Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಸಮುಯೇಲ 16:17 - ಕನ್ನಡ ಸಮಕಾಲಿಕ ಅನುವಾದ

17 ಆಗ ಅಬ್ಷಾಲೋಮನು ಹೂಷೈಯಿಗೆ, “ಸ್ನೇಹಿತನ ಮೇಲೆ ನಿನಗಿದ್ದ ಪ್ರೀತಿ ಇಷ್ಟೇಯೇನು? ನೀನು ನಿನ್ನ ಸ್ನೇಹಿತನ ಸಂಗಡ ಏಕೆ ಹೋಗಲಿಲ್ಲ,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 ಅಬ್ಷಾಲೋಮನು ಅವನಿಗೆ “ಸ್ನೇಹಿತನ ಬಗ್ಗೆ ನಿನಗಿರುವ ಪ್ರಾಮಾಣಿಕತೆ ಪ್ರೀತಿ ಇಷ್ಟೇತಾನೇ? ನೀನು ನಿನ್ನ ಸ್ನೇಹಿತನೊಡನೆ ಯಾಕೆ ಹೋಗಲಿಲ್ಲ?” ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

17 ಅಬ್ಷಾಲೋಮನು, “ಸ್ನೇಹಿತನ ಮೇಲೆ ನಿನಗಿದ್ದ ಪ್ರೀತಿ ಇಷ್ಟೇತಾನೇ? ನೀನು ನಿನ್ನ ಸ್ನೇಹಿತನೊಡನೆ ಏಕೆ ಹೋಗಲಿಲ್ಲ?” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

17 ಅಬ್ಷಾಲೋಮನು ಅವನಿಗೆ - ಸ್ನೇಹಿತನ ಮೇಲೆ ನಿನಗಿದ್ದ ಪ್ರೀತಿ ಇಷ್ಟೇಯೇನು? ನೀನು ನಿನ್ನ ಸ್ನೇಹಿತನೊಡನೆ ಯಾಕೆ ಹೋಗಲಿಲ್ಲ ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

17 ಅಬ್ಷಾಲೋಮನು, “ನಿನ್ನ ಸ್ನೇಹಿತನಾದ ದಾವೀದನಿಗೆ ನೀನೇಕೆ ನಂಬಿಗಸ್ತನಾಗಿಲ್ಲ? ನಿನ್ನ ಸ್ನೇಹಿತನೊಡನೆ ನೀನು ಜೆರುಸಲೇಮಿನಿಂದ ಯಾಕೆ ಹೋಗಲಿಲ್ಲ” ಎಂದು ಕೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಸಮುಯೇಲ 16:17
6 ತಿಳಿವುಗಳ ಹೋಲಿಕೆ  

ಅವನು ಯೆರೂಸಲೇಮಿನಿಂದ ಅರಸನನ್ನು ಎದುರುಗೊಳ್ಳಲು ಬಂದಾಗ, ಅರಸನು ಅವನಿಗೆ, “ಮೆಫೀಬೋಶೆತನೇ, ನೀನು ಏಕೆ ನನ್ನ ಸಂಗಡ ಬಾರದೆ ಹೋದೆ?” ಎಂದನು.


ವಿಶ್ವಾಸಕ್ಕೆ ಅರ್ಹರಲ್ಲದ ಸ್ನೇಹಿತರನ್ನು ಹೊಂದಿರುವವನು ಶೀಘ್ರವೇ ನಾಶವಾಗುತ್ತಾನೆ; ಸಹೋದರನಿಗಿಂತ ಹತ್ತಿರ ಹೊಂದಿಕೊಳ್ಳುವ ಸ್ನೇಹಿತನಿದ್ದಾನೆ.


ಸ್ನೇಹಿತನು ಎಲ್ಲಾ ಸಮಯದಲ್ಲಿ ಪ್ರೀತಿಸುತ್ತಾನೆ; ಆಪತ್ತಿನಲ್ಲಿ ಸಹಾಯಮಾಡುವಗೋಸ್ಕರ ಸಹೋದರನು ಹುಟ್ಟಿದ್ದಾನೆ.


ಯೆಹೋವ ದೇವರಿಗೆ ಪ್ರತಿಯಾಗಿ ಹೀಗೆ ವರ್ತಿಸುವುದು ಸರಿಯೋ? ಜ್ಞಾನವಿಲ್ಲದ ಬುದ್ಧಿಹೀನ ಜನರೇ, ದೇವರು ನಿಮ್ಮನ್ನು ಸೃಷ್ಟಿಸಿದ ತಂದೆಯಲ್ಲವೋ? ನಿಮ್ಮನ್ನು ಸೃಷ್ಟಿಸಿ ಸ್ಥಿರಪಡಿಸಿದ್ದು ದೇವರಲ್ಲವೋ?


ಹೂಷೈ ಅಬ್ಷಾಲೋಮನಿಗೆ, “ಹಾಗಲ್ಲ, ಯೆಹೋವ ದೇವರು ಈ ಜನರೂ, ಇಸ್ರಾಯೇಲಿನ ಸಮಸ್ತ ಮನುಷ್ಯರೂ ಯಾರನ್ನು ಆಯ್ದುಕೊಳ್ಳುವರೋ, ನಾನೂ ಅವನ ಪಕ್ಷದವನಾಗಿರುವೆನು. ನಾನು ಅವನ ಬಳಿಯಲ್ಲಿ ಇರುವೆನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು