Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಸಮುಯೇಲ 18:16 - ಕನ್ನಡ ಸಮಕಾಲಿಕ ಅನುವಾದ

16 ಆಗ ಯೋವಾಬನು ತುತೂರಿಯನ್ನು ಊದಿದ್ದರಿಂದ, ಸೈನಿಕರು ಇಸ್ರಾಯೇಲರನ್ನು ಹಿಂದಟ್ಟುವುದನ್ನು ಬಿಟ್ಟು ಹಿಂದಿರುಗಿದರು. ಏಕೆಂದರೆ ಯೋವಾಬನು ಜನರನ್ನು ತಡೆದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

16 ಕೂಡಲೆ ಯೋವಾಬನು ತನ್ನ ಜನರನ್ನು ತಡೆಯುವುದಕ್ಕಾಗಿ ತುತ್ತೂರಿಯನ್ನು ಊದಿಸಲು ಸೈನ್ಯದವರೆಲ್ಲಾ ಇಸ್ರಾಯೇಲ್ಯರನ್ನು ಹಿಂದಟ್ಟುವುದನ್ನು ಬಿಟ್ಟು ಹಿಂದಿರುಗಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

16 ಕೂಡಲೆ ಯೋವಾಬನು ತನ್ನ ಜನರನ್ನು ತಡೆಯುವುದಕ್ಕಾಗಿ ಕಹಳೆಯನ್ನು ಊದಿಸಿದನು. ಸೈನ್ಯದವರೆಲ್ಲಾ ಇಸ್ರಯೇಲರನ್ನು ಬೆನ್ನಟ್ಟುವುದನ್ನು ಬಿಟ್ಟು ಹಿಂದಿರುಗಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

16 ಕೂಡಲೆ ಯೋವಾಬನು ತನ್ನ ಜನರನ್ನು ತಡೆಯುವದಕ್ಕಾಗಿ ತುತೂರಿಯನ್ನು ಊದಿಸಲು ಸೈನ್ಯದವರೆಲ್ಲಾ ಇಸ್ರಾಯೇಲ್ಯರನ್ನು ಹಿಂದಟ್ಟುವದನ್ನು ಬಿಟ್ಟು ಹಿಂದಿರುಗಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

16 ಯೋವಾಬನು ತುತೂರಿಯನ್ನು ಊದಿ, ಅಬ್ಷಾಲೋಮನ ಕಡೆಯವರಾದ ಇಸ್ರೇಲರನ್ನು ಅಟ್ಟಿಸಿಕೊಂಡು ಹೋಗುತ್ತಿದ್ದ ಜನರನ್ನು ನಿಲ್ಲಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಸಮುಯೇಲ 18:16
6 ತಿಳಿವುಗಳ ಹೋಲಿಕೆ  

ಆ ಸ್ತ್ರೀಯು ತನ್ನ ಜ್ಞಾನದಿಂದ ಸಮಸ್ತ ಜನರ ಬಳಿಗೆ ಹೋದಳು. ಆಗ ಅವರು ಬಿಕ್ರಿಯ ಮಗ ಶೆಬನ ತಲೆಯನ್ನು ಕಡಿದು ಯೋವಾಬನ ಬಳಿ ಹಾಕಿದರು. ಅವನು ತುತೂರಿಯನ್ನು ಊದಿದ್ದರಿಂದ, ಅವರು ಪಟ್ಟಣದಿಂದ ಚದರಿ ಪ್ರತಿ ಮನುಷ್ಯನೂ ತಮ್ಮ ತಮ್ಮ ಮನೆಗಳಿಗೆ ಹೋದರು. ಯೋವಾಬನು ಯೆರೂಸಲೇಮಿನಲ್ಲಿರುವ ಅರಸನ ಬಳಿಗೆ ಹಿಂದಿರುಗಿ ಬಂದನು.


ಹೀಗೆ ಯೋವಾಬನು ತುತೂರಿಯನ್ನು ಊದಿದನು. ಆಗ ಸೈನಿಕರೆಲ್ಲರೂ ನಿಂತರು. ಇಸ್ರಾಯೇಲರನ್ನು ಪುನಃ ಹಿಂದಟ್ಟಲಿಲ್ಲ, ಯುದ್ಧವು ನಿಂತಿತು.


ತುತೂರಿಯನ್ನು ಸ್ಪಷ್ಟವಾಗಿ ಊದದಿದ್ದರೆ, ಯಾರು ತಾನೇ ಯುದ್ಧಕ್ಕೆ ಸನ್ನದ್ಧರಾಗುವರು?


ಆಗ ಯೋವಾಬನ ಆಯುಧ ಹಿಡಿಯುವ ಹತ್ತು ಮಂದಿ ಯುವಕರು ಸುತ್ತಿಕೊಂಡು, ಅಬ್ಷಾಲೋಮನನ್ನು ಕೊಂದುಹಾಕಿದರು.


ಅಬೀಮೆಲೆಕನು ಮರಣಹೊಂದಿದ್ದನ್ನು ಇಸ್ರಾಯೇಲರು ಕಂಡಾಗ, ಅವರು ತಮ್ಮ ತಮ್ಮ ಮನೆಗಳಿಗೆ ಹೋದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು