Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಸಮುಯೇಲ 14:27 - ಕನ್ನಡ ಸಮಕಾಲಿಕ ಅನುವಾದ

27 ಅಬ್ಷಾಲೋಮನಿಗೆ ಮೂರು ಮಂದಿ ಪುತ್ರರೂ, ತಾಮಾರ್ ಎಂಬ ಒಬ್ಬ ಪುತ್ರಿಯೂ ಹುಟ್ಟಿದರು. ತಾಮಾರಳು ಸೌಂದರ್ಯವುಳ್ಳ ಸ್ತ್ರೀ ಆಗಿದ್ದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

27 ಅವನಿಗೆ ಮೂರು ಮಂದಿ ಗಂಡು ಮಕ್ಕಳೂ, ಒಬ್ಬಳು ಮಗಳು ಇದ್ದಳು. ಮಗಳ ಹೆಸರು ತಾಮಾರಳು. ಈಕೆಯು ಬಹು ಸುಂದರಿಯಾಗಿದ್ದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

27 ಅವನಿಗೆ ಮೂರುಮಂದಿ ಗಂಡುಮಕ್ಕಳೂ ಒಬ್ಬ ಮಗಳೂ ಇದ್ದರು. ಮಗಳ ಹೆಸರು ತಾಮಾರ್; ಈಕೆ ಬಹು ಸುಂದರಿಯಾಗಿದ್ದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

27 ಅವನಿಗೆ ಮೂರು ಮಂದಿ ಗಂಡುಮಕ್ಕಳೂ ಒಬ್ಬ ಮಗಳೂ ಇದ್ದರು. ಮಗಳ ಹೆಸರು ತಾಮಾರ್; ಈಕೆಯು ಬಹು ಸುಂದರಿಯಾಗಿದ್ದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

27 ಅಬ್ಷಾಲೋಮನಿಗೆ ಮೂವರು ಗಂಡುಮಕ್ಕಳು ಮತ್ತು ಒಬ್ಬ ಮಗಳು ಇದ್ದರು. ಮಗಳ ಹೆಸರು ತಾಮಾರ್; ಈಕೆಯು ಬಹು ಸುಂದರಿಯಾಗಿದ್ದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಸಮುಯೇಲ 14:27
6 ತಿಳಿವುಗಳ ಹೋಲಿಕೆ  

ಅಬ್ಷಾಲೋಮನು ಜೀವದಿಂದಿರುವಾಗ, “ನನ್ನ ಹೆಸರನ್ನು ಜ್ಞಾಪಕಾರ್ಥವಾಗಿ ಉಳಿಸಲು ನನಗೆ ಮಗನಿಲ್ಲ,” ಎಂದು ಹೇಳಿ, ಅವನು ತಗ್ಗಿನಲ್ಲಿರುವ ಒಂದು ಕಲ್ಲಿನ ಸ್ತಂಭವನ್ನು ತರಿಸಿ, ಅದನ್ನು ಅರಸನ ಕಣಿವೆಯಲ್ಲಿ ತನ್ನ ಜ್ಞಾಪಕಾರ್ಥವಾಗಿ ನಿಲ್ಲಿಸಿ, ಆ ಸ್ತಂಭಕ್ಕೆ ತನ್ನ ಹೆಸರನ್ನಿಟ್ಟಿದ್ದನು. ಅದು ಈ ದಿನದವರೆಗೂ ಅಬ್ಷಾಲೋಮನ ಸ್ಮಾರಕಸ್ತಂಭ ಎಂದು ಕರೆಯಲಾಗುತ್ತದೆ.


ಕಾಲಾಂತರದಲ್ಲಿ ದಾವೀದನ ಮಗ ಅಬ್ಷಾಲೋಮನಿಗೆ ತಾಮಾರಳೆಂಬ ಹೆಸರುಳ್ಳ ಸುಂದರಿಯಾದ ಒಬ್ಬ ಸಹೋದರಿ ಇದ್ದಳು. ಅವಳನ್ನು ದಾವೀದನ ಮಗ ಅಮ್ನೋನನು ಪ್ರೀತಿಮಾಡಿದನು.


ಯೆಹೋವ ದೇವರು ಹೀಗೆ ಹೇಳುತ್ತಾರೆ: “ಈ ಮನುಷ್ಯನನ್ನು ಮಕ್ಕಳಿಲ್ಲದವನೆಂದೂ, ತನ್ನ ದಿನಗಳಲ್ಲಿ ವೃದ್ಧಿಯಾಗುವ ಪುರುಷನಲ್ಲವೆಂದೂ ಬರೆಯಿರಿ. ಏಕೆಂದರೆ ಅವನ ಸಂತಾನದಲ್ಲಿ ಒಬ್ಬನಾದರೂ ದಾವೀದನ ಸಿಂಹಾಸನದಲ್ಲಿ ಕುಳಿತುಕೊಂಡು ಯೆಹೂದದಲ್ಲಿ ಆಳುವ ಹಾಗೆ ಬಾಳುವುದಿಲ್ಲ.”


“ಅವರಿಗೆ ವಿರುದ್ಧವಾಗಿ ಏಳುತ್ತೇನೆ,” ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ. “ಬಾಬಿಲೋನಿನಿಂದ ಆಕೆಯ ಹೆಸರನ್ನೂ, ಉಳಿದ ಜನರನ್ನೂ, ಆಕೆಯ ಮಕ್ಕಳನ್ನೂ ಅದರ ಸಂತತಿಯವರನ್ನೂ ನಿರ್ಮೂಲ ಮಾಡುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ.


ದಾವೀದನು ಒಂದು ದಿನ ಸಾಯಂಕಾಲದಲ್ಲಿ ತನ್ನ ಹಾಸಿಗೆಯಿಂದ ಎದ್ದು, ಅರಮನೆಯ ಉಪ್ಪರಿಗೆಯ ಮೇಲೆ ತಿರುಗಾಡುತ್ತಾ ಇದ್ದು, ಸ್ನಾನ ಮಾಡುತ್ತಿರುವ ಒಬ್ಬ ಸ್ತ್ರೀಯನ್ನು ಕಂಡನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು