2 ಸಮುಯೇಲ 2:1 - ಕನ್ನಡ ಸಮಕಾಲಿಕ ಅನುವಾದ1 ಇದಾದ ಮೇಲೆ ದಾವೀದನು ಯೆಹೋವ ದೇವರನ್ನು, “ಯೆಹೂದದ ಪಟ್ಟಣಗಳಲ್ಲಿ ಯಾವುದಾದರೊಂದು ಪಟ್ಟಣಕ್ಕೆ ಹೋಗಬಹುದೋ?” ಎಂದು ಕೇಳಿದನು. ಯೆಹೋವ ದೇವರು ಅವನಿಗೆ, “ಹೋಗು,” ಎಂದರು. ಅದಕ್ಕವನು, “ನಾನು ಎಲ್ಲಿಗೆ ಹೋಗಲಿ?” ಎಂದನು. ಅದಕ್ಕೆ ದೇವರು, “ಹೆಬ್ರೋನಿಗೆ,” ಎಂದರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20191 ಅನಂತರ ದಾವೀದನು ಯೆಹೋವನನ್ನು, “ನಾನು ಯೆಹೂದ ದೇಶದ ಯಾವುದಾದರು ಒಂದು ಪಟ್ಟಣಕ್ಕೆ ಹೋಗಬಹುದೋ?” ಎಂದು ಕೇಳಲು ಆತನು ಹೋಗಬಹುದು ಅಂದನು. ಅವನು ತಿರುಗಿ, “ಯಾವ ಊರಿಗೆ ಹೋಗಲಿ?” ಎಂದು ಕೇಳಿದ್ದಕ್ಕೆ ಹೆಬ್ರೋನಿಗೆ ಹೋಗು ಎಂದು ಉತ್ತರ ಸಿಕ್ಕಿತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)1 ಅನಂತರ ದಾವೀದನು ಸರ್ವೇಶ್ವರನನ್ನು, “ನಾನು ಜುದೇಯ ನಾಡಿನ ಯಾವುದಾದರೊಂದು ಪಟ್ಟಣಕ್ಕೆ ಹೋಗಬಹುದೇ?” ಎಂದು ಕೇಳಿದನು. “ಹೋಗಬಹುದು” ಎಂದರು ಸರ್ವೇಶ್ವರ. ಅವನು ಪುನಃ, “ಯಾವ ಊರಿಗೆ ಹೋಗಲಿ?” ಎಂದು ಕೇಳಿದ್ದಕ್ಕೆ, “ಹೆಬ್ರೋನಿಗೆ ಹೋಗು,” ಎಂಬ ಉತ್ತರ ಸಿಕ್ಕಿತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)1 ಅನಂತರ ದಾವೀದನು ಯೆಹೋವನನ್ನು - ನಾನು ಯೆಹೂದದೇಶದ ಯಾವದಾದರೊಂದು ಪಟ್ಟಣಕ್ಕೆ ಹೋಗಬಹುದೋ ಎಂದು ಕೇಳಲು ಆತನು - ಹೋಗಬಹುದು ಅಂದನು. ಅವನು ತಿರಿಗಿ - ಯಾವ ಊರಿಗೆ ಹೋಗಲಿ ಎಂದು ಕೇಳಿದ್ದಕ್ಕೆ - ಹೆಬ್ರೋನಿಗೆ ಹೋಗು ಎಂಬ ಉತ್ತರ ಸಿಕ್ಕಿತು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್1 ತರುವಾಯ ದಾವೀದನು ಯೆಹೋವನಲ್ಲಿ ಪ್ರಾರ್ಥಿಸಿ, “ಯೆಹೂದದ ಯಾವುದಾದರೂ ನಗರಕ್ಕೆ ನಾನು ಹೋಗಬಹುದೇ?” ಎಂದು ಕೇಳಿದನು. “ಹೋಗು” ಎಂಬುದಾಗಿ ಯೆಹೋವನು ಹೇಳಿದನು. “ನಾನು ಎಲ್ಲಿಗೆ ಹೋಗಲಿ?” ಎಂದು ದಾವೀದನು ಕೇಳಿದನು. “ಹೆಬ್ರೋನಿಗೆ ಹೋಗು” ಎಂದು ಯೆಹೋವನು ಉತ್ತರಿಸಿದನು. ಅಧ್ಯಾಯವನ್ನು ನೋಡಿ |