Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಸಮುಯೇಲ 19:12 - ಕನ್ನಡ ಸಮಕಾಲಿಕ ಅನುವಾದ

12 ನೀವು ನನ್ನ ಸಹೋದರರೂ, ನನ್ನ ರಕ್ತವೂ, ನನ್ನ ಮಾಂಸವೂ ಆಗಿದ್ದೀರಿ. ಹಾಗಾದರೆ ಅರಸನನ್ನು ತಿರುಗಿ ಬರಮಾಡುವಂತೆ ನೀವು ಹಿಂಜರಿದದ್ದೇನು?’ ಎಂದು ತಿಳಿಸಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ನೀವು ನನ್ನ ರಕ್ತಸಂಬಂಧಿಗಳಾದ ಸಹೋದರರಾಗಿರುತ್ತೀರಿ. ಆದುದರಿಂದ ನನ್ನನ್ನು ಕರೆದುಕೊಂಡು ಹೋಗುವುದರಲ್ಲಿ ನೀವು ತಡಮಾಡುತ್ತಿರುವುದು ಒಳ್ಳೆಯದಲ್ಲ’ ಎಂದು ಹೇಳಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

12 ನೀವು ನನ್ನ ರಕ್ತಸಂಬಂಧಿಗಳಾದ ಸಹೋದರರು; ಆದುದರಿಂದ ನನ್ನನ್ನು ಕರೆದುಕೊಂಡು ಹೋಗುವುದರಲ್ಲಿ ನೀವು ಹಿಂದುಳಿದಿರುವುದು ಸರಿಯಲ್ಲ’

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ನೀವು ನನ್ನ ರಕ್ತಸಂಬಂಧಿಗಳಾದ ಸಹೋದರರಾಗಿರುತ್ತೀರಲ್ಲಾ; ಆದದರಿಂದ ನನ್ನನ್ನು ಕರಕೊಂಡು ಹೋಗುವದರಲ್ಲಿ ನೀವು ಹಿಂದುಳಿದಿರುವದು ಒಳ್ಳೇದಲ್ಲ ಎಂಬದಾಗಿಯೂ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 ನೀವು ನನ್ನ ಸೋದರರು, ನೀವು ನನ್ನ ಕುಟುಂಬದವರು. ಹೀಗಿರುವಾಗ ನನ್ನನ್ನು ಮತ್ತೆ ಕರೆತರಲು ನೀವೇಕೆ ಕೊನೆಯವರಾದಿರಿ?’ ಎಂದು ಹೇಳಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಸಮುಯೇಲ 19:12
9 ತಿಳಿವುಗಳ ಹೋಲಿಕೆ  

ಇಸ್ರಾಯೇಲಿನ ಎಲ್ಲಾ ಗೋತ್ರದವರು ಹೆಬ್ರೋನಿನಲ್ಲಿರುವ ದಾವೀದನ ಬಳಿಗೆ ಬಂದು, “ನಾವು ನಿನ್ನ ಎಲುಬೂ, ನಿನ್ನ ಮಾಂಸವೂ ಆಗಿದ್ದೇವೆ.


ನಾವು ಕ್ರಿಸ್ತ ಯೇಸುವಿನ ದೇಹದ ಅಂಗಗಳಾಗಿದ್ದೇವೆ.


“ನೀವು ದಯಮಾಡಿ ಶೆಕೆಮಿನ ಹಿರಿಯರಿಗೆ, ‘ಯೆರುಬ್ಬಾಳನ ಮಕ್ಕಳಾದ ಎಪ್ಪತ್ತು ಮಂದಿಯು ನಿಮ್ಮನ್ನು ಆಳುವುದು ಒಳ್ಳೆಯದೋ? ಒಬ್ಬನು ಆಳುವುದು ಒಳ್ಳೆಯದೋ?’ ಎಂದು ವಿಚಾರಿಸಿರಿ. ನಾನು ನಿಮ್ಮ ಎಲುಬೂ, ನಿಮ್ಮ ಮಾಂಸವೂ ಆಗಿದ್ದೇನೆಂದು ಜ್ಞಾಪಕಮಾಡಿಕೊಳ್ಳಿರಿ,” ಎಂದನು.


