Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಸಮುಯೇಲ 19:4 - ಕನ್ನಡ ಸಮಕಾಲಿಕ ಅನುವಾದ

4 ಆದರೆ ಅರಸನು ಮೋರೆಯನ್ನು ಮುಚ್ಚಿಕೊಂಡು, ಮಹಾಶಬ್ದವಾಗಿ, “ನನ್ನ ಮಗ ಅಬ್ಷಾಲೋಮನೇ, ಅಬ್ಷಾಲೋಮನೇ ನನ್ನ ಮಗನೇ, ನನ್ನ ಮಗನೇ,” ಎಂದು ಕೂಗುತ್ತಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ಅರಸನು ತನ್ನ ಮುಖವನ್ನು ಮುಚ್ಚಿಕೊಂಡು, “ನನ್ನ ಮಗನಾದ ಅಬ್ಷಾಲೋಮನೇ, ಅಬ್ಷಾಲೋಮನೇ, ನನ್ನ ಮಗನೇ, ನನ್ನ ಮಗನೇ!” ಎಂದು ಬಹಳವಾಗಿ ಗೋಳಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

4 ಅರಸನು ತನ್ನ ಮುಖ ಮುಚ್ಚಿಕೊಂಡು, “ಮಗ ಅಬ್ಷಾಲೋಮನೇ, ಅಬ್ಷಾಲೋಮನೇ, ನನ್ನ ಮಗನೇ, ಮಗನೇ,” ಎಂದು ಬಹಳವಾಗಿ ಗೋಳಾಡಿದನು.‍

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ಅರಸನು ತನ್ನ ಮೋರೆಯನ್ನು ಮುಚ್ಚಿಕೊಂಡು - ನನ್ನ ಮಗನಾದ ಅಬ್ಷಾಲೋಮನೇ, ಅಬ್ಷಾಲೋಮನೇ, ನನ್ನ ಮಗನೇ, ಮಗನೇ ಎಂದು ಬಹಳವಾಗಿ ಗೋಳಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ರಾಜನು ತನ್ನ ಮುಖವನ್ನು ಮುಚ್ಚಿಕೊಂಡಿದ್ದನು. ರಾಜನು, “ನನ್ನ ಮಗನೇ, ಅಬ್ಷಾಲೋಮನೇ, ಅಬ್ಷಾಲೋಮನೇ, ನನ್ನ ಮಗನೇ, ಮಗನೇ” ಎಂದು ಗಟ್ಟಿಯಾಗಿ ಅಳುತ್ತಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಸಮುಯೇಲ 19:4
5 ತಿಳಿವುಗಳ ಹೋಲಿಕೆ  

ಆಗ ಅರಸನು ನಡುಗುತ್ತಾ ಊರು ಬಾಗಿಲ ಮೇಲಿರುವ ಕೊಠಡಿಗೆ ಏರಿಹೋದನು. ಹೋಗುವಾಗ, “ನನ್ನ ಮಗನಾದ ಅಬ್ಷಾಲೋಮನೇ, ನನ್ನ ಮಗನೇ, ನನ್ನ ಮಗನಾದ ಅಬ್ಷಾಲೋಮನೇ, ನಿನಗೆ ಬದಲಾಗಿ ನಾನು ಸತ್ತಿದ್ದರೆ ಉತ್ತಮವಾಗುತ್ತಿತ್ತು. ಅಬ್ಷಾಲೋಮನೇ, ನನ್ನ ಮಗನೇ, ನನ್ನ ಮಗನೇ,” ಎಂದು ಹೇಳಿ ಅತ್ತನು.


ದಾವೀದನು ಅಳುತ್ತಾ ತನ್ನ ತಲೆಯನ್ನು ಮುಚ್ಚಿಕೊಂಡು, ಬರಿಗಾಲಿನಿಂದ ಎಣ್ಣೆಮರಗಳ ಗುಡ್ಡವನ್ನು ಏರಿದನು. ಅವನ ಸಂಗಡ ಇರುವ ಸಮಸ್ತ ಜನರೂ, ತಮ್ಮ ತಮ್ಮ ತಲೆಗಳನ್ನು ಮುಚ್ಚಿಕೊಂಡು ಅಳುತ್ತಾ ಮೇಲಕ್ಕೆ ಏರಿದರು.


ಆದ್ದರಿಂದ ಜನರು ಯುದ್ಧದಲ್ಲಿ ಓಡಿಹೋಗಿ ಅವಮಾನ ಪಟ್ಟು ಬರುವ ಕಳ್ಳರ ಹಾಗೆ ಪಟ್ಟಣದೊಳಗೆ ಬಂದರು.


ಆಗ ಯೋವಾಬನು ಮನೆಯೊಳಗೆ ಅರಸನ ಬಳಿಗೆ ಬಂದು, ಅವನಿಗೆ, “ನಿನ್ನ ಪ್ರಾಣವನ್ನೂ, ನಿನ್ನ ಪುತ್ರಪುತ್ರಿಯರ ಪ್ರಾಣಗಳನ್ನೂ, ನಿನ್ನ ಹೆಂಡತಿಯರ ಮತ್ತು ಉಪಪತ್ನಿಯರ ಪ್ರಾಣಗಳನ್ನೂ ರಕ್ಷಿಸಿದ ನಿನ್ನ ಸೇವಕರನ್ನು ಈ ಹೊತ್ತು ನಾಚಿಕೆಪಡಿಸಿದ್ದೀ.


ಅರಸನಾದ ದಾವೀದನ ಹೃದಯವು ಅಬ್ಷಾಲೋಮನ ಕಡೆಗೆ ಇರುವುದನ್ನು ಚೆರೂಯಳ ಮಗ ಯೋವಾಬನಿಗೆ ತಿಳಿಯಿತು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು