2 ಸಮುಯೇಲ 20:11 - ಕನ್ನಡ ಸಮಕಾಲಿಕ ಅನುವಾದ11 ಯೋವಾಬನ ಜನರಲ್ಲಿ ಒಬ್ಬನು ಸತ್ತವನ ಬಳಿಯಲ್ಲಿ ನಿಂತು, “ಯಾವನು ಯೋವಾಬನ ಮೇಲೆ ಇಷ್ಟವುಳ್ಳವನೋ, ಯಾವನು ದಾವೀದನಿಗೆ ಹೊಂದಿದವನೋ, ಅವನು ಯೋವಾಬನ ಹಿಂದೆ ಹೋಗಲಿ,” ಎಂದನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201911 ಯೋವಾಬನ ಆಳುಗಳಲ್ಲೊಬ್ಬನು ಅಮಾಸನ ಹತ್ತಿರ ನಿಂತು, “ದಾವೀದ ಹಾಗೂ ಯೋವಾಬರ ಕಡೆಯವರು ಯೋವಾಬನನ್ನು ಹಿಂಬಾಲಿಸಲಿ” ಎಂದು ಕೂಗಿದನು ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)11 “ಯೋವಾಬನೂ ಅವನ ತಮ್ಮನಾದ ಅಬೀಷೈಯೂ ಬಿಕ್ರೀಯ ಮಗನಾದ ಶೆಬನನ್ನು ಹಿಂದಟ್ಟುವುದಕ್ಕಾಗಿ ಮುಂದೆ ನಡೆದಾಗ ಯೋವಾಬನ ಆಳುಗಳಲ್ಲೊಬ್ಬನು ಅಮಾಸನ ಹತ್ತಿರ ನಿಂತು, “ದಾವೀದ ಹಾಗು ಯೋವಾಬರ ಕಡೆಯವರು ಯೋವಾಬನನ್ನು ಹಿಂಬಾಲಿಸಲಿ,” ಎಂದು ಕೂಗಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)11 ಯೋವಾಬನ ಆಳುಗಳಲ್ಲೊಬ್ಬನು ಅಮಾಸನ ಹತ್ತಿರ ನಿಂತು - ದಾವೀದ ಯೋವಾಬರ ಕಡೆಯವರು ಯೋವಾಬನನ್ನು ಹಿಂಬಾಲಿಸಲಿ ಎಂದು ಕೂಗಿದನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್11 ಯೋವಾಬನ ಯುವಸೈನಿಕರಲ್ಲಿ ಒಬ್ಬನು ಅಮಾಸನ ದೇಹದ ಹತ್ತಿರ ನಿಂತುಕೊಂಡು, “ಯೋವಾಬನನ್ನು ಮತ್ತು ದಾವೀದನನ್ನು ಬೆಂಬಲಿಸುವ ಪ್ರತಿಯೊಬ್ಬರೂ ಯೋವಾಬನನ್ನು ಹಿಂಬಾಲಿಸಲೇಬೇಕು. ಶೆಬನನ್ನು ಅಟ್ಟಿಸಿಕೊಂಡು ಹೋಗಲು ಅವನಿಗೆ ಸಹಾಯಮಾಡಿ” ಎಂದು ಹೇಳಿದನು. ಅಧ್ಯಾಯವನ್ನು ನೋಡಿ |
ಕಾರ್ಯವು ಹಾಗಲ್ಲ. ಏಕೆಂದರೆ ಬಿಕ್ರಿಯ ಮಗನಾದ ಶೆಬನೆಂಬ ಹೆಸರುಳ್ಳ ಎಫ್ರಾಯೀಮ್ ಬೆಟ್ಟದವನಾದ ಒಬ್ಬ ಮನುಷ್ಯನು, ಅರಸನಾದ ದಾವೀದನಿಗೆ ವಿರೋಧವಾಗಿ ತನ್ನ ಕೈಯನ್ನು ಎತ್ತಿದ್ದಾನೆ. ನೀವು ಅವನೊಬ್ಬನನ್ನೇ ಒಪ್ಪಿಸಿಕೊಡಿರಿ. ಆಗ ನಾನು ಪಟ್ಟಣವನ್ನು ಬಿಟ್ಟು ಹೋಗುವೆನು,” ಎಂದನು. ಆ ಸ್ತ್ರೀಯು ಯೋವಾಬನಿಗೆ, “ಅವನ ತಲೆಯು ಗೋಡೆಯ ಮೇಲಿನಿಂದ ನಿನ್ನ ಕಡೆಗೆ ಎಸೆಯಲಾಗುವುದು,” ಎಂದಳು.