ಆಗ ಮನುಷ್ಯನು ಹೀಗೆ ಹೇಳಿದನು: “ಇದು ನನ್ನ ಎಲುಬಿನಿಂದಾದ ಎಲುಬು ಮತ್ತು ನನ್ನ ಮಾಂಸದಿಂದಾದ ಮಾಂಸವಾಗಿದೆ. ಈಕೆ ನರನಿಂದ ತೆಗೆದಿರುವುದರಿಂದ, ಈಕೆ, ‘ನಾರಿ’ ಎಂದು ಎನಿಸಿಕೊಳ್ಳುವಳು.”


ಹೇಗೂ ನಾನು ನನ್ನ ಸ್ವಂತ ಜನರಾದ ಯೆಹೂದ್ಯರಲ್ಲಿ ಮತ್ಸರವನ್ನು ಉದ್ರೇಕಿಸಿ ಅವರಲ್ಲಿ ಕೆಲವರನ್ನಾದರೂ ರಕ್ಷಿಸಬೇಕು.


ಆಗ ಲಾಬಾನನು ಅವನಿಗೆ, “ನಿಶ್ಚಯವಾಗಿ ನೀನು ನನ್ನ ರಕ್ತಸಂಬಂಧಿಯಾಗಿದ್ದೀ,” ಎಂದನು. ಯಾಕೋಬನು ಅವನ ಸಂಗಡ ಒಂದು ತಿಂಗಳು ವಾಸವಾಗಿದ್ದನು.


ಇಸ್ರಾಯೇಲರೆಲ್ಲರೂ ಅರಸನ ಬಳಿಗೆ ಬಂದು ಅರಸನಿಗೆ, “ನಮ್ಮ ಸಹೋದರರಾದ ಯೆಹೂದದ ಮನುಷ್ಯರು ಕಳ್ಳತನವಾಗಿ ನಿನ್ನನ್ನು ಕರೆತಂದದ್ದೇನು? ಅರಸನನ್ನೂ, ಅವನ ಮನೆಯವರನ್ನೂ, ಅವನ ಸಂಗಡ ಇರುವ ದಾವೀದನ ಸಕಲ ಮನುಷ್ಯರನ್ನೂ ಯೊರ್ದನನ್ನು ದಾಟಿಸಿದ್ದೇನು?” ಎಂದರು.


ಆಗ ಯೆಹೂದದವರೆಲ್ಲರೂ ಇಸ್ರಾಯೇಲರಿಗೆ ಉತ್ತರವಾಗಿ, “ಅರಸನು ನಮಗೆ ಸಮೀಪ ಬಂಧುವಾದುದರಿಂದ, ಈ ಕಾರ್ಯಕ್ಕೋಸ್ಕರ ನೀವು ಕೋಪಗೊಂಡಿರುವುದೇನು? ನಾವು ಅರಸನ ಖರ್ಚಿನಿಂದ ಏನಾದರೂ ಊಟ ಮಾಡಿದೆವೋ? ನಾವು ನಮಗಾಗಿ ಏನನ್ನಾದರೂ ತೆಗೆದುಕೊಂಡಿದ್ದೇವೆಯೇ?” ಎಂದರು.


ಅಹೀಟೂಬನ ಮಗ ಚಾದೋಕನೂ ಅಬಿಯಾತರನ ಮಗ ಅಹೀಮೆಲೆಕನೂ ಯಾಜಕರಾಗಿದ್ದರು. ಸೆರಾಯನು ಕಾರ್ಯದರ್ಶಿಯಾಗಿದ್ದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು