಿಯನ್ನೂ ಕೊಲ್ಲಲು ನಮಗೆ ಹಕ್ಕಿಲ್ಲ” ಎಂದು ಹೇಳಿದರು. ದಾವೀದನು, “ಆದರೆ ನಿಮಗಾಗಿ ನಾನು ಏನು ಮಾಡಲಿ?” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಸಮುಯೇಲ 21:4
5 ತಿಳಿವುಗಳ ಹೋಲಿಕೆ  

“ ‘ಸಾಯತಕ್ಕ ಕೊಲೆಪಾತಕನ ಪ್ರಾಣಕ್ಕೋಸ್ಕರ ಈಡನ್ನು ತೆಗೆದುಕೊಳ್ಳಬೇಡಿರಿ. ಏಕೆಂದರೆ ಅವನು ನಿಜವಾಗಿಯೂ ಸಾಯಬೇಕು.


“ ‘ತನ್ನ ಆಶ್ರಯದ ಪಟ್ಟಣಕ್ಕೆ ಓಡಿಹೋದವನಿಗೋಸ್ಕರ ಅವನು ತಿರುಗಿಬಂದು ಮಹಾಯಾಜಕನು ಸಾಯುವವರೆಗೂ ಸ್ವದೇಶದಲ್ಲಿ ವಾಸಮಾಡುವ ಹಾಗೆ ಈಡನ್ನು ತೆಗೆದುಕೊಳ್ಳಬೇಡಿರಿ.


ಅದಕ್ಕೆ ಲಾಬಾನನು, “ನಿನಗೆ ನಾನು ಏನು ಕೊಡಲಿ?” ಎಂದನು. ಯಾಕೋಬನು, “ಏನೂ ಕೊಡಬೇಡ, ಒಂದು ವಿಷಯದಲ್ಲಿ ಒಪ್ಪಿಕೊಂಡರೆ, ನಾನು ಮತ್ತೆ ನಿನ್ನ ಮಂದೆಯನ್ನು ಮೇಯಿಸಿ ಕಾಯುವೆನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು