Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಸಮುಯೇಲ 16:16 - ಕನ್ನಡ ಸಮಕಾಲಿಕ ಅನುವಾದ

16 ಅರ್ಕಿಯನಾದ ಹೂಷೈಯು ಎಂಬ ದಾವೀದನ ಸ್ನೇಹಿತನು ಅಬ್ಷಾಲೋಮನ ಬಳಿಗೆ ಬಂದಾಗ, ಹೂಷೈ ಅಬ್ಷಾಲೋಮನಿಗೆ, “ಅರಸನು ಬಾಳಲಿ, ಅರಸನು ಬಾಳಲಿ,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

16 ಅರ್ಕಿಯನೂ ದಾವೀದನ ಸ್ನೇಹಿತನೂ ಆಗಿದ್ದ ಹೂಷೈಯು ಅಬ್ಷಾಲೋಮನ ಬಳಿಗೆ ಬಂದು, “ಅರಸನು ಚಿರಂಜೀವಿಯಾಗಿರಲಿ, ಅರಸನು ಚಿರಂಜೀವಿಯಾಗಿರಲಿ” ಎಂದು ಕೂಗಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

16 ಅರ್ಕೀಯನೂ ದಾವೀದನ ಸ್ನೇಹಿತನೂ ಆಗಿದ್ದ ಹೂಷೈಯು ಅಬ್ಷಾಲೋಮನ ಬಳಿಗೆ ಬಂದು, “ಅರಸರು ಚಿರಂಜೀವಿಯಾಗಿ ಬಾಳಲಿ! ಅರಸರು ಚಿರಂಜೀವಿಯಾಗಿ ಬಾಳಲಿ!” ಎಂದು ಘೋಷಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

16 ಅರ್ಕೀಯನೂ ದಾವೀದನ ಸ್ನೇಹಿತನೂ ಆಗಿದ್ದ ಹೂಷೈಯು ಅಬ್ಷಾಲೋಮನ ಬಳಿಗೆ ಬಂದು - ಅರಸನು ಚಿರಂಜೀವಿಯಾಗಿರಲಿ, ಅರಸನು ಚಿರಂಜೀವಿಯಾಗಿರಲಿ ಎಂದು ಕೂಗಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

16 ದಾವೀದನ ಸ್ನೇಹಿತನೂ ಅರ್ಕೀಯನೂ ಆದ ಹೂಷೈಯು ಅಬ್ಷಾಲೋಮನ ಬಳಿಗೆ ಬಂದನು. ಹೂಷೈಯು, “ರಾಜನು ಚಿರಾಯುವಾಗಿರಲಿ, ರಾಜನು ಚಿರಾಯುವಾಗಿರಲಿ” ಎಂದು ಅಬ್ಷಾಲೋಮನಿಗೆ ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಸಮುಯೇಲ 16:16
13 ತಿಳಿವುಗಳ ಹೋಲಿಕೆ  

ಆಗ ಯೆಹೋಯಾದಾವನು ರಾಜಪುತ್ರನನ್ನು ಹೊರಗೆ ಕರೆತಂದು, ಅವನ ತಲೆಯ ಮೇಲೆ ಕಿರೀಟವನ್ನಿಟ್ಟು, ಕೈಗೆ ದೇವರ ನಿಯಮ ಗ್ರಂಥವನ್ನು ಕೊಟ್ಟು, ಅರಸನನ್ನಾಗಿ ಮಾಡಿ ಅವನನ್ನು ಅಭಿಷೇಕಿಸಿದರು. ಕೂಡಲೆ ಜನರು ಚಪ್ಪಾಳೆ ಹೊಡೆದು, “ಅರಸನು ಚಿರಂಜೀವಿಯಾಗಿರಲಿ!” ಎಂದು ಹರಸಿದರು.


ಆಗ ಸಮುಯೇಲನು, “ಯೆಹೋವ ದೇವರು ಆಯ್ದುಕೊಂಡವನನ್ನು ನೋಡಿರಿ, ಸಮಸ್ತ ಜನರಿಗೆ ಎಲ್ಲಾ ಜನರಲ್ಲಿ ಇವನಿಗೆ ಸಮಾನವಾದವನು ಯಾವನೂ ಇಲ್ಲವಲ್ಲ,” ಎಂದನು. ಜನರೆಲ್ಲರು ಆರ್ಭಟಿಸಿ, “ಅರಸ ಬಾಳಲಿ,” ಎಂದರು.


ಏಕೆಂದರೆ ಈ ಹೊತ್ತು ಅವನು ಇಳಿದು ಹೋಗಿ, ಎತ್ತುಗಳನ್ನೂ, ಕೊಬ್ಬಿದ ಪಶುಗಳನ್ನೂ, ಕುರಿಗಳನ್ನೂ ಕೊಲ್ಲಿಸಿ, ಅರಸನ ಮಕ್ಕಳೆಲ್ಲರನ್ನೂ, ಸೈನ್ಯಾಧಿಪತಿಗಳನ್ನೂ, ಯಾಜಕನಾದ ಅಬಿಯಾತರನನ್ನೂ ಕರೆದಿದ್ದಾನೆ. ಅವರು ಅವನ ಮುಂದೆ ತಿಂದು, ಕುಡಿದು, ‘ಅರಸನಾದ ಅದೋನೀಯನು ಚಿರಂಜೀವಿಯಾಗಿರಲಿ,’ ಎಂದು ಹೇಳುತ್ತಿದ್ದಾರೆ.


ಯೇಸುವಿನ ಮುಂದೆಯೂ ಹಿಂದೆಯೂ ಹೋಗುತ್ತಿದ್ದ ಜನರ ಸಮೂಹಗಳು, “ದಾವೀದನ ಪುತ್ರನಿಗೆ ಹೊಸನ್ನ!” “ಕರ್ತನ ಹೆಸರಿನಲ್ಲಿ ಬರುವವನಿಗೆ ಆಶೀರ್ವಾದ!” “ಮಹೋನ್ನತದಲ್ಲಿ ಜಯ!” ಎಂದು ಘೋಷಿಸಿದರು.


ಆಗ ದಾನಿಯೇಲನು ಅರಸನಿಗೆ, “ಅರಸನೇ, ನೀನು ನಿರಂತರವಾಗಿ ಬಾಳು.


ಆಗ ಉಪರಾಜರೂ, ದೇಶಾಧಿಪತಿಯೂ ಅರಸನ ಬಳಿಯಲ್ಲಿ ಕೂಡಿಬಂದು, “ಅರಸನಾದ ದಾರ್ಯಾವೆಷನೇ, ನಿರಂತರವಾಗಿ ಬಾಳು.


ಆಗ ಅರಸನ ಮತ್ತು ಅವನ ಪ್ರಧಾನರ ಮಾತುಗಳನ್ನು ಕೇಳಿ ರಾಣಿಯು ಔತಣದ ಮನೆಗೆ ಬಂದಳು. ಆಗ ಮಾತನಾಡಿ, “ಅರಸನೇ, ನಿರಂತರವಾಗಿ ಬಾಳು! ನಿನ್ನ ಆಲೋಚನೆಗಳು ನಿನ್ನನ್ನು ಕಳವಳಪಡಿಸದಿರಲಿ. ನಿನ್ನ ಮುಖವು ಕಳೆಗುಂದದಿರಲಿ!


ಆಗ ಪಂಡಿತರು ಅರಸನಿಗೆ ಅರಮಾಯ ಭಾಷೆಯಲ್ಲಿ, “ಅರಸನೇ, ನಿರಂತರವಾಗಿ ಬಾಳು! ಕನಸನ್ನು ನಿನ್ನ ಸೇವಕರಿಗೆ ಹೇಳು, ಆಗ ನಾವು ಅದರ ಅರ್ಥವನ್ನು ತಿಳಿಸುವೆವು,” ಎಂದು ಹೇಳಿದರು.


ಅಲ್ಲಿ ಯಾಜಕನಾದ ಚಾದೋಕನೂ, ಪ್ರವಾದಿಯಾದ ನಾತಾನನೂ ಅವನನ್ನು ಇಸ್ರಾಯೇಲಿನ ಮೇಲೆ ಅರಸನಾಗಿರಲು ಅಭಿಷೇಕಿಸಲಿ. ತುತೂರಿಯನ್ನು ಊದಿ, ‘ಅರಸ ಸೊಲೊಮೋನನು ಚಿರಂಜೀವಿಯಾಗಿರಲಿ!’ ಎಂದು ಘೋಷಿಸಿರಿ.


ಹಾಗೆಯೇ ದಾವೀದನ ಸ್ನೇಹಿತನಾದ ಹೂಷೈ ಪಟ್ಟಣದೊಳಗೆ ಬಂದನು. ಆಗ ಅಬ್ಷಾಲೋಮನು ಯೆರೂಸಲೇಮಿಗೆ ಬಂದನು.


ನೀನು ಪಟ್ಟಣಕ್ಕೆ ತಿರುಗಿ ಹೋಗಿ ಅಬ್ಷಾಲೋಮನಿಗೆ, ‘ಅರಸನೇ, ನಾನು ನಿನ್ನ ಸೇವಕನಾಗಿರುವೆನು. ನಾನು ಇಂದಿನವರೆಗೂ ಹೇಗೆ ನಿನ್ನ ತಂದೆಗೆ ಸೇವಕನಾಗಿದ್ದೆನೋ, ಹಾಗೆಯೇ ಈಗ ನಿನ್ನ ಸೇವಕನಾಗಿರುವೆನು,’ ಎಂದು ಹೇಳಿದರೆ, ನೀನು ನನಗೋಸ್ಕರ ಅಹೀತೋಫೆಲನ ಆಲೋಚನೆಯನ್ನು ವ್ಯರ್ಥಮಾಡಬಹುದು.


ದಾವೀದನು ಪರ್ವತದ ತುದಿಗೆ ಬಂದು ಅಲ್ಲಿ ದೇವರನ್ನು ಆರಾಧಿಸಿದಾಗ, ಅರ್ಕಿಯನಾದ ಹೂಷೈ ತನ್ನ ಅಂಗಿಯನ್ನು ಹರಿದುಕೊಂಡು, ತನ್ನ ತಲೆಯ ಮೇಲೆ ಮಣ್ಣು ಹಾಕಿಕೊಂಡು, ಅವನನ್ನು ಎದುರುಗೊಳ್ಳಲು ಬಂದನು.


ನಾತಾನನ ಮಗ ಅಜರ್ಯನು ಅಧಿಪತಿಗಳ ಮೇಲ್ವಿಚಾರಕನು. ನಾತಾನನ ಮಗ ಜಾಬೂದನು ಯಾಜಕನು ಹಾಗು ಅರಸನ ವೈಯಕ್ತಿಕ ಸಲಹೆಗಾರನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು