2 ಸಮುಯೇಲ 18:5 - ಕನ್ನಡ ಸಮಕಾಲಿಕ ಅನುವಾದ5 ಅರಸನು ಯೋವಾಬನಿಗೂ, ಅಬೀಷೈಯಿಗೂ, ಇತ್ತೈಗೂ ಆಜ್ಞಾಪಿಸಿ, “ನನಗೋಸ್ಕರ ಯುವಕನಾದ ಅಬ್ಷಾಲೋಮನೊಂದಿಗೆ ಮೃದುವಾಗಿ ವರ್ತಿಸಿರಿ,” ಎಂದನು. ಹೀಗೆ ಅರಸನು ಅಬ್ಷಾಲೋಮನನ್ನು ಕುರಿತು ಅಧಿಪತಿಗಳೆಲ್ಲರಿಗೂ ಕೊಟ್ಟ ಆಜ್ಞೆಯನ್ನು ಸೈನಿಕರೆಲ್ಲರೂ ಕೇಳಿದರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20195 ಅರಸನು ಯೋವಾಬ, ಅಬೀಷೈ ಮತ್ತು ಇತ್ತೈ ಎಂಬುವರಿಗೆ, “ನನಗೋಸ್ಕರವಾಗಿ ಯೌವನಸ್ಥನಾದ ಅಬ್ಷಾಲೋಮನಿಗೆ ದಯೆ ತೋರಿಸಿರಿ” ಎಂದು ಆಜ್ಞಾಪಿಸಿದನು. ದಾವೀದನು ಸೇನಾಧಿಪತಿಗಳಿಗೆ ಕೊಟ್ಟ ಈ ಅಪ್ಪಣೆಯು ಸೈನ್ಯದವರಿಗೆಲ್ಲಾ ಕೇಳಿಸಿತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)5 ಅರಸನು ಯೋವಾಬ್, ಅಬೀಷೈ ಹಾಗು ಇತ್ತೈ ಎಂಬವರಿಗೆ, “ನನ್ನ ಸಲುವಾಗಿ ಯುವಕ ಅಬ್ಷಾಲೋಮನಿಗೆ ಹಾನಿಮಾಡಬೇಡಿ,” ಎಂದು ಆಜ್ಞಾಪಿಸಿದನು. ದಾವೀದನು ಸೇನಾಪತಿಗಳಿಗೆ ಕೊಟ್ಟ ಈ ಅಪ್ಪಣೆ ಸೈನ್ಯದವರಿಗೆಲ್ಲಾ ಕೇಳಿಸಿತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)5 ಅರಸನು ಯೋವಾಬ್ ಅಬೀಷೈ ಇತ್ತೈ ಎಂಬವರಿಗೆ - ನನಗೋಸ್ಕರವಾಗಿ ಯೌವನಸ್ಥನಾದ ಅಬ್ಷಾಲೋಮನನ್ನು ಕರುಣಿಸಿರಿ ಎಂದು ಆಜ್ಞಾಪಿಸಿದನು. ದಾವೀದನು ಸೇನಾಪತಿಗಳಿಗೆ ಕೊಟ್ಟ ಈ ಅಪ್ಪಣೆಯು ಸೈನ್ಯದವರಿಗೆಲ್ಲಾ ಕೇಳಿಸಿತು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್5 ರಾಜನು ಯೋವಾಬನಿಗೆ, ಅಬೀಷೈಯನಿಗೆ ಮತ್ತು ಇತ್ತೈಯನಿಗೆ, “ನೀವು ನನಗೋಸ್ಕರವಾಗಿ ಯುವಕನಾದ ಅಬ್ಷಾಲೋಮನಿಗೆ ಕರುಣೆ ತೋರಿಸಿ!” ಎಂದು ಆಜ್ಞಾಪಿಸಿದನು. ಅಬ್ಷಾಲೋಮನ ಬಗ್ಗೆ ತನ್ನ ಸೇನಾಪತಿಗಳಿಗೆ ರಾಜನು ನೀಡಿದ ಆಜ್ಞೆಯು ಜನರೆಲ್ಲರಿಗೂ ಕೇಳಿಸಿತು. ಅಧ್ಯಾಯವನ್ನು ನೋಡಿ |