Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಸಮುಯೇಲ 19:14 - ಕನ್ನಡ ಸಮಕಾಲಿಕ ಅನುವಾದ

14 ಅರಸನು ಸಕಲ ಯೆಹೂದ ಜನರ ಹೃದಯವನ್ನು ಸಂಪೂರ್ಣವಾಗಿ ಗೆದ್ದುಕೊಂಡದ್ದರಿಂದ, ಅವರು ಅರಸನಿಗೆ, “ನೀನೂ, ನಿನ್ನ ಸಮಸ್ತ ಸೇವಕರೂ ತಿರುಗಿ ಬನ್ನಿರಿ,” ಎಂದು ಹೇಳಿ ಕಳುಹಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

14 ಆಗ ಯೆಹೂದ್ಯರೆಲ್ಲರೂ ಏಕಮನಸ್ಸಿನಿಂದ ಅರಸನ ಕಡೆಗೆ ತಿರುಗಿಕೊಂಡು ಅವನಿಗೆ, “ನೀನು ಮತ್ತು ನಿನ್ನ ಎಲ್ಲಾ ಸೇವಕರೂ ಹಿಂದಿರುಗಿ ಬನ್ನಿರಿ” ಎಂದು ಹೇಳಿಕಳುಹಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

14 ಆಗ ಯೆಹೂದ್ಯರೆಲ್ಲರೂ ಏಕ ಮನಸ್ಸಿನಿಂದ ಅರಸನ ಕಡೆಗೆ ತಿರುಗಿಕೊಂಡು ಅವನಿಗೆ, ” ನೀವು ನಿಮ್ಮ ಎಲ್ಲಾ ಸೇವಕರೊಡನೆ ಮರಳಿ ಬನ್ನಿ,” ಎಂದು ಹೇಳಿಕಳುಹಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

14 ಆಗ ಯೆಹೂದ್ಯರೆಲ್ಲರೂ ಏಕ ಮನಸ್ಸಿನಿಂದ ಅರಸನ ಕಡೆಗೆ ತಿರುಗಿಕೊಂಡು ಅವನಿಗೆ - ನೀನೂ ನಿನ್ನ ಎಲ್ಲಾ ಸೇವಕರೂ ತಿರಿಗಿ ಬನ್ನಿರಿ ಎಂದು ಹೇಳಿಕಳುಹಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

14 ದಾವೀದನ ಮಾತುಗಳು ಯೆಹೂದದ ಜನರೆಲ್ಲರ ಹೃದಯಗಳಿಗೆ ತಾಕಿದವು, ಅವರೆಲ್ಲರೂ ಒಂದೇ ಮನಸ್ಸಿನಿಂದ ಒಪ್ಪಿಕೊಂಡರು. ಯೆಹೂದದ ಜನರು ರಾಜನಿಗೆ, “ನೀನು ನಿನ್ನ ಸೇವಕರೆಲ್ಲರೊಡನೆ ಹಿಂದಿರುಗಿ ಬಾ” ಎಂಬ ಸಂದೇಶವೊಂದನ್ನು ಕಳುಹಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಸಮುಯೇಲ 19:14
8 ತಿಳಿವುಗಳ ಹೋಲಿಕೆ  

ಆಗ ಇಸ್ರಾಯೇಲರೆಲ್ಲರು ಹೊರಟು ಗಿಲ್ಯಾದ್ ಸಹಿತವಾಗಿ ದಾನ್ ಪಟ್ಟಣ ಮೊದಲುಗೊಂಡು ಬೇರ್ಷೆಬದ ಮಟ್ಟಿಗೂ ಒಬ್ಬ ಮನುಷ್ಯನಂತೆ ಮಿಚ್ಪೆಯಲ್ಲಿ ಯೆಹೋವ ದೇವರ ಮುಂದೆ ಕೂಡಿಬಂದರು.


ವಿಶ್ವಾಸಿಗಳೆಲ್ಲರ ಹೃದಯ ಹಾಗೂ ಮನಸ್ಸುಗಳು ಒಂದಾಗಿದ್ದವು. ಯಾವನೂ ತನ್ನ ಆಸ್ತಿಯನ್ನು ತನ್ನದೇ ಎಂದು ಹಕ್ಕು ಸಾಧಿಸಲಿಲ್ಲ. ಆದರೆ ಅವರೆಲ್ಲರೂ ತಮಗಿದ್ದ ಎಲ್ಲವನ್ನು ಹಂಚಿಕೊಂಡರು.


“ನೀವು ನನ್ನ ಜನರ ಒಳಕಲಹದಿಂದ ನನ್ನನ್ನು ತಪ್ಪಿಸಿದ್ದೀರಿ, ನನ್ನನ್ನು ಜನಾಂಗಗಳಿಗೆ ನಾಯಕನನ್ನಾಗಿ ಉಳಿಸಿದ್ದೀ; ನಾನು ಅರಿಯದ ಜನರು ನನಗೆ ವಿಧೇಯರಾಗುವರು.


ನಾನು ಸೌಲನ ಕುಟುಂಬದಿಂದ ರಾಜ್ಯವನ್ನು ತಪ್ಪಿಸಿ, ಯೆಹೋವ ದೇವರು ದಾವೀದನಿಗೆ ಆಣೆ ಇಟ್ಟ ಪ್ರಕಾರವೇ,


ಇಸ್ರಾಯೇಲಿನ ಎಲ್ಲಾ ಗೋತ್ರದವರು ಹೆಬ್ರೋನಿನಲ್ಲಿರುವ ದಾವೀದನ ಬಳಿಗೆ ಬಂದು, “ನಾವು ನಿನ್ನ ಎಲುಬೂ, ನಿನ್ನ ಮಾಂಸವೂ ಆಗಿದ್ದೇವೆ.


ಅಬ್ಷಾಲೋಮನು ಯೋವಾಬನಿಗೆ ಬದಲಾಗಿ ಅಮಾಸನನ್ನು ಸೈನ್ಯದ ಅಧಿಪತಿಯಾಗಿ ಇಟ್ಟಿದ್ದನು. ಈ ಅಮಾಸನು ಇಸ್ರಾಯೇಲನಾದ ಇತ್ರನ ಮಗನು. ಈ ಇತ್ರನು ನಾಹಾಷನ ಮಗಳೂ, ಯೋವಾಬನ ತಾಯಿಯೂ, ಚೆರೂಯಳ ಸಹೋದರಿಯೂ ಆದ ಅಬೀಗೈಲಳನ್ನು ಮದುವೆಯಾಗಿದ್ದನು.


ಅರಸನು ಅಮಾಸನಿಗೆ, “ನೀನು ಮೂರು ದಿವಸಗಳೊಳಗೆ ಯೆಹೂದ ಜನರನ್ನು ಕೂಡಿಸಿಕೊಂಡು ನನ್ನ ಬಳಿಗೆ ಬಾ ಮತ್ತು ನೀನೇ ಇಲ್ಲಿ ಇರು,” ಎಂದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು